ಪುಟ:ಭಾರತ ದರ್ಶನ.djvu/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಇದೇ ಒಂದು ಸಾಧನೆ, “ ಮನುಷ್ಯನ ಅತ್ಯಂತ ಪ್ರೇಮ ವಸ್ತುವೆಂದರೆ ಅವನ ಬಾಳು ; ಅವನಿಗಿರುವುದು ಒಂದೇ ಬಾಳು; ಆದ್ದರಿಂದ ಹೇಡಿತನ ಮತ್ತು ಅಲ್ಪತನದ ಅಪಮಾನ ಸೋಂಕದಂತೆ, ಮುಂದೆ ನಿಷ್ಕಾರಣ ಕೊರಗದಂತೆ, ಸಾಯುವಾಗ ಸಹ “ ನನ್ನ ಪೂರ್ಣ ಜೀವನ ಮತ್ತು ಶಕ್ತಿಗಳು ಪ್ರಪಂಚದ ಅತ್ಯುತ್ತಮ ಧೈಯಕ್ಕೆ ; ಮಾನವನ ಬಿಡುಗಡೆಗೆ ವಿನಿಯೋಗವಾಗಿದೆ ಎಂದು ಹೇಳುವಂತೆ ಬಾಳಬೇಕು ಎಂದು ಲೆನಿನ್ ಹೇಳಿದ್ದಾನೆ. ಹಿನ್ನು ಡಿ ಇಲಾಹಾಬಾದ್ : ಡಿಸೆಂಬರ್ ಇಪ್ಪತ್ತೊಂಬತ್ತು : ೧೯೪೫ ೧೯೪೫ ನೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಅಹಮದ್ ನಗರ ಕೋಟೆಯಲ್ಲಿ ಸೆರೆ ಇಟ್ಟಿದ್ದ ಕಾಂಗ್ರೆಸ್ ಕಾರಕಾರಿ ಸಮಿತಿಯ ಸದಸ್ಯರನ್ನೆಲ್ಲ ಚದುರಿಸಿ ಅವರವರ ಪ್ರಾಂತಗಳಿಗೆ ಕಳುಹಿಸಿದರು. ಸೆರೆಮನೆ ಮುಚ್ಚಿ ಪ್ರಾಯಶಃ ಆ ಕೋಟೆಯನ್ನು ಸೈನ್ಯಾಧಿಕಾರಿಗಳ ವಶ ಕೊಟ್ಟಿರಬಹುದು, ಶ್ರೀ ಗೋವಿಂದ ವಲ್ಲಭ ಪಂತ, ಆಚಾರ ನರೇಂದ್ರ ದೇವ ಮತ್ತು ನಾನು ಮೂರು ಜನರನ್ನು ಮಾರ್ಚ್ ೨೮ ನೆಯ ದಿನ ಅಹಮದ್‌ನಗರದಿಂದ ನೈನಿ ಸೆರೆಮನೆಗೆ ಕರೆತಂದರು. ನಮ್ಮ ಹಳೆಯ ಸಹೋದ್ಯೋಗಿಗಳು ಅನೇಕರಿದ್ದರು. ರಫಿ ಅಹಮದ್ ಕಿದ್ವಾಯ್ ಅಲ್ಲಿದ್ದವರಲ್ಲಿ ಒಬ್ಬರು. ೧೯೪೨ ರ ಆಗಸ್ಟ್ ತಿಂಗಳಲ್ಲಿ ನಮ್ಮ ಬಂಧನವಾದ ಮೇಲೆ ನಡೆದ ಘಟನೆಗಳ ನಿಜವಾದ ಸಮಾಚಾರ ನಮಗೆ ದೊರೆತದ್ದು ಅದೇ ಮೊದಲು ; ಏಕೆಂದರೆ ನೈನಿ ಯಲ್ಲಿದ್ದವರೆಲ್ಲ ಅನಂತರ ಬಂಧನವಾದವರು, ನೈನಿಯಿಂದ ಬರೇಲಿಯ ಬಳಿ ಇಜತ್ ನಗರ ಸೆರೆಮನೆಗೆ ನಾವು ಮೂರು ಜನರನ್ನು ಕರೆದೊಯ್ದರು. ಅನಾರೋಗ್ಯದ ನಿಮಿತ್ತ ಗೋವಿಂದ ವಲ್ಲಭ ಪಂತರ ಬಿಡುಗಡೆ ಯಾಯಿತು, ನರೇಂದ್ರ ದೇವ ಮತ್ತು ನಾನು ಈ ಸೆರೆಮನೆಯ ಒಂದು ಕೋಣೆಯಲ್ಲಿ ಎರಡು ತಿಂಗಳು ಇದ್ದೆವು. ಜೂನ್ ಆರಂಭದಲ್ಲಿ ನಮ್ಮಿಬ್ಬರನ್ನೂ ಹತ್ತು