ಪುಟ:ಭಾರತ ದರ್ಶನ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ೨೪ ಸ್ವಲ್ಪಕಾಲ ಮಾರಿ ಪ್ರಯತ್ನ ಪಟ್ಟು ವಿಫಲರಾದರು. ಭಾರತದಲ್ಲಿ ಆಗ ಹಡಗು ಕಟ್ಟುವ ಕೈಗಾರಿಕೆ ಇನ್ನೂ ಅಭಿವೃದ್ಧಿಯಲ್ಲಿತ್ತು. ಆದರೆ ಸದಾ ಯುದ್ಧ ಮಾಡುತ್ತಾ, ಅಲ್ಪ ಕಾಲದಲ್ಲಿ ನಾವೆಯನ್ನು ಕಟ್ಟು ವುದು ಸುಲಭಸಾಧ್ಯವಿರಲಿಲ್ಲ. ಫ್ರೆಂಚರು ಸೋತುಹೋದಮೇಲೆ ಭಾರತ ಸೈನ್ಯದಲ್ಲಿದ್ದ ಫ್ರೆಂಚ್ ಅಧಿ ಕಾರಿಗಳು ಅನೇಕರು ಹೊರಟುಹೋಗಬೇಕಾಯಿತು. ಇನ್ನುಳಿದ ವಿದೇಶೀ ಅಧಿಕಾರಿಗಳು ಮುಖ್ಯ ವಾಗಿ ಬ್ರಿಟಿಷರು-ಒಳ್ಳೆಯ ಸಂಕಟ ಸಮಯದಲ್ಲಿ ತಮ್ಮನ್ನು ನೇಮಿಸಿದ್ದ ರಾಜರುಗಳ ಸೈನ್ಯದಿಂದ ಕೆಲಸಬಿಟ್ಟು ಹೋಗುತ್ತಿದ್ದರು. ಕೆಲವು ಬಾರಿ ದ್ರೋಹಮಾಡಿ, ಸೈನ್ಯವನ್ನೂ ಅಪಾರ ಐಶ್ವರ್ಯವನ್ನೂ ಶತ್ರುಗಳಾದ ಬ್ರಿಟಿಷರಿಗೆ ಒಪ್ಪಿಸಿ ಶರಣಾಗತರಾಗುತ್ತಿದ್ದರು. ಭಾರತದ ರಾಜ್ಯಗಳು ತನ್ನ ಸೈನ್ಯವನ್ನು ರಚಿಸಿ ಅಣಿಗೊಳಿಸಲು ವಿದೇಶೀಯರನ್ನು ಅವಲಂಬಿಸಿರಬೇಕಾಗಿದ್ದುದು ಭಾರತೀಯ ಸೈನ್ಯದ ದುಃಸ್ಥಿತಿ ಯನ್ನು ತೋರಿಸುತ್ತದೆ, ಅಲ್ಲದೆ ವಿದೇಶೀಯರ ಪ್ರಾಮಾಣಿಕತೆಯನ್ನು ನಂಬುವುದು ಕಷ್ಟವಾಗಿದ್ದು ದರಿಂದ ಸದಾ ಅವರಲ್ಲಿ ಅಪಾಯವಿತ್ತು. ಭಾರತೀಯ ರಾಜರ ಆಡಳಿತವರ್ಗದಲ್ಲಿ ಮತ್ತು ಸೈನ್ಯದಲ್ಲಿ ಬ್ರಿಟಿಷರ ಶಕ್ತರಾದ ಪಂಚಮ ದಳದವರಿರುತ್ತಿದ್ದ ರು. ಒಗ್ಗಟ್ಟು ಮತ್ತು ದೇಶಾಭಿಮಾನದಿಂದ ತುಂಬಿದ ಮರಾಠರ ಆಡಳಿತ ಮತ್ತು ಸೈನ್ಯ ಶಕ್ತಿಯ ದುರ್ಬಲವಿದ್ದಾಗ ಇತರ ರಾಜರ ಶಕ್ತಿಯು ಇನ್ನೂ ದುರ್ಬಲವಿತ್ತು. ರಾಜಪುತ್ರರಲ್ಲಿ ಧೈರ್ಯ ಸಾಹಸ ವಿದ್ದರೂ ಪಾಳೆಯಗಾರಿಕೆಯ ಮನೋಭಾವವೇ ಇತ್ತು, ಸಾಹಸ ಪುರುಷರಾದರೂ ಕಾರ್ಯದಕ್ಷತೆ ಸ್ವಲ್ಪವೂ ಇರಲಿಲ್ಲ ಮತ್ತು ರಾಜಮನೆತನಗಳ ವಂಶಪಾರಂಪಯ್ಯ ವಾದ ಪರಸ್ಪರ ವೈಷಮ್ಯವಿತ್ತು. ಅನ ರಲ್ಲಿ ಅನೇಕರು ತಮ್ಮ ಚಕ್ರವರ್ತಿ ಎಂಬ ಸ್ವಾಮಿನಿಷ್ಠ ಯಿಂದ ಮತ್ತು ಅಕ್ಷರನ ನೀತಿಯ ಪ್ರಭಾವದಿಂದ ಬಲಹೀನವಾದ ದೆಹಲಿಯ ಸಿಂಹಾಸನದ ಪಕ್ಷವನ್ನೇ ಇನ್ನೂ ವಹಿಸಿದರು. ಆದರೆ ಅದರ ಪ್ರಯೋಜನ ಪಡೆಯಲು ಸಹ ದೆಹಲಿಯ ಅರಸರಿಗೆ ಶಕ್ತಿ ಇರಲಿಲ್ಲ. ಕೊನೆಗೆ ರಾಜಪುತ್ರರು ನಿಸ್ಸತ್ವರಾಗಿ, ಇತರರ ಕೈಗೊಂಬೆಗಳಾಗಿ ಮರಾಠ ಸಿಂಧ್ಯನ ಅಧೀನರಾದರು. ಅವರಲ್ಲಿ ಕೆಲವರು ತಮ್ಮ ಸ್ವರಕ್ಷಣೆಗೆಂದು ಎರಡು ಕಡೆಯೂ ಬೇಕಾದವರಂತೆ ನಟನೆಮಾಡಿ ಲಾಭ ಪಡೆಯುತ್ತಿದ್ದರು. ಉತ್ತರ ಮಧ್ಯಭಾರತದ ಅನೇಕ ಮುಸ್ಲಿಂ ರಾಜರುಗಳು, ನವಾಬರುಗಳು ಸಹ ರಾಜಪುತ್ರರಂತೆಯೇ ಪ್ರಗತಿ ವಿರುದ್ದ ಪಾಳಯಗಾರರಾಗಿದ್ದರು. ಜನಸಾಮಾನ್ಯರ ಕಳವಳ ಮತ್ತು ಸಂಕಟವನ್ನು ಹೆಚ್ಚಿಸುವುದಲ್ಲದೆ ಬೇರೆ ಯಾದ ಉಪಯೋಗವೂ ಅವರಿಂದ ಆಗಲಿಲ್ಲ. ಕೆಲವರು ಮರಾಠರ ಪರಮಾಧಿಕಾರವನ್ನು ಒಪ್ಪಿದರು. ನೇಪಾಳದ ಗೂರ್ಖರು ಅತ್ಯುತ್ತಮ ಯೋಧರಾಗಿದ್ದರು, ಅದ್ಭುತಶಿಸ್ತು ಅವರಲ್ಲಿತ್ತು. ಈಸ್ಟ್ ಇ೦ಡಿಯ ಕಂಪನಿಯ ಯಾವ ಸೈನ್ಯಕ್ಕೂ ಕಡಮೆ ಇಲ್ಲದವರೂ ಆಗಿದ್ದರು. ಅವರ ರಾಜ್ಯ ಪದ್ದತಿ ಎಲ್ಲವೂ ಪಾಳೆಯಗಾರಿಕೆಯದಾದರೂ ಅವರ ಸ್ವದೇಶಪ್ರೇಮ ಅಪ್ರತಿಮವಾಗಿತ್ತು. ತಮ್ಮ ದೇಶರಕ್ಷಣೆ ಗಾಗಿ ವೀರಾವೇಶದಿಂದ ಕಾದಾಡುವ ಅಜೇಯ ಸೈನಿಕರಾದರು. ಇಂಗ್ಲಿಷರನ್ನು ಅವರು ಹೆದರಿಸಿ ಕೊಂಡಿದ್ದರೂ ಭಾರತದ ಮುಖ್ಯ ಹೋರಾಟದಲ್ಲಿ ಅವರು ಯಾವ ಪರಿಣಾಮವನ್ನೂ ಮಾಡಲಿಲ್ಲ. ಮರಾಠರು ಹಬ್ಬಿ ಹರಡಿದ ವಿಸ್ತಾರವಾದ ಉತ್ತರ ಮತ್ತು ಮಧ್ಯಭಾರತಗಳಲ್ಲಿ ತಮ್ಮ ಶಕ್ತಿ ಯನ್ನು ಭದ್ರಪಡಿಸಿಕೊಳ್ಳಲಿಲ್ಲ. ಎಲ್ಲಿಯೂ ಕಾಲೂರಿ ನಿಲ್ಲದೆ ಹೊರಟು ಹೋಗುತ್ತಿದ್ದರು. ಪ್ರಾಯಶಃ ಯುದ್ಧರಂಗದ ಅದೃಷ್ಟ ಪರೀಕ್ಷೆಯಲ್ಲಿ ಜಯಶ್ರೀ ತೊನೆದಾಡುತ್ತಿದ್ದುದರಿಂದ ಯಾರಿಗೂ ಬೇರೂರಲು ಸಾಧ್ಯವಿರಲಿಲ್ಲ ; ಬ್ರಿಟಿಷರ ಆಡಳಿತದಲ್ಲಿ ಅಥವ ರಾಜರ ಆಡಳಿತದಲ್ಲಿ ಅನೇಕ ಕಡೆಗಳಲ್ಲಿ ಪರಿಸ್ಥಿತಿಯು ಇನ್ನೂ ಹದಗೆಟ್ಟಿತ್ತು. ಬ್ರಿಟಿಷರಾಗಲಿ, ಅವರ ರಾಜ್ಯಭಾರವಾಗಲಿ ನೆಲೆ ನಿಂತಿರಲಿಲ್ಲ, ಮರಾಠರು-ಇನ್ನೂ ಅನೇಕ ಕಡೆಗಳಲ್ಲಿ ಇತರರಂತ-ತಮ್ಮ ಕಾರ್ಯನೀತಿಯಲ್ಲಿ ಅಪಕ್ವರೂ, ಅಲಕ್ಷ, ಸ್ವಭಾವದವರಾದರೆ ಭಾರತದಲ್ಲಿ ಬ್ರಿಟಿಷರು ನಿರ್ದಾಕ್ಷಿಣ್ಯ ಸ್ವಭಾವದವರಾಗಿದ್ದರು. ಬ್ರಿಟಿಷ್ ಮುಖಂಡರು ಅನೇಕರು ಸಾಹಸಿಗರಿದ್ದರು. ಆದರೆ ತಾನು ಯಾವುದೇ ಕೆಲಸದಲ್ಲೇ ಇರಲಿ ಕಂಪ ನಿಯ ವಿಷಯದಲ್ಲಿ ಎಲ್ಲರ ನೀತಿಯೂ ಒಂದೇ ಇತ್ತು. “ ಈಸ್ಟ್ ಇಂಡಿಯ ಕಂಪನಿಯ ಅಧಿಕಾರ ವರ್ಗದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ಸಹ ಒಟ್ಟಿಗೆ ಒಂದೇ ಕಾಲದಲ್ಲಿ ಯಾವಾಗಲೂ ಇರದ ಆ4 .