ಪುಟ:ಭಾರತ ದರ್ಶನ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ೧೪, ರಾಜ್ಯ ಸಂಘಟನೆ ಮತ್ತು ನೀತಿಯಲ್ಲಿ ಇಂಗ್ಲಿಷರ ಹೆಚ್ಚಳ ಮತ್ತು ಭಾರತದ ಹೀನಸ್ಥಿತಿ ಈ ಕಾಲದ ಇತಿಹಾಸವನ್ನು ಸ್ವಲ್ಪ ಯೋಚಿಸಿನೋಡಿದರೆ ಮೇಲಿಂದ ಮೇಲೆ ಒದಗಿದ ಸನ್ನಿವೇಶ ಗಳ ಅನುಕೂಲತೆ, ಮತ್ತು ಅದೃಷ್ಟವಶದಿಂದ ಬ್ರಿಟಿಷರು ಭಾರತದಲ್ಲಿ ಪರಮಾಧಿಕಾರವನ್ನು ಪಡೆದಂತ ಕಾಣುತ್ತದೆ. ದೊರೆತ ಪ್ರತಿಫಲವನ್ನು ನೋಡಿದರೆ ಅತ್ಯಲ್ಪ ಪ್ರಯತ್ನದಿಂದ ಒಂದು ದೊಡ್ಡ ಸಾಮ್ರಾಜ್ಯ ವನ್ನು ಗೆದ್ದರು. ಪ್ರಪಂಚದಲ್ಲಿ ಮುಖ್ಯ ರಾಷ್ಟ್ರವಾಗುವಷ್ಟು ಸಹಾಯಮಾಡಿದ ಅತುಲೈಶ್ವರ್ಯವು ಸಿಕ್ಕಿತು. ಒಂದು ಸಣ್ಣ ಘಟನೆಯಲ್ಲಿ ವ್ಯತ್ಯಾಸವಾಗಿದ್ದರೆ ಅವರ ಆಶೆಗಳೆಲ್ಲ ಪುಡಿಪುಡಿಯಾಗುತ್ತಿದ್ದವು; ಅವರ ಬಯಕೆಗಳೆಲ್ಲ ಮಣ್ಣು ಗೂಡುತ್ತಿದ್ದವು. ಹೈದರ್, ಟೀಪು, ಮರಾಠರು, ಸಿಕ್ಕರು, ಗೂರ್ಖಾಗಳು ಎಲ್ಲರೂ ಅವರನ್ನು ಸೋಲಿಸಿದ್ದರು. ಅದೃಷ್ಟ ಸ್ವಲ್ಪ ಕಡಿಮೆಯಾಗಿದ್ದರೆ ಭಾರತದಲ್ಲಿ ಅವರಿಗೆ ಒಂದು ಗೇಣು ಭೂಮಿಯೂ ದೊರೆಯುತ್ತಿರಲಿಲ್ಲ: ದೊರೆತರೂ ತೀರ ಪ್ರದೇಶಗಳಲ್ಲಿ ಎಲ್ಲೋ ಇರುತ್ತಿದ್ದರು. ಆದರೂ ಒಳಹೊಕ್ಕು ನೋಡಿದರೆ ಆಗಿನ ಪರಿಸ್ಥಿತಿಯಲ್ಲಿ ಆ ರೀತಿ ಆಗಬೇಕಾಗಿದ್ದುದು ಅನಿ ವಾಕ್ಯವೆಂದು ತೋರುತ್ತದೆ, ಅದೃಷ್ಟವೇನೋ ಇತ್ತು. ಆದರೆ ಆ ಅದೃಷ್ಟವನ್ನು ಸದುಪಯೋಗ ಮಾಡಿಕೊಳ್ಳಲು ಶಕ್ತಿಯೂ ಬೇಕು. ಮೊಗಲ್ ಸಾಮ್ರಾಜ್ಯವು ಒಡೆದು ಹೋದಮೇಲೆ ಭಾರತದಲ್ಲಿ ಕ್ರಿಮಿತ ಪರಿಸ್ಥಿತಿ ಇರಲಿಲ್ಲ. ಅನೇಕ ಶತಮಾನಗಳಿಂದ ದೇಶವು ಯಾವಾಗಲೂ ಅಷ್ಟು ದುರ್ಬಲವೂ ನಿಸ್ಸಹಾಯಕವೂ ಇರಲಿಲ್ಲ. ವ್ಯವಸ್ಥಿತ ಅಧಿಕಾರವು ನಾಶವಾದಮೇಲೆ ಸಾಹಸಿಗಳಿಗೆ, ಹೊಸ ಅಧಿ ಕಾರ ಶಕ್ತಿಗಳಿಗೆ ಭಾರತವು ಬೇಟೆಯ ಬೀಡಾಯಿತು. ಅವರಲ್ಲಿ ಯಶಸ್ವಿಗಳಾಗಲು ಬೇಕಾದ ಅನೇಕ ಅವಶ್ಯ ಗುಣಗಳು ಬ್ರಿಟಿಷರಲ್ಲಿ ಮಾತ್ರ ಇದ್ದವು ಅವರಿಗಿದ್ದ ಒಂದೇ ಒಂದು ಅನಾನುಕೂಲವೆಂದರೆ ಬಹುದೂರದಿಂದ ಬಂದ ಪರದೇಶದವರೆಂಬುದು ಮಾತ್ರ. ಆದರೆ ಈ ಅನಾನುಕೂಲವೇ ಅವರಿಗೆ ಒಂದು ಅನುಕೂಲವೂ ಆಯಿತು. ಏಕೆಂದರೆ ಮೊದಲು ಯಾರೂ ಅವರನ್ನು ಗಮನಿಸಲೂ ಇಲ್ಲ ಮತ್ತು ಭಾರತದಲ್ಲಿ ಪರಮಾಧಿಕಾರ ಸ್ಥಾಪಿಸಲು ಪೈಪೋಟಿ ನಡೆಸುವವರಲ್ಲಿ ಇವರೂ ಒಬ್ಬರು ಎಂದು ಭಾವಿಸಲೂ ಇಲ್ಲ. ಪ್ಲಾಸಿ ಕದನವಾದ ಅನೇಕದಿನಗಳ ಮೇಲೂ ಈ ಭ್ರಮೆ ಹೇಗೆ ಇತ್ತೆಂಬುದೇ ಒಂದು ಆಶ್ಚರ್ಯ, ಪ್ರಾಯಶಃ ಮೇಲೆ ತೋರುಗಾಣಿಕೆಗೆ ದೆಹಲಿ ಸುಲ್ತಾನನ ಪ್ರತಿನಿಧಿಗಳೆಂದು ಹೇಳುತ್ತಿದ್ದುದು ಈ ತಪ್ಪು ಭಾವನೆಗೆ ಅವಕಾಶ ಕೊಟ್ಟಿರಬಹುದು. ಬಂಗಾಳದಿಂದ ಅವರು ದೋಚಿ ಕೊಂಡು ಹೋದ ಐಶ್ವರ್ಯ, ಅವರ ವಿಚಿತ್ರ ವ್ಯಾಪಾರ ಪದ್ಧತಿಗಳನ್ನು ನೋಡಿ ಇವರು ಕೇವಲ ಹಣ ಮತ್ತು ಐಶ್ವರಕ್ಕಾಗಿ ಬಂದಿರಬೇಕು, ರಾಜ್ಯ ಸ್ಥಾಪನೆಗಲ್ಲ ಎಂಬ ಭಾವನೆ ಹುಟ್ಟಿರಬೇಕು. ತೈಮೂರ್, ನಾದಿರ್ ಷಾ ಬಂದು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ಹೋದಂತೆ ಇವರನ್ನೂ ಕೆಲವು ಕಾಲ ಅನುಭವಿಸಬೇಕಾದ ಪೀಡೆ ಎಂದು ಭಾವಿಸಿರಬಹುದು. - ಈಸ್ಟ್ ಇಂಡಿಯಾ ಕಂಪೆನಿಯು ಬಂದು ನೆಲೆಸಿದುದು ವ್ಯಾಪಾರಕ್ಕಾಗಿ; ಅವರ ಸೈನ್ಯ ಬಲವು ಅದರ ವ್ಯಾಪಾರರಕ್ಷಣೆಗಾಗಿ, ಕ್ರಮೇಣ, ಯಾರ ಕಣ್ಣಿಗೂ ಬೀಳದಂತೆ ಸ್ಥಳೀಯ ವ್ಯಾಜ್ಯಗಳಲ್ಲಿ ಪಕ್ಷ ವಹಿಸುತ್ತ, ಒಬ್ಬರಮೇಲೊಬ್ಬರನ್ನು ಎತ್ತಿಕಟ್ಟಿ, ತಮ್ಮ ರಾಜ್ಯವನ್ನು ವಿಸ್ತರಿಸಿತು. ಕಂಪೆನಿಯ ಸೈನಿಕರಿಗೆ ಉತ್ತಮ ಸೈನ್ಯ ಶಿಕ್ಷಣವಿತ್ತು, ಯಾರಿಗೇ ಆಗಲಿ ಒಳ್ಳೆಯ ಸಹಾಯವಾಗುತ್ತಿತ್ತು; ಈ ಸಹಾಯಕ್ಕಾಗಿ ಕಂಪೆನಿಗೆ ಅಪಾರ ಹಣವನ್ನು ಕೊಡಬೇಕಾಗಿತ್ತು. ಈ ರೀತಿ ಕಂಪನಿಯ ಐಶ್ವ ರ್ಯವೂ ಶಕ್ತಿಯೂ, ಸೈನ್ಯವೂ ಅಭಿವೃದ್ಧಿಗೊಂಡಿತು. ದುಡ್ಡು ಕೊಟ್ಟು ಸೈನ್ಯಸಹಾಯವನ್ನು ಕೊಂಡು ಕೊಳ್ಳಬಹುದೆಂಬ ಅಭಿಪ್ರಾಯವು ಜನರಲ್ಲಿ ಬಂದಿತು. ಆದರೆ ಬ್ರಿಟಿಷರು ಯಾರ ಹಿತಕ್ಕೂ ಕೆಲಸ ಮಾಡುತ್ತಿಲ್ಲ, ತಮ್ಮ ಸ್ವಾರ್ಥಕ್ಕಾಗಿ, ಭಾರತದಲ್ಲಿ ಪರಮಾಧಿಕಾರ ಪಡೆದು ರಾಜ್ಯ ಸ್ಥಾಪನೆಗಾಗಿ ಎಂಬ ಅರಿವು ಉಂಟಾಗುವ ಹೊತ್ತಿಗೆ ಬ್ರಿಟಿಷರು ಭಾರತದಲ್ಲಿ ಆಳವಾಗಿ ಬೇರೂರಿದ್ದರು. ವಿದೇಶೀಯರ ವಿರುದ್ದ ಭಾವನೆಯು ಖಂಡಿತ ಇತ್ತು, ಆದರೂ ಬೆಳೆಯಲು ಇನ್ನೂ ಕೆಲವು ಕಾಲ