ಪುಟ:ಭಾರತ ದರ್ಶನ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ವೇಷಣೆ

೩೯

ಕುಶಲತೆಯನ್ನು ಕಂಡು ಬೆರಗಾಗಿದ್ದೇನೆ. ಇಂತಹ ಅಪಾರ ಶಕ್ತಿಯುಳ್ಳ ಜನಕ್ಕೆ ಸೋಲೆಂಬುದನ್ನು ನನಗೆ ಊಹಿಸಲು ಸಾಧ್ಯವಿಲ್ಲ.

ಚೀನೀಯರಲ್ಲಿ ಕಂಡ ಅದೇ ಬಗೆಯ ಅಪಾರ ಶಕ್ತಿಯನ್ನು ನಾನು ಕೆಲವುವೇಳೆ ಭಾರತೀಯರಲ್ಲ ಕಂಡಿದ್ದೇನೆ. ಎಲ್ಲ ಕಾಲದಲ್ಲೂ ಅಲ್ಲ. ಏನೇ ಆಗಲಿ ಸ್ಪಷ್ಟ ವಿವರಣೆ ಸಾಧ್ಯವಿಲ್ಲ. ಪ್ರಾಯಶಃ ನನ್ನ ಆಶೆಗಳು ನನ್ನ ಬಗೆ ಕದಡಬಹುದು. ಆದರೂ ಭಾರತೀಯರ ಮಧ್ಯೆ ನಾನು ಅಲೆದಾಡುತ್ತಿದ್ದಾಗ ಆ ಶಕ್ತಿಯನ್ನೇ ಹುಡುಕಲೆತ್ನಿ ಸುತ್ತಿದ್ದೆ. ಆಸಕ್ತಿ ಇದ್ದರೆ ಅವರಿಗೆಂದೂ ಚ್ಯುತಿಯಿಲ್ಲ. ಇಂದಲ್ಲ ನಾಳೆ ನೆಲೆ ಸೇರುತ್ತಾರೆ. ಆದರೆ ಆ ಶಕ್ತಿ ಮಾತ್ರ ಇಲ್ಲವಾದರೆ, ನಮ್ಮ ರಾಜಕೀಯ ಹೋರಾಟಗಳು, ಘೋಷಣೆಗಳು ಎಲ್ಲ ಬೂಟಾಟಿಕೆ; ಅವು ಬಹುದೂರ ನಮ್ಮನ್ನು ಕರೆದೊಯ್ಯಲಾರವು. ಹಿಂದಿನಂತೆ ಹೆಳವರಾಗಿ ತೆವಳುತ್ತ ಅಥವ ಸ್ವಲ್ಪ ವೇಗದಿಂದ ನಡೆಯುತ್ತ ನಮ್ಮ ಜನ ಮುಂದುವರೆಯುವಂಥ ರಾಜಕೀಯ ವ್ಯವಸ್ಥೆ ನನಗೆ ರುಚಿಸಲಿಲ್ಲ. ಅವರಲ್ಲಿ ಅಪಾರವಾದ ಶಕ್ತಿ ಮತ್ತು ಚೈತನ್ಯ ಸುಪ್ತವಾಗಿ ಅಡಗಿದೆ ಎಂದು ನಾನು ಭಾವಿಸಿದೆ. ಅವುಗಳ ಕಟ್ಟುಗಳನ್ನು ಕಿತ್ತೊಗೆದು ಅವರನ್ನು ಪುನಃ ಯುವಕ ರಂತೆ ವೀರ್ಯವಂತರನ್ನಾಗಿ ಮಾಡಲು ಬಯಸಿದೆ. ಭಾರತವು ತನ್ನ ಸ್ಥಾನವನ್ನ ರಿತುಕೊಂಡರೆ ಪ್ರಪಂಚದಲ್ಲಿ ಕೆಳ ಮಟ್ಟದ ಪಾತ್ರವಹಿಸಲು ಸಾಧ್ಯವಿಲ್ಲ, ವಹಿಸಿದರೆ ಪ್ರಮುಖ ಪಾತ್ರವನ್ನೇ ವಹಿಸ ಬೇಕು ಇಲ್ಲವಾದರೆ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಮಧ್ಯ ಮಾರ್ಗ ಯಾವುದೂ ನನಗೆ ಕಾಣಲಿಲ್ಲ. ಅಂತಹ ಮಧ್ಯಮಾರ್ಗ ಸಾಧ್ಯವೆಂದೂ ತೋರಲಿಲ್ಲ.

