ಪುಟ:ಭಾರತ ದರ್ಶನ.djvu/೫೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿನ್ನುಡಿ ೫೧೫ ಒಳಗೆ ಸಂಶಯ, ಪ್ರಶ್ನೆ, ನಿರಾಶೆ ಮತ್ತು ಕೋಪ ; ಮತ್ತು ಒಂದು ಬಗೆಯ ಅದುಮಿದ ಆವೇಗವಿತ್ತು. ನಮ್ಮ ಬಿಡುಗಡೆ ಮತ್ತು ಘಟನೆಗಳು ರೂಪುಗೊಂಡ ರೀತಿಯಲ್ಲಿ ಸನ್ನಿವೇಶವೇ ಪರಿವರ್ತನೆಯಾಯಿತು. ಮೇಲಿನ ಪ್ರಶಾಂತ ವಾತಾವರಣ ಕದಡಿ ಭಯಂಕರ ಅಲೆಗಳಿದ್ದವು. ದೇಶಾದ್ಯಂತ ಉತ್ಸಾಹದ ಅಲೆ ಎದ್ದಿತು. ಮೂರು ವರ್ಷದ ಕಟ್ಟು ಕಳಚಿ ಕಿತ್ತೊಗೆದು ಜನತೆಯು ತನ್ನ ಮೇಲೆ ಮುಸುಕಿದ್ದ ಚಿಪ್ಪು ಒಡೆದು ಹೊರಬಿದ್ದಿತು. ಅಷ್ಟು ದೊಡ್ಡ ಜನಸ್ತೋಮ, ಅವರ ಉತ್ಸಾಹದ ಉದ್ವೇಗ, ಸ್ವಾತಂತ್ರದ ಮಹದಾಸೆ ಹಿಂದೆ ನಾನೆಂದೂ ಕಂಡಿರಲಿಲ್ಲ. ಯುವಕರು, ಸ್ತ್ರೀಯರು, ಹುಡುಗರು, ಹುಡುಗಿಯರು, ಎಲ್ಲರೂ ಏನಾ ದರೂ ಮಾಡಬೇಕೆಂದು ಕೆಂಡಕಾರುತ್ತಿದ್ದರು ; ಏನು ಮಾಡಬೇಕೆಂದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ಯುದ್ಧ ಅಂತ್ಯಗೊಂಡು ಅಣುಬಾಂಬು ಹೊಸ ಯುಗದ ಸಂಕೇತವಾಯಿತು. ಈ ಬಾಂಬಿನ ಪ್ರಯೋಗದಿಂದ, ಅಧಿಕಾರದಾಸೆಯ ರಾಜಕೀಯದ ಡೊಂಕು ಮಾರ್ಗಗಳಿಂದ ಇನ್ನೂ ನಿರಾಸೆಯಾಯಿತು. ಹಳೆಯ ಸಾಮ್ರಾಜ್ಯಗಳು ಮುಂದುವರಿದೇ ಇದ್ದವು. ಇಂಡೋನೇಷ್ಯ ಮತ್ತು ಇಂಡೋಚೀನದ ಘಟನೆ ಗಳು ಇನ್ನೂ ಅಸಹ್ಯವಾದವು. ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ಆ ದೇಶಗಳ ಜನರ ಮೇಲೆ ಭಾರತೀಯ ಸೈನ್ಯ ಉಪಯೋಗಿಸಿ ನಮ್ಮ ಮನಸ್ಸಿನ ಖೇದವನ್ನೂ ಕಹಿಯನ್ನೂ ಇಮ್ಮಡಿಸಿದರು. ಇದರಿಂದ ನಮ್ಮ ಅಸಹಾಯಕತೆ ಇನ್ನೂ ಸ್ಪಷ್ಟವಾಯಿತು. ದೇಶದ ವಾತಾವರಣ ಬಿಸಿಯಾಗತೊಡಗಿತು. ಯುದ್ದ ವರ್ಷಗಳಲ್ಲಿ, ಮಲಯ ಮತ್ತು ಬರ್ಮದಲ್ಲಿ ಸಿದ್ಧಗೊಳಿಸಿದ ಭಾರತೀಯ ರಾಷ್ಟ್ರೀಯ ಸೈನ್ಯಪಡೆಯ ಕಥೆಯು ಏಕಾಏಕಿ ದೇಶದ ಮೂಲೆ ಮೂಲೆಗೂ ಹರಡಿ ಅದ್ಭುತ ಉತ್ಸಾಹ ಹುಟ್ಟಿಸಿತು. ಸೈನ್ಯ ಶಾಸನದ ಪ್ರಕಾರ ಕೆಲವು ಅಧಿಕಾರಿಗಳ ಮೇಲೆ ನಡೆಸಿದ ವಿಚಾರಣೆಯಿಂದ ಎಂದೂ ಯಾವ ಘಟನೆ ಯಿಂದಲೂ ಆಗದ ತಳಮಳವೆದ್ದು ಅದು ಇಡೀ ದೇಶವನ್ನೇ ಕಲಕಿತು. ಅವರೆಲ್ಲರೂ ದೇಶಕ್ಕೆ ಭಾರತದ ಸ್ವಾತಂತ್ರ ಯುದ್ಧದ ಸಂಕೇತವಾದರು. ಭಾರತದ ನಾನಾ ಧರ್ಮಗಳ ಹಿಂದೂ, ಮುಸ್ಲಿಂ, ಸೀಖ, ಕ್ರೈಸ್ತ ಧರ್ಮಗಳ ಜನರೆಲ್ಲರೂ ಆ ಸೈನ್ಯದಲ್ಲಿದ್ದುದರಿಂದ ಅವರು ನಾನಾ ಧರ್ಮಗಳ ಐಕ್ಯತೆಯ ಸಂತೇಕವಾದರು, ತಮ್ಮಲ್ಲಿನ ಕೋಮುವಾರು ಸಮಸ್ಯೆ ಅವರು ಬಗೆಹರಿಸಿದ್ದರು, ನಾವೇಕೆ ಬಗೆಹರಿಸಲು ಸಾದ್ಯವಿಲ್ಲ ? ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಾಳೆ ನಡೆಯಬೇಕು, ಈಗ ಎಲ್ಲರ ದೃಷ್ಟಿ ಈ ಚುನಾ ವಣೆಗಳ ಮೇಲೆ. ಆದರೆ ಚುನಾವಣೆಗಳೂ ಮುಗಿಯುತ್ತವೆ. ಆಮೇಲೆ ? ಮುಂದಿನ ವರ್ಷ ಭೀಕರ ಬಿರು ಗಾಳಿ, ಸಂಕಟ, ನೋವು ನಮಗೆ ಸಿದ್ದವೆಂದು ತೋರುತ್ತದೆ. ಸ್ವಾತಂತ್ರದ ತಳಹದಿಯ ಮೇಲಲ್ಲದೆ ಭಾರತದಲ್ಲಾಗಲಿ, ಬೇರೆಡೆಯಲ್ಲಾಗಲಿ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ.