ಪುಟ:ಭಾರತ ದರ್ಶನ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೪೦೧

ಎದ್ದು ಕಾಣುತ್ತದೆ. ಜನರಿಗೆ ಇದರಿಂದ ವಿಸ್ಮಯವಾಗುತ್ತಿತ್ತು. ಭಾರತದ ಹಿನ್ನೆಲೆ ಇಲ್ಲದ ಪರಕೀಯರಿಗಂತೂ ಇದು ಅರ್ಥವೇ ಆಗುತ್ತಿರಲಿಲ್ಲ.

ಒಬ್ಬ ವ್ಯಕ್ತಿ ಜನಮನವನ್ನೂ, ಜನದ ಧ್ಯೇಯವನ್ನೂ ಎಷ್ಟರಮಟ್ಟಿಗೆ ರೂಪಿಸಬಲ್ಲನೆಂದು ಹೇಳುವುದು ಬಲುಕಷ್ಟ, ಪ್ರಪಂಚದ ಇತಿಹಾಸದಲ್ಲಿ ಅಂತಹ ಅದ್ಭುತ ಪರಿಣಾಮ ಮಾಡಿದ ವ್ಯಕ್ತಿಗಳು ಕೆಲವರಿದ್ದಾರೆ. ಆದರೂ ಅವರು ಜನರ ಮನಸ್ಸಿನಲ್ಲಿ ಮೊದಲೇ ಇದ್ದ ಒಂದು ಭಾವನೆಗೆ ಪುಷ್ಟಿ ಕೊಟ್ಟು ಅದನ್ನು ಪ್ರಚೋದಿಸಿರಬಹುದು, ಅಥವ ಆ ಕಾಲದ ಕೆಲವು ಅಸ್ಪಷ್ಟ ಭಾವನೆಗಳನ್ನು ಸ್ಪಷ್ಟಗೊಳಿಸಿ ಅವುಗಳಿಗೆ ವಿಶೇಷ ಮಹತ್ವ ಕೊಟ್ಟಿರಬಹುದು. ಆದರೆ ಭಾರತದ ಜನತೆಯ ಮೇಲೆ ಗಾಂಧಿಜಿಯ ಇಂದಿನ ಪ್ರಭಾವ ಅತ್ಯದ್ಭುತವಿದೆ. ಇದು ಎಷ್ಟು ಕಾಲವಿರುತ್ತದೆ, ಮುಂದೆ ಯಾವ ಸ್ವರೂಪ ತಾಳುತ್ತದೆ ಎಂಬುದು ಭವಿಷ್ಯದ ಮಾತು. ಅವರ ಅಭಿಪ್ರಾಯಗಳನ್ನು ಪೂರ್ಣ ಗೌರವಿಸುವವರ ಮತ್ತು ಅವರನ್ನು ರಾಷ್ಟ್ರದ ಮಹಾನಾಯಕನೆಂದು ಒಪ್ಪುವವರ ಮೇಲೆ ಮಾತ್ರವಲ್ಲದೆ ಅವರಿಂದ ಭಿನ್ನಾಭಿಪ್ರಾಯವುಳ್ಳ ಮತ್ತು ಅವರನ್ನು ಟೀಕಿಸುವ ಜನರ ಮೇಲೆ ಸಹ ಈ ಪ್ರಭಾವವು ಮಹತ್ಪರಿಣಾಮಮಾಡಿದೆ. ಅವರ ಅಹಿಂಸಾ ತತ್ವ ಮತ್ತು ಆರ್ಥಿಕ ನೀತಿಗಳನ್ನು ಭಾರತದಲ್ಲಿ ಸಂಪೂರ್ಣ ಒಪ್ಪುವವರು ಅತ್ಯಲ್ಪ ಜನ; ಆದರೂ ಒಂದಲ್ಲ ಒಂದು ರೀತಿ ಅವರ ಪ್ರಭಾವಕ್ಕೆ ಒಳಗಾಗಿರುವವರೇ ಬಹಳ ಜನ. ಸಾಮಾನ್ಯವಾಗಿ ಧಾರ್ಮಿಕ ದೃಷ್ಟಿ ಯಿಂದ ಮಾತನಾಡುತ್ತ ರಾಜಕೀಯ ಮತ್ತು ನಿತ್ಯ ಜೀವನದ ಸಮಸ್ಯೆಗಳನ್ನು ನೈತಿಕ ದೃಷ್ಟಿಯಿಂದ ಬಿಡಿಸಿ ರೆಂದು ಒತ್ತಾಯಮಾಡುತ್ತ ಬಂದಿದಾರೆ. ಧಾರ್ಮಿಕ ಭಾವನೆ ಇರುವವರಿಗೆ ಹೆಚ್ಚಾಗಿ ಧಾರ್ಮಿಕ ಹಿನ್ನೆ ಲೆಯ ಪರಿಣಾಮವಾಗಿದೆ. ಉಳಿದವರಮೇಲೆ ನೈತಿಕ ದೃಷ್ಟಿಯ ಪರಿಣಾಮವಾಗಿದೆ. ಅನೇಕರ ಕಾರ್ಯಾಚರಣೆ ಉನ್ನತ ನೈತಿಕ ಮತ್ತು ತಾತ್ವಿಕ ಮಟ್ಟದಲ್ಲಿಯೇ ನಡೆದಿದೆ. ಅದಕ್ಕೂ ಮಿಗಿಲಾಗಿ ಅನೇಕರು ಆ ಮಟ್ಟದಲ್ಲಿ ಯೋಚನೆ ಮಾಡಲಾರಂಭಿಸಿದ್ದಾರೆ. ಆ ಯೋಚನೆಯ ಪರಿಣಾಮವಾಗಿ ಅವರ ನಡತೆ ಮತ್ತು ಕಾರ್ಯ ನೀತಿಗಳು ಪೂರ್ಣ ಮಾರ್ಪಾಟಾಗಿ ಇವೆ. ರಾಜಕೀಯವು ಸಾಮಾನ್ಯವಾಗಿ ಇತರ ಎಲ್ಲ ಕಡೆ ಇರುವಂತೆ ತಾತ್ಕಾಲಿಕ ಅನುಕೂಲ ಅಥವ ಲಾಭದ ವಿಷಯವಾಗದೆ ಪ್ರತಿಯೊಂದು ರಾಜಕೀಯ ಭಾವನೆ ಅಥವ ಕಾರ್ಯನೀತಿ ನಿರ್ಧಾರವಾಗುವ ಮೊದಲು ಒಂದು ನಿರಂತರ ನೈತಿಕ ಹೋರಾಟವೇ ನಡೆಯುತ್ತದೆ. ತಾತ್ಕಾಲಿಕ ಲಾಭ ಅಥವ ಅನುಕೂಲತೆಗಳನ್ನು ಅಲಕ್ಷೆ ಮಾಡಬೇಕೆಂದಲ್ಲಿ, ಆದರೂ ಮುಂದಿನ ಪರಿಣಾಮಗಳ ದೂರದೃಷ್ಟಿಯಿಂದ ಮತ್ತು ಇತರ ಕಾರಣಗಳಿಂದ ಅವುಗಳಿಗೆ ಅಷ್ಟು ಪ್ರಾಮುಖ್ಯತೆ ಇಲ್ಲ.

