ಪುಟ:ಭಾರತ ದರ್ಶನ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ೧೦. ಯಾಂತ್ರಿಕ ಪ್ರಗತಿ ಮತ್ತು ಸೃಷ್ಟಿಶಕ್ತಿಯಲ್ಲಿ ಏಷ್ಯ ಮತ್ತು ಯೂರೋಪುಗಳಲ್ಲಿ ವ್ಯತ್ಯಾಸ. - ಅಕ್ಷರನಿಗೆ ಅಧ್ಯಾತ್ಮಿಕ ಮತ್ತು ಪ್ರಾಪಂಚಿಕ ವಿಷಯವಾಗಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಜ್ಞಾನ ಕುತೂಹಲವು ಅಧಿಕವಾಗಿತ್ತು. ಯಂತ್ರೋಪಕರಣಗಳ ಉಪಯೋಗ ವನ್ನೂ, ಯುದ್ದ ವಿಜ್ಞಾನವನ್ನೂ ತಿಳಿದುಕೊಳ್ಳಲು ತುಂಬ ಆಸಕ್ತನಾಗಿದ್ದನು. ಯುದ್ಧದ ಆನೆಗಳಿಗೆ ಬಹಳ ಬೆಲೆಕೊಟ್ಟು ಇದ್ದನು ಮತ್ತು ಹಸ್ತಿ ಪಡೆಯು ಅವನ ಸೇನೆಯ ಮುಖ್ಯ ಅಂಗವಾಗಿತ್ತು. ಆತನ ಆಸ್ಥಾನದ ಪೋರ್ತುಗೀಸ್ ಯೇಸು ಪಂಥದ ಲೇಖಕರು ಅವನಿಗೆ “ ಅನೇಕ ವಿಷಯಗಳಲ್ಲಿ ಆಸಕ್ತಿ ಇತ್ತು, ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವು ಇತ್ತು. ಯುದ್ಧ ಮತ್ತು ರಾಜಕೀಯ ವಿಚಾರಗಳಲ್ಲಿ ಮಾತ್ರವಲ್ಲದೆ ಯಾಂತ್ರಿಕ ಕಲೆಗಳಲ್ಲಿ ಸಹ ವಿಶೇಷ ಜ್ಞಾನವಿತ್ತು. ಹಸಿದ ಮನುಷ್ಯನು ಒಂದೇ ತುತ್ತಿಗೆ ಎಲ್ಲವನ್ನೂ ಕಳಿಸಲು ಪ್ರಯತ್ನ ಪಡುವಂತೆ ತನ್ನ ಜ್ಞಾನ ಪಿಪಾಸೆ ಯಲ್ಲಿ ಎಲ್ಲವನ್ನೂ ಒಂದೇ ಬಾರಿ ತಿಳಿದುಕೊಳ್ಳಲು ಪ್ರಯತ್ನ ಪಡುತ್ತಿದ್ದನು” ಎಂದಿದ್ದಾರೆ. ಆದರೂ ಆತನ ಕುತೂಹಲವು ಒಂದು ಮಟ್ಟದಿಂದ ಹೇಗೆ ಮೇಲೆ ಏರಲಿಲ್ಲವೆಂಬುದೇ ಆಶ್ಚರ್ಯ, ತನ್ನ ಮುಂದೆ ಸ್ಪಷ್ಟ ದಾರಿಗಳಿದ್ದರೂ ಮುಂದುವರಿಯಲಿಲ್ಲ, “ ಮಹಾಮೊಗಲ ”ನೆಂದು ಹೆಸರುವಾಸಿ ಪಡೆದು, ಭೂಬಲದಿಂದ ಅಜೇಯನಾದರೂ, ನಾವಿಕಾಬಲದಲ್ಲಿ ಅಶಕ್ತನಾದನು. ಕೇಪ್ ಭೂಶಿರದ ಮಾರ್ಗವಾಗಿ ವಾಸ್ಕೋಡಿಗಾಮನು 1498 ರಲ್ಲಿ ಕಲ್ಲಿಕೋಟೆಗೆ ಬಂದಿದ್ದನು. ಆಲ್ಲು ಕರ್ಕ್ 1511 ರಲ್ಲಿ ಮಲಕ್ಕಾದ್ವೀಪವನ್ನು ಹಿಡಿದು ಹಿಂದೂ ಸಾಗರದಲ್ಲಿ ಪೋರ್ತುಗೀಸರ ಸ್ವಾಸ್ಥ ವನ್ನು ಕಟ್ಟಿದನು. ಇದರಿಂದ ಪೋರ್ತುಗೀಸರಿಗೂ ಅಕ್ಷರನಿಗೂ ಘರ್ಷಣೆಯಾಗದೆ ಇದ್ದರೂ, ಅನೇಕ ಬಾರಿ ಪೋರ್ತುಗೀಸರು ಮಕ್ಕಾ ಯಾತ್ರಿಕರನ್ನು ಅವರಲ್ಲಿ ರಾಜಮನೆತನದವರೂ ಇರುತ್ತಿದ್ದರುಲಂಚಕೊಡದೆ ಮುಂದೆ ಬಿಡುವುದಿಲ್ಲವೆಂದು ಸಮುದ್ರ ಮಧ್ಯೆ ತಡೆಹಾಕುತ್ತಿದ್ದರು. ಭೂಮಿಯ ಮೇಲೆ ಅಕ್ಷರ್ ಎಷ್ಟೇ ಬಲಶಾಲಿಯಾಗಿದ್ದರೂ ಸಮುದ್ರದಲ್ಲಿ ಪೋರ್ತುಗೀಸರೇ ಪ್ರಬಲರಾಗಿದ್ದರೆಂದು ಇದ ರಿಂದಲೇ ವ್ಯಕ್ತವಾಗುತ್ತದೆ. ಪ್ರಾಚೀನ ಭಾರತದ ಕೀರ್ತಿ ಪ್ರತಿಷ್ಠೆಗಳು ಅದರ ಸಮುದ್ರ ಮಾರ್ಗಗಳ ಮೇಲಿನ ಸ್ವಾಮ್ಯದಿಂದ ಲಭಿಸಿದ್ದರೂ, ವಿಶಾಲ ಭಾರತದ ಚಕ್ರವರ್ತಿಯಾದ ಅಕ್ಷರ್ ನಾವಿಕಾಬಲಕ್ಕೆ ಏಕೆ ಪ್ರಾಶಸ್ತ್ರಕೊಡಲಿಲ್ಲ ಎಂಬುದು ಅರ್ಥವಾಗುವುದಿಲ್ಲ. ಅಕ್ಷರನು ದೊಡ್ಡದೊಂದು ದೇಶವನ್ನು ಅಧೀನಮಾಡಿಕೊಳ್ಳಬೇಕಾಗಿತ್ತು. ಆಗಾಗ್ಗೆ ಸ್ವಲ್ಪ ಕಿರುಕುಳ ಕೊಟ್ಟ ರೂ ಪ್ರಾಯಶಃ ಪೋರ್ತು ಗೀಸರ ವಿಷಯ ಯೋಚಿಸಲು ಅವನಿಗೆ ಬಿಡುವೇ ದೊರೆಯದೆ ಅಲಕ್ಷಿಸಿರಬೇಕು. ಹಡಗುಗಳನ್ನು ಕಟ್ಟುವ ಯೋಚನೆ ಒಂದು ಬಾರಿಯೂ ಹೊಳೆಯಲಿಲ್ಲ. ಪ್ರಾಯಶಃ ನಾವಿಕಾಬಲವು ಒಂದು ಅವಶ್ಯ ಕತ ಎನ್ನುವುದರ ಬದಲು ಒಂದು ಆಡಂಬರ ಎಂದು ತಿಳಿದಿರಬೇಕು, ಅಲ್ಲದೆ ಮೊಗಲ್ ಸೈನ್ಯವೂ, ಇತರ ಸಂಸ್ಥಾನಗಳ ಸೈನ್ಯವೂ ತಮಗೆ ಬೇಕಾದ ಫಿರಂಗಿಗಳಿಗೆ ಪರಕೀಯರಾದ ಆಟೋಮನ್ ತುರ್ಕಿ ಜನರನ್ನು ಅವಲಂಬಿಸಿದ್ದರು. ಫಿರಂಗಿದಳದ ಸೇನಾಧಿಪತಿಯ ಹೆಸರು ರೂಮಿಖಾನ್ ಎಂದು ಇತ್ತು. (ರುಮ್' ಎಂದರೆ ಪೂರ್ವರೋಮ್ ಅಥವ ಕಾನ್‌ಸ್ಟೆಂಟನೋ ಪಲ್, ಈ ವಿದೇಶೀ ನಿಪುಣರು ಸ್ಥಳದ ಸೈನಿಕರಿಗೆ ಶಿಕ್ಷಣ ಕೊಡುತ್ತಿದ್ದರು. ಅಕ್ಷರ್ ಆಗಲಿ ಇತರ ರಾಗಲಿ ಶಿಕ್ಷಣ ಪಡೆಯಲು ತಮ್ಮ ಜನರನ್ನು ಪರದೇಶಗಳಿಗೆ ಏಕೆ ಕಳುಹಿಸಲಿಲ್ಲ ? ಅಥವ ಉತ್ತಮ ಶಿಕ್ಷಣ ವಿಧಾನವನ್ನು ಕಂಡುಹಿಡಿಯಲು ಸಂಶೋಧನೆಗೆ ಏಕೆ ಪ್ರೋತ್ಸಾಹ ಕೊಡಲಿಲ್ಲ. ?

  • ಯೇಸು ಪಂಥದವರು ಅಕ್ಷರನಿಗೆ ಬೈಬಲ್ ಮತ್ತು ಇನ್ನೂ ಎರಡು ಮೂರು ಮುದ್ರಿತ ಗ್ರಂಥ ಗಳನ್ನು ಬಹುಮಾನ ಕೊಟ್ಟರು. ತನ್ನ ರಾಜ್ಯಾಡಳಿತ ಸೌಕರ್ಯಕ್ಕೂ ಇತರ ದೊಡ್ಡ ಕೆಲಸಗಳಿಗೂ ವಿಶೇಷ ಉಪಯೋಗವಾಗುತ್ತಿದ್ದ ಮುದ್ರಣ ವಿಷಯದಲ್ಲಿ ಆತನು ಏಕೆ ಆಸಕ್ತಿ ತೋರಿಸಲಿಲ್ಲ. ?

ಮೊಗಲ್ ಶ್ರೀಮಂತರು ಗಡಿಯಾರಗಳನ್ನು ಬಹಳವಾಗಿ ಉಪಯೋಗಿಸುತ್ತಿದ್ದರು. ಮೊದಲು