ಪುಟ:ಭಾರತ ದರ್ಶನ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೩೧೧

ಆದರೆ ಆ ದೃಷ್ಟಿಕೋಣವೇ ಬೇರೆ; ಮುಸ್ಲಿಮರಿಗೆ ಒಂದು ಮಾನಸಿಕ ಅವಶ್ಯಕತೆ ಇದ್ದಂತೆ ಹಿಂದೂಗಳಿಗೆ ಇರಲಿಲ್ಲ.

ದಂಗೆಯನಂತರ ಭಾರತೀಯ ಮುಸ್ಲಿಮರು ಯಾವ ಕಡೆ ತಿರುಗೋಣವೆಂದು ಅನುಮಾನಗ್ರಸ್ತರಾಗಿದ್ದರು. ಬ್ರಿಟಿಷ್ ಸರಕಾರವು ಅವರನ್ನು ಉದ್ದೇಶಪಟ್ಟು ಹಿಂದೂಗಳಿಗಿಂತ ಹೆಚ್ಚಾಗಿ ತುಳಿದಿದ್ದರು. ಮಧ್ಯಮ ವರ್ಗದವರೂ ಅನುಕೂಲಸ್ಥರೂ ಯಾವ ವರ್ಗದಿಂದ ಬೆಳೆಯಬಹುದಾಗಿತ್ತೋ ಆ ವರ್ಗದ ಜನರೇ ಹೆಚ್ಚು ಕಷ್ಟಕ್ಕೀಡಾಗಿದ್ದರು. ತೀರ ನೆಲಹತ್ತಿ ಅಧೋಗತಿಗಿಳಿದು ಬ್ರಿಟಿಷರ ಪರಮ ವಿರೋಧಿಗಳೂ ತುಂಬ ಧರ್ಮಾಂಧರೂ ಆದರು. ೧೮೭೦ ರ ನಂತರ ಬ್ರಿಟಿಷರ ನೀತಿ ವ್ಯತ್ಯಾಸವಾಗಿ ಮುಸ್ಲಿಮರ ಕಡೆ ಒಲಿಯಲು ಆರಂಭಿಸಿತು, ಒಬ್ಬರನ್ನೊಬ್ಬರ ಮೇಲೆ ಎತ್ತಿ ಕಟ್ಟಿ ಇಬ್ಬರನ್ನೂ ತಮ್ಮ ಹತೋಟಿಯಲ್ಲಿಟ್ಟು ಕೊಳ್ಳಬೇಕೆಂಬ ಬ್ರಿಟಿಷ್‌ ಭೇದ ನೀತಿಯೇ ಈ ವ್ಯತ್ಯಾಸಕ್ಕೆ ಕಾರಣ. ಈ ಕಾರ ನೀತಿಯಲ್ಲಿ ಸರ್ ಸೈಯದ್ ಅಹಮದ್ ಖಾನ್ ಪ್ರಮುಖ ಪಾತ್ರ ವಹಿಸಿದನು. ಮುಸ್ಲಿಮರನ್ನು ಮೇಲಕ್ಕೆತ್ತಲು ಬ್ರಿಟಿಷ್ ಸಹಕಾರದಿಂದ ಮಾತ್ರ ಸಾಧ್ಯ ಎಂದು ಮನಗಂಡನು. ಇಂಗ್ಲಿಷ್ ವಿದ್ಯೆಯನ್ನು ಅವರಲ್ಲಿ ಹರಡಿ ಅವರ ಸಂಕುಚಿತ ಕೂಪದೊಳಗಿಂಡ ಅವರನ್ನು ಹೊರಗೆಳೆಯಲು ಕಾತರನಾದನು, ಯೂರೋಪಿಯನ್ ನಾಗರಿಕತೆಯನ್ನು ಕಂಡು ಬೆರಗಾಗಿದ್ದನು. ಆತನು ಯೂರೋಪಿನಿಂದ ಬರೆದ ಕಾಗದಗಳನ್ನು ಓದಿದರೆ ಮುಗ್ನನಾಗಿ ಹುಚ್ಚು ಹಿಡಿದಂತೆ ಬರೆದಿದ್ದಾನೆ.

