ಪುಟ:ಭಾರತ ದರ್ಶನ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಭಾರತ ದರ್ಶನ

ಪಡೆಯಲು ಯತ್ನಿಸಿದೆ. ಹೀಗೆ ಮೂಡಿದ ಚಿತ್ರಗಳನ್ನೂ ಮತ್ತು ಎಂದೋ ಕಣ್ಮರೆಯಾದ ವ್ಯಕ್ತಿಗಳ ಮತ್ತು ಇಂದಿನ ಜೀವಂತ ವ್ಯಕ್ತಿಗಳ ಪರಿಚಯದಿಂದ ಅಲೆ ಅಲೆಯಾಗಿ ಎದ್ದ ಆಲೋಚನೆಗಳನ್ನೂ ಭಾವನೆಗಳನ್ನೂ ನನ್ನ ಮನಸ್ಸಿನಲ್ಲಿ ಶೇಖರಿಸಿದೆ. ಈ ಮಹಾ ಮೆರವಣಿಗೆಯಲ್ಲಿ ನಾನೂ ಸೇರ ಬಯಸಿ ಅದರ ತುತ್ತ ತುದಿಯಲ್ಲಿ ತೆರಳಲು ಪ್ರಯತ್ನ ಪಟ್ಟೆ. ಸ್ವಲ್ಪ ದೂರನಿಂತು, ಗುಡ್ಡದ ನೆತ್ತಿಯನ್ನೇರಿ ಕೆಳಗಿನ ಕಣಿವೆಯನ್ನು ನೋಡುತ್ತ ಇದ್ದೆ,

ಈ ಮಹಾಯಾತ್ರೆ ಯಾವ ಉದ್ದೇಶಕ್ಕಾಗಿ ? ಈ ಅನಂತ ಯಾತ್ರೆಯ ಗುರಿ ಯಾವುದು ? ಒಮ್ಮೊಮ್ಮೆ ಆಯಾಸವಾದಂತೆ ಭ್ರಮನಿರಸನವಾದಂತೆ ಭಾಸವಾಗುತ್ತಿತ್ತು. ಆ ಸಂದರ್ಭಗಳಲ್ಲಿ ಸ್ವಲ್ಪ ದೂರಹೋಗಿ ನಿರ್ಲಿಪ್ತ ಭಾವನೆ ಪಡೆಯಲು ಪ್ರಯತ್ನ ಮಾಡುತ್ತಲಿದ್ದೆ. ಕ್ರಮೇಣ ನನ್ನ ಮನಸ್ಸು ಆ ಭಾವನೆಗೆ ಹದವಾಯಿತು. ನನಗೊಂದು ಬೆಲೆ ಇದೆ ಎಂಬ ಭಾವನೆ ಹೋಯಿತು ; ಏನಾದರೂ ಆಗಲಿ ಎಂಬ ಭಾವನೆ ಮೂಡಿತು. ಅದೇ ರೀತಿ ಯೋಚಿಸಿ ಸ್ವಲ್ಪ ಕೃತಕೃತ್ಯನಾಗುತ್ತ ಇದ್ದರೂ ಬಹು ಮಟ್ಟಿಗೆ ಸಾಧ್ಯವಾಗಲಿಲ್ಲ. ಆ ಬಗೆಯ ನಿಜವಾದ ನಿರ್ಲಿಪ್ತಭಾವನೆ ಬೇರೂರಲು ನನ್ನ ಆ೦ತರದಲ್ಲಿ ಒಂದು ಜ್ವಾಲಾಮುಖಿಯೇ ಕುದಿಯುತ್ತಿರುವುದೇ ಕಾರಣ. ಇದ್ದಕ್ಕಿದ್ದ ಹಾಗೆ ನಾನು ಕಟ್ಟಿದ ಕೋಟೆ ಎಲ್ಲ ನುಚ್ಚು ನೂರಾಗಿ ನನ್ನ ನಿರ್ಲಿಪ್ತತೆ ಎಲ್ಲ ಮಣ್ಣು ಗೂಡುತ್ತದೆ.

ಆದರೆ ನನಗೆ ದೊರೆತ ಅಲ್ಪ ಜಯವೂ ನನಗೆ ಸಹಾಯಕವಾಯಿತು. ಪ್ರಚಂಡ ಕಾರ್ಯೋತ್ಸಾಹದ ಮಧ್ಯೆ, ದೂರ ನಿಂತು, ಆಗಂತುಕನಂತೆ ವಿಮರ್ಶೆ ಮಾಡುವ ಶಕ್ತಿ ಬಂದಿತು. ಒಂದೊಂದು ವೇಳೆ ಒಂದು ಗಂಟೆ ಎರಡು ಗಂಟೆ ನನ್ನ ಸಾಮಾನ್ಯ ಜೀವನದ ಜೂಜಾಟವನ್ನು ಮರೆತು ಧ್ಯಾನ ಮಗ್ನನಾಗಿ, ಅಲ್ಪ ಕಾಲವಾದರೂ ಬೇರೊಂದು ಜೀವನ ಅನುಭವಿಸುತ್ತಿದ್ದೆ. ಈ ರೀತಿ ಎರಡು ಜೀವನಗಳು ಒಂದಕ್ಕೊಂದು ಬೇರೆಯಾದರೂ ಹೆಣೆದುಕೊಂಡು ಮುಂದುವರಿದವು.

ಅಧ್ಯಾಯ ೪: ಭಾರತ ಸಂಶೋಧನೆ

೧. ಸಿಂಧೂ ಕಣಿವೆಯ ನಾಗರಿಕತೆ

ಪುರಾತನ ಭಾರತದ ಮೊಟ್ಟ ಮೊದಲ ಚಿತ್ರವೆಂದರೆ ಸಿಂಧೂ ದೇಶದ ಮೊಹೆನ್ಜೊದಾರೊ ಮತ್ತು ಪಶ್ಚಿಮ ಪಂಜಾಬಿನ ಹರಪ್ಪಗಳಲ್ಲಿ ಅಗೆದು ತೆಗೆದು ಇರುವ ಸಿಂಧೂ ಕಣಿವೆಯ ನಾಗರಿಕತೆಯ ಅದ್ಭುತ ಅವಶೇಷಗಳು. ಈ ಭೂಶೋಧನೆಗಳು ಇದುವರೆಗಿನ ಪೂರ್ವ ಇತಿಹಾಸದ ಕಲ್ಪನೆಯನ್ನೆ ತಲೆಕೆಳಗೆ ಮಾಡಿವೆ. ದುರದೃಷ್ಟದಿಂದ ಈ ಸ್ಥಳಗಳಲ್ಲಿ ಭೂಗತ ವಸ್ತುಗಳ ಸಂಶೋಧನೆ ಆರಂಭವಾದ ಕೆಲವು ವರ್ಷಗಳಲ್ಲಿಯೇ ಕೆಲಸ ನಿಲ್ಲಿಸಲಾಯಿತು. ಕಳೆದ ಹದಿಮೂರು ವರ್ಷಗಳಿಂದ ಏನೂ ಕೆಲಸ ನಡೆದಿಲ್ಲ. ಕೆಲಸ ನಿಲ್ಲಿಸಿದ್ದು ೧೯೩೦ ರ ನಂತರ ಒದಗಿದ ಆರ್ಥಿಕ ