ಪುಟ:ಭಾರತ ದರ್ಶನ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೦

ಭಾರತ ದರ್ಶನ

ಅದುವರೆಗೆ ಇತಿಹಾಸದಲ್ಲಿ ಯಾವ ಪ್ರಮುಖ ಪಾತ್ರವನ್ನೂ ವಹಿಸದೆ ಅರಬ್ಬಿ ಮರುಭೂಮಿಯಲ್ಲಿ ಮನೆಮಾಡಿಕೊಂಡಿದ್ದ ಅರಬ್ಬಿ ಜನರ ಈ ವಿಜಯ ಪರಂಪರೆಯು ಅತ್ಯಾಶ್ಚರ್ಯಕರವಿದೆ. ಈ ಅಪಾರ ಶಕ್ತಿಯೂ ಅದ್ಭುತ ಕಾರ್ಯ ಪಟುತ್ವವೂ ಕ್ರಾಂತಿ ಪುರುಷನಾದ ಪೈಗಂಬರರಿಂದ ಮತ್ತು ಆತನ ಮಾನವ ಭ್ರಾತೃತ್ವದ ಸಂದೇಶದಿಂದ ಬಂದಿರಬೇಕು. ಆದರೂ ಅರಬ್ಬಿ ನಾಗರಿಕತೆಯು ಇದ್ದ ಕ್ಕಿದ್ದಂತೆ ಉದ್ಭವಿಸಿ, ಇಸ್ಲಾಂ ಧರ್ಮದಿಂದಲೇ ರೂಪುಗೊಂಡಿತೆಂದು ಭಾವಿಸುವುದು ತಪ್ಪು. ಇಸ್ಲಾಮ್ ವಿದ್ವಾಂಸರು ಅರಬ್ಬಿ ಜನರ ಇಸ್ಲಾ೦ ಪೂರ್ವದ ನಾಗರಿಕತೆಯನ್ನು ಜಹಿಲಿಯಾತ್ ಕಾಲ, ಅಜ್ಞಾನ ಮತ್ತು ಮೂಢ ಭಾವನೆಯ ಕಾರ್ಗತ್ತಲೆಯ ಕಾಲ ಎಂದು ಹಳಿಯುತ್ತಾರೆ. ಇತರ ನಾಗರಿಕತೆಗಳಂತೆ ಅರಬ್ಬಿ ನಾಗರಿಕತೆಗೂ ಬಹು ಪ್ರಾಚೀನತೆಯಿದೆ. ಸೆಮಿಟಿಕ್ ಜನಾಂಗ, ಫಿನೀಷಿಯನರು, ಕ್ರೀಟರು, ಚಾಲ್ಡಿಯನರು, ಹೀಬ್ರೂ ಜನರುಗಳ ನಾಗರಿಕತೆಗಳ ಬೆಳವಣಿಗೆಯೊಂದಿಗೆ ನಿಕಟ ಸಂಬಂಧವಿದೆ. ಇಸ್ರೇಲರು ಇತರರಿಂದ ಸ್ವಲ್ಪ ದೂರ ಸರಿದು ವಿಶಾಲ ಮನೋಭಾವನೆಯ ಚಾಲ್ಲಿ ಯನರು ಮತ್ತು ಇತರರಿಂದ ಭಿನ್ನವಾದರು. ಅವರಿಗೂ ಸೆಮಿಟಿಕ್ ಜನಾಂಗಗಳಿಗೂ ಘರ್ಷಣೆಗಳಾಗುತ್ತಿದ್ದವು. ಆದಷ್ಟೂ ಸೆವಿಟಕ್ ಪ್ರದೇಶದಲ್ಲೆಲ್ಲ ಪರಸ್ಪರ ಸಂಬಂಧ, ವಿಚಾರ ವಿನಿಮಯವಿದ್ದು ಒಂದು ಸರ್ವ ಸಾಮಾನ್ಯ ಹಿನ್ನೆಲೆ ಇತ್ತು. ಇಸ್ಲಾ೦ಪೂರ್ವದ ಅರಬ್ಬಿ ನಾಗರಿಕತೆಯು ಮುಖ್ಯವಾಗಿ ಏನನ್ನಲ್ಲಿ ಬೆಳೆಯಿತು. ಪೈಗಂಬರರ ಕಾಲದಲ್ಲಿ ಅರಬ್ಬಿ ಭಾಷೆಯು ಪಾರಸಿ ಮತ್ತು ಭಾರತೀಯ ಭಾಷೆಯಿಂದ ಪುಷ್ಟಿಗೊಂಡು ಶ್ರೇಷ್ಠ ಭಾಷೆಯಾಗಿ ಬೆಳೆದಿತ್ತು. ಫಿನೀಷಿಯನರಂತೆ ವ್ಯಾಪಾರಕ್ಕಾಗಿ ಅರಬ್ಬಿ ಜನರೂ ಪರದೇಶಗಳಿಗೆ ಪ್ರವಾಸಮಾಡುತ್ತಿದ್ದರು. ಕ್ಯಾಂಟನ್ ಬಳಿ ದಕ್ಷಿಣ ಚೀನದಲ್ಲಿ ಇಸ್ಲಾಂ ಧರ್ಮಕ್ಕೆ ಪೂರ್ವದಲ್ಲಿ ಒಂದು ಅರಬ್ಬಿ ಠಾಣ್ಯವಿತ್ತು. .

