ಪುಟ:ಭಾರತ ದರ್ಶನ.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦೬

ಭಾರತ ದರ್ಶನ

ಸೈನ್ಯ ಅಧಿಕಾರಿವರ್ಗ ಎಲ್ಲ ಭಾರತದ ಆಕ್ರಮಣಕ್ಕಾಗಿ ಮತ್ತು ಭಾರತೀಯರ ಸ್ವಾತಂತ್ರಸಾಧನೆಯ ಪ್ರಯತ್ನ ಹತ್ತಿಕ್ಕುವುದಕ್ಕಾಗಿ ರಚಿಸಿದ್ದು. ಅಷ್ಟು ಯೋಗ್ಯತೆ ಅದಕ್ಕಿತ್ತು ನಿಜ. ಆದರೆ ಪ್ರಬಲ ದಯಾಶೂನ್ಯಶತ್ರುವಿನೊಡನೆ ಆಧುನಿಕ ರೀತಿ ಯುದ್ಧ ಮಾಡುವುದು ಬೇರೆ ವಿಷಯ. ಅದು ಅವರಿಗೆ ಬಹಳ ಕಷ್ಟವಾಯಿತು. ಅವರಿಗೆ ಆ ಮನೋಧಾರ್ಡ್ಯವಿರಲಿಲ್ಲ. ಅಲ್ಲದೆ ಅವರ ಶಕ್ತಿ ಎಲ್ಲ ಭಾರತೀಯನ ರಾಷ್ಟ್ರೀಯ ಭಾವನೆ ತುಳಿಯುವುದರಲ್ಲೇ ವಿನಿಯೋಗವಾಗಿತ್ತು. ಈ ಹೊಸ ಸಮಸ್ಯೆಗಳನ್ನು ಎದುರಿಸಲಾಗದೆ ಬರ್ಮ ಮತ್ತೆ ಮಲಯ ಸರಕಾರಗಳು ನಿರ್ನಾಮವಾದ ಮೇಲಾದರೂ ಅವರಿಗೆ ಜ್ಞಾನೋದಯವಾಗಬೇಕಾಗಿತ್ತು. ಆದರೂ ಅವರು ಯಾವ ಪಾಠವನ್ನೂ ಕಲಿಯಲಿಲ್ಲ. ಭಾರತದ ಸಿವಿಲ್ ಸರ್ವಿಸ್‌ ಅಧಿಕಾರಿವರ್ಗದಂತೆ ಬರ್ಮದಲ್ಲೂ ಒಂದು ಅಧಿಕಾರಿವರ್ಗವಿತ್ತು. ಅದು ಎಷ್ಟು ಹುಳುಕು ನಾರುತ್ತಿತ್ತು. ಎಂಬುದನ್ನು ಬರ್ಮ ಸಿದ್ಧ ಮಾಡಿಕೊಟ್ಟಿತು. ಆದರೂ ಭಾರತದಲ್ಲಿ ಯಾವ ವ್ಯತ್ಯಾಸವೂ ಆಗದೆ ವೈಸರಾಯ್ ಮತ್ತು ಆತನ ಅಧಿಕಾರಿವರ್ಗ ಮೊದಲಿನಂತೆಯೇ ಆಡಳಿತ ಮುಂದುವರಿಸಿದರು. ಬರ್ಮದಿಂದ ಕಾಲುಕಿತ್ತ ಉನ್ನತ ಅಧಿಕಾರಿಗಳೂ ಅವರ ಜೊತೆಗೆ ಸೇರಿಕೊಂಡರು. ಸಿಮುಲಾದಲ್ಲಿ ಇನ್ನೊಬ್ಬ “ಎಕ್ಸೆಲೆನ್ಸಿ” ಮನೆಮಾಡಿದನು. ಪಲಾಯನಮಾಡಿದ ಯೂರೋಪಿನ ಸರಕಾರಗಳಿಗೆ ಲಂಡನ್ ನಗರ ನೆರಳು ಕೊಟ್ಟಂತೆ ಬ್ರಿಟಿಷ್ ಅಧೀನ ಸರಕಾರಗಳ ಅಧಿಕಾರಿಗಳಿಗೆ ಆಶ್ರಯ ಕೊಡುವ ಗೌರವ ನಮಗೂ ದೊರೆಯಿತು. ಭಾರತದ ಬ್ರಿಟಿಷ್ ಅಧಿಕಾರ ನಗರದ ವ್ಯೂಹದಲ್ಲಿ ಔತನ ಕೊಟ್ಟಂತೆ ಅವರಿಗೆ ಸ್ಥಾನ ದೊರೆಯಿತು.

