ಪುಟ:ಭಾರತ ದರ್ಶನ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹೊಸ ಸಮಸ್ಯೆಗಳು

೨೦೯

ಕಾವ್ಯ ಮತ್ತು ಕಥೆಗಳಲ್ಲಿ, ಎಲ್ಲ ಪ್ರೇಮಸಾಹಸಿಗಳಂತೆ, ಪೃಥ್ವಿರಾಜನೂ ಜನಪ್ರಿಯನಾಗಿದ್ದಾನೆ. ತಾನು ಪ್ರೀತಿಸಿದ್ದ ಮತ್ತು ತನಗೆ ಒಲಿದಿದ್ದ ಕನೈಯನ್ನು ವರಿಸಲು ಆಕೆಯ ತಂದೆಯಾದ ಜಯ ಚಂದ್ರನ ಅರಮನೆಯಿಂದ ಎದುರು ಬಂದ ರಾಜಕುಮಾರರನ್ನೆಲ್ಲ ಧಿಕ್ಕರಿಸಿ ಅವರ ಎದುರಿನಲ್ಲಿ ಎತ್ತಿಕೊಂಡು ಹೋಗಿದ್ದನು. ಸ್ವಲ್ಪ ಕಾಲ ತನ್ನ ಪ್ರೇಯಸಿಯ ಪ್ರೇಮವನ್ನೇನೋ ಅನುಭವಿಸಿದನು. ಆದರೆ ಬಲಿಷ್ಠ ರಾಜನೊಡನೆ ವೈರವನ್ನು ಕಟ್ಟಿ ಕೊಂಡು ಅ೦ತಃಕಲಹ ಹುಟ್ಟ ಎರಡು ಕಡೆಯೂ ದೆಹಲಿ ಮತ್ತು ಮಧ್ಯ ಇಂಡಿಯದ ವೀರಾಗ್ರಣಿಗಳೆಲ್ಲ ಪರಸ್ಪರ ಕಾದಾಡಿ ಪ್ರಾಣ ಬಿಟ್ಟರು. ಈ ರೀತಿ ಒಬ್ಬ ಹೆಂಗಸಿನ ಪ್ರೇಮಕ್ಕಾಗಿ ಪೃಥ್ವಿರಾಜನು ತನ್ನ ಪ್ರಾಣವನ್ನೂ, ಸಿಂಹಾಸನ ವನ್ನೂ ಕಳೆದುಕೊಂಡನು. ಭಾರತೀಯ ಸಾಮ್ರಾಜ್ಯಗಳ ರಾಜಧಾನಿಯಾದ ದೆಹಲಿ ನಗರವು ಪರಕೀಯ ದಂಡನಾಯಕನ ಕೈಸೇರಿತು. ಈ ಪ್ರೇಮಕಥೆಯು ಕಾವ್ಯರೂಪದಲ್ಲಿ ಇನ್ನೂ ಕೇಳಬರುತಿದೆ. ಪೃಥ್ವಿರಾಜನೊಬ್ಬ ವೀರನಾಗಿದ್ದಾನೆ. ಜಯಚಂದ್ರನು ದ್ರೋಹಿಯಾಗಿದ್ದಾನೆ.

ದೆಹಲಿ ಪರಾಧೀನವಾದ್ದರಿಂದ ಭಾರತವೆಲ್ಲ ಪರಾಧೀನವಾಗಲಿಲ್ಲ. ದಕ್ಷಿಣದಲ್ಲಿ ಚೋಳರು ಸ್ವತಂತ್ರರಾಗಿದ್ದರು. ಇನ್ನೂ ಕೆಲವು ಸ್ವತಂತ್ರ ರಾಷ್ಟ್ರಗಳಿದ್ದವು. ಆಫ್ಘನರು ದಕ್ಷಿಣಾ ಪಥವನ್ನು ಆಕ್ರಮಿಸಲು ಇನ್ನೂ ಒಂದುನೂರು ಐವತ್ತು ವರ್ಷಗಳು ಬೇಕಾಯಿತು.