ಸರ್ ಸೈಯದ್ ಒಳ್ಳೆಯ ಉತ್ಸಾಹಶಾಲಿ, ಸಮಾಜ ಸುಧಾರಕ ಇಂದಿನ ಆಧುನಿಕ ವಿಜ್ಞಾನ ದೃಷ್ಟಿಗೂ ಇಸ್ಲಾಂ ಧರ್ಮಕ್ಕೂ ಸಮನ್ವಯಗೊಳಿಸಲು ಬಯಸಿದ. ಯಾವ ಮೂಲಭಾವನೆಯನ್ನೂ ಟೀಕಿಸದೆ ಧರ್ಮಗ್ರಂಥಕ್ಕೆ ತರ್ಕಬದ್ದ ವಿವರಣೆ ಕೊಟ್ಟು ಇವನ್ನೂ ಸಾಧಿಸಿದ. ಇಸ್ಲಾಂ ಧರ್ಮಕ್ಕೂ ಕ್ರೈಸ್ತಮತಕ್ಕೂ ಇರುವ ಮೂಲ ಹೋಲಿಕೆಗಳನ್ನು ತೋರಿಸಿದ. ಮುಸ್ಲಿಮರ ಪರದಪದ್ದತಿ ಮತ್ತು ಸ್ತ್ರೀಯರನ್ನು ಪ್ರತ್ಯೇಕವಿಡುವ ಪದ್ದತಿಯನ್ನು ವಿರೋಧಿಸಿದ. ತುರ್ಕಿಯ ಖಲೀಫನೊಂದಿಗೆ ಒಪ್ಪಂದಕ್ಕೆ ಬರಲು ನಿರಾಕರಿಸಿದ. ಎಲ್ಲಕ್ಕಿಂತ ಹೆಚ್ಚಾಗಿ ನೂತನ ವಿದ್ಯಾಭ್ಯಾಸ ಪದ್ಧತಿಯ ಪ್ರಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದ. ರಾಷ್ಟ್ರೀಯ ಚಳುವಳಿಯ ಆರಂಭವಾದೊಡನೆ ಗಾಭರಿಗೊಂಡು ಬ್ರಿಟಿಷರ ವಿರೋಧ ಕಟ್ಟಿಕೊಂಡರೆ ತನ್ನ ವಿದ್ಯಾ ಪ್ರಚಾರಕ್ಕೆ ಅವರಿಂದ ಸಹಾಯ ದೊರು ಯುವುದಿಲ್ಲವೆಂದು ಸಂಶಯಗೊಂಡ, ಆ ಸಹಾಯ ಆತನಿಗೆ ಅವಶ್ಯವೆನಿಸಿತು. ಆದ್ದರಿಂದ ಮುಸ್ಲಿಮ ರಲ್ಲಿನ ಬ್ರಿಟಿಷರ ವಿರೋಧ ಕಡಮೆಮಾಡಿ ಆಗತಾನೆ ರೂಪುಗೊಳ್ಳುತ್ತಿದ್ದ ಅಖಿಲ ಭಾರತ ರಾಷ್ಟ್ರೀಯ ಮಹಾಸಭೆಗೆ ಮುಸ್ಲಿಮರು ಸೇರದಂತೆ ಪ್ರೇರೇಪಿಸಿದ, “ಭಾರತೀಯ ಮುಸಲ್ಮಾನರನ್ನು ಬ್ರಿಟಿಷ್ ದೊರೆಯ ಯೋಗ್ಯ ಮತ್ತು ಉಪಯುಕ್ತ ರಾಜಭಕ್ತರನ್ನಾಗಿ ಮಾಡುವುದು ” ಅಲಿಘಡ ಕಾಲೇಜಿನ ಒಂದು ಉದ್ದೇಶವಾಗಿತ್ತು. ರಾಷ್ಟ್ರೀಯ ಮಹಾಸಭೆಯಲ್ಲಿ ಹಿಂದೂಗಳೇ ಹೆಚ್ಚು ಇದ್ದರೆಂದು ಅದರ ಮೇಲೆ ಆತನ ವಿರೋಧವೇನೂ ಇರಲಿಲ್ಲ. ಆ ಕಾಲದಲ್ಲಿ ಅದು ತುಂಬ ಸಾಧುವಾಗಿದ್ದರೂ ರಾಜ ಕೀಯದಲ್ಲಿ ಬಹಳ ಉಗ್ರವಾದಿಯೆಂದು ಅದನ್ನು ವಿರೋಧಿಸಿದ. ದಂಗೆಯಲ್ಲಿ ಮುಸ್ಲಿಮರೆಲ್ಲರೂ ಭಾಗವಹಿಸಲಿಲ್ಲವೆಂದೂ, ಅನೇಕರು ಬ್ರಿಟಿಷರಿಗೆ ಭಕ್ತಿಯುತರಾಗಿದ್ದರೆಂದೂ ತೋರಿಸಲು ಯತ್ನ ಮಾಡಿದ. ಹಿಂದುಗಳ ವಿರೋಧಿಯಾಗಿಯೂ ಇರಲಿಲ್ಲ; ಮತಾಂಧತೆಯಿಂದ ಪ್ರತ್ಯೇಕತಾವಾದಿಯೂ ಆಗಿರಲಿಲ್ಲ. ಭಿನ್ನ ಧರ್ಮಕ್ಕೂ ರಾಜಕೀಯ, ಅಥವ ರಾಷ್ಟ್ರೀಯ ಭಾವನೆಗೂ ಯಾವ ಸಂಬಂಧವೂ ಇಲ್ಲವೆಂದು ಪದೇ ಪದೇ ಹೇಳುತ್ತಿದ್ದ. “ನೀವು ಒಂದೇ ದೇಶದ ಮಕ್ಕಳಲ್ಲವೇ ? ಹಿಂದೂ ಅಥವ ಮುಸಲ್ಮಾನನೆಂದರೆ ಧಾರ್ಮಿಕವ್ಯತ್ಯಾಸ ಮಾತ್ರ ತೋರುತ್ತದೆ. ಈ ದೇಶದ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು ಎಲ್ಲರೂ ಒಂದೇ ಜನಾಂಗದವರು ” ಎಂದಿದ್ದಾನೆ.

ಸರ್ ಸೈಯದ್ ಅಹಮದ್ ಖಾನನ ಪ್ರಭಾವವೆಲ್ಲ ಮುಸ್ಲಿಂ ಉನ್ನತವರ್ಗದ ಕೆಲವರಲ್ಲಿ ಮಾತ್ರ. ಹಟ್ಟಣ ಅಥವ ಹಳ್ಳಿಗಳ ಸಾಮಾನ್ಯ ಜನರ ಮೇಲೆ ಯಾವ ಪರಿಣಾಮವನ್ನೂ