ಪುಟ:ಭಾರತ ದರ್ಶನ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹೊಸ ಸಮಸ್ಯೆಗಳು

೨೦೫

ವಿದ್ಯಾಪೀಠಗಳಲ್ಲಿ ಅವರ ತತ್ವಶಾಸ್ತ್ರವು ಪಾಠಕ್ರಮದಲ್ಲಿ ಅವಶ್ಯಭಾಗವಾಗಿದೆ. ಅಲೆಕ್ಸಾಂಡ್ರಿಯದ ನವೀನ ಪ್ಲೇಟೋ ಮತವೂ ಅರಬ್ಬಿ ಮನಸ್ಸಿನಮೇಲೆ ಪರಿಣಾಮ ಮಾಡಿತು. ಗ್ರೀಕ್ ತತ್ವಶಾಸ್ತ್ರದ ಚಾರ್ವಾಕವಾದದ ಪರಿಚಯವಾಗಿ ಹೇತುವಾದವೂ, ಚಾರ್ವಾಕವಾದವೂ ಬೆಳೆಯಲು ಅವಕಾಶ ವಾಯಿತು. ಹೇತುವಾದಿಗಳು ಧಾರ್ಮಿಕ ಬೋಧೆಗಳನ್ನು, ವಿಧಿಗಳನ್ನು ತರ್ಕರೀತಿಯಿಂದ ವಿಚಾರ ಮಾಡತೊಡಗಿದರು. ಚಾರ್ವಾಕವಾದಿಗಳು ಮತವನ್ನೇ ನಿರಾಕರಿಸಿದರು. ಬಾಗ್ದಾದಿನಲ್ಲಿ ಈ ಎಲ್ಲ ವಿರುದ್ಧ ಮತ್ತು ಅನನ್ವಯ ಸಿದ್ಧಾಂತಗಳ ಪ್ರತಿಪಾದನೆಗೆ ಮತ್ತು ಚರ್ಚೆಗೆ ಇದ್ದ ಸ್ವಾತಂತ್ರವು ಅತ್ಯಾಶ್ಚರ್ಯವನ್ನುಂಟುಮಾಡುತ್ತದೆ. ಧರ್ಮಶ್ರದ್ಧೆ ಮತ್ತು ವಿಚಾರ ದೃಷ್ಟಿಗಳಿಗೆ ಇದ್ದ ಈ ವಿವಾದ ಮತ್ತು ಘರ್ಷಣೆಗಳು ಬಾಗ್ದಾದಿನಿಂದ ಅರಬ್ಬಿ ಪ್ರಪಂಚದಲ್ಲೆಲ್ಲ ಹರಡಿ ಸ್ಪೇನ್ವರೆಗೂ ಮುಟ್ಟಿತು. ದೇವರ ಸ್ವರೂಪವು ಚರ್ಚೆಯಾಗಿ ಸಾಮಾನ್ಯವಾಗಿ ದೇವರಿಗೆ ಆರೋಪಿಸುವ ಗುಣಗಳು ಯಾವುವೂ ಇಲ್ಲವೆಂದೂ, ಆತನು ನಿರ್ಗುಣನೆಂದೂ ಹೇಳಿದರು. ಆ ಗುಣಗಳೆಲ್ಲ ಮಾನವಸ್ವಭಾವ ಗುಣಗಳಿದ್ದವು. ದೇವರು ದಯಾಮಯ, ಸತ್ಯಸಂಕಲ್ಪನೆಂದು ಹೇಳಿದರೆ ದೇವರಿಗೆ ಗಡ್ಡವಿದೆ ಎಂದರೆ ಎಷ್ಟು ಅಸಂಸ್ಕೃತವೋ, ಮೂಢವೋ ಅಷ್ಟೇ ಮೂಢವೆಂದರು.

ಹೇತುವಾದ ನಿರೀಶ್ವರವಾದ ನಾಸ್ತಿಕವಾದ ಎಡೆಗೊಟ್ಟವು. ಕ್ರಮೇಣ ಬಾಗ್ದಾದ್ ಹೀನಸ್ಥಿತಿಗೆ ಬಂದು, ತುರ್ಕಿಯ ಶಕ್ತಿಯು ಬಲಗೊಂಡಮೇಲೆ ಈ ತರ್ಕಬದ್ಧ ವಿಚಾರಬುದ್ದಿಯು ಕಡಮೆ ಯಾಯಿತು. ಆದರೆ ಅರಬ್ಬಿ ಸ್ಪೇನಿನಲ್ಲಿ ಈ ತರ್ಕ ವಿಚಾರವು ಮುಂದುವರಿದು ಸ್ಪೇನಿನ ಅರಬ್ಬಿ ದಾರ್ಶನಿಕರಲ್ಲಿ ಅತಿ ಶ್ರೇಷ್ಠ ನಾದ ಹನ್ನೆರಡನೆಯ ಶತಮಾನದ ಇಬನ್ ರಷೀದ್ (ಅವೆರೋಸ್) ನಾಸ್ತಿಕನಾಗಿದ್ದನು. ಆಗ ಪ್ರಚಾರದಲ್ಲಿದ್ದ ಮತಗಳೆಲ್ಲವೂ ಮಕ್ಕಳು ಅಥವ ಹುಚ್ಚರಿಗೆ ಮಾತ್ರ ಯೋಗ್ಯ, ಯಾವುದೂ ಆಚರಣಾರ್ಹವಲ್ಲ ಎಂದು ಹೇಳಿದನಂತೆ. ನಿಶ್ಚಯವಾಗಿ ಆತನು ಆ ರೀತಿ ಹೇಳಿದನೋ ಇಲ್ಲವೋ ತಿಳಿಯದು. ಆದರೂ ಈ ಕಥೆಯಿಂದ ಆತನ ಮನೋಭಾವವು ವ್ಯಕ್ತವಾಗುತ್ತದೆ; ಮತ್ತು ತನ್ನ ಅಭಿಪ್ರಾಯಗಳಿಗಾಗಿ ಆತನು ತೊಂದರೆಗೀಡಾದನು. ಅನೇಕ ವಿಧದಲ್ಲಿ ಆತನು ಕ್ರಾ೦ತಿ ಪುರುಷನಾಗಿದ್ದನು. ಸಾರ್ವಜನಿಕ ಕೆಲಸಗಳಲ್ಲಿ ಸ್ತ್ರೀಯರಿಗೆ ಪೂರ್ಣ ಅವಕಾಶ ಕೊಡಬೇಕೆಂದೂ, ಯಾವ ಕೆಲಸವನ್ನಾದರೂ ದಕ್ಷತೆಯಿಂದ ನಿರ್ವಹಿಸಬಲ್ಲರೆಂದೂ ಹೇಳಿದನು. ವಾಸಿಮಾಡಲಾಗದ ರೋಗಿಗಳು ಮತ್ತು ನಿಷ್ಟ್ರಯೋಜಕ ವ್ಯಕ್ತಿಗಳು ಸಮಾಜಕ್ಕೆ ಹೊರೆಯಾದ್ದರಿಂದ ಅವರನ್ನೆಲ್ಲ ನಾಶಮಾಡಬೇಕೆಂದು ಹೇಳಿದನು. ಯೂರೋಪಿನ ಇತರ ವಿದ್ಯಾಪೀಠಗಳೆಲ್ಲಕ್ಕಿಂತ ಸ್ಪೇನ್ ಬಹಳ ಮುಂದುವರಿದಿತ್ತು. ಕಾರ್ಡೊಬ ವಿದ್ಯಾಮಂದಿರದ ಅರಬ್ಬಿ ಮತ್ತು ಯಹೂದಿ ವಿದ್ವಾಂಸರಿಗೆ ಪ್ಯಾರಿಸ್ ಮತ್ತು ಇತರ ಕಡೆಗಳಲ್ಲಿ ಬಹಳ ಗೌರವವಿತ್ತು. ಈ ಅರಬ್ಬಿ ವಿದ್ವಾಂಸರಿಗೆ ಇತರ ಯೂರೋಪಿಯನರ ಮೇಲೆ ಯಾವ ಗೌರವಭಾವನೆಯು ಇರಲಿಲ್ಲ. ತೋಲೆದೊವಿನ ಸೈಯದ್ ಎಂಬ ಅರಬ್ಬಿ ಗ್ರಂಥಕರ್ತನು ಪಿರನೀಸ್ ಪರ್ವತಗಳಾಚೆ ಇರುವ ಯೂರೋಪಿಯನರ ವಿಷಯದಲ್ಲಿ “ ಅವರು ಶೀತಲ ಸ್ವಭಾವ ದವರು. ಎಂದಿಗೂ ಪ್ರೌಢರಾಗುವುದೇ ಇಲ್ಲ. ಆಜಾನುಬಾಹುಗಳು. ಬಿಳಿಯ ಬಣ್ಣದವರು. ಆದರೆ ಹಾಸ್ಯ ನೈಪುಣ್ಯವೂ ಇಲ್ಲ ಕುಶಾಗ್ರ ಬುದ್ದಿಯೂ ಇಲ್ಲ” ಎಂದಿದ್ದಾನೆ.

ಪಶ್ಚಿಮ ಮತ್ತು ಮಧ್ಯ ಏಷ್ಯದಲ್ಲಿ ಅರಬ್ಬಿ ಸಂಸ್ಕೃತಿಯು ವಿಕಾಸವಾಗಲು ಸ್ಫೂರ್ತಿ ಬಂದುದು ಮುಖ್ಯವಾಗಿ ಅರಬ್ಬಿ ಮತ್ತು ಇರಾಣಿ ಮೂಲಗಳೆರಡರಿಂದ ಎರಡೂ ರಸಪಾಕವಾಗಿ ಅದ್ಭುತ ಭಾವನಾಶಕ್ತಿಯನ್ನು ಕೊಟ್ಟುದಲ್ಲದೆ ಮೇಲ್ಮಟ್ಟದ ಜನರಿಗೆ ಉತ್ತಮ ಜೀವನ ಸೌಕರ್ಯವನ್ನೂ ಒದಗಿಸಿಕೊಟ್ಟಿತು. ಅರಬ್ಬಿ ಜನರಿಂದ ಕಾರ್ಯಶಕ್ತಿಯ, ವಿಚಾರಪರತೆಯೂ ಬಂದುವು. ಇರಾಣಿ ಗಳಿಂದ ಜೀವನಗಾಂಭೀರ್ಯ, ಕಲೆ ಮತ್ತು ಸುಖಜೀವನಗಳು ಬೆಳೆದವು. ತುರ್ಕಿಯ ಪ್ರಾಬಲ್ಯ ದಿ೦ದ ಬಾಗ್ದಾದ್‌ನ ಅವನತಿಯಾಗಿ ತರ್ಕಬುದ್ಧಿ ಮತ್ತು ವಿಚಾರಪರತೆಗಳು ನಾಶವಾದವು. ಚಂಗೀಸ್ ರ್ಖಾ ಮತ್ತು ಮಂಗೋಲರು ಅದನ್ನೆಲ್ಲ ಪೂರ್ಣ ನಾಶಮಾಡಿದರು. ಒಂದು ನೂರು ವರ್ಷಗಳ ಮೇಲೆ ಮಧ್ಯ ಏಷ್ಯ ಪುನಃ ಎಚ್ಚತ್ತು ಸಾಮರಖಂಡ್ ಮತ್ತು ಹೀರತ್ ನಗರಗಳು ಚಿತ್ರ ಮತ್ತು