೪. ಇಂಡೋ - ಆಫ್ಘನರು : ದಕ್ಷಿಣ ಇಂಡಿಯ : ವಿಜಯನಗರ : ಬಾಬರ್ : ಸಮುದ್ರ ಬಲ

ಇಂಡಿಯದ ಇತಿಹಾಸವನ್ನು ಇಂಗ್ಲಿಷ್ ಮತ್ತು ಕೆಲವು ಭಾರತೀಯ ಚರಿತ್ರಕಾರರು ಸಹ ಪ್ರಾಚೀನ ಅಥವ ಹಿಂದೂ, ಮುಸ್ಲಿ೦, ಮತ್ತು ಬ್ರಿಟಿಷ್ ಕಾಲವೆಂದು ಮೂರು ಭಾಗ ವಿ೦ಗಡಮಾಡಿದ್ದಾರೆ. ಇದು ಅರ್ಥವತ್ತಾಗಿಯೂ ಇಲ್ಲ. ಸರಿಯೂ ಅಲ್ಲ. ಅದರಿಂದ ಬಹಳ ಮೋಸವಾಗುತ್ತದೆ ; ಮತ್ತು ಒಂದು ತಪ್ಪು ಭಾವನೆಯೂ ಹುಟ್ಟುತ್ತದೆ. ಅದರಲ್ಲಿ ಮೇಲಿನ ರಾಜಕೀಯ ಬದಲಾವಣೆ ಗಳಿಗೆ ಪ್ರಾಶಸ್ತ್ರ ಕೊಡಲಾಗಿದೆಯೇ ಹೊರತು, ಭಾರತೀಯರ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರಮುಖ ಮಾರ್ಪಾಟುಗಳಿಗೆ ಯಾವ ಗಮನವನ್ನೂ ಕೊಟ್ಟಿಲ್ಲ. ಪ್ರಾಚೀನ ಎನ್ನು ವ ಕಾಲವು ಬಹು ದೀರ್ಘ ವಿದೆ; ಪರಿವರ್ತನೆ, ಬೆಳವಣಿಗೆ, ಕ್ಷೀಣದೆಸೆ, ಪುನಃ ಬೆಳವಣಿಗೆಗಳಿಂದ ತುಂಬಿದೆ. ಮುಸ್ಲಿ೦ ಅಥವ ಮಧ್ಯಯುಗದಲ್ಲಿ ಇನ್ನೊಂದು ಬಗೆಯ ಬದಲಾವಣೆಯಾಯಿತು. ಅದು ಬಹು ಮುಖ್ಯವಾದರೂ ಮೇಲಿನ ಉತ್ತಮ ವರ್ಗದ ಜನರಲ್ಲಿ ಆಯಿತೇ ಹೊರತು ಮುಖ್ಯವಾಗಿ ಭಾರತೀಯ ಜೀವನದ ನಿತ್ಯತೆಗೆ ಅಡ್ಡಿ ಬರಲಿಲ್ಲ. ವಾಯವ್ಯದಿಂದ ಇ೦ಡಿ ಯಕ್ಕೆ ದಂಡೆತ್ತಿ ಬಂದ ಮುತ್ತಿಗೆಕಾರರು ಪೂರ್ವದಲ್ಲಿ ಅವರಿಗಿಂತ ಮುಂಚೆ ದಂಡೆತ್ತಿ ಬಂದವರಂತೆ ಭಾರತದ ಜನಜೀವನದಲ್ಲಿ ಸೇರಿಕೊಂಡು ಐಕ್ಯವಾಗಿ ಹೋದರು. ಅವರ ವಂಶೀಕರು ಭಾರತೀಯ ವಂಶೀಕರಾದರು. ಪರಸ್ಪರ ವಿವಾಹದಿಂದ ತುಂಬ ವರ್ಣಸಂಕರವೂ ಆಯಿತು. ಅಲ್ಲಲ್ಲಿ ಕೆಲವರನ್ನು ಬಿಟ್ಟರೆ ಜನರ ಜೀವನ ಪದ್ಧತಿ ಮತ್ತು ಆಚಾರವ್ಯವಹಾರಗಳಿಗೆ ಯಾವ ಅಡ್ಡಿ ಯೂ ಆಗಲಿಲ್ಲ. ಅವರಿಗೂ ಭಾರತವೇ ಮಾತೃಭೂಮಿಯಾಯಿತು; ಬೇರೆ ಯಾವ ವ್ಯಾಮೋಹವೂ ಇರಲಿಲ್ಲ. ಆದ್ದರಿ೦ದ ಇ೦ಡಿಯ ಸ್ವತಂತ್ರವಾಗಿಯೇ ಉಳಿಯಿತು.

ಬ್ರಿಟಿಷರ ಆಗಮನದಿಂದ ಮಾತ್ರ ಬಹು ಮುಖ್ಯ ಬದಲಾವಣೆಗಳಾದವು. ಅನೇಕ ಬಗೆಯಿಂದ ಹಳೆಯ ಜೀವನ ಪದ್ಧತಿಯು ಬುಡಮೇಲಾಯಿತು. ಇಂಗ್ಲೆಂಡಿನಲ್ಲಾದ ಪುನರುಜೀವನ, ಸುಧಾ ರಣೆ ಮತ್ತು ರಾಜಕೀಯ ಆಂದೋಲನಕಾಲದಿಂದ ಕ್ರಮೇಣ ಯೂರೋಪಿನ ಜನರು ಬಲಗೊಂಡು, ಯಂತ್ರಯುಗದ ಆರಂಭದಿಂದ ರೂಪುಗೊಳ್ಳುತ್ತಿದ್ದ ಒಂದು ಹೊಸ ಪ್ರಚೋದನ ಶಕ್ತಿಯನ್ನು ತಂದರು. ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳು ಈ ಶಕ್ತಿಯನ್ನು ಇನ್ನೂ ಪುಷ್ಟಿಗೊಳಿಸಿದವು. ಇ೦ಡಿಯ ದಲ್ಲಿ ಬ್ರಿಟಿಷರು ಹೊರಗಿನವರಾಗಿ, ಪರಕೀಯರಾಗಿಯೇ ಉಳಿದು, ದೇಶದೊಂದಿಗೆ ಹೊಂದಿಕೊಳ್ಳದೆ ಬೇರೆ ನಿಂತರು. ಹೊಂದಿಕೊಳ್ಳುವ ಯತ್ನವನ್ನೂ ಮಾಡಲಿಲ್ಲ, ಎಲ್ಲಕ್ಕೂ ಹೆಚ್ಚಾಗಿ ದೇಶದ ರಾಜ

14