ಪುಟ:ಭಾರತ ದರ್ಶನ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಭಾರತ ದರ್ಶನ

ಮಾನವ ಬಾಂಧವ್ಯದ ಸಮಸ್ಯೆ ಎಷ್ಟು ಪ್ರಧಾನವಾದದ್ದು ; ಆದರೂ ಅದನ್ನು ನಮ್ಮ ರಾಜಕೀಯ ಆರ್ಥಿಕ ಸಮಸ್ಯೆಗಳ ಗೊಂದಲದಲ್ಲಿ ಎಷ್ಟೋ ಬಾರಿ ಮರೆತಿದ್ದೇವೆ, ಇಂಡಿಯ, ಚೀನ ದೇಶಗಳ ಸನಾ ತನ ಮತ್ತು ಜ್ಞಾನಸಂಪನ್ನ ಸಂಸ್ಕೃತಿಗಳು ಇದನ್ನು ಮರೆತಿಲ್ಲ. ಅದರೂ ಸಾಮಾಜಿಕ ನಡತೆಯ ಕೆಲವು ಆದರ್ಶಗಳನ್ನು ಬೆಳೆಸಿದರು. ಅವುಗಳಲ್ಲಿ ಏನೇ ಲೋಪದೋಷಗಳಿರಲಿ ಅವು ವ್ಯಕ್ತಿಗೆ ಒಂದು ಸಮತೂಕಕೊಟ್ಟವು. ಅ ಸಮತೂಕವನ್ನು ಈಗ ನಾವು ಭಾರತದಲ್ಲಿ ಕಾಣುವುದಿಲ್ಲ. ಆದರೆ ಇತರ ವಿಷಯಗಳಲ್ಲಿ ಎಷ್ಟೋ ವಿಷಯಗಳಲ್ಲಿ ಮುಂದುವರಿದ ಪಾಶ್ಚಾತ್ಯ ದೇಶಗಳಲ್ಲಿ ಈ ಸಮತೂಕ ಎಲ್ಲಿದೆ ? ಅಥವ ಸಮ ತೂಕವಿದ್ದರೆ ಜಡಸ್ವಭಾವವಿರಲೇಬೇಕೆ ? ಕ್ರಮಾನುಗತ ಪರಿವರ್ತನೆ ಬೇಡವೆ ? ಒಂದ ಕ್ಕಾಗಿ ಇನ್ನೊಂದನ್ನು ಬಲಿಕೊಡಬೇಕೆ? ಸಮತೂಕ, ಆಂತರಿಕ ಮತ್ತು ಬಾಹ್ಯ ಪ್ರಗತಿಗಳ ಸಮಿಾಕರಣ, ಹಿಂದಿನವರ ವಿವೇಕ, ನೂತನ ಕಾಲದ ಶಕ್ತಿ ಮತ್ತು ವಿಜ್ಞಾನ ಇವುಗಳ ಸಮಿಾಕರಣ ಖಂಡಿತ ಸಾಧ್ಯವಿರಬೇಕು. ಪ್ರಪಂಚದ ಇತಿಹಾಸದಲ್ಲಿ ನಾವು ಈಗ ಯಾವ ಸ್ಥಿತಿಯಲ್ಲಿದ್ದೇವೆ ಎಂದರೆ ಅಂತಹ ಒಂದು ಸಮಿಾಕರಣ ಸಾಧ್ಯವಾಗದಿದ್ದರೆ ನಿಜವಾಗಿಯೂ ವಿನಾಶವೇ ಖಂಡಿತ, ಹೊಸದೂ ಹಳದೂ ಎರಡರ ನಾಶವೂ ಖಂಡಿತ.

೪. ೧೯೩೫ ರ ಕ್ರಿಸ್ಮ ಸ್

ಕಮಲಳ ದೇಹಸ್ಥಿತಿ ಉತ್ತಮವಾಗುವಂತೆ ಕಂಡಿತು, ಅಷ್ಟೇನು ಉತ್ತಮ ಕಾಣದಿದ್ದರೂ ಹಿಂದಿನ ಕೆಲವು ವಾರಗಳ ಸ್ಥಿತಿಯನ್ನು ಹೋಲಿಸಿದರೆ ಎಷ್ಟೋ ಹಗುರ ಕ೦ಡಿತು. ಗಂಡಾಂತರ ವನ್ನು ದಾಟ, ದೇಹಸ್ಥಿತಿ ಸ್ತಿಮಿತಕ್ಕೆ ಬಂದಿತ್ತು. ಅದೇ ಒಂದು ದೊಡ್ಡ ಲಾಭವಾಗಿತ್ತು. ಈ ರೀತಿ ಇನ್ನೊಂದು ತಿಂಗಳು ಕಳೆದಳು. ಇದೇಸಮಯದಲ್ಲಿ ನನ್ನ ಮಗಳು ಇಂದಿರಳೊಂದಿಗೆ ಸ್ವಲ್ಪ ಕಾಲ ಮಾತ್ರ ಇಂಗ್ಲೆಂಡಿಗೆ ಹೋದೆ. ಅಲ್ಲಿಗೆ ಹೋಗಿ ಎಂಟು ವರ್ಷಗಳಾಗಿದ್ದವು. ಸ್ನೇಹಿತರು ಬರಲೇಬೇಕೆಂದು ಒತ್ತಾಯ ಮಾಡುತ್ತಿದ್ದರು.

