ಪುಟ:ಭಾರತ ದರ್ಶನ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ತರುವಾಯ ಆತನ ಕಾಲದ ಹೊಸ ವಾತಾವರಣವೂ, ಮಾನಸಿಕ ಆಸಕ್ತಿಯ ಮಾಯವಾಗಿ ಭಾರತವು ಪುನಃ ನಿಶ್ಚಲ ನಿದ್ರಾವಸ್ಥೆಯನ್ನು ತಾಳಿತು.* ಸಮನ್ವಯ ಸಂಸ್ಕೃತಿಯ ಬೆಳವಣಿಗೆ | ಅಕೃರನು ಭದ್ರವಾದ ತಳಹದಿಯ ಮೇಲೆ ರಾಜ್ಯವನ್ನು ಕಟ್ಟಿದ್ದರಿಂದ ಆತನ ವಂಶೀಕರು ಅಷ್ಟು ದಕ್ಷರಲ್ಲದಿದ್ದರೂ ಆ ರಾಜ್ಯವು ಒಂದುನೂರು ವರ್ಷಗಳವರೆಗೆ ಬಾಳಿತು. ಪ್ರತಿಯೊಬ್ಬ ಚಕ್ರವರ್ತಿಯ ಮರಣಾನಂತರವೂ ಸಿಂಹಾಸನಕ್ಕಾಗಿ ಮಕ್ಕಳಲ್ಲಿ ಯುದ್ದ ವಾಗಿ ಕೇಂದ್ರದ ಶಕ್ತಿಯು ಕುಂದುತ್ತ ಬಂದಿತು. ಆದರೂ ರಾಜಸಭೆಯು ಮಾತ್ರ ವೈಭವಪೂರ್ಣವಿತ್ತು. ಮೊಗಲರ ಕೀರ್ತಿಯು ಏಷ್ಯಾ ಮತ್ತು ಯೂರೋಪಿನಲ್ಲೆಲ್ಲ ಪ್ರಸಿದ್ದ ವಿತ್ತು. ಪ್ರಾಚೀನ ಭಾರತದ ವಸ್ತುಶಿಲ್ಪ ಕಲೆಯೊಡನೆ ಹೊಸಕಲೆಯ ಸರಳತೆಯ ಗಾಂಭೀರವೂ ಬೆರೆತು ದೆಹಲಿ ಮತ್ತು ಆಗ್ರ ನಗರಗಳಲ್ಲಿ ಸುಂದರ ಭವನಗಳ ನಿರ್ಮಾ ಣವಾಯಿತು, ಉತ್ತರ ಮತ್ತು ದಕ್ಷಿಣ ಭಾರತದ ವಿಶೇಷ ಆಡಂಬರದ ದೇವಸ್ಥಾನಗಳ ಶಿಥಿಲ ಕಲೆ ಗಿಂತ ಇಂಡೊ ಮೊಗಲ್ ಕಲೆಯ ಈ ಕಟ್ಟಡಗಳ ಸೌಂದಠ್ಯವು ಭವ್ಯವಿತ್ತು. ಉತ್ಸಾಹಪೂರ್ಣವಾದ ಶಿಲ್ಪಿಗಳು ತಮ್ಮ ಪ್ರೇಮಪೂರಿತ ಕೈಗಳಿಂದ ಆಗ್ರ ನಗರದಲ್ಲಿ “ತಾಜಮಹಲ್” ನ್ನು ಕಟ್ಟಿದರು.

  • ಮೊಗಲ್ ಬಾದಶಹರಲ್ಲಿ ಕೊನೆಯವನಾದ ಅವರಂಗ್‌ಜೇಬ್ ಕಾಲಚಕ್ರವನ್ನು ಹಿಂದಕ್ಕೆ ತಿರು ಗಿಸಲು ಪ್ರಯತ್ನ ಮಾಡಿ ಪ್ರಗತಿಯನ್ನು ತಡೆದು ಕಡೆಗೆ ನುಚ್ಚುನೂರುಮಾಡಿದನು. ಜನತೆಯ ಸ್ವಭಾವಕ್ಕನುಗುಣವಾಗಿ ಮೊಗಲ್ ಚಕ್ರವರ್ತಿಗಳು ಎಂದಿನವರೆಗೆ ನಡೆದು ದೇಶದ ವಿವಿಧ ಪಂಗಡ ಗಳಲ್ಲಿ ಐಕ್ಯಮತ ವನ್ನುಂಟುಮಾಡಿ ಸರ್ವಸಮಾನ ರಾಷ್ಟ್ರೀಯ ಭಾವನೆಯನ್ನು ೦ಟು ಮಾಡಲು ಪ್ರಯತ್ನ ಪಟ್ಟರೋ ಅಂದಿನವರೆಗೂ ಅವರು ಬಲಿಷ್ಠರಾಗಿದ್ದರು. ಅವರಂಗಜೇಬನು ಎಂದು ಈ ಪ್ರಯತ್ನ ಕೈ ಅಡ್ಡ ಬಂದು ಭಾರತೀಯನಲ್ಲದೆ ಮುಸ್ಲಿ೦ ಚಕ್ರವರ್ತಿಯಾಗಲು ಪ್ರಯತ್ನ ಪಟ್ಟನೋ ಅಂದಿನಿಂದ ಮೊಗಲ್ ಚಕ್ರಾಧಿಪತ್ಯವು ಸಡಿಲಿ ಕುಸಿಯಲು ಆರಂಭವಾಯಿತು. ಅಕ್ಷರನೂ ಅವನ ವಂಶೀಕರೂ ಮಾಡಿದ ಕೆಲಸವೆಲ್ಲ ನಿರರ್ಥಕವಾಯಿತು. ಅಕ್ಲರನು ತನ್ನ ರಾಜನೀತಿಯಿಂದ ಒಟ್ಟು ಗೂಡಿಸಿದ್ದ ಭಿನ್ನ ಶಕ್ತಿಗಳೆಲ್ಲ ಬೇರೆಯಾಗಿ ಚಕ್ರಾಧಿಪತ್ಯದ ಮೇಲೆ ತಿರುಗಿಬಿದ್ದವು. ಸಂಕುಚಿತ ಭಾವನೆಯಿಂದ ಕೂಡಿದ್ದರೂ ಪುನರುಜೀವಿತ ರಾಷ್ಟ್ರೀಯ ಭಾವನೆಯ ಹೊಸ ಚಳುವಳಿಗಳಿದ್ದವು. ಶಾಶ್ವತ ನಿಲ್ಲಲು ಶಕ್ತಿ ಸಾಲದೆ ಇದ್ದರೂ ಮತ್ತು ಸನ್ನಿವೇಶವು ವಿರೋಧವಿದ್ದರೂ, ಮೊಗಲ ಚಕ್ರಾಧಿ ಪತ್ಯವನ್ನು ಮಾತ್ರ ಅವು ನಾಶಮಾಡಿದವು.
  • ಕೊಲಂಬಸ್ ಅಮೆರಿಕ ಕಂಡುಹಿಡಿವ ವಿಷಯವು ಅಕ್ಷರನಿಗೆ ತಿಳಿದಿತ್ತೆಂದು ಅಬುಲ್ ಫಸಲ್ ಹೇಳುತ್ತಾನೆ, ಜಹಾಂಗೀರನ ಕಾಲದಲ್ಲಿ ಯೂರೋಪಿನ ಮೂಲಕ ಅಮೆರಿಕದ ತಂಬಾಕು ಇಂಡಿಯಾಕ್ಕೆ ಬಂದಿತ್ತು, ಜಹಾಂಗೀರನು ಅದರ ಅಭ್ಯಾಸವನ್ನು ತಡೆಗಟ್ಟಲು ಎಷ್ಟೋ ಪ್ರಯತ್ನ ಪಟ್ಟ ರೂ ಬಹಳಬೇಗ ಜನರಲ್ಲಿ ಹರಡಿತು.

