ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬೮
ಭಾರತ ದರ್ಶನ

ಮತ್ತು ಹೊಸ ಸಮಸ್ಯೆಗಳಿಗೆ ಹೊಂದಿಕೊಳ್ಳಲೇಬೇಕು. ಆದ್ದರಿಂದ ಹೊಸ ಸನ್ನಿವೇಶಗಳೇ ಹೊಸ ಅನುಭವಗಳಿಗೆ ಕಾರಣವಾಗುತ್ತವೆ.

ಮಕ್ಕಳ ವಿದ್ಯಾಭ್ಯಾಸ ಯಾವುದಾದರೂ ಒಂದು ಕಸಬು ಅಥವ ಕೈಕೆಲಸವನ್ನು ಅವಲಂಬಿಸಿರ ಬೇಕೆಂದು ಈಗ ಸರ್ವಮಾನ್ಯವಿದೆ. ಅದರಿಂದ ಮಾನಸಿಕ ಪ್ರಚೋದನೆಯಾಗಿ ಮನಸ್ಸಿಗೂ ಕೈಗಳಿಗೂ ಒಂದು ವಿಧವಾದ ಸೌಹಾರ್ದ ಉಂಟಾಗುತ್ತದೆ. ಬೆಳೆಯುವ ಯುವಕ ಯುವತಿಯರ ಮನಸ್ಕೂ ಯಂತ್ರದಿಂದ ಪ್ರಚೋದಿತವಾಗುತ್ತದೆ. ದುಡಿಮೆಯ ದಾಸ್ಯದ ಕೂಲಿಗಾರನಂತಲ್ಲ, ಸರಿಯಾದ ಪರಿಸ್ಥಿತಿಯಲ್ಲಿ ಯಂತ್ರ ಪರಿಚಯದಿಂದ ಮನಸ್ಸು ವಿಕಾಸಗೊಳ್ಳುತ್ತದೆ ಮತ್ತು ಹೊಸ ಯೋಜನೆಗಳು ಕಾಣುತ್ತವೆ. ಸುಲಭ ವೈಜ್ಞಾನಿಕ ಪ್ರಯೋಗಗಳು, ಸೂಕ್ಷ್ಮದರ್ಶಕಯಂತ್ರದ ನೋಟಗಳು, ಸಾಮಾನ್ಯ ಪ್ರಕೃತಿ ನಿಯಮಗಳ ಏವರಣೆಗಳು ಮನಸ್ಸನ್ನು ಚಕಿತಗೊಳಿಸುತ್ತವೆ ; ಜೀವನದ ಅನೇಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತವೆ ; ಹಿಂದಿನ ಪದ್ಧತಿ, ರೀತಿ ನೀತಿಗಳನ್ನೇ ನಂಬಿ ಕುಳಿತುಕೊಳ್ಳದೆ, ಹೊಸ ಪ್ರಯೋಗಮಾಡಿ ಹೊಸ ಮಾರ್ಗಗಳನ್ನು ಕಂಡು ಹಿಡಿಯಬೇಕೆಂಬ ಆಸಕ್ತಿ ಹುಟ್ಟಿಸುತ್ತದೆ; ಆತ್ಮವಿಶ್ವಾಸ ಮತ್ತು ಸಹಕಾರ ಮನೋಭಾವ ಬೆಳೆಯುತ್ತವೆ. ಹಿಂದಿನ ಕಾಲದ ಹೊರೆಯ ನಿರಾಶಾಭಾವನೆ ಮಾಯವಾಗಿ ಸದಾ ಪರಿವರ್ತನೆಗೊಳ್ಳುತ್ತಿರುವ ಮತ್ತು ಪ್ರಗತಿಗೊಳ್ಳುತ್ತಿರುವ ಯಂತ್ರ ಕೌಶಲ್ಯವನ್ನು ಅವಲಂಬಿಸಿರುವ ನಾಗರಿಕತೆಯಿಂದ ಮಾತ್ರ ಇದು ಸಾಧ್ಯ, ಆ ನಾಗರಿಕತೆ ಎಂದರೆ ಪ್ರಾಚೀನ ಸಂಪ್ಪದಾಯದ ಇಂದಿನ ಜೀವನದಿಂದ ಅಸಾಧ್ಯ ಪರಿವರ್ತನೆ; ಒಂದು ಹೊಸ ಜೀವನಕ್ಕೆ ಹಾರಿದಂತೆ ಎನ್ನಬಹುದು ; ಆದರೆ ಆ ನಾಗರಿಕತೆಗೂ ಆಧುನಿಕ ಕೈಗಾರಿಕಾ ಪ್ರಗತಿಗೂ ನಿಕಟ ಸಂಬಂಧವಿದೆ. ಹೊಸ ಸಮಸ್ಯೆಗಳು, ಕಷ್ಟಗಳು ಉದ್ಭವಿಸುವುದು ನಿಜ; ಆದರೆ ಅವುಗಳ ನಿವಾರಣೆಗೂ ತಾನೇ ದಾರಿ ತೋರಿಸುತ್ತದೆ.

