ಪುಟ:ಭಾರತ ದರ್ಶನ.djvu/೫೧

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೩೪
ಭಾರತ ದರ್ಶನ

ಮೂಲಕ ದಾರಿಯನ್ನು ಸೀಳಿಕೊಂಡು ಮುನ್ನುಗ್ಗಿ ಪರ್ವತ ಸಾಲುಗಳು ಮತ್ತು ದಟ್ಟವಾದ ವಕ್ರ ಶ್ರೇಣಿಗಳ ಮಧ್ಯೆ ಗಂಭೀರ ಗತಿ ಯಿಂದ ಹರಿದು ಬರುವ ಬ್ರಹ್ಮಪುತ್ರ; ಸುತ್ತಲೂ ಶ್ರೀ ಕೃಷ್ಣನ ನೃತ್ಯ ವಿನೋದ ಲೀಲೆಗಳ ಅಸಂಖ್ಯಾತ ಇತಿಹಾಸಗಳಿಗೆ ಸ್ಥಾನವಾಗಿರುವ ಯಮುನೆ ; ಈ ಎಲ್ಲಕ್ಕಿಂತ ಮಿಗಿಲಾಗಿ ಭಾರತ ಹೃದಯವನ್ನೆ ಸೆರೆಹಿಡಿದು, ಇತಿಹಾಸದ ಮುಂಬೆಳಗಿನಿಂದ ಅಸಂಖ್ಯಾತ ಜನಕೋಟಿಯನ್ನು ತನ್ನ ತೀರಗಳಿಗೆ ಸೆಳೆದಿರುವ ಗಂಗಾನದಿ, ಗಂಗಾಮಾತೆಯ ಕಥೆ ಮೂಲದಿಂದ ಸಮುದ್ರದವರೆಗೆ, ಹಿಂದಿನಿಂದ ಇಂದಿನವರೆಗೆ ಭಾರತದ ನಾಗರಿಕತೆ, ಸಂಸ್ಕೃತಿಗಳ ಕತೆ, ಚಕ್ರಾಧಿಪತ್ಯಗಳ ಉದಯಾಸ್ತಗಳ ಕತೆ, ಗರ್ವದಿಂದ ಮೆರೆಯುವ ಮಹಾ ನಗರಗಳ ಕತೆ, ಮಾನವನ ಮಹಾಸಾಹಸದ ಕತೆ, ಭಾರತೀಯ ದಾರ್ಶನಿಕರ ಮಾನಸಿಕ ಅನ್ವೇಷಣೆಯ ಕತೆ, ಜೀವನ ಸಂಪತ್ತು ಮತ್ತು ಸಫಲತೆ, ಅ೦ತೆಯೇ ನಿರಸನ ಮತ್ತು ಸಂನ್ಯಾಸದ ಕತೆ, ಏರಿಳಿತಗಳು ಮತ್ತು ಅಭಿವೃದ್ದಿ ಅವನತಿಗಳ ಕತೆ, ಜೀವ ಮತ್ತು ಸಾವಿನ ಕತೆ.

ಹಳೆಯ ಸ್ಮಾರಕಗಳು, ಪಾಳು ಬೀಡುಗಳು, ಪುರಾತನ ಶಿಲ್ಪ ಕೃತಿಗಳು, ಭಿತ್ತಿ ಚಿತ್ರಗಳುಅಜಂತ, ಎಲ್ಲೋರ, ಎಲಿಫಾಂಟಾ ಗುಹೆಗಳು ಮತ್ತು ಇತರ ಸ್ಥಳಗಳು ಇವುಗಳನ್ನೆಲ್ಲ ನೋಡಿದೆ. ಎಲ್ಲಿ ಪ್ರತಿಯೊಂದು ಕಲ್ಲ ಇಂಡಿಯದ ಇತಿಹಾಸದ ತನ್ನ ಕಥೆ ಹೇಳುತ್ತದೆಯೋ ಆ ಆಗ್ರ ಮತ್ತು ದೆಹಲಿಯ ಇತ್ತೀಚಿನ ಸುಂದರ ಸೌಧಗಳನ್ನೂ ನೋಡಿದೆ.

ನನ್ನ ಸ್ವಂತ ನಗರವಾದ ಅಲಹಾಬಾದ್ ಮತ್ತು ಹರಿದ್ವಾರದಲ್ಲಿ ಕುಂಭಮೇಳ ಮುಂತಾದ ಭಾಗೀರತಿ ಹಬ್ಬಗಳಿಗೆ ಹೋಗುತ್ತಿದ್ದೆ. ಸಾವಿರಾರು ವರ್ಷಗಳಿಂದ ಭಾರತದ ಮೂಲೆ ಮೂಲೆಗಳಿಂದ ಗಂಗಾನದಿಯಲ್ಲಿ ಸ್ನಾನಮಾಡಲು ನಮ್ಮ ಪೂರ್ವಿಕರು ಬರುತ್ತಿದ್ದಂತೆ ಈಗಲೂ ಲಕ್ಷಾಂತರ ಜನರು ಬಂದು ಸ್ನಾನಮಾಡುವುದನ್ನು ನೋಡಿದೆ. ಹದಿಮೂರು ನೂರು ವರ್ಷಗಳ ಹಿಂದೆ ಚೀನೀ ಯಾತ್ರಿ ಕರು ಮತ್ತು ಇತರರು ಬರೆದ ಈ ಜಾತ್ರೆಗಳ ವರ್ಣನೆಯನ್ನು ಜ್ಞಾಪಿಸಿಕೊಂಡೆ. ಆ ಕಾಲದಲ್ಲಿಯೇ ಈ ಜಾತ್ರೆಗಳಿಗೆ ಸನಾತನತೆ ಬಂದು ಅದರ ಮೂಲ ಕಾಲಗರ್ಭದಲ್ಲಿ ಅಡಗಿತ್ತು. ಈ ರೀತಿ ಯುಗ ಯುಗಗಳಿಂದ ಭಾರತದ ಈ ಮಹಾನದಿಯು ನಮ್ಮ ಜನರನ್ನು ಸೆಳೆದ ಅರಿಯಲಶಕ್ಯವಾದ ಗಾಢ ನಂಬಿಕೆಯಾದರೂ ಯಾವದು ಎಂದು ಆಶ್ಚರ ಪಟ್ಟೆ.

