ಪುಟ:ಭಾರತ ದರ್ಶನ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೬

ಭಾರತ ದರ್ಶನ

ರಾಷ್ಟ್ರೀಯ ಭಾವನೆಯ ದೃಷ್ಟಿಯಿಂದ ಇದೆಲ್ಲ ಅನಿಷ್ಟ ಕಾರಕಗಳಾದರೂ ವಿದೇಶೀ ಸಾಮ್ರಾಜ್ಯ ಶಕ್ತಿಯೊಂದು ತನ್ನ ಸ್ವರಕ್ಷಣೆಗೆ ಈ ನೀತಿ ಅನುಸರಿಸಿದ್ದು ಸಹಜವೂ ಇದೆ ಅರ್ಥವತ್ತಾಗಿಯೂ ಇದೆ; ಆಶ್ಚರ್ಯ ಏನೂ ಇಲ್ಲ. ಆದರೆ ಮುಂದೆ ಘಟನೆಗಳನ್ನು ಅರ್ಥಮಾಡಿಕೊಳ್ಳುವಾಗ ಈ ವಾಸ್ತುಚಿತ್ರ ವನ್ನು ನಾವು ಮರೆಯುವಂತಿಲ್ಲ. ಇಂದು ಪದೇ ಪದೇ ನಮ್ಮ ಸ್ಮೃತಿಪಥಕ್ಕೆ ಬರುತ್ತಿರುವ ಭಾರತದ ರಾಷ್ಟ್ರೀಯ ಜೀವನದ ಪ್ರಮುಖ ಶಕ್ತಿಗಳು ಜನ್ಮತಾಳಿದ್ದು ಈ ನೀತಿಯ ಫಲವಾಗಿ, ಅವುಗಳ ಹುಟ್ಟಿಗೆ, ಅವುಗಳ ಪರಸ್ಪರ ಭಿನ್ನ ಭಿಪ್ರಾಯ ಮತ್ತು ಒಡಕುಗಳ ಪ್ರೋತ್ಸಾಹಕ್ಕೆ, ಈಗ ಪುನಃ ಅವರೆಲ್ಲರಿಗೆ ಒಂದಾಗಿ ಬನ್ನಿ ಎಂದು ಹೇಳುವುದಕ್ಕೆ ಕಾರಣರೂ ಅವರೇ.