ಕಳೆದ ಇಪ್ಪತ್ತೈದು ವರ್ಷಗಳ ಭಾರತೀಯ ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರೊಂದಿನ ನಮ್ಮ ಎಲ್ಲ ಹೋರಾಟಗಳಲ್ಲಿ ನನ್ನ ಮತ್ತು ಇತರ ಅನೇಕರ ಮನಸ್ಸಿನ ಹಿನ್ನೆಲೆ ಎಂದರೆ ಭಾರತದ ಪುನರುಜ್ಜಿವನ. ಸ್ವಯಂ ಕಾರ್ಯಾಚರಣೆ, ಸ್ವಯಂಪ್ರೇರಿತ ಕಷ್ಟ ಸಹಿಷ್ಣುತೆ, ಆತ್ಮತ್ಯಾಗ, ಮತ್ತು ಕೆಡಕು, ತಪ್ಪು ಎಂದು ಮನಗಂಡುದಕ್ಕೆ ತಲೆ ಬಾಗದೆ ಅದರಿಂದ ಒದಗುವ ಎಲ್ಲ ಗಂಡಾಂತರ ಮತ್ತು ಆ ಪತ್ತುಗಳಿಗೆ ನಾವೇ ತಲೆ ಯೊಡ್ಡುವದರಿಂದ ಭಾರತೀಯರ ಆತ್ಮಗೌರವದ ಒಳಕಿಡಿಯನ್ನು ಉರುಬಿ ಗಾಢನಿದ್ರೆಯಿಂದ ಎಬ್ಬಿಸಬಹುದೆಂದು ಭಾವಿಸಿದ್ದೆ. ಬ್ರಿಟಿಷ್ ಸರಕಾರದೊಂದಿಗೆ ನಿತ್ಯವೂ ಹೋರಾಡುತ್ತಿದ್ದರೂ ನಮ್ಮ ದೃಷ್ಟಿ ಎಲ್ಲ ನಮ್ಮ ಜನತೆಯ ಮೇಲೆ ಎಷ್ಟರಮಟ್ಟಿಗೆ ಈ ಮೂಲ ಧೈಯಕ್ಕೆ ಸಹಾಯಕವೊ ಅಷ್ಟರಮಟ್ಟಿಗೆ ಮಾತ್ರ ರಾಜಕೀಯ ಲಾಭಕ್ಕೆ ಒಂದು ಬೆಲೆ, ಈ ಒಂದು ಮೂಲಧೈಯದಿಂದ, ಅನೇಕವೇಳೆ ನಾವು ರಾಜಕಾರಣಿಗಳಂತೆ ಸಂಕುಚಿತ ರಾಜಕೀಯ ದೃಷ್ಟಿಗೇ ಅಂಟಿಕೊಳ್ಳುತ್ತ ಇರಲಿಲ್ಲ. ಭಾರತೀಯ ಮತ್ತು ವಿದೇಶಿ ವಿಮರ್ಶಕರು ನಮ್ಮ ಈ ನಡತೆ ನೋಡಿ ಹುಚ್ಚರು ದುರಭಿಮಾನಿಗಳು ಎನ್ನುತ್ತಿದ್ದರು. ನಾವು ಹುಚ್ಚರು ಹೌದೋ ಅಲ್ಲವೊ ಮುಂದಿನ ಚರಿತ್ರ ಕಾರನೇ ಹೇಳಬೇಕು. ನಮ್ಮ ಆದರ್ಶ ಉನ್ನತವಾಗಿತ್ತು. ದೃಷ್ಟಿ ದೂರವಿತ್ತು. ಕೇವಲ ಕಾರ್ಯಸಾಧಕ ರಾಜಕಾರಣಿಗಳ ದೃಷ್ಟಿ ಯಲ್ಲಿ ನಾವು ಅನೇಕ ವೇಳೆ ಹುಚ್ಚರಂತೆ ವರ್ತಿಸಿರಬಹುದು. ಆದರೆ ನಮ್ಮ ಜನರ ರಾಜಕೀಯ ಆರ್ಥಿಕ ಮಟ್ಟವಲ್ಲದೆ ಮಾನಸಿಕ ಮತ್ತು ಆತ್ಮ ಗೌರವವನ್ನು ಸಹ ಉನ್ನತ ಮಟ್ಟಕ್ಕೇರಿಸಬೇಕೆಂಬ ಧೈಯವನ್ನು ಎಂದೂ ಮರೆಯಲಿಲ್ಲ. ನಮ್ಮ ಜನರ ಈ ಅಪಾರ ಶಕ್ತಿ ಯೊಂದನ್ನು ನಾವು ಭದ್ರ ತಳಹದಿಯ ಮೇಲೆ ಕಟ್ಟಿದರೆ ಉಳಿದೆಲ್ಲವೂ ಹಿಂದೆಯೇ ಬರುವುದೆಂದು ನಂಬಿದ್ದೆವು. ವಿದೇಶೀಯರ ಸೊಕ್ಕಿನ ಅಧಿಕಾರ ದರ್ಪಕ್ಕೆ ಒಳಗಾದ ಕೆಲವು ತಲೆಮಾರುಗಳ ನಾಚಿಕೆಗೇಡಿನ ದಾಸ್ಯ ಜೀವನ ಮತ್ತು ಹಲ್ಲುಗಿರಿಯುವ ಹೇಡಿತನಗಳನ್ನು ಪೂರ್ಣ ಅಳಿಸಬೇಕಾಗಿತ್ತು.

೪. ಭಾರತ ದರ್ಶನ

ಗ್ರಂಥಗಳು, ಪುರಾತನ ಸ್ಮಾರಕಗಳು, ಸಂಸ್ಕೃತಿಯ ಗತವೈಭವಗಳು ಸ್ವಲ್ಪ ಮಟ್ಟಿಗೆ ಭಾರತ ಹೃದಯವನ್ನರಿಯಲು ಸಹಾಯಕವಾದರೂ ಅದರಿಂದಲೇ ನನಗೆ ತೃಪ್ತಿಯಾಗಲಿಲ್ಲ. ಅವುಗಳ ಕತೆ ಎಲ್ಲವೂ ಗತಕಾಲದ್ದಾದ್ದರಿಂದ ಉತ್ತರ ಕೊಡುವ ಸಾಮಾರ್ಥವೂ ಅವುಗಳಿಗೆ ಇರಲಿಲ್ಲ ; ಗತ