ವರ್ಷಗಳಿಗೆ ಮೊದಲೇ ನನಗೆ ಚಿರಪರಿಚಿತವಾಗಿದ್ದ ಅಲ್ಕೂರ ಬೆಟ್ಟದ ಸೆರೆಮನೆಗೆ ಕರೆದೊಯ್ದರು. ಜೂನ್ ಹದಿನೈದನೆಯ ದಿನ, ೧೯೪೨ ರಲ್ಲಿ ನಮ್ಮ ಬಂಧನವಾದ ೧,೦೪೧ ದಿನಗಳ ನಂತರ ನಮ್ಮಿಬ್ಬರ ಬಿಡುಗಡೆಯಾಯಿತು. ಈ ರೀತಿ ಅತಿ ದೀರ್ಘವಾದ ನನ್ನ ಒಂಭತ್ತನೆ ಸೆರೆಮನೆವಾಸ ಮುಕ್ತಾಯಗೊಂಡಿತು, ಅಲ್ಲಿಂದೀಚೆಗೆ ಆರುವರೆ ತಿಂಗಳು ಕಳೆದಿವೆ. ಬಹು ದೀರ್ಘ ಕಾಲದ ಸೆರೆಮನೆಯ ಏಕಾಂತವಾಸ ದಿಂದ ಜನಜಂಗುಳಿ, ಎಡೆಯಿಲ್ಲದ ಕೆಲಸ ಮತ್ತು ಬಿಡುವಿಲ್ಲದ ಪ್ರಯಾಣ ಆರಂಭವಾಯಿತು, ಮನೆಯಲ್ಲಿ ಒಂದು ರಾತ್ರಿ ಮಾತ್ರ ಕಳೆದು ಮುಂಬೈಗೆ ಕಾರಕಾರಿ ಸಭೆಗೆ ಹೊರಟೆ. ಅನಂತರ ವೈಸರಾಯ್ ಕರೆದ ಸಿಮಲಾ ಸಮ್ಮೇಳನ, ಹೊಸ ಪರಿವರ್ತಿತ ವಾತಾವರಣಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಯಿತು ; ಸುಲಭವಾಗಿ ಸೇರಿಕೊಳ್ಳಲು ಆಗಲಿಲ್ಲ. ಎಲ್ಲ ಪರಿಚಿತವಿದ್ದ, ಹಳೆಯ ಸ್ನೇಹಿತ ಸಹೋದ್ಯೋಗಿಗಳನ್ನು ನೋಡುವುದು ಒಳ್ಳೆಯದೆನಿಸಿದರೂ ನಾನು ಯಾರೋ ಹೊರಗಿನವನಂತೆ ಪರಕೀಯನಂತೆ ಕಂಡೆ. ಬೆಟ್ಟ ಸಾಲುಗಳು, ಹಿಮ ಆಚ್ಛಾದಿತ ಗಿರಿ ಶಿಖರಗಳ ಕಡೆ ನನ್ನ ಮನಸ್ಸು ಹೋಯಿತು, ಸಿಮಲಾ ಕೆಲಸ ಮುಗಿದೊಡನೆ ಕಾಶ್ಮೀರಕ್ಕೆ ಓಡಿದೆ. ಕಾಶ್ಮೀರ ಕಣಿವೆಯಲ್ಲಿ ಕಾಲ ಕಳೆಯದೆ ಎತ್ತರದ ಗಿರಿ ಕಂದರಗಳಿಗೆ ಕಾಲು ನಡಗೆ ಹೊರಟೆ. ಒಂದು ತಿಂಗಳು ಕಾಶ್ಮೀರದಲ್ಲಿ ಕಳೆದು ಜನಜಂಗುಳಿ ಮತ್ತು ನಿತ್ಯ ಜೀವನದ ಸಡಗರ ಮತ್ತು ಬೇಸರಗಳಿಗೆ ಹಿಂದುರುಗಿದೆ.

ಕಳೆದ ಮೂರು ವರ್ಷಗಳ ಘಟನೆಗಳ ಚಿತ್ರ ಬಂದು ಕ್ರಮೇಣ ನನ್ನ ಮನಸ್ಸಿನ ಮೇಲೆ ಮೂಡಿತು. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಘಟನೆಗಳು ನಡೆದವೆಂದು ಇತರರಂತೆ ನನಗೂ ತೋರಿತು. ನಮ್ಮ ಜನರು ಈ ಮೂರು ವರ್ಷಗಳ ಕಾಲ ನರಕ ಯಾತನೆ ಅನುಭವಿಸಿದ್ದರು ; ಯಾರ ಮುಖ ಕಂಡರೂ ಆ ನರಕಯಾತನೆಯ ಚಿಹ್ನೆ, ಭಾರತವೇ ಅದ್ಭುತ ಪರಿವರ್ತನೆ ಹೊಂದಿತ್ತು. ಮೇಲೆ ಶಾಂತಿಯುತವಿದ್ದರೂ