ಅವರ ಧರ್ಮವು ಮೂಲತಃ ಸತ್ಯ ಅಥವ ಪ್ರೇಮಮಾರ್ಗ ಎಂಬ ನೀತಿಮಾರ್ಗ, ಸತ್ಯ ಮತ್ತು ಅಹಿಂಸೆ ಎರಡೂ ಅವರಿಗೆ ಒಂದೇ ಆಗಿತ್ತು ಅಥವ ಒಂದು ವಸ್ತುವಿನ ಎರಡು ಮುಖಗಳು ; ಈ ಶಬ್ದಗಳನ್ನೂ ಒಂದಕ್ಕೆ ಬದಲು ಇನ್ನೊಂದನ್ನು ಪದೇ ಪದೇ ಉಪಯೋಗಮಾಡಿದ್ದಾರೆ. ಹಿಂದೂ ಧರ್ಮದ ತಿರುಳನ್ನು ಅರಿತಿರುವುದಾಗಿ ತಿಳಿಸಿ ತಮ್ಮ ತಾತ್ವಿಕ ಅಭಿಪ್ರಾಯಕ್ಕೆ ವಿರುದ್ಧವಾದ ಎಲ್ಲ ಶಾಸ್ತ್ರಾಧಾರಗಳನ್ನೂ, ಸಂಪ್ರದಾಯಗಳನ್ನೂ ಪ್ರಕ್ಷಿಪ್ತ ಅಥವ ಈಚೆಗೆ ಬೆಳೆದರೂಢಿ ಎಂದು ತಿರಸ್ಕರಿಸಿದರು. “ ನೀತಿ ಧರ್ಮಕ್ಕೆ ವಿರುದ್ಧ ಇರುವ ಯಾವ ಆಚಾರ ಅಥವ ಸಂಪ್ರದಾಯವನ್ನು ನಾನು ಸಮರ್ಥಿಸಲಾರೆ ಮತ್ತು ಅರ್ಥಮಾಡಿ ಕೊಳ್ಳಲಾರೆ. ಆದ್ದರಿಂದ ಅವುಗಳ ಗುಲಾಮನಾಗಿರಲು ನನಗೆ ಸಾಧ್ಯವಿಲ್ಲ' ಎಂದರು. ಅವರ ದೃಷ್ಟಿ ಯಲ್ಲಿ ತಮ್ಮ ನೀತಿಧರ್ಮಕ್ಕೆ ಸಮ್ಮತ ಎಂದು ತೋರಿದರೆ ಸಾಕು; ಇನ್ನೆಲ್ಲ ರೀತಿಯಲ್ಲಿ ನಿತ್ಯ ಆಚರಣೆ ಯಲ್ಲಿ ತಮಗೆ ತೋರಿದ ದಾರಿಯನ್ನು ಹಿಡಿಯಲು ಅವರು ಸ್ವತಂತ್ರರಿದ್ದರು. ತಮ್ಮ ಜೀವನದ ದರ್ಶನ ಮತ್ತು ಕಾರ ನಿರ್ಧರಿಸಲು ಸ್ವತಂತ್ರರಿದ್ದರು. ಈ ಜೀವನ ದರ್ಶನ ಸರಿಯೋ ತಪ್ಪೋ ವಿವಾದಾಸ್ಪದ ಇರಬಹುದು; ಆದರೆ ಅದೇ ಅಳತೆಗೋಲಿನಿಂದ ಎಲ್ಲವನ್ನೂ -ಮುಖ್ಯವಾಗಿ ತಮ್ಮನ್ನೂ -ಅಳೆಯ ಬೇಕೆಂದು ಅವರ ಛಲ, ಜೀವನದ ಇತರ ರಂಗಗಳಂತೆ ರಾಜಕೀಯದಲ್ಲಿ ಇದರಿಂದ ಸಾಮಾನ್ಯ ಮನುಷ್ಯನಿಗೆ ಕಷ್ಟವಾದುದು ನಿಜ ; ಅನೇಕ ವೇಳೆ ಭಿನ್ನಾಭಿಪ್ರಾಯಕ್ಕೆ ಅವಕಾಶವಾಗುತ್ತದೆ. ವ್ಯತ್ಯಸ್ತ ಪರಿಸ್ಥಿತಿಗನುಗುಣವಾಗಿ ತಮ್ಮ ಕಾರನೀತಿ ಸ್ವಲ್ಪ ಮಾರ್ಪಡಿಸಿಕೊಂಡರೂ, ತೊಂದರೆ ಏನು ಬಂದರೂ ತಾವು ನಿರ್ಧರಿಸಿದ ನೇರಮಾರ್ಗದಿಂದ ಕದಲುತ್ತಿರಲಿಲ್ಲ. ತಾವು ಸೂಚಿಸಿದ ಸುಧಾರಣೆ, ಇತರರಿಗೆ ಹೇಳಿದ ಬುದ್ದಿ ವಾದ ತಾವೇ ಮೊದಲು ಆಚರಿಸುತ್ತಿದ್ದರು. ಎಲ್ಲವನ್ನೂ ತಾವೇ ಮೊದಲು ಆರಂಭಿಸಿದರು. ಅವರ ಮಾತು ಮತ್ತು ಕೆಲಸ ಕೈಗೆ ಕೈಚೀಲ ಹೊಂದಿಕೊಳ್ಳುವಂತೆ ಹೊಂದಿಕೊಳ್ಳುತ್ತಿದ್ದವು. ಏನೇ ಆಗಲಿ ಧೃತಿ ಗೆಡುತ್ತಿರಲಿಲ್ಲ. ಮತ್ತು ಅವರ ಜೀವನದಲ್ಲಿ ಮತ್ತು ಕಾವ್ಯದಲ್ಲಿ ಒಂದು ಪೂರ್ಣತೆಯು ಕಾಣುತ್ತದೆ. ಅವರ ತಾತ್ಕಾಲಿಕ ಸೋಲುಗಳಲ್ಲಿ ಸಹ ಅವರ ವ್ಯಕ್ತಿತ್ವದ ಬೆಳವಣಿಗೆಯ ಔನ್ನತ್ಯ ಕಾಣುತ್ತದೆ.
ಅವರ ಅಭಿಲಾಷೆ ಮತ್ತು ಧೈಯಗಳಲ್ಲಿ ಅವರಿಗೆ ರೂಪವೆತ್ತ ಭಾರತದ ಕಲ್ಪನೆ ಯಾವುದು ? ಕಡು ಬಡವನಿಗೂ ಇದು ನನ್ನ ದೇಶ ಎಂದು ಅಭಿಮಾನವಿರಬೇಕು. ದೇಶದ ಆಗುಹೋಗುಗಳಲ್ಲಿ ಆತನ ಮಾತಿಗೆ ಬೆಲೆ ಇರಬೇಕು. ದೇಶದಲ್ಲಿ ಉಚ್ಚರು ನೀಚರು ಎಂಬ ತರಗತಿಗಳಿರಬಾರದು. ಎಲ್ಲ ಪಂಗಡ ಗಳವರೂ ಪೂರ್ಣ ಮಧುರ ಜೀವನ ನಡೆಸಬೇಕು ..... ಆ ಭಾರತದಲ್ಲಿ ಅಸ್ಪೃಶ್ಯತೆಯ ಶಾಪವಾಗಲಿ, ಮಾದಕ ದ್ರವ್ಯಗಳ ಸೇವನೆಯಾಗಲಿ ಇರಬಾರದು. ಹೆಂಗಸರಿಗೆ ಗಂಡಸರಿಗೆ ಸಮಾನ ಹಕ್ಕುಗಳಿರಬೇಕು. ಇದೇ ನನ್ನ ಭಾರತದ ಕನಸು' ಎಂದರು. ಹಿಂದೂಧರ್ಮದ ಅಸ್ತಿತ್ವದಲ್ಲಿ ಅಪಾರ ಅಭಿಮಾನ ಇದ್ದರೂ, ಅದಕ್ಕೆ ಒಂದು ಬಗೆಯ ವಿಶ್ವವ್ಯಾಪಕತೆ ಕೊಡಲು ಯತ್ನಿಸಿದರು; ಎಲ್ಲ ಧರ್ಮಗಳಿಗೂ ಅದರ ಮಡಿಲಲ್ಲಿ ಸ್ಥಾನಕೊಟ್ಟರು. ತಮ್ಮ ಸಂಸ್ಕೃತಿಯ ಆಸ್ತಿಯನ್ನು ಸಂಕುಚಿತಗೊಳಿಸಲಿಲ್ಲ. “ಭಾರತೀಯ ಸಂಸ್ಕೃತಿಯು ಪೂರ್ಣ ಹಿಂದೂ ಸಂಸ್ಕೃತಿಯೂ ಅಲ್ಲ, ಇಸ್ಲಾಂ ಸಂಸ್ಕೃತಿಯೂ ಅಲ್ಲ, ಬೇರೊಂದು ಸಂಸ್ಕೃತಿಯೂ ಅಲ್ಲ. ಅದು ಎಲ್ಲ ಸಂಸ್ಕೃತಿಗಳ ಪರಿಪಾಕ” ಎಂದರು. ನನ್ನ ಮನೆಯ ಸುತ್ತ ಎಲ್ಲ ದೇಶಗಳ ಸಂಸ್ಕೃತಿಗಳ ಗಾಳಿಯೂ ನಿರಾತಂಕವಾಗಿ ಬೀಸಬೇಕು. ಆದರೆ ನನ್ನ ಬುಡ ಮಾತ್ರ ಭದ್ರವಿರಬೇಕು. ಇತರರ ನೆರಳಿನಲ್ಲಿ ಆಗಂತುಕನಂತೆ, ಭಿಕ್ಷುಕ ಅಥವ ಗುಲಾಮನಂತೆ ಬಾಳಲು ನಾನೆಂದೂ ಒಪ್ಪಲಾರೆ" ಎಂದರು. ಆಧುನಿಕ ಕಾಲದ ಭಾವನಾಲಹರಿಗಳು ಅವರಮೇಲೆ ಪರಿಣಾಮಮಾಡಿದರೂ ತಮ್ಮ ನೆಲೆ ಮಾತ್ರ ತಾವು ಬಿಡದೆ ಬುಡ ಭದ್ರತೆ ಕಾಯ್ದರು.
ಈ ರೀತಿ ಜನತೆಯ ಧಾರ್ಮಿಕ, ಐಕ್ಯತೆಯನ್ನು ಪುನರುಜ್ಜಿವನಗೊಳಿಸ ಹೊರಟರು ; ಪಾಶ್ಚಾತ್ಯ ಸಂಸ್ಕೃತಿಗೆ ಮನಸೋತ ಮೇರಗತಿ ಯಜಮಾನರಿಗೂ, ಸಾಮಾನ್ಯ ಜನತೆಗೂ ಮಧ್ಯೆ ಇದ್ದ ಗೋಡೆ ಯನ್ನು ಉರುಳಿಸಿದರು, - ಸನಾತನ ಮೂಲದ ತಾಯಿಬೇರಗಳನ್ನು ಹುಡುಕಿ ಹೊಸದೊಂದು ಬಾಳನ್ನು ಕಟ್ಟ ನಿದ್ರಾವಸ್ಥೆಯಲ್ಲಿದ್ದ ಭಾರತದ ಜನತೆಯನ್ನು ಹೊಡೆದೆಬ್ಬಿಸಿ ಕಾರ್ಯಾಸಕ್ತರನ್ನಾಗಿ ಮಾಡಿದರು. ಏಕಮುಖ ದಾರಿಯಾದರೂ ಅವರ ಬಹುಮುಖ ಸ್ವಭಾವದಲ್ಲಿ ಎದ್ದು ಕಾಣುತ್ತಿದ್ದ ಮುಖ್ಯ ಪರಿಣಾಮ