ಪುಟ:ಭಾರತ ದರ್ಶನ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹೊಸ ಸಮಸ್ಯೆಗಳು

೨0೭

ರಂತೆ ಆತನು ತನ್ನ ವಿಜಯಯಾತ್ರಗಳಿಗೆ ಧರ್ಮದ ಹೆಸರನ್ನು ಕೊಟ್ಟು ದುರುಪಯೋಗಮಾಡಿದನು. ಇಂಡಿಯ ಅವನಿಗೆ, ಕೊಳ್ಳೆ ಹೊಡೆದ ಲೂಟಿಮಾಡಿದ ಅಪಾರ ಐಶ್ವಠ್ಯವನ್ನು ತನ್ನ ದೇಶಕ್ಕೆ ತೆಗೆದು ಕೊಂಡು ಹೋಗಲು ಅನುಕೂಲವಾದ ದೇಶಮಾತ್ರವಾಗಿತ್ತು. ಭಾರತದಲ್ಲಿಯೇ ಒಂದು ಸೈನ್ಯವನ್ನು ಕಟ್ಟಿ ಭಾರತೀಯನನ್ನೆ ಒಬ್ಬನನ್ನು ಅದಕ್ಕೆ ಸೇನಾನಿಯನ್ನಾಗಿ ಮಾಡಿದನು. ಅವನ ಹೆಸರು ತಿಲಕ್. ಅವನು ಭಾರತೀಯನೂ ಹಿಂದುವೂ ಆಗಿದ್ದನು. ಈ ಸೈನ್ಯವನ್ನು ಮಧ್ಯ ಏಷ್ಯದಲ್ಲಿ ತನ್ನ ಸ್ವಧರ್ಮಿಯರ ಮೇಲೂ ಯುದ್ಧಕ್ಕೆ ಬಿಟ್ಟನು. ಅವನ ರಾಜಧಾನಿಯಾದ ಘಜ್ಜಿ ನಗರವು ಮಧ್ಯ ಮತ್ತು ಪಶ್ಚಿಮ ಏಷ್ಯದ ಮಹಾನಗರಗಳನ್ನು ಮೀರಿಸಬೇಕೆಂಬುದೇ ಅವನ ಹಿರಿಯಾಸೆಯಾಗಿತ್ತು. ಭಾರತ ದಿಂದ ಅನೇಕ ಕುಶಲ ಕರ್ಮಿಗಳನ್ನು, ಶಿಲ್ಪಶಾಸ್ತ್ರಜ್ಞರನ್ನು ಅಲ್ಲಿಗೆ ಕರೆದುಕೊಂಡು ಹೋದನು. ಭಾರತೀಯರ ಕಟ್ಟಡಗಳನ್ನು ನೋಡಿ ಬಹಳ ಮೋಹಿತನಾದನು. ದೆಹಲಿಯ ಬಳಿ ಇರುವ ಮಧುರಾ ನಗರವನ್ನು ನೋಡಿ ಮುಗ್ಧನಾದನು. ಅದನ್ನು ನೋಡಿ “ಧರ್ಮಭೀರುಗಳ ಅಚಲವಾದ ಧರ್ಮಶ್ರದ್ದೆ ಯಿಂದ ಇಲ್ಲಿ ಸಾವಿರಾರು ಸೌಧಗಳಿವೆ. ಅನೇಕ ಶತಲಕ್ಷ ಹೊನ್ನು ಗಳ ವೆಚ್ಚವಿಲ್ಲದೆ ಈ ನಗರವು ಈ ಸ್ಥಿತಿಗೆ ಬರಲು ಸಾಧ್ಯವಿಲ್ಲ. ಇಂಥ ಇನ್ನೊಂದು ನಗರ ನಿರ್ಮಾಣಕ್ಕೆ ಎರಡುನೂರು ವರ್ಷಗಳಾದರೂ ಬೇಕು” ಎಂದು ಬರೆದಿದ್ದಾನೆ.

