ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨೨
ಭಾರತ ದರ್ಶನ

ಆರ ವರದಿಯಲ್ಲಿ ಬಂಗಾಲದ ರೈತರು ಈ ಇಲಿಗಳಿಗೆ ಸಹ ಐದುವಾರ ಬದುಕಲಾಗದಂಥ ಆಹಾರ ತಿನ್ನುತ್ತಿದ್ದಾರೆ” ಎಂದು ಬಂಗಾಲದ ಆರೋಗ್ಯ ಶಾಖಾ ಮುಖ್ಯಾಧಿಕಾರಿ ಹೇಳಿದ್ದಾನೆ.

ಮೊದಲನೆ ಪ್ರಪಂಚ ಯುದ್ಧ ಕೊನೆಗೂ ಮುಗಿಯಿತು. ಶಾಂತಿಯಿಂದ ನಮಗೆ ಪರಿಹಾರ, ಪ್ರಗತಿಯ ಬದಲು ಪಂಜಾಬಿನಲ್ಲಿ ದಬ್ಬಾಳಿಕೆಯ ಸೈನಿಕ ಶಾಸನದ ಆಡಳಿತ ಆರಂಭವಾಯಿತು. ಅಪಮಾನದ ಕಹಿವಾತಾವರಣವೂ, ರೋಷಾವೇಶವೂ ಜನರ ಮನಸ್ಸಿನಲ್ಲಿ ಮೂಡಿತು. ರಾಜಕೀಯ ಸುಧಾರಣೆ ಮತ್ತು ಸರಕಾರದ ಅಧಿಕಾರವರ್ಗದ ಭಾರತೀಕರಣ ಅಂದು ಅಣಕವಾಡಾಯಿತು, ದೇಶದ ಮನುಷ್ಯತ್ವ ತುಳಿದು ಸತತವೂ ನಿರಾತಂಕ ನಡೆಯುತ್ತಿದ್ದ ಸುಲಿಗೆಯಿಂದ ಜನರ ಬಡತನ ಹೆಚ್ಚಿ, ಸತ್ವ ಶೂನ್ಯರಾಗುತ್ತಿದ್ದುದು ಒಂದು ಅಸಹನೀಯ ಅವಮಾನವಾಯಿತು. ರಾಷ್ಟ್ರ ಅನಾಥರಾಷ್ಟ್ರವಾಗಿತ್ತು.

ಆದರೂ ನಾವು ಮಾಡಬಲ್ಲುದೇನು ? ಈ ವಿಷಮ ಚಕ್ರವನ್ನು ಭೇದಿಸುವುದೆಂತು ? ಯಾವುದೋ ಒಂದು ಪೈಶಾಚಿಕ ಹಿಡಿತದಲ್ಲಿ ಸಿಕ್ಕು ನಿಸ್ಸಹಾಯಕರಾದಂತೆ ಇತ್ತು. ನಮ್ಮ ಕೈ ಕಾಲುಗಳೆಲ್ಲ ತಣ್ಣಗಾಗಿದ್ದುವು. ಮನಸ್ಸು ಸ್ತಂಭಿತವಾಗಿತ್ತು. ವ್ಯವಸಾಯಗಾರರು ದಾಸ್ಯಭಾವದಿಂದ ಭಯಗ್ರಸ್ತರಾಗಿದ್ದರು. ಕೈಗಾರಿಕಾ ಶ್ರಮಜೀವಿಗಳ ಸ್ಥಿತಿಯೂ ಅದೇ ಇತ್ತು. ದೇಶವನ್ನೇ ಕವಿದಿದ್ದರೂ ಕಾರ್ಗತ್ತಲಿನಲ್ಲಿ ಕೈದೀವಿಗೆಯಾಗಿ ಜನತೆಯ ಮಾರ್ಗದರ್ಶಕರಾಗಬಹುದಾಗಿದ್ದ ಮಧ್ಯಮವರ್ಗ ಮತ್ತು ವಿದ್ಯಾವಂತರು ಸಹ ಈ ಸರ್ವವ್ಯಾಪಕ ಕತ್ತಲಿನಲ್ಲಿ ಪೂರ್ಣ ಕಂಗೆಟ್ಟಿದ್ದರು. ಕೆಲವು ದೃಷ್ಟಿಗಳಿಂದ ಸಾಮಾನ್ಯ ರೈತನಿಗಿಂತ ಅವರ ಸ್ಥಿತಿ ಇನ್ನೂ ಕರುಣಾಜನಕವಿತ್ತು. ಅಸಂಖ್ಯಾತ ವಿದ್ಯಾವಂತರು ತಮ್ಮ ವ್ಯವಸಾಯ ಬಿಟ್ಟು, ಬೇರಾವ ಉದ್ಯೋಗ ಅಥವಾ ಶ್ರಮಜೀವನವನ್ನೂ ನಡೆಸಲು ಶಕ್ತಿ ಇಲ್ಲದೆ, ನಿಸ್ಸಹಾಯಕರಾಗಿ, ನಿರಾಶರಾಗಿ ಇನ್ನೂ ಅಧೋಗತಿಗಿಳಿದು ಸಹೋದ್ಯೋಗಿಗಳ ಸಂಖ್ಯೆಯನ್ನೂ ಹೆಚ್ಚಿಸಿದರು. ಅಲ್ಪಸಂಖ್ಯೆಯ ಅನುಕೂಲಸ್ತ್ರ ನ್ಯಾಯವಾದಿಗಳು, ವೈದ್ಯರು ಮತ್ತು ಇಂಜನಿಯರುಗಳ ಸಂಖ್ಯೆಯಿಂದ ಜನಜೀವನದಲ್ಲಿ ಯಾವ ವ್ಯತ್ಯಾ ಸವೂ ಆಗಲಿಲ್ಲ. ವ್ಯವಸಾಯಗಾರನಿಗೂ ಹೊಟ್ಟೆಗಿಲ್ಲದಾಯಿತು. ಆದರೆ ನೂರಾರು ವರ್ಷಗಳ ವಿಷಮ ಸನ್ನಿವೇಶ ವಿರುದ್ಧ ಹೋರಾಡಿದ್ದರ ಫಲವಾಗಿ ಆತನಿಗೊಂದು ಸಹನಶಕ್ತಿ ಬಂದಿತ್ತು ಮತ್ತು ಬಡತನರ ಹಸಿವಿನಲ್ಲಿ ಸಹ ಒಂದುಬಗೆಯ ನಿಶ್ಚಲ ಗಾಂಭೀರದ ಮತ್ತು ಸರ್ವಸಮರ್ಥ ವಿಧಿವ್ಯಾಪಾರಕ್ಕೆ ತಲೆಬಾಗುವ ಮನೋಭಾವ ಬೆಳೆದಿತ್ತು. ಆದರೆ ಮಧ್ಯಮವರ್ಗದವರಲ್ಲಿ ಅದರಲ್ಲೂ ಅನುಕೂಲಸ್ತರಲ್ಲಿ ಈ ಹಿನ್ನೆಲೆ ಇರಲಿಲ್ಲ. ಅರೆಬರೆಯ ವಿದ್ಯಾರ್ಜನೆಯಿಂದ, ನಿರಾಶರಾಗಿ ಎಲ್ಲಿ ದಾರಿ ಎಂಬ ಅರಿವು ಅವರಿಗಿರಲಿಲ್ಲ. ಹಳತರಲ್ಲಿ, ಹೊಸದರಲ್ಲಿ ಎರಡರಲ್ಲೂ ಅವರಿಗೆ ವಿಶ್ವಾಸವಿರಲಿಲ್ಲ. ಸಮಾಜ ಧೈಯಕ್ಕೆ ಹೊಂದಿಕೊಳ್ಳಲಿಲ್ಲ. ಕಷ್ಟತಮವಾದರೂ ಏನಾದರೂ ಉಪಯುಕ್ತ ಕಾರ್ ಮಾಡೋಣವೆಂಬ ಸಂಕಲ್ಪ ಇರಲಿಲ್ಲ. ಆಧುನಿಕ ಭಾವನೆಗೆ ಮೋಹಗೊಂಡರು. ಆದರೆ ಅದರ ಒಳಸತ್ವ ಅರ್ಥಮಾಡಿಕೊಳ್ಳಲಿಲ್ಲ. ಆಧುನಿಕ, ಸಾಮಾಜಿಕ ಮತ್ತು ವೈಜ್ಞಾನಿಕ ಜ್ಞಾನ ಹುಟ್ಟಿರಲಿಲ್ಲ. ಕೆಲವರು ಹಿಂದಿನ ಶುಷ್ಕ ರೀತಿಗಳಿಗೇ ಅಂಟಿಕೊಂಡು ಅದರಲ್ಲಿ ಅಂದಿನ ಅವರ ಸಂಕಟ ಪರಿಹಾರಮಾಡಿಕೊಳ್ಳಲೆತ್ನಿಸಿದರು. ಆದರೆ ಅದರಲ್ಲಿ ಯಾವ ಪರಿಹಾರವೂ ದೊರೆಯಲಿಲ್ಲ. ಏಕೆಂದರೆ ಠಾಕೂರರು ಹೇಳಿರುವಂತೆ ನಿರ್ಜಿವವಸ್ತುವಿಗೆ ನೀರೆರೆದರೆ ನಮಗೂ ಸಾವೇ ಸಿದ್ಧ. ಇನ್ನು ಕೆಲವರು ಮಂಗಗಳಂತೆ ಪಾಶ್ಚಾತ್ಯರ ಅನುಕರಣೆ ಮಾಡಿದರು. ಈ ರೀತಿ ದೇಹ ಮತ್ತು ಮನಸ್ಸಿನ ಭದ್ರತೆಗಾಗಿ ಏನಾದರೊಂದು ನೆಲೆ ಕಾಣಹೋಗಿ ಯಾವ ನೆಲೆಯೂ ದೊರೆಯದ ಅನಾಥರಂತೆ ಭಾರತೀಯ ಜೀವನದ ಬಗ್ಗಡದ ಸುಳಿಯಲ್ಲಿ ಗುರಿ ಇಲ್ಲದೆ ತಿರುಗುತ್ತಿದ್ದರು.

ನಾವೇನು ಮಾಡಬಲ್ಲೆವು ? ಒಳಗಿಂದೊಳಗೆ ಭಾರತದ ಜನಜೀವನದ ರಕ್ತ ಹೀರುತ್ತಿದ್ದ ಬಡತನ ಮತ್ತು ನಿರಾಶೆಯ ಕೋಪದಿಂದ ಮೇಲೇಳುವುದೆಂದು ? ಇದು ಕೆಲವು ವರ್ಷಗಳ ನೋವು, ಸಂಕಟ ಮತ್ತು ದಿಗ್ರೆಮೆಯಲ್ಲ, ಅನೇಕ ತಲೆಮಾರುಗಳಿಂದ ನಮ್ಮ ಜನತೆ ನಮ್ಮ “ ರಕ್ತ, ಶ್ರಮ, ಕಣ್ಣೀರು ಮತ್ತು ಬೆವರನ್ನು ” ಸುರಿಸಿದ್ದಾರೆ. ಈ ಹಳೆಯ ವ್ಯಾಧಿ ಭಾರತದ ದೇಹ ಮತ್ತು ಹೃದಯವನ್ನು ಅಸ್ಥಿಗತ ಕ್ಷೀಣಿಸಿತ್ತು. ಶ್ವಾಸಕೋಶವನ್ನೇ ಕ್ರಮೇಣ ವ್ಯಾಪಿಸುವುದು ನಿಧಾನ. ಆದರೆ ನಿಶ್ಚಯವಾಗಿ ಕೊಲ್ಲುವ ಕ್ಷಯ ರೋಗದಂತೆ ಈ ಕ್ರೂರ ವ್ಯಾಧಿಯು ಸಮಾಜದ ಎಲ್ಲ ಜೀವನದ ಮುಖವನ್ನೂ ವ್ಯಾಪಿ