ಪುಟ:ಭಾರತ ದರ್ಶನ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೨

ಭಾರತ ದರ್ಶನ

ಮತ್ತು ಸಾಮಾಜಿಕ ದೃಷ್ಟಿಯವರೊಡನೆ, ಕೇವಲ ಅಧಿಕಾರ ಮತ್ತು ಮಂತ್ರಿ ಪದವಿಗಳಿಗಾಗಿ ಹಾತೊರೆಯುತ್ತಲಿದ್ದವರೊಡನೆ ಸೇರಿಕೊಳ್ಳುವುದಾಗಿತ್ತು. ಆ ಪರಿಸ್ಥಿತಿಯಲ್ಲಿ ಹೋರಾಟ ಅನಿವಾಧ್ಯವಾಗಿತ್ತು; ಬ್ರಿಟಿಷ್ ಹಕ್ಕುದಾರಿಗಳ ಪ್ರತಿನಿಧಿಗಳೊಡನೆ, ವೈಸರಾಯ್ ಮತ್ತು ಗೌರರುಗಳೊಡನೆ, ಉನ್ನತ ಅಧಿಕಾರಿಗಳೊಡನೆ, ಭೂಮಿದಾರಿ ವಿಷಯದಲ್ಲಿ ಜಮೀನುದಾರರೊಡನೆ, ಕೂಲಿಗಾರರ ವಿಷಯದಲ್ಲಿ ಬಂಡವಲಗಾರರೊಡನೆ ಹೋರಾಟವೇ ಕಾದಿತ್ತು. ಕಾಂಗ್ರಸೇತರ ಪಕ್ಷಗಳೆಲ್ಲ ರಾಜಕೀಯ ಮತ್ತು ಸಾಮಾಜಿಕ ವಿಷಯಗಳಲ್ಲಿ ಸಂಪ್ರದಾಯ ಶರಣರು. ಅವರಲ್ಲಿ ಕೆಲವರಂತೂ ಅಧಿಕಾರದಾಸೆಗೆ ಮನಸೋತವರು. ಅವರೇನಾ ದರೂ ನಮ್ಮ ಮಂತ್ರಿಮಂಡಲದಲ್ಲಿ ಸೇರಿದರೆ ನಮ್ಮ ಸಮಾಜ ಸುಧಾರಣಾ ಕಾರ್ಯಕ್ರಮಕ್ಕೆ ಅಡ್ಡಿ ಬಂದು, ಕಾಲಹರಣಕ್ಕೆ ಎಡೆಕೊಟ್ಟಂತಾಗುತ್ತಿತ್ತು. ಇತರ ಮಂತ್ರಿಗಳನ್ನು ಬದಿಗಿರಿಸಿ ಗೌರರೊಡನೆ ಕೃತ್ರಿಮ ಸಂಧಾನಕ್ಕೂ ಆಸ್ಪದವಿತ್ತು. ಬ್ರಿಟಿಷ್ ಅಧಿಕಾರವನ್ನು ಎದುರಿಸಲು ಒಮ್ಮತದ ನಾಯಕತ್ವ ಅತಿ ಅವಶ್ಯವಿತ್ತು. ಇದರಲ್ಲಿ ಸ್ವಲ್ಪ ಒಡಕು ಬಂದರೂ ನಮ್ಮ ವ್ಯೂಹಕ್ಕೇ ಅಪಾಯ, ಒಂದುಗೂಡಿಸುವ ಶಕ್ತಿ ಇಲ್ಲದೆ ಒಂದು ನಿಷ್ಠೆ ಇಲ್ಲದೆ, ಏಕಮುಖ ಧೈಯವಿಲ್ಲದೆ ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು ಎಂಬಂತೆ ಆಗುತ್ತಲಿತ್ತು.

