ಪುಟ:ಭಾರತ ದರ್ಶನ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನಯ ಅಂಕ ಪ್ರದೇಶಗಳು ಬ್ರಿಟಿಷರ ಅಧೀನವಾಗುವ ಮುಂಚೆಯೇ ಅವರ ಅಧಿಕಾರವನ್ನು ಒಪ್ಪಿ ಅದಕ್ಕೆ ಶರಣು ಹೋಗಿತ್ತು. ೧೮೫೭ರ ದಂಗೆಯ ಮೊದಲ ಕಿಡಿಯು ಕಲ್ಕತ್ತೆಯ ಬಳಿ ಡಮ್ ಡಮ್ನಲ್ಲಿ ಆಕಸ್ಮಿಕವಾಗಿ ಹಾರಿದರೂ ಆ ಮಹಾಕ್ರಾಂತಿಯಿಂದ ಬಂಗಾಲದ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಬ್ರಿಟಿಷರ ಆಳ್ವಿಕೆಗೆ ಮೊದಲು ಬಂಗಾಲ ಮೊಗಲ್ ಚಕ್ರಾಧಿಪತ್ಯದ ಒಂದು ಮುಖ್ಯ ಪ್ರಾಂತ್ಯ ವಾಗಿದ್ದರೂ ಕೇಂದ್ರದಿಂದ ದೂರದ ಒಂದು ಗಡಿ ಪ್ರಾಂತ್ಯವಾಗಿತ್ತು. ಮಧ್ಯಯುಗದ ಆರಂಭದಲ್ಲಿ ಅನೇಕ ಅನಾಗರಿಕ ಪೂಜಾಪದ್ಧತಿಗಳೂ, ತಾಂತ್ರಿಕ ದರ್ಶನ ಮತ್ತು ಆಚರಣೆಗಳೂ ಹಿಂದೂಗಳಲ್ಲಿ ಬೇರೂರಿದ್ದವು. ಕ್ರಮೇಣ ಅನೇಕ ಹಿಂದೂ ಸಮಾಜ ಸುಧಾರಣಾ ಚಳವಳಿಗಳು ಹುಟ್ಟಿ ಸಮಾಜ ಪದ್ದತಿ, ಧರ್ಮಶಾಸ್ತ್ರ ಮತ್ತು ಉತ್ತರಾಧಿಕಾರದ ಹಕ್ಕು ಇವುಗಳ ಮೇಲೆ ವಿಶೇಷ ಪರಿಣಾಮಮಾಡಿ ವ್ಯತ್ಯಾಸಗೊಳಿಸಿದವು. ಮಹಾಜ್ಞಾನಿಯೂ, ಭಕ್ತನೂ, ಭಾವನಾಜೀವಿಯ ಆದ ಚೈತನ್ಯನು ಭಕ್ತಿ ಪಂಥದ ವೈಷ್ಣವ ಮತವನ್ನು ಸ್ಥಾಪಿಸಿ ಬಂಗಾಳದ ಜನತೆಯ ಮೇಲೆ ವಿಶೇಷ ಪರಿಣಾಮ ಮಾಡಿ ದನು. ಬಂಗಾಳಿಗಳು ಉನ್ನತ ಬೌದ್ದಿಕ ಪ್ರಗತಿಯನ್ನು ಪಡೆದುದಲ್ಲದೆ ಅತ್ಯಂತ ಭಾವನಾಜೀವಿ ಗಳೂ ಆದರು. ಈ ಶ್ರದ್ಧಾ ಭಕ್ತಿ ಮತ್ತು ಮಾನವಸೇವಾಸಂಪ್ರದಾಯದ ಪ್ರತಿನಿಧಿಯಾಗಿ ಹತ್ತೊಂಭತ್ತನೆಯ ಶತಮಾನದ ಅಂತ್ಯಭಾಗದಲ್ಲಿ ಇನ್ನೊಬ್ಬ ಮಹಾವ್ಯಕ್ತಿಯ-ರಾಮಕೃಷ್ಣ ಪರಮ ಹಂಸರ-ಅವತಾರವಾಯಿತು. ಸಮಾಜಸೇವೆ ಮತ್ತು ಮಾನವ ಸೇವೆಯಲ್ಲಿ ಹಿಂದೆ ಯಾರಿಂದಲೂ ಸಾಧ್ಯವಾಗದ ಪ್ರಮಾಣದಲ್ಲಿ ಕಾರ್ಯ ಸಾಧಿಸಿರುವ ಸೇವಾ ಪಂಥವೊಂದು ಆತನ ಹೆಸರಿನಲ್ಲಿ ಸ್ಥಾಪನೆಯಾಗಿ ಕೆಲಸಮಾಡುತ್ತಿದೆ ಪುರಾತನ ಫ್ರಾನ್ಸಿಸ್ಕನರಂತೆ ತಾಳ್ಮೆ ಮತ್ತು ಪ್ರೇಮದಿಂದ ಉನ್ನತ ಸೇವಾಧೇಯದಿಂದ ಮತ್ತು ಕೈಕರ್‌ಗಳಂತೆ ಸದ್ದಿಲ್ಲದ, ನಿರಾಡಂಬರದ ಕಾರ್ಯದಕ್ಷತೆ ಳಿಂದ ರಾಮಕೃಷ್ಣ ಮಠದ ಸಂನ್ಯಾಸಿಗಳು ಭಾರತ ಅಥವ ಹೊರಗಡೆ ಎಲ್ಲಿ ಆಪತ್ತು ಒದಗಿದರೂ ಅಲ್ಲಿ ತಮ್ಮ ಆಸ್ಪತ್ರೆಗಳು, ಶಾಲೆಗಳು, ಮುಂತಾದ ಸೇವಾಕೇಂದ್ರಗಳನ್ನು ಸ್ಥಾಪಿಸಿ ಸಹಾಯ ನೀಡಿದ್ದಾರೆ. ರಾಮಕೃಷ್ಣನು ಸನಾತನ ಭಾರತೀಯ ಸೇವಾದೃಷ್ಟಿ ಯ ಪ್ರತಿನಿಧಿ, ಆತನಿಗೆ ಮೊದಲು ಹದಿ ನೆಂಟನೆಯ ಶತಮಾನದಲ್ಲಿ ಬಂಗಾಳದಲ್ಲಿ ಇನ್ನೊಬ್ಬ ಮಹಾವ್ಯಕ್ತಿಯು ಅವತಾರಮಾಡಿದ್ದನು. ಆತನೇ ಸನಾತನ ಮತ್ತು ನೂತನ ಪಾಂಡಿತ್ಯಗಳೆರಡರಲ್ಲೂ ನಿಷ್ಣಾತನಾದ ರಾಜಾರಾಮಮೋಹನ ರಾಯ್, ಭಾರತೀಯ ಭಾವನೆ ಮತ್ತು ದರ್ಶನಗಳಲ್ಲಿ ಆಳವಾದ ಪರಿಚಯ ಪಡೆದು ಸಂಸ್ಕೃತ ಪಾರಸಿ ಮತ್ತು ಅರಬ್ಬಿ ಭಾಷೆಗಳಲ್ಲಿ ಅಸಾಧಾರಣ ಪಂಡಿತನಾಗಿದ್ದನು. ಮತ್ತು ಭಾರತದ ಸುಸಂಸ್ಕೃತ ಜನರಲ್ಲಿ ಆಗ ಬಳಕೆಯಲ್ಲಿದ್ದ ಹಿಂದು ಮತ್ತು ಮುಸ್ಲಿಂ ಮಿಶ್ರ ಸಂಸ್ಕೃತಿಯ ಫಲವಾಗಿದ್ದನು. ಭಾರ ತಕ್ಕೆ ಬ್ರಿಟಿಷರ ಆಗಮನ ಮತ್ತು ಅವರ ಅನೇಕ ಉತ್ತಮ ಶಕ್ತಿ ಸಾಮರ್ಥ್ಯಗಳನ್ನು ಕಂಡು ಬೆರಗಾಗಿ ಅವರ ಸಂಸ್ಕೃತಿ ಮೂಲವನ್ನು ಹುಡುಕಬೇಕೆಂಬ ಕುತೂಹಲವು ಆತನ ಮನಸ್ಸಿನಲ್ಲಿ ಮೂಡಿತ್ತು. ಇಂಗ್ಲಿಷ್ ಕಲಿತ ಮೇಲೆ ಅಷ್ಟೇ ಸಾಲದೆಂದು ಅರಿತನು. ಪಾಶ್ಚಾತ್ಯರ ಧರ್ಮ, ಮತ್ತು ಸಂಸ್ಕೃತಿಯ ಮೂಲ ಕಂಡುಹಿಡಿಯಲು ಗ್ರೀಕ್, ಲ್ಯಾಟಿನ್ ಮತ್ತು ಹೀಬ್ರೂ ಭಾಷೆಗಳನ್ನು ಕಲಿತನು. ಆಗಿನ ಕಾಲದಲ್ಲಿ ಈಗಿನಷ್ಟು ಯಾಂತ್ರಿಕ ಪ್ರಗತಿ ಇಲ್ಲದಿದ್ದರೂ ಪಾಶ್ಚಾತ್ಯ ನಾಗರಿಕತೆಯ ವಿಜ್ಞಾನ ಮತ್ತು ಯಾಂತ್ರಿಕ ಪ್ರಗತಿಯನ್ನು ಕಂಡು ಮನಸೋತನು. ಮಹಾಜ್ಞಾನಿಯೂ ದಾರ್ಶನಿಕನೂ ಆದ್ದರಿಂದ ಆತನ ಒಲವು ಪ್ರಾಚೀನ ಸಾಹಿತ್ಯದ ಕಡೆ ಹೋಯಿತು. ಪೌರ್ವಾತ್ಯ ಪಂಡಿತನಾದ ಮೋನಿಯರ್ ವಿಲಿಯಮ್ಸ್ ಆತನನ್ನು ಕುರಿತು “ ಸರ್ವಧರ್ಮಗಳ ತುಲನಾತ್ಮಕ ವಿಜ್ಞಾನದಲ್ಲಿ ಇದುವರೆಗೆ ಪ್ರಪಂಚದ ಶ್ರದ್ಧಾತ್ಮಕ ಸಂಶೋಧಕರಲ್ಲಿ ಈತನೇ ಹಿರಿಯ ” ಎಂದಿದ್ದಾನೆ. ಆದರೂ ಆಧುನಿಕ ರೀತಿಯಲ್ಲಿ ವಿದ್ಯಾಭ್ಯಾಸಪದ್ದತಿಯನ್ನು ಮಾರ್ಪಾಟುಮಾಡಿ ಹಳೆಯ ಪಾಂಡಿತ್ಯ ಬಂಧನದಿಂದ ಬಿಡಿಸಬೇಕೆಂಬುದೇ ಆತನ ಆಶೆಯಾಗಿತ್ತು. ಆ ಕಾಲದಲ್ಲಿ ಸಹ ವಿಜ್ಞಾನರೀತಿಗೆ ಆತನು ಬೆಂಬಲ ಕೊಟ್ಟನು, ಗಣಿತಶಾಸ್ತ್ರ, ಪ್ರಕೃತಿವಿಜ್ಞಾನ, ರಸಾಯನಶಾಸ್ತ್ರ, ಶರೀರಶಾಸ್ತ್ರ ಮುಂತಾದ ಉಪ 19