ಮೊಗಲರ ಕಾಲದಲ್ಲಿ ಮಧ್ಯ ಏಷ್ಯಾ ಕ್ಕೂ ಭಾರತಕ್ಕೂ ನಿಕಟ ಸಂಬಂಧವಿತ್ತು. ರಷ್ಯದವರೆಗೂ ಈ ಸಂಬಂಧವು ಹಬ್ಬಿ ಅಲ್ಲಿ ಭಾರತೀಯ ರಾಯಭಾರಿಗಳೂ ವ್ಯಾಪಾರಸ್ಥರೂ ಇದ್ದರೆಂದು ತಿಳಿದುಬಂದಿದೆ. ರಷ್ಯದ ಚರಿತ್ರೆಗಳಲ್ಲಿ ಆ ರೀತಿ ಉಲ್ಲೇಖವಿರುವುದನ್ನು ರಷ್ಯನ್ ಸ್ನೇಹಿತನೊಬ್ಬನು ನನಗೆ ತಿಳಿಸಿದ್ದಾನೆ, ೧೫೩೨ರಲ್ಲಿ ಬಾಬರನ ಪ್ರತಿನಿಧಿ ಯಾದ ಖೋಜಾಹುರ್ಸ ಎಂಬಾತನು ಒಂದು ಸ್ನೇಹದ ಒಪ್ಪಂದವನ್ನು ಮಾಡಿಕೊಳ್ಳಲು ಬಂದನು, ೧೬೧೩-೧೬೪೫ರ ವರೆಗೆ ಆಳಿದ ಜಾರ್ ಮೈಕೆಲ್ ಪಡೋರಾಥನ ಕಾಲದಲ್ಲಿ ವೊಲ್ಟಾ ನದಿಯ ದಡದಲ್ಲಿ ಭಾರತೀಯ ವರ್ತಕರಿದ್ದರೆಂದು Jಳಿದುಬಂದಿದೆ. ೧೬೨೫ರಲ್ಲಿ ಸೈನ್ಯಾಧಿಕಾರಿಯ ಆಜ್ಞೆಯಿಂದ ಆಶ್ವಖಾನ್‌ನಲ್ಲಿ ಒಂದು ಭಾರತೀಯ ಪಾಳೆಯವನ್ನು ಕಟ್ಟಿದರು, ಭಾರತೀಯ ಕುಶಲಕರ್ಮಿಗಳನ್ನು ಮುಖ್ಯವಾಗಿ ನೇಕಾರರನ್ನು ಮಾಸ್ಕೋವಿಗೆ ಕರೆಸಿಕೊಂಡರು, ೧೬:೫ರಲ್ಲಿ ಸಮr ಮಲೆಂಕಿ ಎಂಬ ರಷ್ಯದ ವ್ಯಾಪಾರಿಯು ದೆಹಲಿಗೆ ಬಂದು ಅವರಂಗಜೇಬ್ ನಿಂದ ಸ್ವಾಗತಪಡದನು, ೧೬೨೨ರಲ್ಲಿ ಮಹಾಪೀಟರನು ಆಶ್ಚಖಾನ್‌ಗೆ ಬಂದಾಗ ಭಾರತೀಯ ವರ್ತಕರಿಗೆ ಭೇಟಿಕೊಟ್ಟನು, ೧೭೪೩ರಲ್ಲಿ ಸಾಧು ಗಳ ತಂಡವೊಂದು ಆಶ್ವಖಾನ್‌ಗೆ ಹೋಗಿದ್ದರು. ಅವರಲ್ಲಿಬ್ಬರು ರಷ್ಯದಲ್ಲಿಯೇ ನೆಲಸಿ ರಷ್ಯಾ ಪ್ರಜೆಗಳಾದರು.