ಬೇಡನ್ ವೀಲರ್‌ಗೆ ಹಿಂದಿರುಗಿ ಪುನಃ ನನ್ನ ದಿನಚರಿಯನ್ನು ಆರಂಭಿಸಿದೆ. ಚಳಿಗಾಲ ಆರಂಭವಾಗಿ ಹಿಮಗಡ್ಡೆ ಭೂಮಿಯನ್ನೆಲ್ಲ ಮುಸುಕಿತ್ತು. ಕ್ರಿಸ್ಮಸ್ ಹತ್ತಿರ ಬಂದಂತೆ ಕಮಲಳ ದೇಹಸ್ಥಿತಿ ವಿಷಮಿಸುತ್ತಿರುವಂತೆ ಕಂಡಿತು. ಇನ್ನೊಂದು ಗಂಡಾಂತರ ಆರಂಭವಾಗಿತ್ತು. ಅವಳ ಬದುಕು ಸೂಕ್ಷವಾಗುತ್ತ ಬಂದು ಆ ೧೯೩೫ ನೆ ಇಸವಿಯ ಕೊನೆಯ ದಿನಗಳಲ್ಲಿ, ಅವಳು ಇನ್ನು ಬದುಕಿರುವುದು ಎಷ್ಟು ದಿನಗಳು ಗಂಟೆಗಳು ಎಂಬುದನ್ನ ರಿಯದೆ ಕಡು ಕಷ್ಟಗಳಲ್ಲಿ ಹಾದುಹೋಗುತ್ತಿದ್ದೆ. ಮಂಜು ಮುಚ್ಚಿದ ಆ ಮಾಗಿಯ ಪ್ರಶಾಂತ ದೃಶ್ಯವು ಕೊರೆಯುವ ಮರಣ ಮೌನದಂತೆ ಇತ್ತು. ನನ್ನ ಹಿಂದಿನ ಆಶಾಕಿರಣಗಳೆಲ್ಲ ನಂದಿಹೋದವು.

ಆದರೂ ಕಮಲ ಈ ಗಂಡಾಂತರದಲ್ಲಿ ಹೋರಾಡಿ ಅತ್ಯಾಶ್ಚರ್ಯ ಶಕ್ತಿ ದೋರಿ ಅದರಿಂದಲೂ ಪಾರಾದಳು. ಸ್ವಲ್ಪ ಉತ್ತಮಗೊಂಡು ಗೆಲುವಾದಳು ; ಬೇಡನ್ ವೀಲರ್ ಬೇಸರವಾಗಿತ್ತು, ಬೇರೆ ಕಡೆಗೆ ಹೋಗೋಣವೆಂದಳು. ಅದಕ್ಕೆ ಇನ್ನೊಂದು ಕಾರಣವೆಂದರೆ ಆ ವಿಶ್ರಾಂತಿ ಗೃಹದಲ್ಲಿ ಆದ ಇನ್ನೊಬ್ಬ ರೋಗಿಯ ಮರಣ, ಆತನು ಆಗಾಗ ಕಮಲಳಿಗೆ ಹೂಗಳನ್ನು ಕಳುಹಿಸುತ್ತಿದ್ದ ಮತ್ತು ಅವಳನ್ನು ಎರಡು ಮೂರು ಬಾರಿ ಬಂದು ನೋಡಿಕೊಂಡು ಹೋಗಿದ್ದ. ಆತ ಒಬ್ಬ ಐರಿಷ್ ಹುಡುಗ, ಕಮಲಳಿಗಿಂತ ಆತನ ಆರೋಗ್ಯ ಉತ್ತಮವಾಗಿತ್ತು. ಆಗಾಗ್ಗೆ ತಿರುಗಾಡಲು ಸಹ ಹೋಗುತ್ತಿದ್ದ. ಅವನ ಸಾವಿನ ಸುದ್ದಿ ಯನ್ನು ಕಮಲ ತಿಳಿಯದಿರಲೆಂದು ಪ್ರಯತ್ನ ಪಟ್ಟೆವು ; ಸಾಧ್ಯವಾಗಲಿಲ್ಲ. ಕಾಹಿಲೆಯಲ್ಲಿರುವವರಿಗೆ ಅದರಲ್ಲೂ ಆಸ್ಪತ್ರೆಗಳಲ್ಲಿರುವ ದುರದೃಷ್ಟಶಾಲಿಗಳಿಗೆ ತಿಳಿಯಬಾರದ ವಿಷಯವನ್ನು ಹೇಗೋ ತಿಳಿದುಕೊಳ್ಳುವ ಆರನೆಯದೊಂದು ಇಂದ್ರಿಯ ಶಕ್ತಿ ಇರುತ್ತದೆ.

ಜನವರಿ ತಿಂಗಳಲ್ಲಿ ಕೆಲವು ದಿವಸ ಪ್ಯಾರಿಸ್ ನಗರಕ್ಕೆ ಹೋಗಿ ಹಾಗೇ ಪುನಃ ಅಲ್ಪ ಕಾಲ ಮಾತ್ರ ಲಂಡನ್ನಿಗೆ ಹೋದೆ. ಪ್ರಪಂಚವು ಪುನಃ ನನ್ನ ನ್ನು ಸೆಳೆಯುತ್ತಿತ್ತು. ಏಪ್ರಿಲ್‌ನಲ್ಲಿ ಸೇರುವ