ಪುಟ:ಭಾರತ ದರ್ಶನ.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೪೧೧

ಅತ್ಯವಶ್ಯವಿತ್ತು. ಒಟ್ಟಿನಲ್ಲಿ ಭಾರತವು ಸ್ವಸಂಪೂರ್ಣವೂ, ಶಕ್ತಿ ಸಾಮರ್ಥ್ಯವುಳ್ಳದ್ದೂ ಆಗಿತ್ತು, ಆದರೆ ವಿಭಜನೆ ಎಂದರೆ ಒಂದೊಂದು ಭಾಗವೂ ಪ್ರತ್ಯೇಕವಾಗಿ ದುರ್ಬಲವೂ, ಪರಾವಲಂಬಿಯೂ ಆಗುತ್ತಿತ್ತು. ಈ ಎಲ್ಲ ಕಾರಣಗಳು ಹಿಂದಿನ ಕಾಲದಲ್ಲಿಯೇ ಯೋಗ್ಯವೂ ಸೂಕ್ತವೂ ಕಂಡಿದ್ದರೆ ಇಂದಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಅವುಗಳಿಗೆ ಇನ್ನೂ ಹೆಚ್ಚು ಬೆಲೆಯೂ, ಪ್ರಾಮುಖ್ಯತೆಯೂ ಇದೆ. ಎಲ್ಲಿ ನೋಡಿದರೂ ಸಣ್ಣ ರಾಜ್ಯಗಳು ತಮ್ಮ ಸ್ವತಂತ್ರ ಅಸ್ತಿತ್ವ ಕಳೆದುಕೊಂಡು ದೊಡ್ಡ ರಾಷ್ಟ್ರಗಳೊಡನೆ ಮಿಳಿತವಾಗುತ್ತಿವೆ. ಅಥವ ಅದರ ಆರ್ಥಿಕ ನೀತಿಗೆ ಹೊಂದಿಕೊಳ್ಳುತ್ತಿವೆ. ಅನೇಕ ಪ್ರಬಲ ರಾಜ್ಯಗಳು ಏಕೀಭವಿಸಿ ವಿಶಾಲ ಸಂಯುಕ್ತ ರಾಜ್ಯ ಸ್ಥಾಪನೆಗೆ ಅಥವ ರಾಜ್ಯ ಸಮೂಹ ಸ್ಥಾಪನೆಗೆ ಹೆಚ್ಚು ಬೆಂಬಲ ಕೊಡುತ್ತಿವೆ. ರಾಷ್ಟ್ರೀಯ ರಾಜ್ಯಗಳ ಬದಲು ಬಹು ರಾಷ್ಟ್ರೀಯ ರಾಜ್ಯಕ್ಕೂ, ಬಹುದೂರ ಕಂಡರೂ ಪ್ರಪಂಚಕ್ಕೆಲ್ಲ ಒಂದು ಸಂಯುಕ್ತ ರಾಜ್ಯಾಂಗ ಆಡಳಿತ ಅವಶ್ಯವೆಂಬ ಭಾವನೆಗೂ ಪ್ರೋತ್ಸಾಹ ದೊರೆಯುತ್ತಿದೆ. ಈ ಸಮಯದಲ್ಲಿ ಭಾರತದ ವಿಭಜನೆ ಎಂದರೆ ಆಧುನಿಕ ಇತಿಹಾಸ ಮತ್ತು ಆರ್ಥಿಕ ನೀತಿಗಳ ಪ್ರಗತಿಗೆ ವಿರೋಧ ನಡೆಯುವಂತೆ ಕಂಡಿತು; ಕಡುಮೂರ್ಖತನವೆಂದು ತೋರಿತು.