ಭಾರತದಲ್ಲಿ ಈ ರೀತಿ ಪ್ರಗತಿ ವಿರೋಧಿಗಳಿಗೂ ಬ್ರಿಟಿಷರಿಗೂ ಒಂದು ಸಹಜ ಸ್ನೇಹ ಬೆಳೆದು ಬಂದು ಇತರ ಸಂದರ್ಭಗಳಲ್ಲಿ ತಾವೇ ಖಂಡಿಸಿದ ಅನೇಕ ಕುಸಂಪ್ರದಾಯ ಮತ್ತು ಪದ್ಧತಿಗಳಿಗೆ ಬೆಂಗಾವಲಾಗಿ ಪ್ರೋತ್ಸಾಹಕರಾದರು. ಬ್ರಿಟಿಷರು ಭಾರತಕ್ಕೆ ಕಾಲಿಟ್ಟಾಗ ದೇಶವು ಅನೇಕ ದುಷ್ಟ ಸಂಪ್ರದಾಯಗಳ ದವಡೆಯಲ್ಲಿ ಸಿಕ್ಕು ನರಳುತ್ತಿತ್ತು, ಈ ಪುರಾತನ ಪದ್ದತಿಗಳ ಕೌಠ್ಯವು ಭಯಂಕರ ವಿದೆ. ಆದರೂ ಈ ಸಂಪ್ರದಾಯಗಳೂ ವ್ಯತ್ಯಾಸಗೊಳ್ಳುತ್ತಿವೆ; ಪರಿವರ್ತನೆಯಾಗುತ್ತಿರುವ ಸನ್ನಿವೇಶ ಗಳಿಗೆ ಸ್ವಲ್ಪ ಮಟ್ಟಿಗೆ ಹೊಂದಿಕೊಳ್ಳಬೇಕಾದ್ದು ಅನಿವಾರ್ಯವಾಗುತ್ತದೆ, ಹಿಂದೂಧರ್ಮಶಾಸ್ತ್ರದ ಬಹು ಭಾಗ ಈ ಸಂಪ್ರದಾಯವನ್ನು ಅನುಸರಿಸಿ ರೂಪುಗೊಂಡದ್ದು, ಸಂಪ್ರದಾಯಗಳು ಬೇರೆಯಾದಂತೆ ಧರ್ಮಶಾಸ್ತ್ರವೂ ಮಾರ್ಪಾಟಾಯಿತು, ನಿಜವಾಗಿ ನೋಡಿದರೆ ಸಂಪ್ರದಾಯಕ್ಕನುಸರಿಸಿ ವ್ಯತ್ಯಾಸ ವಾಗದ ವಿಧಿಯಾವುದೂ ಹಿಂದೂ ಧರ್ಮಶಾಸ್ತ್ರದಲ್ಲಿ ಇಲ್ಲ. ಈ ರೀತಿ ಸಂಪ್ರದಾಯ ವ್ಯತ್ಯಾಸವಾದಂತೆ ಹಿಗ್ಗಲು ಅವಕಾಶವಿದ್ದ ಸಾಂಪ್ರದಾಯಕ ಹಿಂದೂ ಧರ್ಮವನ್ನು ಬ್ರಿಟಿಷರು ಪ್ರಾಚೀನ ಗ್ರಂಥಗಳ ಆಧಾರದಮೇಲೆ ಕೊಟ್ಟ ನ್ಯಾಯ ತೀರ್ಮಾನಗಳಿಂದ ಇನ್ನೂ ಕಠಿನಮಾಡಿದರು. ಈ ತೀರ್ಪುಗಳು ಗೆರೆಕೊರೆದಂತೆ ಅನುಸರಿಸಬೇಕಾದ ನಿಯಮಗಳಾದವು. ತಾತ್ವಿಕದೃಷ್ಟಿಯಿಂದ ಒಂದು ಬಗೆಯ ಸಮತೆ ಮತ್ತು ನಿರ್ದುಷ್ಟತೆ ಆದುದೇನೋ ಒಂದು ಅನುಕೂಲವಾದರೂ, ಇದನ್ನು ಸಾಧಿಸಿದ ರೀತಿ ಯಲ್ಲಿ ನೂತನ ಸಂಪ್ರದಾಯಗಳಿಂದ ಪರಿವರ್ತಿತವಾಗದ ಹಳೆಯ ಶಾಸನವು ಪಟ್ಟಕ್ಕೇರಿತು. ಅನೇಕ ಕಡೆಗಳಲ್ಲಿ ಅನೇಕ ರೀತಿ ಮಾರ್ಪಾಟಾಗಿದ್ದ ಮತ್ತು ಹೊಸಯುಗಕ್ಕೆ ಹೊಂದಿಕೊಳ್ಳಲು ಅಸಮರ್ಥ ವಾಗಿದ್ದ ಹಳೆಯ ಶಾಸನವು ಇನ್ನೂ ಕಠಿನವಾಯಿತು, ಸಾಂಪ್ರದಾಯಕ ರೀತಿ ಮಾರ್ಪಾಟು ಮಾಡಲು ನಡೆದ ಎಲ್ಲ ಪ್ರಯತ್ನಗಳನ್ನೂ ವಿರೋಧಿಸಿದರು. ಶಾಸನ ವಿರುದ್ದ ಸಂಪ್ರದಾಯವನ್ನು ದೃಷ್ಟಾಂತಮಾಡಿಕೊಡಲು ಆಯಾ ಪಂಗಡಗಳಿಗೆ ಅವಕಾಶವೇನೋ ಇತ್ತು. ಆದರೆ ನ್ಯಾಯಾಸ್ಥಾನ ಗಳಲ್ಲಿ ಆಧಾರಪೂರ್ವಕವಾಗಿ ಸಿದ್ಧಾಂತಮಾಡುವುದು ಬಹು ಕಷ್ಟವಾಯಿತು ಪರಿವರ್ತನೆಯು ಸ್ಪಷ್ಟಶಾಸನ ನಿರ್ಮಾಣದಿಂದ ಮಾತ್ರ ಸುಲಭ, ಆದರೆ ಶಾಸನಾಧಿಕಾರವನ್ನೆಲ್ಲ ತಮ್ಮ ಕೈಯಲ್ಲಿಟ್ಟು ಕೊಂಡಿದ್ದ ಬ್ರಿಟಿಷ್ ಸರಕಾರಕ್ಕೆ ತಮ್ಮ ಬೆಂಬಲಿಗರಾದ ಸಂಪ್ರದಾಯಶರಣಪಂಗಡಗಳ ವಿರೋಧ ಕಟ್ಟಿಕೊಳ್ಳಲು ಇಷ್ಟವಿರಲಿಲ್ಲ. ಕ್ರಮೇಣ ಕೆಲವು ಚುನಾಯಿತ ಸದಸ್ಯರಿದ್ದ ಶಾಸನಸಭೆಗಳಿಗೆ ಶಾಸನಾಧಿಕಾರ ದೊರೆತಾಗ ಸಮಾಜ ಸುಧಾರಣೆಯ ಶಾಸನನಿರ್ಮಾಣಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳನ್ನೂ ಬ್ರಿಟಿಷರು ಪ್ರಬಲವಾಗಿ ವಿರೋಧಿಸಿ ನಿರ್ದಾಕ್ಷಿಣ್ಯದಿಂದ ತಡೆಗಟ್ಟಿದರು.

೯. ಕೈಗಾರಿಕೋದ್ಯಮದ ಬೆಳೆವಣಿಗೆ-ಪ್ರಾಂತೀಯ ಭಿನ್ನ ಭಾವನೆ

೧೮೫೭-೫೮ ರ ದಂಗೆಯ ಪರಿಣಾಮಗಳಿಂದ ಭಾರತವು ನಿಧಾನವಾಗಿ ಚೇತರಿಸಿಕೊಂಡಿತು, ಬ್ರಿಟಿಷರ ನೀತಿಯು ಪ್ರತಿಗಾಮಿಯಾಗಿದ್ದರೂ ಪ್ರಬಲಶಕ್ತಿಗಳು ಭಾರತದಮೇಲೆ ಪರಿಣಾಮ ಮಾಡಿ ಪರಿವರ್ತನೆಮಾಡುತ್ತಿದ್ದವು. ಹೊಸದೊಂದು ಸಾಮಾಜಿಕ ಮನೋಧರ್ಮ ಮೂಡುತ್ತಿತ್ತು. ಭಾರತದ ರಾಜಕೀಯ ಐಕಮತ್ಯ, ಪಾಶ್ಚಿಮಾತ್ಯದ ಸಂಪರ್ಕ, ಔದ್ಯೋಗಿಕ ಪ್ರಗತಿ, ದೇಶಾದ್ಯಂತ ಹರಡಿದ ಜನತೆಯ ದುರದೃಷ್ಟದಾಸ್ಯ, ಎಲ್ಲವೂ ಒಟ್ಟಿನಲ್ಲಿ ಹೊಸ ಭಾವನೆಗಳಿಗೆ ಎಡೆಕೊಟ್ಟವು,