ರಂಗಸ್ಥಳದ ಛಾಯಾ ಚಿತ್ರಗಳಂತೆ ಈ ಉನ್ನತ ಅಧಿಕಾರಿಗಳು ತಮ್ಮ ಸಾಮ್ರಾಜ್ಯ ವೈಭವದ ಆಡಂಬರ, ರಾಜಸಭಾ ಮಯ್ಯಾದೆಗಳು, ದರ್ಬಾರುಗಳು, ಬಿರುದು ಬಾವಲಿಗಳ ವಿನಿಯೋಗ ಸಮಾರಂಭಗಳು, ಕವಾಯಿತುಗಳು, ಔತಣಗಳು, ಸಂಜೆಯ ವೇಷಭೂಷಣಗಳು, ಭಾಷಣ ವೈಖರಿಗಳು ಇವುಗಳಿಂದ ನಮ್ಮನ್ನು ಬೆರಗುಗೊಳಿಸಲು ಯತ್ನಿಸಿ ಮೊದಲಿನಂತೆಯೇ ಮುಂದುವರಿದರು. ಹೊಸ ದೆಹಲಿಯ ವೈಸರಾಯನ ಅರಮನೆಯೇ ಈ ಅಧಿಕಾರ ಸೂಚನೆಗೆ ಮುಖ್ಯ ದೇಗುಲ, ವೈಸರಾಯನೇ ಮುಖ್ಯ ಪೂಜಾರಿ, ಇದರಂತೆ ಸಣ್ಣ ಪುಟ್ಟ ದೇಗುಲಗಳೂ ಪೂಜಾರಿಗಳೂ ಅನೇಕ ಇದ್ದರು. ಈ ಸಾಮ್ರಾಜ್ಯ ವೈಭವದ ಆಡಂಬರ ಮತ್ತು ಮರ್ಯಾದೆಗಳೆಲ್ಲ ಜನರ ಮನ ಒಲಿಸಲೆಂದು. ಭಾರತೀಯರಲ್ಲಿ ಈ ಸಭಾ ಮರ್ಯಾದೆ ಮತ್ತು ಆಡಂಬರಗಳು ಮೊದಲಿನಿಂದ ಸಾಂಪ್ರದಾಯಕ ಇದ್ದುದರಿಂದ ಆರಂಭದಲ್ಲಿ ಅದಕ್ಕೆ ಮನ ಸೋತರು. ಆದರೆ ಹೊರಭಾವನೆ ಬೆಳೆದು ಅವುಗಳಿಗೆ ಯಾವ ಬೆಲೆಯೂ ಇಲ್ಲದಂತಾಗಿ ಹಾಸ್ಯಾಸ್ಪದವಾದವು. ಭಾರತೀಯರು ಎಮ್ಮೆಗಳಂತೆ ಬಹು ನಿಧಾನಿಗಳು, ಅವಸರ, ನೂಕು ನುಗ್ಗಲು ಅವರಿಗೆ ಬೇಕಿಲ್ಲ ಎಂಬ ಪ್ರತೀತಿ ಇದ್ದರೂ ಈಗ ಅವರೂ ತಮ್ಮ ಕೆಲಸದಲ್ಲಿ ಒಂದು ವೇಗವನ್ನೂ ಶಕ್ತಿಯನ್ನೂ ಪಡೆದಿದ್ದರು. ಹಿಡಿದ ಕೆಲಸ ಪೂರೈಸಬೇಕೆಂಬ ಆಸೆ ತುಂಬ ಬಲಗೊಂಡಿತ್ತು. ಕಾಂಗ್ರೆಸ್ ಪ್ರಾಂತ ಸರಕಾರಗಳ ಲೋಪದೋಷ ಏನೇ ಇರಲಿ, ಹಳೆಯ ಕಂದಾಚಾರ ಪದ್ಧತಿಗಳನ್ನೆಲ್ಲ ಕಿತ್ತೊಗೆದು ಕಷ್ಟ ಪಟ್ಟು ಸತತ ದುಡಿದು ಫಲಸಾಧಿಸಬೇಕೆಂಬ ಕಾತರತೆ ಬಲವಾಗಿತ್ತು. ದೇಶಕ್ಕೆ ಇಷ್ಟು ದೊಡ್ಡ ಗಂಡಾಂತರ ಮತ್ತು ವಿಷಮಪರಿಸ್ಥಿತಿ ಒದಗಿದರೂ ಇಂಡಿಯಾ ಸರಕಾರ ಮತ್ತು ಅದರ ಅಧಿಕಾರಿಗಳ ನಿಧಾನ ಮತ್ತು ಕಾರ್ಯ ಶೂನ್ಯತೆ ಕಂಡು ರಕ್ತ ಕುದಿಯ ತೊಡಗಿತು. ಹೇಗೋ ಇಷ್ಟರಲ್ಲಿ ಭಾರತಕ್ಕೆ ಅಮೆರಿಕನರ ಪ್ರವೇಶವಾಯಿತು. ಅವರಿಗೆ ಎಲ್ಲದರಲ್ಲೂ ಆತುರ; ಕೆಲಸ ಆದರೆ ಸರಿ. ಇಂಡಿಯ ಸರಕಾರದ ಆಡಳಿತ ವೈಖರಿ, ಬಿನ್ನಾಣ ಯಾವುದೂ ಅವರಿಗೆ ತಿಳಿಯದು; ಅದನ್ನು ಕಲಿಯುವುದೂ ಅವರಿಗೆ ಬೇಕಿರಲಿಲ್ಲ. ಈ ನಿಧಾನ ಸಹಿಸಲಾರದೆ, ಅಡಚಣೆ, ಅಧಿಕಾರ ದರ್ಪದ ರೀತಿ ನೀತಿ ಕಿತ್ತೊಗೊದು, ಹೊಸ ದೆಹಲಿಯ ಜೀವನ ರೀತಿಯನ್ನು ಸಹ ಕಲಕಿದರು. ಯಾವ ಕೆಲಸಕ್ಕೆ ಯಾವ ಉಡುಪು ಧರಿಸಬೇಕೆಂಬ ನಿಯಮ ಸಹ ಇಲ್ಲದೆ ಅನೇಕ ವೇಳೆ ಸಮಾಜ ರೂಢಿ ಮತ್ತು ಅಧಿಕಾರ ವಿಧಿನಿಯಮಗಳನ್ನೂ ಮುರಿದು ಹಾಕಿದರು. ಅವರ ಸಹಾಯ ಅತ್ಯಗತ್ಯವಿದ್ದರೂ ಇಲ್ಲಿನ ಉನ್ನತ ಅಧಿಕಾರಿಗಳಿಗೆ ಅವರ ರೀತಿ ನೀತಿ ಸರಿಬೀಳದೆ ಪರಸ್ಪರ ಬಾಂಧವ್ಯ ಸ್ವಲ್ಪ ಕಹಿಯಾಯಿತು. ಭಾರತೀಯರಿಗೆ ಅವರ