ಪುಟ:ಭಾರತ ದರ್ಶನ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಜಯಪುರವನ್ನು ಆತನೇ ಕಟ್ಟಿದನು. ನಗರ ನಿರ್ಮಾಣದಲ್ಲಿ ಆಸಕ್ತಿ ವಹಿಸಿ ಆಗಿನ ಯುರೋ ಪಿನ ಅನೇಕನಗರಗಳ ನಕ್ಷೆಗಳನ್ನು ತರಿಸಿ ಜಯಪುರ ನಗರ ನಿರ್ಮಾಣಕ್ಕೆ ತನ್ನದೇ ಒಂದು ನಕ್ಷೆ ಯನ್ನು ಸಿದ್ಧಗೊಳಿಸಿದನು. ಹಳೆಯ ಯುರೋಪಿಯನ್ ನಗರಗಳ ಆ ನಕ್ಷೆಗಳು ಈಗಲೂ ಜಯ ಪುರದ ಪ್ರದರ್ಶನಾಲಯದಲ್ಲಿ ಇವೆ. ಜಯಪುರದ ನಗರ ನಿರ್ಮಾಣವು ಈಗಲೂ ಒಂದು ಮಾದರಿ ಎಂದು ಪ್ರಸಿದ್ಧ ವಿದೆ. ಆ ನಗರವನ್ನು ಅಷ್ಟು ಚೆನ್ನಾಗಿಯೂ ಕೌಶಲ್ಯದಿಂದಲೂ ಕಟ್ಟಲಾಗಿದೆ. ತನ್ನ ಅಲ್ಪ ಆಯುಸ್ಸಿನಲ್ಲಿ ಸದಾ ನಡೆಯುತ್ತಿದ್ದ ಯುದ್ದಗಳ ಮಧ್ಯೆ ತನ್ನ ಸ್ನೇ ಆವರಿಸಿದ್ದ ರಾಜಾಸ್ಥಾನದ ಪಿತೂರಿಗಳ ಮಧ್ಯೆ ಜಯಸಿಂಗನು ಇದೆಲ್ಲವನ್ನೂ, ಇನ್ನೂ ಅನೇಕ ವಿಷಯಗಳನ್ನು ಸಾಧಿಸಿದನು. ಜಯಸಿಂಗನ ಮರಣಕ್ಕೆ ನಾಲ್ಕು ವರ್ಷಗಳ ಮುಂಚೆ ನಾದಿರ್ ಷಾನ ದಂಡಯಾತ್ರ ಯಾಗಿತ್ತು. ಯಾವ ದೇಶದಲ್ಲಾಗಲಿ ಕಾಲದಲ್ಲಾಗಲಿ ಜಯಸಿಂಗ್ ಪ್ರಸಿದ್ಧ ಪುರುಷನೇ ಆಗುತ್ತಿದ್ದನು. ಭಾರತದ ಕಗ್ಗತ್ತಲಿನ ಇತಿಹಾಸದ ದಿನಗಳಲ್ಲಿ, ಪಾಳೆಯಗಾರಿಕೆಯ ರಾಜಪುತಾನದಲ್ಲಿ, ಅನೈಕ್ಯತೆ ಯುದ್ಧಗಳು, ದಂಗೆಗಳು, ನಿತ್ಯ ಸಮಸ್ಯೆಯಾಗಿದ್ದ ಕಾಲದಲ್ಲಿ, ಒಬ್ಬ ದೊಡ್ಡ ವಿಜ್ಞಾನಿಯಾಗಿ ಕಾರ್ಯಸಾ ಧನೆಮಾಡಿದ್ದು ಬಹಳ ಮಹತ್ವದ ವಿಷಯ. ಭಾರತದಲ್ಲಿ ವಿಜ್ಞಾನ ಸಂಶೋಧನೆಯ ದೃಷ್ಟಿಯು ಇನ್ನೂ ನಾಶ ವಾಗಿ ಇರಲಿಲ್ಲವೆಂದುದಕ್ಕೆ ಇದೇ ಸಾಕ್ಷಿ. ಪೂರ್ಣ ವಿಕಾಸಕ್ಕೆ ಅವಕಾಶ ಕೊಟ್ಟಿದ್ದರೆ ಉತ್ತಮ ಫಲಕ ಡುವ ಮಾನಸಿಕ ಉದ್ವೇಗವು ಇತ್ತೆಂದು ವ್ಯಕ್ತವಾಗುತ್ತದೆ. ಜಯಸಿಂಗ್ ಒಬ್ಬ ಅಸಂಗತ ವ್ಯಕ್ತಿಯಲ್ಲ. ಅಜ್ಞಾನದ ವಿರೋಧ ಸನ್ನಿವೇಶದ ಏಕಮಾತ್ರ ತತ್ವಜ್ಞಾನಿಯೂ ಅಲ್ಲ, ತನ್ನ ಯುಗದ ಫಲ. ಅವನು ತನ್ನ ಸುತ್ತಲೂ ಅನೇಕ ವಿಜ್ಞಾನಿಗಳನ್ನು ತನ್ನ ಸಹಾಯಕ್ಕೆ ಸೇರಿಸಿಕೊಂಡು ಕೆಲಸಮಾಡಿದವನು. ಅವರಲ್ಲಿ ಕೆಲವರನ್ನು ಪೊರ್ತುಗಲ್‌ಗೆ ರಾಯಭಾರಿಗಳ ಜೊತೆಗೆ ಕಳುಹಿಸಿದನು. ಸಮಾಜ ಪದ್ದತಿ ಯಾಗಲಿ, ಬಹಿಷ್ಕಾರವಾಗಲಿ ಅಡ್ಡ ಬರಲಿಲ್ಲ. ಒಳ್ಳೆಯ ಪ್ರೋತ್ಸಾಹವೂ ಅವಕಾಶವೂ ಸಿಕ್ಕಿದ್ದರೆ ಈ ದೇಶದಲ್ಲೇ ಇದ್ದ ಗ್ರಂಥಸ್ಥವೂ, ಪ್ರಾಯೋಗಿಕವೂ ಆದ ಅನೇಕ ಒಳ್ಳೆಯ ಜ್ಞಾನ ಸಾಮಗ್ರಿಯನ್ನು ಉಪಯೋಗಿಸಿ ವಿಜ್ಞಾನ ಸಂಶೋಧನೆಯನ್ನು ನಡೆಸಬಹುದಾಗಿತ್ತು. ಬಹುಕಾಲದವರೆಗೆ ಆ ಅವ ಕಾಶ ದೊರೆಯಲೇ ಇಲ್ಲ. ಅರಾಜಕತೆಯೂ, ಅಶಾಂತಿಯೂ ಮುಗಿದ ಮೇಲೆ ಸಹ ಅಧಿಕಾರದಲ್ಲಿ ಬ್ರಿಟಿಷರು ವಿಜ್ಞಾನ ಸಂಶೋಧನೆಗೆ ಯಾವ ಪ್ರೋತ್ಸಾಹವನ್ನೂ ಕೊಡಲಿಲ್ಲ. ೧೬, ಭಾರತದ ಆರ್ಥಿಕ ಹಿನ್ನೆಲೆ; ಎರಡು ಇಂಗ್ಲೆಂಡ್ ಗಳು. ಈ ಮಹಾ ಪರಿಣಾಮಕಾರಕ ರಾಜಕೀಯ ಮತ್ತು ಆರ್ಥಿಕ ಪರಿವರ್ತನೆಗಳಾಗುತ್ತಿರು ವಾಗ ಇಂಡಿಯದ ಆರ್ಥಿಕ ಹಿನ್ನೆಲೆಯು ಏನು ಇತ್ತು ? “ ಇಂಡಿಯದೇಶದ ವಸ್ತು ನಿರ್ಮಾಣ ಶಕ್ತಿ, ಔದ್ಯೋಗಿಕ ಮತ್ತು ವಾಣಿಜ್ಯ ಸಂಸ್ಥೆಗಳು ೧೮ನೆಯ ಶತಮಾನದ ವರೆಗೆ ಪ್ರಪಂಚದ ಇತರ ಯಾವದೇಶದ ಸಂಸ್ಥೆಗಳ ಜೊತೆಗಾದರೂ ಸರಿಸಮಾನತೆಯಿಂದ ನಿಲ್ಲಬಹುದು ” ಎಂದು ವಿ. ಆನ್‌ಸ್ಟೇ ಹೇಳಿದ್ದಾನೆ. ಭಾರತದಲ್ಲಿ ನಯಮಾಲುಗಳ ಉತ್ಪತ್ತಿಯು ಬಹು ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು, ಅವುಗಳನ್ನು ಯೂರೋಪ್ ಮತ್ತು ಇತರ ದೇಶಗಳಿಗೆ ರಫ್ತು ಮಾಡುತ್ತಿ ದ್ದರು. ಅದರ ಧನಕೋಠಿ (Bank)ಗಳ ವ್ಯವಸ್ಥೆಯು ದೇಶಾದ್ಯಂತವೂ ಹರಡಿ ಬಹಳ ದಕ್ಷತ ಯಿಂದ ಕೆಲಸಮಾಡುತ್ತ ಇತ್ತು. ದೊಡ್ಡ ದೊಡ್ಡ ವರ್ತಕರು ಮತ್ತು ಧನಕೋಠಿಗಳು ಕೊಡುತ್ತಿದ್ದ ಹುಂಡಿಗಳನ್ನು (Bills of Exchange) ಭಾರತದ ದೇಶಾದ್ಯಂತ ಮಾತ್ರವಲ್ಲದೆ ಇರಾಣ, ಕಾಬೂಲ್, ಹೀರತ್, ಟಾಷ್ಟ್ರಂಡ್ ಮುಂತಾದ ಮಧ್ಯ ಏಷ್ಯದ ನಗರಗಳಲ್ಲೂ ಮಾನ್ಯ ಮಾಡುತ್ತಿದ್ದರು. ವರ್ತಕಸಲುವಳಿಯು ತುಂಬ ಮುಂದುವರಿದು ಬೆಳೆದಿತ್ತು. ಪ್ರತಿನಿಧಿಗಳ, ದಲ್ಲಾಳಿಗಳ, ಹುಂಡೇ ಕಾರಿಗಳ, ಗುಮಾಸ್ತರುಗಳ ಒಂದು ದೊಡ್ಡ ತಂಡವೇ ಇತ್ತು. ಹಡಗುಗಳ ನಿರ್ಮಾಣ ಕಲೆಯು ಬಹಳ ಮುಂದುವರಿದಿತ್ತು. ನೆಪೋಲಿಯನ್‌ನೊಡನೆ ನಡೆದ ಯುದ್ಧಗಳಲ್ಲಿ ಇಂಗ್ಲಿಷ್ ನಾವಿಕ ಪಡೆಯ ನಾಯಕನೊಬ್ಬನ ಧ್ವಜನಾವೆಯನ್ನು ಭಾರತೀಯ ವ್ಯಾಪಾರಿಯೊಬ್ಬನು ಕಟ್ಟಿ ಕೊಟ್ಟಿದ್ದನು.