ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ಹೊರಗಿದ್ದ ಅನೇಕರು ಅದರಲ್ಲಿ ಸೇರಲು ಅವಕಾಶವಿಲ್ಲದೆ ಅದೊಂದು ಅಪೂರ್ಣ ಸಂಕುಚಿತ ರಾಷ್ಟ್ರೀಯ ಭಾವನೆಯಾಯಿತು. ಈ ಹಿಂದೂ ರಾಷ್ಟ್ರೀಯ ಭಾವನೆಯು ಭಾರತೀಯ ಭೂಗುಣದ ಸಹಜಫಲವಾ ದರೂ ಜಾತಿಧರ್ಮಗಳಿಗಿಂತ ಮಿಗಿಲಾದ ಉನ್ನತ ರಾಷ್ಟ್ರೀಯ ಭಾವನೆಗೆ ಅದು ವಿರುದ್ಧ ವಾಗಿತ್ತು. ದೊಡ್ಡ ಚಕ್ರಾಧಿಪತ್ಯವು ಒಡೆದು ಪುಡಿಪುಡಿಯಾಗುತ್ತಿದ್ದಾಗ, ಭಾರತೀಯ ಮತ್ತು ವಿದೇಶಿ ಸಾಹಸಿಗರು ಅಲ್ಲಲ್ಲಿ ಪಾಳೆಯಗಳನ್ನು ಕಟ್ಟುತ್ತಿದ್ದ ಈ ಕಾಲದಲ್ಲಿ ನಿಜವಾದ ರಾಷ್ಟ್ರೀಯ ಮನೋಭಾವವು ಎಲ್ಲಿಯೂ ತಲೆ ಎತ್ತಲಿಲ್ಲವೆಂಬುದು ದಿಟ. ಪ್ರತಿಯೊಬ್ಬ ಸಾಹಸವ್ಯಕ್ತಿಯೂ ತನ್ನ ವೈಯಕ್ತಿಕ ಶಕ್ತಿ ಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಟ್ಟು, ಸ್ವರಕ್ಷಣೆಯಲ್ಲಿ ಉದ್ಯುಕ್ತನಾದನು. ನಮಗೆ ದೊರೆ ತಿರುವ ಇತಿಹಾಸವೆಲ್ಲ ಈ ಸಾಹಸವ್ಯಕ್ತಿಗಳ ಚರಿತ್ರೆ. ಅದರಲ್ಲಿರುವುದೆಲ್ಲ ಒಳಗಿನ ಮೂಲಕಾರಣಗಳಿ ಗಿಂತ ಮೇಲಿನ ಘಟನೆಗಳಿಗೆ ಪ್ರಾಧಾನ್ಯ. ಆದರೂ ಒಳಹೊಕ್ಕು ನೋಡಿದರೆ ಆಗ ಸಾಹಸಿಗರು ಅನೇಕರಿದ್ದರೂ ಕೇವಲ ಸಾಹಸವೇ ಆ ಘಟನೆಗಳಿಗೆ ಕಾರಣವಲ್ಲ ಎಂದು ಗೊತ್ತಾಗುತ್ತದೆ. ಮರಾಠ ರಿಗೆ ಒಂದು ಘನವಾದ ವಿಶಾಲಭಾವನೆ ಇತ್ತು, ಅವರ ಶಕ್ತಿಯು ಹೆಚ್ಚಿದಂತೆಲ್ಲ ಈ ಭಾವನೆಯ ಬಲ ಗೊಂಡಿತು. “ ಹಿಂದೂಸ್ಥಾನ ಮತ್ತು ದಖನ್ನಿನ ಜನರಲ್ಲಿ ಮರಾಠರಿಗೆ ಮಾತ್ರ ಪ್ರಬಲವಾದ ರಾಷ್ಟ್ರೀಯ ಭಾವನೆ ಇದೆ, ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನ ಮೇಲೂ ಅದು ಪರಿಣಾಮ ಮಾಡಿದೆ. ದೇಶಕ್ಕೆ ಏನಾದರೂ ದೊಡ್ಡ ವಿಪತ್ತು ಒದಗಿದರೆ ಮರಾಠ ಪ್ರಮುಖರೆಲ್ಲ ಏಕೀಭವಿಸಿ ಒಂದುಗೂಡುತ್ತಾರೆ” ಎಂದು ೧೭೮೪ರಲ್ಲಿ ವಾರನ್ ಹೇಸ್ಟಿಂಗ್ಸ್ ಹೇಳಿದ್ದಾನೆ. ಪ್ರಾಯಶಃ ಈ ಅವರ ರಾಷ್ಟ್ರೀಯ ಭಾವನೆಯು ಮರಾಠಿ ಮಾತನಾಡುವ ಜನರಲ್ಲಿ ಮಾತ್ರವಿತ್ತು. ಆದರೂ ಮರಾಠರ ರಾಜಕೀಯ ಮತ್ತು ಸೈನಿಕ ಪದ್ದತಿಯಲ್ಲಿ, ನಡೆನುಡಿಯಲ್ಲಿ ವಿಶಾಲ ಮನೋಭಾವನೆಯಿತ್ತು; ಅಂತ ರ್ಯದಲ್ಲಿ ಪ್ರಜಾಪ್ರಭುತ್ವ ಭಾವನೆಯು ಇತ್ತು. ಇದರಿಂದ ಅಂತಃಶಕ್ತಿ ವೃದ್ಧಿಗೊಂಡಿತು. ಶಿವಾ ಜಿಯು ಅವರಂಗಜೇಬನ ಮೇಲೆ ಯುದ್ಧ ಮಾಡಿದರೂ, ಅವನ ಸೈನ್ಯದಲ್ಲಿ ಅನೇಕ ಮುಸ್ಲಿಮರಿದ್ದರು. ಮೊಗಲ ಚಕ್ರಾಧಿಪತ್ಯವು ಒಡೆದು ಹೋಗಲು ಇನ್ನೊಂದು ಕಾರಣ ಆರ್ಥಿಕ ರಚನೆಯು ಕುಸಿದು ಬಿದ್ದದ್ದು. ಕೆಲವು ಕಡೆ ದೊಡ್ಡದಾಗಿ ಇನ್ನೂ ಇತರ ಕಡೆಗಳಲ್ಲಿ ಸಣ್ಣದಾಗಿ ಅನೇಕ ಕಡೆ ಗಳಲ್ಲಿ ರೈತರು ದಂಗೆ ಎದ್ದರು. ೧೬೬೯ ರಿಂದ ಮೊದಲುಗೊಂಡು, ದೆಹಲಿಗೆ ಬಹಳ ಸಮೀಪದಲ್ಲಿಯೇ ಇದ್ದ “ ಜಾತ” ರು ಮೇಲಿಂದ ಮೇಲೆ ದಂಗೆ ಎದ್ದರು. ಬಡಬಗ್ಗರ ಇನ್ನೊ೦ದು ದಂಗೆ “ ಸಾತಾಮಿ” ದಂಗೆ. ಅವರನ್ನು ವರ್ಣಿಸುತ್ತ “ ರಕ್ತದಾಹದ ಅಕ್ಕಸಾಲಿಗರು, ಬಡಗಿಯರು, ಭಂಗಿಗಳು, ಚರ್ಮ ಹದಮಾಡುವವರು ಮುಂತಾದ ನೀಚವೃತ್ತಿಯ ಜೀವಶವಗಳ ದಂಗೆಕೋರರ ಗುಂಪು” ಎಂದು ಒಬ್ಬ ಮೊಗಲಸರದಾರ ಹೇಳಿದ್ದಾನೆ. ಇನ್ನೊಂದು ಗುಂಪು ಅವರನ್ನು ಅನುಗೊಳಿಸಿ ಹೊಸ ಪ್ರಯೋಗ ನಡೆಸುತ್ತ ಇತ್ತು. ಈ ರೀತಿ ಸಾಮ್ರಾಜ್ಯವು ದಂಗೆ ಮತ್ತು ಅಂತಃಕಲಹಗಳಿಂದ ಒಡೆದು ಹೋಗುತ್ತಿದ್ದಾಗ ಪಶ್ಚಿಮ ಭಾರತದಲ್ಲಿ ಮರಾಠರ ಅಭ್ಯುದಯದ ನವೋದಯವಾಗಿ ಅವರ ಶಕ್ತಿಯು ಬಲಗೊಳ್ಳುತ್ತಿತ್ತು. ೧೬೨೭ ರಲ್ಲಿ ಶಿವಾಜಿಯು ಜನಿಸಿದನು. ಕಷ್ಟ ಸಹಿಷ್ಣುಗಳಾದ ಬೆಟ್ಟ ಜೀವಿಗಳ ಆದರ್ಶನಾಯಕನಾಗಿ ಕುದುರೆಗಳ ಮೇಲೆಯೇ ದೂರದೇಶಗಳಿಗೆ ಸಾರಿ ಸೂರತನಗರದ ಇಂಗ್ಲಿಷರ ಗಡಂಗನ್ನು ಕೊಳ್ಳೆ ಹೊಡೆ ದನು ; ಮೊಗಲರಾಜ್ಯದ ದೂರದ ಪ್ರಾಂತ್ಯಗಳಲ್ಲಿ ಸಹ ಚೌಥಾಯಿ ತೆರಿಗೆಯನ್ನು ವಸೂಲುಮಾಡು ದ್ದನು. ಪ್ರಾಚೀನ ಪುರಾಣೇತಿಹಾಸಗಳಿಂದ ಸ್ಫೂರ್ತಿ ಪಡೆದು ಆದರ್ಶನಾಯಕನಿಗೆ ಅವಶ್ಯವಾದ ಎಲ್ಲ ಸದ್ಗುಣಗಳನ್ನೂ ಹೊಂದಿ; ಧೈರ್ಯಶಾಲಿಯಾಗಿ ಶಿವಾಜಿಯು ಪುನರುಜ್ಜಿವಿತ ಹಿಂದೂ ರಾಷ್ಟ್ರೀಯ ಭಾವನೆಯ ಮೂರ್ತಸ್ವರೂಪನಾದನು. ಮರಾಠರಿಗೊಂದು ರಾಷ್ಟ್ರೀಯ ಭಾವನೆಯ ಹಿನ್ನೆಲೆ ಯನ್ನು ಕೊಟ್ಟು ಐಕಮತ್ಯವನ್ನುಂಟುಮಾಡಿ ಅವರನ್ನು ಸುವ್ಯವಸ್ಥಿತಯೋಧಪಡೆಯನ್ನಾಗಿ ಮಾಡಿ* ಮೊಗಲ್ ಚಕ್ರಾಧಿಪತ್ಯವನ್ನು ನುಚ್ಚು ನೂರು ಮಾಡಿದ ಪ್ರಬಲ ಶಕ್ತಿಯನ್ನಾಗಿ ಮಾಡಿದನು. ಆತನು ೧೬೮೦ ರಲ್ಲಿ ಮಡಿದರೂ ಮರಾಠರ ಶಕ್ತಿಯು ಭಾರತವನ್ನೆಲ್ಲ ಆಕ್ರಮಿಸುವವರೆಗೂ ಬೆಳೆಯಿತು. 16