ತನ್ನ ಯುದ್ಧಗಳ ಮಧ್ಯೆ ತನ್ನ ತಾಯ್ನಾಡಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿ ಸಲು ಕಾತರನಾಗಿದ್ದನು. ಅನೇಕ ಮಹಾವ್ಯಕ್ತಿಗಳನ್ನು ಸುತ್ತಲೂ ಸೇರಿಸಿಕೊಂಡನು. 'ಷಹ ನಾಮ' ಬರೆದ ಫಿರ್ದೌಸಿಯು ಇವರಲ್ಲಿ ಒಬ್ಬ. ಕೊನೆಯಲ್ಲಿ ಇವನು ಮಹಮ್ಮದನೊಂದಿಗೆ ವ್ಯಾಜ್ಯ ವಾಡಿದನು. ಮಹಾವಿದ್ವಾಂಸನೂ, ಪ್ರಸಿದ್ಧ ಪ್ರವಾಸಿಯೂ ಆದ ಅಲ್ಬೆರುನಿ ಅವನ ಸಮಕಾಲೀನ. ತನ್ನ ಗ್ರಂಥಗಳಲ್ಲಿ ಮಧ್ಯ ಏಷ್ಯದಲ್ಲಿ ಆಗಿನ ಕಾಲದಲ್ಲಿ ಜೀವನ ಹೇಗಿತ್ತು ಎಂಬ ಕಿರುನೋಟವನ್ನು ಕೊಡುತ್ತಾನೆ. ಪಾರಸಿನಂಶೀಕನಾದರೂ, ಶೈವದಲ್ಲಿ ಹುಟ್ಟಿ ಇಂಡಿಯ ದೇಶಕ್ಕೆ ಬಂದು ದೊಡ್ಡ ಪ್ರವಾಸಮಾಡಿದನು. ಚೋಳರಾಜ್ಯಕ್ಕೆ ಬಂದಿದ್ದುದೂ ದಕ್ಷಿಣಭಾರತದಲ್ಲಿ ಪ್ರವಾಸಮಾಡಿದುದೂ ಅನುಮಾನವಾದರೂ ಚೋಳ ರಾಜ್ಯದಲ್ಲಿ ಒಂದು ದೊಡ್ಡ ಜಲಾಶಯವಿತ್ತೆಂದು ಹೇಳುತ್ತಾನೆ. ಕಾಶ್ಮೀರ ದಲ್ಲಿ ಸಂಸ್ಕೃತವನ್ನು ಕಲಿತು ಭಾರತೀಯ ಧರ್ಮ, ತತ್ವಶಾಸ್ತ್ರ, ವಿಜ್ಞಾನ ಮತ್ತು ಕಲೆಗಳನ್ನು ಅಭ್ಯಾಸಮಾಡಿದನು. ಗ್ರೀಕ್ ತತ್ವಶಾಸ್ತ್ರವನ್ನು ಕಲಿಯಲು ಮೊದಲೇ ಆತನು ಗ್ರೀಕ್ ಭಾಷೆಯನ್ನು ಕಲಿತಿದ್ದನು. ಆತನ ಗ್ರಂಥಗಳು ಜ್ಞಾನ ಭಂಡಾರ ಮಾತ್ರವಲ್ಲದೆ ಸುತ್ತಲೂ ಯುದ್ಧ, ಸುಲಿಗೆ, ಕೊಲೆಪಾತಗಳಾಗುತ್ತಿದ್ದರೂ ತಾಳ್ಮೆಯಿಂದ ವಿದ್ವತ್ತು ಹೇಗೆ ಮುಂದುವರಿಯಿತು, ಕಾಮಕ್ರೋಧಾದಿ ಗಳಿಂದ ಪರಸ್ಪರ ಬಾಂಧವ್ಯದಲ್ಲಿ ವೈಷಮ್ಯ ಹುಟ್ಟಿದ್ದರೂ ಒಂದು ದೇಶವು ಇನ್ನೊಂದು