ವಿದ್ಯಾಭ್ಯಾಸ ಕ್ರಮದಲ್ಲಿ ಸಾಹಿತ್ಯ ವಿಭಾಗದ ಮೇಲೆ ನನಗೆ ತುಂಬ ಪ್ರೇಮ. ಪ್ರಾಚೀನ ಸಾಹಿತ್ಯವೆಂದರಂತೂ ನನಗೆ ಪ್ರಾಣ. ಆದರೂ ಎಲ್ಲ ಹುಡುಗ ಹುಡುಗಿಯರಿಗೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರಗಳ ಮತ್ತು ವಿಜ್ಞಾನದ ಪ್ರಯೋಗಗಳ ಸ್ಕೂಲಪರಿಚಯ ಅತ್ಯವಶ್ಯವೆಂದು ನನ್ನ ಮತ. ಆಧುನಿಕ ಪ್ರಪಂಚ ಅರ್ಥವಾಗಬೇಕಾದರೆ, ಅದರೊಳಗೆ ಹೊಂದಿಕೊಳ್ಳಬೇಕಾದರೆ ಮತ್ತು ಕೆಲಮಟಗಾದರೂ ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾದರೆ ಆ ರೀತಿಯ ಶಿಕ್ಷಣದಿಂದ ಮಾತ್ರ ಸಾಧ್ಯ. ಇದುವರೆಗಿನ ಮತ್ತು ಮುಂದೆ ಇನ್ನೂ ಉತ್ತಮಗೊಳ್ಳಬಹುದಾದ ವಿಜ್ಞಾನದ ಉನ್ನತಸಾಧನೆಯಲ್ಲಿ, ಆಧುನಿಕ ಉದ್ಯೋಗ ಕೌಶಲ್ಯದಲ್ಲಿ, ವಿಜ್ಞಾನದ ಪ್ರಾಯೋಗಿಕ ಸಲಕರಣೆಗಳ ಅದ್ಭುತ ವೈಚಿತ್ರದಲ್ಲಿ ಅತಿ ಸೂಕ್ಷವೂ ಆದರೂ ಅದ್ಭುತ ಶಕ್ತಿಯುತವೂ ಆದ ಯಂತ್ರೋಪಕರಣಗಳಲ್ಲಿ, ವಿಜ್ಞಾನ ಸಂಶೋಧನೆಗಳ ವಿಚಾರ ಸಾಹಸಗಳಲ್ಲಿ ಮತ್ತು ಅವುಗಳ ಪ್ರಯೋಗದಿಂದ ಹೊರಹೊಮ್ಮಿರುವ ಪರಿಣಾಮಗಳಲ್ಲಿ ಪ್ರಕೃತಿಯ ಪ್ರಯೋಗಶಾಲೆಯ ಮತ್ತು ನಿಯಮಗಳ ದೃಶ್ಯ ವೈಚಿತ್ರಗಳ ಕಿರುನೋಟಗಳಲ್ಲಿ ಸಹಸ್ರಾರು ವಿಜ್ಞಾನಿಗಳ ಸಾಹಸದಲ್ಲಿ ಭಾವನಾ ಮತ್ತು ಕಾವ್ಯ ಪ್ರಪಂಚದಲ್ಲಿ ದೊರೆತ ವಿಜ್ಞಾನದ ಗಂಭೀರವ್ಯಾಪ್ತಿಯಲ್ಲಿ ; ಎಲ್ಲಕ್ಕೂ ಹೆಚ್ಚಾಗಿ ಇದೆಲ್ಲವೂ ಮಾನವನ ಮನೋವಿಕಾಸದ ಫಲ ಎಂಬ ಸತ್ಯದಲ್ಲಿ ಏನೋ ಒಂದು ಅದ್ಭುತ ವೈಚಿತ್ರವಿದೆ. ಟೆಂಪ್ಲೇಟು:Canter ಭಾರತದಲ್ಲಿ ದೊಡ್ಡ ಕೈಗಾರಿಕೆ ಎಂದರೆ ಜಮಷೆದ್ ಪುರದ ತಾತಾಕಂಪೆನಿಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆ. ಅಂಥದು ಇನ್ನೊಂದು ಇಲ್ಲ ; ಉಳಿದ ಎಂಜಿನಿಯರಿಂಗ್ ವರ್ಕ್ಷಾಪುಗಳಲ್ಲಿ