ನಮ್ಮ ಸಾರ್ವಜನಿಕ ಜೀವನದಲ್ಲಿ ಅನೇಕರು ರಾಜಕೀಯವನ್ನೇ ಧೈಯವಾಗಿಟ್ಟುಕೊಂಡು ಸೇರಿದವರಿದ್ದುದು ಸ್ವಾಭಾವಿಕವಿತ್ತು ; ಒಳ್ಳೆಯದಿರಲಿ ಕೆಟ್ಟದಿರಲಿ ಪದವಿಯ ಆಶೆಗಾಗಿ ಸೇರಿದವರು ಎನ್ನಬಹುದು. ಕಾಂಗ್ರೆಸ್ಸಿನಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಸಹ ದಕ್ಷರೂ, ಕಾರ್ಯನಿಷ್ಠ ರೂ, ಸ್ವದೇಶಾಭಿಮಾನಿಗಳೂ ಆದ ಶ್ರೀಪುರುಷರಿದ್ದರು ; ಪದವಿಯ ಆಶೆಗಾಗಿ ಬಂದವರೂ ಇದ್ದರು. ಆದರೆ ೧೯೨೦ರಿಂದ ಈಚೆಗೆ ಕಾಂಗ್ರೆಸ್ಸು ಕೇವಲ ವಿಧಿ ಬದ್ದ ರಾಜಕೀಯ ಪಕ್ಷವಾಗಿರದೆ ಪ್ರತ್ಯಕ್ಷ ಮತ್ತು ಮತ್ತು ಪರೋಕ್ಷ ಕ್ರಾಂತಿಕಾರಕ ಭಾವನೆಯಿಂದ ತುಂಬಿತ್ತು. ಅನೇಕವೇಳೆ ಶಾಸನ ಬಾಹಿರವಿತ್ತು. ಹಿಂಸೆ, ಗುಪ್ತ ಸಮಾಲೋಚನೆ, ಪಿತೂರಿ ಮುಂತಾದ ಹಿಂಸಾತ್ಮಕ ಚಳುವಳಿಯ ಸಾಮಾನ್ಯ ರೀತಿ ನೀತಿಗಳು ಯಾವುದೂ ಅದರಲ್ಲಿ ಇಲ್ಲದಿದ್ದರೂ, ಕ್ರಾಂತಿ ಭಾವನೆಯಲ್ಲಿ ಇತರ ಯಾವ ಚಳವಳಿಗೂ ಹಿಂದಿರಲಿಲ್ಲ. ಅದರ ಮಾರ್ಗ ತಪ್ಪಿರಲಿ ಸರಿಯಿರಲಿ, ಪರಿಣಾಮಕಾರಕವಿರಲಿ ಇಲ್ಲದಿರಲಿ, ಅಥವ ವಿವಾದಾಸ್ಪದವಿರಲಿ ಅದರಲ್ಲಿ ಅತ್ಯದ್ಭುತ ಧೈರ್ಯ ಮತ್ತು ಸಹನಶಕ್ತಿ ಇತ್ತು. ದಿನಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ದೃಢನಿಶ್ಚಯದಿಂದ ಜೀವನದ ಎಲ್ಲ ಸುಖಗಳನ್ನೂ ತ್ಯಾಗಮಾಡಿ ಸಂಕಟಪಡುವುದಕ್ಕಿಂತ ಸಾವನ್ನಾದರೂ ಎದುರಿಸಿ ಅಲ್ಪಾವಧಿಯ ಹಿಂಸಾತ್ಮಕ ಚಳವಳಿಯಲ್ಲಿ ಭಾಗಿಯಾಗುವುದು ಪ್ರಾಯಶಃ ಸುಲಭವಿರಬಹುದು. ಅಲ್ಲದೆ ದೀರ್ಘಕಾಲದ ತ್ಯಾಗಕ್ಕೆ ಸಿದ್ಧರಿರುವರು ಎಲ್ಲೆಡೆಯೂ ಬಹು ವಿರಳ, ಭಾರತದಲ್ಲಿ ಅಷ್ಟು ಅಸಂಖ್ಯಾತ ಜನರು ಅಷ್ಟು ದೀರ್ಘಕಾಲ ಆ ಸೇವಾ ತಪಸ್ಸನ್ನು ಆಚರಿಸಿ ಕೃತಕೃತ್ಯರಾದದ್ದು ಅತ್ಯಾಶ್ಚಯ್ಯ.

ಪುನಃ ಹೋರಾಟ ಆರಂಭವಾಗುವ ಮುಂಚೆ ರೈತರು ಮತ್ತು ಕೂಲಿಗಾರರ ಹಿತದೃಷ್ಟಿಯಿಂದ ಶಾಸನ ಪೂರೈಸಬೇಕೆಂದು ಶಾಸನ ಸಭೆಗಳ ಕಾಂಗ್ರೆಸ್ ಪಕ್ಷಗಳು ಕಾತರರಾಗಿದ್ದವು. ಮುಂಬರುವ ಹೋರಾಟದ ಭಯ ಯಾವಾಗಲೂ ಇತ್ತು; ಪರಿಸ್ಥಿತಿಯೇ ಅಷ್ಟು ಸ್ಫೋಟಕವಿತ್ತು ; ಪ್ರತಿಯೊಂದು ಪ್ರಾಂತ್ಯದಲ್ಲೂ ಮಿತ ಮತದಾನ ಪದ್ಧತಿಯ ಮೇಲೆ ಜಮಾಬ್ದಾರಿ ಮತ್ತು ಕೈಗಾರಿಕಾ ಹಕ್ಕುದಾರಿಗಳ ಪ್ರತಿಗಾಮಿ ಸದಸ್ಯರ ಹಿರಿಯ ಶಾಸನ ಸಭೆಗಳಿದ್ದವು. ಪ್ರಗತಿಪರ ಶಾಸನ ನಿರ್ಮಾಣಕ್ಕೆ ಅವಲ್ಲದೆ ಆತಂಕಗಳೂ ಇದ್ದವು. ಮಿಶ್ರ ಮಂತ್ರಿಮಂಡಲಗಳು ಈ ತೊಂದರೆ ಹೆಚ್ಚಿಸುತ್ತಿದ್ದವು. ಆದ್ದರಿಂದ ಅಸ್ಸಾಮ್ ಮತ್ತು ವಾಯವ್ಯ ಪ್ರಾಂತ್ಯದಲ್ಲಿ ಹೊರತು ಬೇರೆ ಎಲ್ಲೂ ಮಿಶ್ರಮಂತ್ರಿಮಂಡಲ ರಚಿಸಲಾಗದೆಂದು ಕಾಂಗ್ರೆಸ್ ತೀರಾನಿಸಿತು.

ಆದರೆ ಇದೇ ಕೊನೆಯ ಮಾತೂ ಆಗಿರಲಿಲ್ಲ. ಈ ತೀರ್ಮಾನ ಬದಲಾಯಿಸಲು ಅವಕಾಶವಿತ್ತು. ಆದರೆ ದಿನ ದಿನಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತ ಇದ್ದುದರಿಂದ ಆ ತೀರ್ಮಾನ ಬದಲಾಯಿಸುವುದು ಕಷ್ಟವಾಗಿ ಅವಸರದಿಂದ ತೀರ್ಮಾನಿಸಬೇಕಾದ ಪ್ರಶ್ನೆಗಳಲ್ಲಿಯೇ ಪ್ರಾಂತ್ಯಗಳ ಕಾಂಗ್ರೆಸ್ ಸರಕಾರಗಳಿಗೆ ಬಿಡುವು ಸಾಲದಾಯಿತು. ಈಚೆಗೆ ಈ ತೀರ್ಮಾನದ ಔಚಿತ್ಯದ ವಿಷಯದಲ್ಲಿ ವಾದ ವಿವಾದ ನಡೆದು