ಪುಟ:ಭಾರತ ದರ್ಶನ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೯೮

ಭಾರತ ದರ್ಶನ

ನಿದಾನವಾಗಿ ಶಕ್ತಿಗುಂದುತ್ತಿರುವುದು ತೋರುತ್ತಿದೆ. ಕ್ರಿಸ್ತ ಯುಗದ ಮೊದಲ ಒಂದು ಸಾವಿರ ವರ್ಷಗಳಲ್ಲಿ ಭಾರತದಲ್ಲಿ ಸಾಮಾಜಿಕ ಪರಿಸ್ಥಿತಿಯು ಹೇಗಿತ್ತು ಎಂದು ಸ್ಪಷ್ಟವಾಗಿ ವಿವರಿಸುವುದು ಕಷ್ಟ. ಆದರೆ ಆರ್ಥಿಕ ನೀತಿಯ ದೃಷ್ಟಿಯ ವೈಶಾಲ್ಯವು ಮಾಯವಾಗಿ ಸಂಕುಚಿತ ದೃಷ್ಟಿಯು ಬಲಗೊಳ್ಳುತ್ತ ಬಂದಿತೆಂದು ಮಾತ್ರ ಧೈರ್ಯವಾಗಿ ಹೇಳಬಹುದು. ಪ್ರಾಯಶಃ ಭಾರತೀಯ ಸಮಾಜ ರಚನೆಯ ಮತ ಪದ್ದತಿಗಳ ಕಟ್ಟುಗಳು ಕಠಿಣವಾಗಿ, ಬಹಿಷ್ಕಾರ ಮನೋಭಾವ ಬಲಗೊಂಡು, ಈ ಅಧೋ ಗತಿಯು ಅನಿವಾರ್ಯವಾಯಿತು. ಆಗೈಯ ಮುಂತಾದ ಪರದೇಶಗಳಲ್ಲಿನ ಭಾರತೀಯರು ಅವರ ಭಾವನೆಯಲ್ಲಾಗಲಿ, ನಡವಳಿಕೆಯಲ್ಲಾಗಲಿ, ಆರ್ಥಿಕ ನೀತಿಯಲ್ಲಾಗಲಿ ಅಷ್ಟು ಸಂಕುಚಿತ ಸ್ವಭಾವ ದವರಾಗಿರಲಿಲ್ಲ. ಆದ್ದರಿಂದ ಅವರು ಅಭಿವೃದ್ಧಿ ಹೊಂದಿದರು, ರಾಜ್ಯವನ್ನೂ ವಿಸ್ತರಿಸಿದರು. ಇನ್ನೂ ನಾನೂರು ಐದುನೂರು ವರ್ಷಗಳ ಕಾಲ ಆ ವಲಸೆ ರಾಷ್ಟ್ರಗಳು ಪ್ರಗತಿ ಹೊಂದಿ, ತಮ್ಮ ಪ್ರಭಾವವನ್ನು ಬಿತ್ತರಿಸಿ ಅದ್ಭುತಕಾರ್ಯ ಶಕ್ತಿಯನ್ನೂ, ಕಾರ್ಯಪಟುತ್ವವನ್ನೂ ತೋರಿಸಿದರು. ಆದರೆ ಭಾರತದಲ್ಲೇ ಈ ಸಂಕುಚಿತ ಜೀವನವು ಸೃಷ್ಟಿ ಶಕ್ತಿಯನ್ನು ಹೀರಿ, ಸಣ್ಣ ಪಂಗಡಗಳನ್ನಾಗಿ ಮಾಡಿದವು. ಅವರ ದೃಷ್ಟಿ ಯು ಸಂಕುಚಿತವಾಯಿತು. ಪ್ರತಿಯೊಂದು ವ್ಯಕ್ತಿಗೂ ಅವನ ಕಾವ್ಯವನ್ನು ವಿಧಿಸಲಾಗಿತ್ತು. ಆದ್ದರಿಂದ ಇತರರ ಗೋಜಿಗೆ ಅವರು ಹೋಗುತ್ತಿರಲಿಲ್ಲ. ರಾಜ್ಯ ರಕ್ಷಣೆಗಾಗಿ ಯುದ್ಧ ಮಾಡುವುದು ಕ್ಷತ್ರಿಯನ ಕೆಲಸವಾಗಿತ್ತು. ಆದ್ದರಿಂದ ಬೇರೆಯವರಿಗೆ ಅದರಲ್ಲಿ ಆಸಕ್ತಿಯು ಇರಲಿಲ್ಲ, ಅವಕಾಶವೂ ಇರಲಿಲ್ಲ. ಬ್ರಾಹ್ಮಣ, ಕ್ಷತ್ರಿಯರಿಬ್ಬರೂ ವ್ಯಾಪಾರ ಉದ್ಯಮವೆಂದರೆ ಕಡೆಗಣ್ಣಿನಿಂದ ನೋಡುತ್ತಿದ್ದರು. ವಿದ್ಯಾರ್ಜನೆ ಮತ್ತು ಆತ್ಮೋನ್ನತಿಯ ಮಾರ್ಗವು ಹೀನ ಕುಲದವರಿಗೆ ಬಾಹ್ಯವಿತ್ತು. ಉತ್ತಮ ಜಾತಿಯವರ ಸೇವೆಯೇ ಅವರ ಕಾರ್ಯವೆಂದು ಬೋಧಿಸಲಾಗಿತ್ತು. ನಗರಗಳ ಆರ್ಥಿಕ ನೀತಿ ಮತ್ತು ವ್ಯಾಪಾರವು ಉನ್ನತಮಟ್ಟದಲ್ಲಿದ್ದರೂ ರಾಜ್ಯ ರಚನೆಯು ಪಾಳೆಯಗಾರಿಕೆಯೇ ಆಗಿತ್ತು. ಪ್ರಾಯಶಃ ಯುದ್ಧ ಕೌಶಲ್ಯದಲ್ಲಿಯೂ ಭಾರತವು ಕ್ಷೀಣದೆಸೆಗೆ ಬಂದಿತ್ತು. ಆ ಸಮಾಜರಚನೆ ಯನ್ನು ಬದಲಾಯಿಸಿ, ಹೊಸ ಶಕ್ತಿಯನ್ನು ಅಣಿಗೊಳಿಸದೆ ಆ ಸ್ಥಿತಿಯಲ್ಲಿ ಯಾವ ಪ್ರಗತಿಯೂ ಸಾಧ್ಯವಿರಲಿಲ್ಲ. ಅಂತಹ ಬದಲಾವಣೆಗೆ ಮತ ಪದ್ಧತಿಯು ಅಡ್ಡಿಯಾಯಿತು. ಭಾರತೀಯ ಸಮಾಜಕ್ಕೆ ಒಂದು ಭದ್ರತೆಯನ್ನು ಕೊಟ್ಟು, ಅನೇಕ ಸದ್ಗುಣಗಳಿಂದ ತುಂಬಿದ್ದರೂ ಜಾತಿ ಪದ್ಧತಿಯಿಂದ ಜೊತೆಯಲ್ಲೇ ನಾಶದ ಅಂಕುರವೂ ಬಿತ್ತಿ ಬಂದಿತು.

ಭಾರತೀಯ ಸಮಾಜ ರಚನೆಯು (ಈ ವಿಷಯವನ್ನು ಮುಂದೆ ವಿಶದವಾಗಿ ಪ್ರಸ್ತಾಪಿಸುತ್ತೇನೆ) ಭಾರತೀಯ ನಾಗರಿಕತೆಗೆ ಒಂದು ಅಸ್ಪಲಿತ ಭದ್ರತೆಯನ್ನು ಕೊಟ್ಟಿತ್ತು. ಪ್ರತಿ ಪಂಗಡಕ್ಕೂ ಒಂದು ಅದ್ಭುತಕ್ತಿಯನ್ನೂ, ದೊಡ್ಡ ಸಂಘಟನಾ ಶಕ್ತಿಯನ್ನೂ ಕೊಟ್ಟಿತ್ತು. ಕಲೆ, ಕುಶಲಬುದ್ದಿ, ವ್ಯಾಪಾರ, ಹಡಗಿನ ವ್ಯಾಪಾರ ಅಭಿವೃದ್ದಿ ಯಾದರೂ, ಆ ಪಂಗಡದಲ್ಲಿಯೇ ಆಯಿತು. ಆದ್ದರಿಂದ ಕೆಲವು ಉದ್ಯಮಗಳು ಅನುವಂಶಿಕವಾದವು. ಹೊಸ ಉದ್ಯಮವನ್ನು ಕಲಿಯುವುದು ನೂತನ ಕಾರ್ಯ ಚಟುವಟಿಕೆಯನ್ನು ಆರಂಭಿಸುವುದು ನಿಷಿದ್ಧವಾಯಿತು. ಅಪ್ಪ ಹಾಕಿದ ಆಲದ ಮರವೇ ಶಾಶ್ವತ ವಾಯಿತು. ಸಾಹಸ ಶಕ್ತಿಯು ಕಡಮೆಯಾಗಿ, ನೂತನ ಮಾರ್ಗಾನ್ವೇಷಣೆಯ ದೃಷ್ಟಿಯೇ ಶೂನ್ಯ ವಾಯಿತು. ತನ್ನ ಅಲ್ಪ ಆವರಣದಲ್ಲಿ ಸಂಪೂರ್ಣ ಸ್ವಾತಂತ್ರ್ಯ ದೊರೆತರೂ, ಅದು ವಿಶಾಲ ಸ್ವಾತಂ ತ್ರದ ಬೆಳೆವಣಿಗೆಗೆ ಅಡ್ಡಿಯಾಯಿತು. ಅಸಂಖ್ಯಾತ ಜನರನ್ನು ಸಮಾಜದಲ್ಲಿ ಬಹಳ ಕೀಳು ಮಟ್ಟದಲ್ಲಿ ಇಟ್ಟುದರಿಂದ ಪ್ರಗತಿಗೆ ಅವಕಾಶವೇ ಇಲ್ಲದಾಯಿತು. ಈ ಸಮಾಜ ರಚನೆಯು ಎಲ್ಲಿಯ ವರೆಗೆ ಬೆಳೆವಣಿಗೆಗೆ ಮತ್ತು ವಿಕಾಸಕ್ಕೆ ಅವಕಾಶ ಕೊಟ್ಟಿತೋ ಅಲ್ಲಿಯವರೆಗೆ ಸಮಾಜವು ಪ್ರಗತಿಪರ ವಿತ್ತು ; ಆದರೆ ಆ ವಿಕಾಸದ ಮೇರೆಯನ್ನು ಮುಟ್ಟಿದೊಡನೆ ಮುಂದೆ ಯಾವ ಪ್ರಗತಿಯೂ ಸಾಧ್ಯ ವಿಲ್ಲದೆ ನಿಂತಲ್ಲಿಯೇ ನಿಂತಿತು, ಪ್ರತಿಗಾಮಿಯಾಯಿತು, ಕೊನೆಗೆ ಕ್ಷೀಣಹೊಂದಲಾರಂಭಿಸಿತು. ಇದೇ ಕಾರಣದಿಂದ ಬೌದ್ಧಿಕ, ದಾರ್ಶನಿಕ, ರಾಜಕೀಯ ಬೆಳವಣಿಗೆಯಲ್ಲಿ, ಯುದ್ದ ನೀತಿ ಮತ್ತು ಕೌಶಲ್ಯದಲ್ಲಿ, ಪರದೇಶ ಪರಿಚಯ ಮತ್ತು ಸಂಪರ್ಕದಲ್ಲಿ, ಕ್ಷೀಣದೆಶೆಯು ಆರಂಭವಾಯಿತು.