ಆದರೂ ಅನಿರ್ವಾಹ ಸಂದರ್ಭದ ಅವಸರದಲ್ಲಿ, ಎದುರಿನ ಯಾವುದೋ ವಿಪತ್ತಿನ ಒತ್ತಾಯದಿಂದ ಇಷ್ಟವಿಲ್ಲದ ಅನೇಕ ಕಾರಗಳಿಗೆ ಒಪ್ಪಬೇಕಾಗುತ್ತದೆ. ವಿಭಜನೆಯು ಸಕಾರಣವಾಗಿ ಮತ್ತು ಸಾಮಾನ್ಯವಾಗಿ ಸಾಧುವಲ್ಲದಿದ್ದರೂ ಅದರಿಂದ ತಪ್ಪಿಸಿಕೊಳ್ಳಲಾಗದ ಸಂದರ್ಭ ಒದಗಿದರೂ ಒದಗಬಹುದು. ಬ್ರಿಟಿಷ್ ಸರಕಾರದ ಪರ ಮುಂದಿಟ್ಟ ಸಲಹೆಗಳಲ್ಲಿ ಭಾರತ ವಿಭಜನೆಯ ಯಾವ ನಿರ್ದಿಷ್ಟ ನಿಖರ ಸೂಚನೆಯೂ ಇರಲಿಲ್ಲ ನಿಜ. ಆದರೆ ಪ್ರಾಂತಗಳನ್ನೂ ಸಂಸ್ಥಾನಗಳನ್ನೂ ಅಸಂಖ್ಯಾತ ಭಾಗಗಳಾಗಿ ವಿಭಜಿಸಲು ಅವಕಾಶ ಮಾಡಿಕೊಟ್ಟಿದ್ದರು. ಎಲ್ಲ ಪ್ರತಿಗಾಮಿ, ಪಾಳೆಗಾರಿಕೆ ಮತ್ತು ಸಮಾಜದ ಹಿಂದುಳಿದ ಪಂಗಡಗಳಿಗೆ ಒಂದು ಸದವಕಾಶ ದೊರೆಯಿತು. ಪ್ರತ್ಯೇಕ ಬಾಳಲು ಶಕ್ತಿಯೇ ಇಲ್ಲದ್ದರಿಂದ ಪ್ರಾಯಶಃ ಯಾರಿಗೂ ಅದು ನಿಜವಾಗಿ ಬೇಕಾಗಿರಲಿಲ್ಲ, ಆದರೆ ಬೇಕಾದಷ್ಟು ತೊಂದರೆ ಕೊಟ್ಟು, ಅಡ್ಡ ಬಂದು ಸ್ವತಂತ್ರ ಭಾರತದ ರಾಜ್ಯ ಸ್ಥಾಪನೆ ಮುಂದೆ ತಳ್ಳಲು ಅವಕಾಶವಿತ್ತು. ಇದಕ್ಕೆ ಬ್ರಿಟಿಷರ ಬೆಂಬಲ ದೊರೆತರೆ ಭಾರತದ ಸ್ವಾತಂತ್ರವು ದೀರ್ಘಕಾಲ ಅಸಾಧ್ಯವೆಂದು ಶತಸಿದ್ದವಿತ್ತು. ಈ ನೀತಿಯ ಅನುಭವದ ಕಹಿ ನಾವು ಬೇಕಾದಷ್ಟು ಸವಿದಿದ್ದೆವು. ಪ್ರತಿಯೊಂದು ಹೆಜ್ಜೆಗೂ ಅಂತಃಕಲಹ ಹುಟ್ಟಿಸುವುದೇ ಅದರ ಗುರಿಯಾಗಿತ್ತು. ಮುಂದೆಯೂ ಅವರು ಈ ನೀತಿ ಅನುಸರಿಸುವುದಿಲ್ಲವೆನ್ನುವುದಕ್ಕೂ, ಅನೇಕ ಮುಖ್ಯ ವಿಧಿಗಳನ್ನು ಮುರಿದು ಇದ್ದ ಕಾರಣ ಕೊಟ್ಟ ವಾಗ್ದಾನ ನಡೆಸಲು ಅಸಾಧ್ಯವೆಂದು ನೆಪ ಹೇಳುವುದಿಲ್ಲ ಎಂಬುದಕ್ಕೂ ಭರವಸೆ ಏನು? ನಿಜವಾಗಿ ನೋಡಿದರೆ ಈ ನೀತಿ ಮುಂದುವರಿಯುವ ಸಂಭವವೇ ಹೆಚ್ಚು ಇತ್ತು.

ಆದ್ದರಿಂದ ಆ ಸಲಹೆ ಒಪ್ಪುವುದೆಂದರೆ ಅದು ಎಷ್ಟೇ ಅನಪೇಕ್ಷಣೀಯವಿರಲಿ ಪಾಕಿಸ್ತಾನವೋ ಅಥವ ಬೇರೆ ಯಾವುದೋ ಒಂದು ನಿರ್ದಿಷ್ಟ ವಿಭಜನೆ ಮಾತ್ರ ಒಪ್ಪಿದಂತಲ್ಲ; ಆದರೆ ಇನ್ನೂ ಕೇಡು ಅಸಂಖ್ಯಾತ ವಿಭಜನೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತಿತ್ತು; ಭಾರತದ ಸ್ವಾತಂತ್ರಕ್ಕೆ ಸದಾ ವಿಪತ್ಕಾರಕವಿತ್ತು ಮತ್ತು ಯಾವ ಭಾವನೆ ಆ ಸಲಹೆಯಲ್ಲಿತ್ತೋ ಆ ಭರವಸೆಯ ಪೂರೈಕೆಗೆ ನಾವೇ ಅಡ್ಡಗೋಡೆ ಹಾಕಿದಂತೆ ಆಗುತ್ತಿತ್ತು.

ದೇಶೀಯ ಸಂಸ್ಥಾನಗಳ ಭವಿಷ್ಯ ನಿರ್ಧಾರವನ್ನು ಆ ಸಂಸ್ಥಾನಗಳ ಪ್ರಜೆಗಳ ಅಥವ ಅವರ ಪ್ರತಿ ನಿಧಿಗಳ ಕೈಗೆ ಕೊಡದೆ ನಿರಂಕುಶಾಧಿಕಾರದ ರಾಜರುಗಳ ಕೈಗೆ ಕೊಡಲಾಗಿತ್ತು. ಈ ನೀತಿ ಒಪ್ಪುವುದೆಂದರೆ ಮೇಲಿಂದ ಮೇಲೆ ದೀರ್ಘಕಾಲದಿಂದ ಕಾಂಗ್ರೆಸ್ ಸಾರಿದ ನೀತಿ ಕೈ ಬಿಟ್ಟು ಸಂಸ್ಥಾನಗಳ ಜನರಿಗೆ ದ್ರೋಹಮಾಡಿದಂತಾಗುತ್ತಿತ್ತು; ಮತ್ತು ದೀರ್ಘಕಾಲ ಅವರನ್ನು ನಿರಂಕುಶಾಧಿಕಾರದ ದಾಸ್ಯಕ್ಕೆ ತಳ್ಳಿದಂತೆ ಆಗುತ್ತಿತ್ತು. ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ರಾಜರುಗಳ ಸಹಕಾರ ಪಡೆಯಲು ಅವರೊಂದಿಗೆ ಸೌಮ್ಯ ರೀತಿಯಿಂದ ವ್ಯವಹರಿಸಲು ಸಿದ್ಧರಿದ್ದೆವು. ಮೂರನೆಯ ಮಾರ್ಜಾಲ ಶಕ್ತಿಯಂತಿದ್ದ ಬ್ರಿಟಿಷ್ ಅಧಿಕಾರವಿರದಿದ್ದರೆ ನಾವು ಖಂಡಿತ ಕೃತಕೃತ್ಯರಾಗುತ್ತಿದ್ದೆವು. ಆದರೆ ಬ್ರಿಟಿಷರು ಸಂಸ್ಥಾನಗಳ