ಪುಟ:ಭಾರತ ದರ್ಶನ.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೪
ಭಾರತ ದರ್ಶನ

ಪ್ರಕಾಶವೂ ಹೆಚ್ಚಿದವು, ಸಮತೂಕವಿಲ್ಲದ ಈಗಿನ ಕಾಲದ ಹುಡುಗಿಯರ ಅಭ್ಯಾಸಗಳಾವುವೂ ಇರಲಿಲ್ಲ. ಆಧುನಿಕ ಪದ್ಧತಿಗಳಿಗೇನೂ ಸುಲಭವಾಗಿ ಹೊಂದಿಕೊಂಡಳು. ಆದರೂ ಆಕೆ ಭಾರತ ಮಹಿಳೆಯೇ, ಮುಖ್ಯವಾಗಿ ಕಾಶ್ಮೀರದ ಹೆಣ್ಣು ಮಗಳೇ ; ಸೂಕ್ಷಳಾದರೂ ಬಹು ಗಂಭೀರ, ವಯಸ್ಸಾಗಿದ್ದರೂ ಎಳೆಯ ಮಗುವಿನಂತೆ ಕೋಮಲ, ಹುಚ್ಚು ಹುಚ್ಚಾಗಿ ನಡೆದರೂ ಬುದ್ದಿವಂತೆ. ಗೊತ್ತಿಲ್ಲ ದವರೊಂದಿಗೆ ಅಥವ ಬೇಡವಾದವರೊಂದಿಗೆ ಮಾತೇ ಇಲ್ಲ ; ಆದರೆ ತನ್ನ ಪರಿಚಯಸ್ಥರು ಮತ್ತು ಆಸ್ತೇಷ್ಟರ ಮಧ್ಯೆ ತುಳುಕುವ ನಗೆ, ಸರಿಯೋ ತಪ್ಪೋ ಬಹುಬೇಗ ಒಂದು ಅಭಿಪ್ರಾಯಕ್ಕೆ ಬಂದು ಬರುವ ಸ್ವಭಾವ, ಆದರೆ ಒಪ್ಪೋ ನೆಪ್ಪೆ ಮನಸ್ಸು ಮಾಡಿದ ಮೇಲೆ ಕಗ್ಗಲ್ಲು. ಆಕೆಯಲ್ಲಿ ಕಪಟ ಇರಲೇ ಇಲ್ಲ. ಯಾರನ್ನಾದರೂ ಕಂಡರಾಗದಿದ್ದರೆ, ಮುಚ್ಚು ಮರೆ ಇಲ್ಲವೇ ಇಲ್ಲ. ಮರೆಮಾಚಲು ಯತ್ನ ಪಟ್ಟರೂ ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ತನ್ನ ಪ್ರಾಮಾಣಿಕತೆಯಿಂದ ಆಕೆಯಂತೆ ನನ್ನ ಮೇಲೆ ಪರಿಣಾಮ ಮಾಡಿದವರು ಬಹಳಿಲ್ಲ.

೨. ನಮ್ಮ ಮದುವೆ ಮತ್ತು ಆಮೇಲೆ

ನಮ್ಮ ಮದುವೆಯಾದ ಮೊದಲ ದಿನಗಳನ್ನು ಜ್ಞಾಪಿಸಿಕೊಂಡೆ. ಅನೇಕ ವಿಧದಲ್ಲಿ ಆಕೆಯ ಸಹಧರ್ಮಿಯಾಗಿರಬೇಕಾದ್ದು ನನ್ನ ಕರ್ತವ್ಯವಾಗಿದ್ದರೂ ಆ ಸಹವಾಸವನ್ನು ಆಕೆಗೆ ನಾನು ಕೊಡ ಲಿಲ್ಲ. ಆಕೆಯನ್ನು ಕಂಡರೆ ನನಗೆ ಅಪಾರವಾದ ಪ್ರೀತಿಯಿದ್ದರೂ ಅವಳನ್ನು ಮರೆತು ಸಹ ಬಿಟ್ಟಿದ್ದೆ. ಏಕೆಂದರೆ ನಾನು ಆಗ ಒಬ್ಬ ಮಂತ್ರ ಮುಗ್ಧನಂತೆ ಹಿಡಿದ ಕಾರ್ಯದಲ್ಲಿ ಸದಾಮಗ್ನನಾಗಿದ್ದೆ ; ನನ್ನ ಸುತ್ತಮುತ್ತಲಿನ ಜನರೆಲ್ಲ, ನಿಸ್ಸತ್ವ ಪ್ರೇತಗಳುಎಂದು ನನ್ನದೇ ಒಂದು ಕನಸಿನ ಲೋಕದಲ್ಲಿ ಇದ್ದೆ. ನನ್ನ ಶಕ್ತಿ ಮಾರಿ ಕೆಲಸಮಾಡುತ್ತಿದ್ದೆ, ಕೈಗೊಂಡ ಕೆಲಸದ ವಿಷಯವೊಂದೇ ಮನಸ್ಸಿನಲ್ಲಿ ತುಂಬಿ ತುಳುಕು ತಿತ್ತು. ನನ್ನ ಸಮಯವೆಲ್ಲ ಆ ಒಂದು ಕೆಲಸಕ್ಕೆ: ಬೇರೆ ಯಾವುದಕ್ಕೂ ಎಡೆಯಿಲ್ಲ.

ಆದರೂ ಆಕೆಯನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಲಂಗರಿಗೆ ಬರುವ ನಾವೆಯಂತೆ ಪದೇ ಪದೇ ಆಕೆಯ ಬಳಿ ಬರುತ್ತಿದ್ದೆ. ಮನೆ ಬಿಟ್ಟು ಬಹಳ ದಿನಗಳಾದರೆ, ಆಕೆಯ ಯೋಚನೆಯಿಂದ ತಲೆ ಸ್ವಲ್ಪ ತಂಪಾಗುತ್ತಿತ್ತು ; ಬೇಗ ಮನೆಗೆ ಹಿಂದಿರುಗುವ ಕುತೂಹಲ ಹೆಚ್ಚು ತ್ತಿತ್ತು. ನನ್ನ ಮನಸ್ಸಿಗೆ ಸಮಾಧಾನ ಕೊಟ್ಟು ನನಗೆ ಶಕ್ತಿದಾಯಕಳಾಗಿ ನನ್ನ ಮನಸ್ಸು ಮತ್ತು ದೇಹಕ್ಕೆ ಹೊಸ ಜೀವಕಳೆಯನ್ನು ಕೊಡಲು ಆಕೆ ಇಲ್ಲದಿದ್ದರೆ ನಾನು ಏನುತಾನೆ ಮಾಡಲು ಸಾಧ್ಯವಿತ್ತು ?

ಆಕೆ ಕೊಟ್ಟು ದನ್ನೆಲ್ಲ ನಾನು ಸ್ವೀಕರಿಸಿದ್ದೇನೆ. ಅದಕ್ಕೆ ಪ್ರತಿಯಾಗಿ ಈ ಆರಂಭದ ದಿನಗಳಲ್ಲಿ ನಾನು ಕೊಟ್ಟು ದೇನು ? ಕರ್ತವ್ಯ ಭ್ರಷ್ಟನಾದೆನೆಂದು ಎದ್ದು ತೋರುತ್ತದೆ. ಪ್ರಾಯಶಃ ಆ ದಿನಗಳ ಸ್ಮರಣೆಯು ಆಕೆಯ ಮನಸ್ಸಿನಲ್ಲಿ ಬೇರೂರಿತು. ತನ್ನ ಸ್ವಭಾವಸಹಜ ಆತ್ಮಗೌರವ, ಮತ್ತು ತೀಕ್ಷಬುದ್ದಿ ಯಿಂದ ನನ್ನ ಸಹಾಯವನ್ನು ಆಕೆಯು ಬಯಸಲಿಲ್ಲ. ಆ ಸಹಾಯ ಕೊಡಲು ಉಳಿದವರಿಗಿಂತ ನಾನೇ ಶಕ್ತನಾಗಿದ್ದರೂ ಆಕೆ ಮಾತ್ರ ಕೇಳಲಿಲ್ಲ. ರಾಷ್ಟ್ರೀಯ ಹೋರಾಟದಲ್ಲಿ ತನ್ನ ದೇ ಒಂದು ವಿಶಿಷ್ಟ ಪಾತ್ರ ವಹಿಸಬೇಕೆಂದು ಆಕೆಯ ಇಚ್ಛೆ ಇತ್ತು; ಆದರೆ ತನ್ನ ಗಂಡನ ಛಾಯೆ ಯಾಗಿ ಹಿಂಬಾಲಕಳಾಗಿ ಅಲ್ಲ. ತನ್ನ ಆತ್ಮಕ್ಕೆ ಮತ್ತು ಪ್ರಪಂಚಕ್ಕೆ ತನ್ನ ಸಾರ್ಥಕತೆ ತೋರಲೆಂದು. ಪ್ರಪಂಚದಲ್ಲಿ ಇದಕ್ಕಿಂತ ಹೆಚ್ಚು ಇಷ್ಟವಾದದ್ದು ನನಗೆ ಬೇರೆ ಯಾವುದೂ ಇರಲಿಲ್ಲ. ಆದರೆ ಆಕೆಯ ಅಂತರಂಗವನ್ನು ಅರಿತುಕೊಳ್ಳಲು ನನಗೆ ಬಿಡುವೇ ಇರಲಿಲ್ಲ. ಆಕೆಯ ಉತ್ಕಟೇಚ್ಛೆಗೆ, ಅನ್ವೇಷಣೆಗೆ ನಾನು ಕುರುಡನಾದೆ. ಸೆರೆಮನೆಯಲ್ಲಿ ಕಳೆದ ದಿನಗಳೇ ಹೆಚ್ಚು. ನಾನು ಆಕೆಯಿಂದ ದೂರವಾಗುತ್ತಿದ್ದೆ, ಇಲ್ಲವಾದರೆ ಆಕೆ ಕಾಹಿಲೆ ಬೀಳುತ್ತಿದ್ದಳು. ರವೀಂದ್ರರ ನಾಟಕದಲ್ಲಿನ ಚಿತ್ರಾಳ೦ತೆ 'ನಾನು ಚಿತ್ರಾ, ಪೂಜಿಸಲು ದೇವತೆಯಲ್ಲ. ಅಸಡ್ಡೆ ಯಿಂದ ಹುಳು ವಿನಂತೆ ತಳ್ಳಿ ಹಾಕಲು ದಯಾಭಿಕ್ಷೆ ಬೇಡುವ ವ್ಯಕ್ತಿಯೂ ಅಲ್ಲ. ನಿನ್ನ ಸಾಹಸದ ಅಪಾರ ಕಾರ್ಯಗಳ ಜೊತೆಯಲ್ಲಿರಲು ನನಗೂ ಅವಕಾಶ ಕೊಟ್ಟರೆ, ನಿನ್ನ ಜೀವನದ ಮಹತ್ಕಾರಗಳಲ್ಲಿ ಸಮಭಾಗಿಯಾಗಲು