ಆದಾಗ್ಯೂ ಇಸ್ಲಾ೦ಧರ್ಮ ಸಂಸ್ಥಾಪಕನಾದ ಪೈಗಂಬರ್ ತನ್ನ ಜನರಲ್ಲಿ ಪ್ರಚಂಡ ಶಕ್ತಿಯನ್ನು ಪ್ರಚೋದಿಸಿ ಅಗಾಧ ಆತ್ಮವಿಶ್ವಾಸವನ್ನೂ ಆತ್ಮಶ್ರದ್ದೆ ಯನ್ನೂ ತುಂಬಿದನೆಂಬುದು ನಿಶ್ಚಯ, ಹೊಸ ಸಂದೇಶದ ಹರಿಕಾರರೆಂಬ ಭಾವನೆಯು ಕೆಲವುಸಲ ಇಡೀ ಜನಾಂಗವನ್ನೇ ಆವರಿಸಿ, ನೂತನ ಇತಿಹಾಸ ವನ್ನೇ ಸೃಷ್ಟಿಸುವ ಒಂದು ಅದ್ಭುತ ಕಾರ್ಯಶ್ರದ್ಧೆ ಮತ್ತು ಆತ್ಮವಿಶ್ವಾಸವು ಅವರಲ್ಲಿ ಬೆಳೆಯಿತು. ಪಶ್ಚಿಮ ಮತ್ತು ಮಧ್ಯ ಏಷ್ಯಗಳಲ್ಲೂ ಉತ್ತರ ಆಫ್ರಿಕದಲ್ಲಿ ಅಲ್ಲಿನ ರಾಜ್ಯಗಳು ಹೀನಸ್ಥಿತಿಗೆ ಬಂದುದೂ ಅರಬ್ಬಿ ಜನರ ಉನ್ನತಿಗೆ ಕಾರಣವಾಯಿತು. ಉತ್ತರ ಆಫ್ರಿಕದಲ್ಲಿ ವಿರೋಧಿ ಕ್ರೈಸ್ತ ಪಂಗಡಗಳಲ್ಲಿ ಪರಸ್ಪರ ವೈಷಮ್ಯವು ಹುಟ್ಟಿ ಘರ್ಷಣೆಗಳಾಗಿ, ಅನೇಕ ಬಾರಿ ಅಧಿಕಾರಕ್ಕಾಗಿ ಯುದ್ಧ ವಾಗಿ ರಕ್ತ ಪಾತವೂ ಆಗುತ್ತಿತ್ತು. ಆ ಕಾಲದಲ್ಲಿ ಅಲ್ಲಿ ಆಚರಣೆಯಲ್ಲಿದ್ದ ಕ್ರೈಸ್ತಮತವು ತುಂಬ ಸಂಕುಚಿತವೂ, ಅಸಹನೆಯುಳ್ಳದ್ದೂ ಆಗಿತ್ತು. ಮಾನವ ಭ್ರಾತೃತ್ವವನ್ನು ಸಾರುತ್ತ ಬಂದ ಅರಬ್ಬಿ ಮುಸ್ಲಿಮರ ಸಹನಶೀಲತೆಗೂ ಇದಕ್ಕೂ ಅಜಗಜಾಂತರವಿತ್ತು. ಕ್ರೈಸ್ತರ ಅಂತಃ ಕಲಹಗಳಿಂದ ಬೇಸತ್ತು ಇಡೀ ಜನಾಂಗಗಳೇ ಇಸ್ಲಾಂ ಧರ್ಮವನ್ನು ಒಲಿದು ಸ್ವೀಕರಿಸಿದವು.