ಈ ಎಲ್ಲ ಮಾರ್ಗಗಳಲ್ಲಿ ಗಾಂಧಿಜಿಯ ಪ್ರತಿಭೆಯು ಮಹಾ ಪ್ರಭಾವಕಾರಿಯಾಗಿ ಭಾರತದಲ್ಲಿ ತನ್ನ ಹೆಗ್ಗುರುತನ್ನು ಬಿಟ್ಟಿದೆ. ಆದರೆ ಇಂದು ಭಾರತದ ನಾಯಕರಲ್ಲಿ ಅಗ್ರಗಣ್ಯನಾಗಿರಲು ಮುಖ್ಯ ಕಾರಣ ಅಹಿಂಸಾತತ್ಯ ಅಥವ ಆರ್ಥಿಕ ನೀತಿಗಳಲ್ಲ. ಭಾರತದ ಜನಕೋಟಿಗೆ ಆತನು ರಾಷ್ಟ್ರವು ಸ್ವತಂತ್ರವಾಗಬೇಕೆಂಬ ಭಾರತದ ಜನತೆಯ ಉತ್ಕಟೇಚ್ಛೆಯ ಪ್ರತಿನಿಧಿ, ಕಾರ್ಯಾಸಕ್ತ ರಾಷ್ಟ್ರೀಯ ಭಾವನೆಯ ಪ್ರತಿನಿಧಿ, ದುರಹಂಕಾರದ ದೌರ್ಜನ್ಯಕ್ಕೆ ಎಂದಿಗೂ ಮಣಿಯದ ದೃಢಸಂಕಲ್ಪದ ಪ್ರತಿನಿಧಿ, ರಾಷ್ಟಗೌರವಕ್ಕೆ ಕುಂದುತರುವ ಯಾವುದನ್ನೂ ಒಪ್ಪಬಾರದೆಂಬ ಭಾರತದ ದೃಢನಿಶ್ಚಯದ ಪ್ರತಿನಿಧಿ, ನೂರು ವಿಷಯಗಳಲ್ಲಿ ಭಿನ್ನಾಭಿಪ್ರಾಯಪಟ್ಟವರು, ಕಟುವಾಗಿ ಟೀಕಿಸಿದವರು ಯಾವುದಾದರೂ ಒಂದು ಸಂದರ್ಭದಲ್ಲಿ ಅವರಿಂದ ದೂರವಾದವರು, ಭಾರತದಲ್ಲಿ ಅನೇಕರು ಇರಬಹುದು, ಆದರೆ ಭಾರತದ ಸ್ವಾತಂತ್ರ್ಯಕ್ಕೆ ಧಕ್ಕೆಬಂದ ಕಾಲದಲ್ಲಿ ಹೋರಾಟ ಆರಂಭವಾದ ಕಾಲದಲ್ಲಿ ಎಲ್ಲರೂ ಅವರ ಸುತ್ತ ಸೇರುತ್ತಾರೆ; ಎಲ್ಲರಿಗೂ ಅವರು ಏಕೈಕ ನಾಯಕರಾಗುತ್ತಾರೆ.

ಯುದ್ಧ ಸಮಯದಲ್ಲಿ ಮತ್ತು ಭವಿಷ್ಯದಲ್ಲಿ ಸ್ವತಂತ್ರ ಭಾರತದ ನೀತಿ ಅಹಿಂಸಾಯುತವಿರಬೇಕೆ ಅಥವ ಬೇಡವೆ ಎಂಬ ಪ್ರಶ್ನೆಯನ್ನು ಗಾಂಧಿಜಿಯೂ ೧೯೪೦ ರಲ್ಲಿ ಎತ್ತಿದಾಗ ಕಾಂಗ್ರೆಸ್ ಕಾರ್ಯ ಸಮಿತಿಯು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರಬೇಕಾಯಿತು. ಗಾಂಧೀಜಿಯನ್ನು ದೂರ ತಾವು ಹೋಗಲು ಸಿದ್ಧರಿಲ್ಲವೆಂದೂ, ವಿದೇಶ ವ್ಯವಹಾರದಲ್ಲಿ ಭಾರತವೂ, ಕಾಂಗ್ರೆಸ್ಸೂ ಅಹಿಂಸಾಮಾರ್ಗದಿಂದಲೇ

29