ಈ ನನ್ನ ಮನೋಭಾವನೆಯ ಹಿನ್ನೆಲೆಯಿಂದ ಕೈಗೊಂಡ ನನ್ನ ಪ್ರವಾಸಗಳಿಂದ, ಯಾತ್ರೆ ಗಳಿ೦ದ ಗತಕಾಲದ ಒಂದು ಸೂಕ್ಷ್ಮದರ್ಶನ ನನಗೆ ದೊರೆಯಿತು. ಕೇವಲ ಕಲ್ಪನೆಗೆ ಎಟುಕುವುದರ ಜೊತೆಗೆ ಭಾವನಾಪೂರಿತ ಮೆಚ್ಚುಗೆಯೂ ಸೇರಿತು ; ಕ್ರಮೇಣ ಇಂಡಿಯದ ಈ ನನ್ನ ಮನಸ್ಸಿನ ಕಲ್ಪನಾ ಚಿತ್ರಕ್ಕೆ ಒಂದು ವಾಸ್ತವತೆಯ ರೂಪು ಸಹ ದೊರೆಯಲು ಆರಂಭವಾಯಿತು. ನನ್ನ ಪೂರ್ವಿ ಕರ ನಾಡು ನಕ್ಕು ನಗಿಸಿ ಕಣ್ಣೀರಿಟ್ಟು, ಪ್ರೀತಿಸಿ, ದುಃಖಿಸುತ್ತಿದ್ದ ಜೀವಂತ ಜನರ ನಾಡಾಗಿ ಕಂಡಿತು. ಅವರಲ್ಲಿ ಕೆಲವರು ಜೀವನವನ್ನು ಅರಿತಂತೆ, ಅರ್ಥಮಾಡಿಕೊಂಡಂತೆ ಕಾಣುತ್ತಾರೆ. ತಮ್ಮ ಬುದ್ದಿ ಕುಶಲತೆಯಿಂದ ಸಾವಿರಾರು ವರ್ಷಗಳಿಂದ ನಡೆದು ಬಂದ ಈ ಸ್ಥಿರವಾದ ಸಂಸ್ಕೃತಿಗೆ ರೂಪು ಕೊಟ್ಟ ವರು. ಈ ಗತಕಾಲದ ನೂರಾರು ಚಿತ್ರಗಳು ಕಣ್ಣಿಗೆ ಕಟ್ಟಿದಂತೆ ಮನಸ್ಸನ್ನಾ ವರಿಸಿದವು. ಆ ಚಿತ್ರಗಳಿಗೆ ಸಂಬಂಧಿಸಿದ ಯಾವುದಾದರೂ ಸ್ಥಳಕ್ಕೆ ಹೋದೊಡನೆ ಆ ಚಿತ್ರಗಳೇ ನನ್ನ ಕಣ್ಣೆದುರು ನಿಲ್ಲುತ್ತಿದ್ದವು. ಕಾಶಿಯ ಬಳಿ ಸಾರನಾಥದಲ್ಲಿ ಭಗವಾನ್ ಬುದ್ಧ ನೇ ತನ್ನ ಮೊದಲ ಬೋಧೆಯನ್ನು ಹೇಳುತ್ತಿದ್ದಂತೆ ಕಾಣಿಸುತ್ತಿತ್ತು. ಆತನ ಗ್ರಂಥಸ್ಥ ವಾಣಿಯು ಎರಡು ಸಾವಿರದ ಐದುನೂರು ವರ್ಷ ಗಳನ್ನು ತಳ್ಳಿ ಬಂದ ದೂರದ ಒಂದು ಪ್ರತಿಧ್ವನಿಯ೦ತೆ ಕೇಳಿ ಬರುತ್ತಿತ್ತು. ಅಶೋಕನ ಶಿಲಾ ಸ೦ಭಗಳು ತಮ್ಮ ಶಾಸನಗಳ ಮೂಲಕ ತಮ್ಮ ಮಹಾವಾಣಿಯಲ್ಲಿ ನನ್ನೊಂದಿಗೆ ಮಾತನಾಡು ಇದ್ದುವು. ಚಕ್ರವರ್ತಿಯಾದಾಗ್ಯೂ ಎಲ್ಲ ರಾಜರಿಗಿಂತ ಚಕ್ರವರ್ತಿಗಳಿಗಿಂತ ದೊಡ್ಡವನಾದ ಮಹಾ ವ್ಯಕ್ತಿಯೆಂದು ಆತನನ್ನು ಸಾರುತ್ತಿದ್ದವು. ಫತೇಪುರ್ ಸಿಕ್ರಿಯಲ್ಲಿ ಬಾದಷಹ ಅಕ್ಷರನು ತನ್ನ ಚಕ್ರಾಧಿಪತ್ಯವನ್ನೇ ಮರೆತು, ಏನಾದರೂ ಹೊಸ ಅಂಶಗಳನ್ನು ತಿಳಿಯಬೇಕೆಂದು, ಮಾನವನ ಅನಂತ