ದೂರದ ದೇಶಗಳಿಗೆ ಅರಬ್ಬಿ ಜನರು ಕೊಂಡೊಯ್ಯುತ್ತಿದ್ದ ಸಂಸ್ಕೃತಿಯೇ ಸದಾ ವ್ಯತ್ಯಾಸ ಗೊಂಡು ಬೆಳೆಯುತ್ತಿತ್ತು. ಇಸ್ಲಾ೦ಧರ್ಮದ ನೂತನ ಭಾವನೆಗಳ ಬಲವತ್ತಾದ ಪ್ರಭಾವವು ಅದರ ಮೇಲೆ ಬೀರಿದ್ದರೂ ಆ ಸಂಸ್ಕೃತಿಯನ್ನು ಇಸ್ಲಾಂ ಸಂಸ್ಕೃತಿ ಎಂದು ಕರೆಯುವುದು ಒಂದು ಭ್ರಾಂತಿ ಮತ್ತು ಪ್ರಾಯಶಃ ತಪ್ಪು, ಡೆಮಾಸ್ಕಸ್ಸನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅರಬ್ಬಿ ಜನರು ತಮ್ಮ ಸರಳ ಜೀವನವನ್ನು ತ್ಯಜಿಸಿದರು ಮತ್ತು ಒಂದು ಕೃತಕ ಜೀವನದ ಸಂಸ್ಕೃತಿಯನ್ನು ಬೆಳೆ ಸಿದರು. ಅದನ್ನು ಅರಬ್ಬಿ-ಸಿರಿಯನ್ ನಾಗರಿಕತೆಯ ಕಾಲ ಎನ್ನ ಬಹುದು. ಬೈಜಾಂಟೈನ್ ಪ್ರಭಾವ ವೇನೋ ಬಂದಿತು. ಆದರೆ ಎಲ್ಲಕ್ಕೂ ಹೆಚ್ಚಾಗಿ ಬಾಗ್ದಾದಿಗೆ ಅವರು ಬಂದೊಡನೆ ಇರಾಣದ ಪೂರ್ವ ಸಂಪ್ರದಾಯಗಳಿಗೆ ಅವರು ಶರಣುಹೋದರು. ಒಂದು ಅರಬ್ಬಿ ಪಾರಸಿ ನಾಗರಿಕತೆಯನ್ನು ಬೆಳೆಸಿದರು. ಅವರ ಅಧೀನದ ರಾಜ್ಯಗಳಲ್ಲೆಲ್ಲಾ ಈ ನಾಗರಿಕತೆಯ ಪ್ರಭಾವವೇ ಮುಖ್ಯವಾಗಿ ಹರಡಿತು.

ಅರಬ್ಬಿ ಜನರ ವಿಜಯಯಾತ್ರೆಗಳು ಬಹುವ್ಯಾಪಕವೂ, ಅತಿಸುಲಭವೂ ಆದರೂ, ಆಗಲಾಗಲಿ