ದೇಶವನ್ನು ಅರ್ಥಮಾಡಿಕೊಳ್ಳಲು ಹೇಗೆ ಪ್ರಯತ್ನ ಮಾಡಿತು ಎಂದು ತಿಳಿಸುತ್ತಾನೆ. ಆ ವ್ಯಾಮೋಹ ಮತ್ತು ಕ್ರೋಧದಿಂದ ಇಬ್ಬರ ದೃಷ್ಟಿ ಯೂ ಮಂಜಾಗಿರಬಹುದು, ಪ್ರತಿಯೊಂದು ದೇಶವೂ ತನ್ನ ಜನರೇ ಶ್ರೇಷ್ಠರೆಂದು ಭಾವಿಸಿರಬಹುದು. ಭಾರತೀಯರ ವಿಷಯದಲ್ಲಿ “ ಗರ್ವಿಗಳು, ಜಂಭದ ಕೋಳಿಗಳು, ಸ್ವಯಂ ಪೂರ್ಣರು, ಜಡಮತಿಗಳು” ಎಂದೂ “ ತಮ್ಮ ದೇಶಕ್ಕಿಂತ ಇನ್ನೊಂದಿಲ್ಲ, ತಮ್ಮ ಜನಾಂಗ ಕ್ಕಿಂತ ಉತ್ತಮವಿಲ್ಲ. ತಮ್ಮ ದೊರೆಗಿಂತ ಶ್ರೇಷ್ಠ ವಿಲ್ಲ, ತಮ್ಮ ವಿಜ್ಞಾನಕ್ಕಿಂತ ಬೇರೆ ಇಲ್ಲ ಎಂದು

ಉಳಿದವರನ್ನು ವಮನ ವಿರೇಚನಗಳಿಂದ ದೇಹಶುದ್ದಿ ಮಾಡಿ ಅದೇ ಅಂತಸ್ತಿನ ಸೈನಿಕರಿಗೆ ಮದುವೆಮಾಡಿಕೊಡುತ್ತಿ ದ್ದರು, ಕೀಳುಜಾತಿಯ ಸ್ತ್ರೀಯರನ್ನು ಕೀಳುಜಾತಿಯ ಗಂಡಸರಿಗೆ ಮದುವೆಮಾಡುತ್ತಿದ್ದರು. ಉತ್ತಮರಿಗೆ ಅವರ ಗಡ್ಡವನ್ನು ಬೋಳಿಸಿ ರಜಪೂತರ ಹಿಖಾವತ್ ಮತ್ತು ವಾಧೀಲ ಗುಂಪಿಗೆ ಸೇರಿಸುತ್ತಿದ್ದರು, ಕಡಮೆ ದರ್ಜೆಯವರನ್ನು ಖೋಲಿ, ಖಂಟ, ಬಬ್ರಿಯ, ಮೇರ್ ಗುಂಪಿಗೆ ಸೇರಿಸುತ್ತಿದ್ದರು.” ತರೀಖ್-ಇ-ಸೋರತ್ ನಾನು ಓದಿಲ್ಲ, ಅದನ್ನು ಎಷ್ಟನ್ನು ನಂಬಬಹುದು ನಾನರಿಯೆ, ಈ ಉಲ್ಲೇಖನವನ್ನು ಕೆ, ಎಂ, ಮುನ್ನಿಯವರ ಗುರ್ಜರ ದೇಶದ ವೈಭವ ಎಂಬ ಗ್ರಂಥದಿಂದ ಉದಹರಿಸಿರುತ್ತೇನೆ, ಮುಖ್ಯವಾಗಿ ಗಮನಿಸಬೇಕಾದದ್ದು ಏದೇಶೀಯರು ರಜಪೂತ ಪಂಗಡ ಗಳಲ್ಲಿ ಸೇರಿ ಹೋಗುತ್ತಿದ್ದ ಮದುವೆ ಸಹ ಆಗುತ್ತಿದ್ದ ರೀತಿ, ಶುದ್ಧಿಕರಣ ಪದ್ಧತಿಯು ಬಹಳ ವಿಚಿತ್ರವಿದೆ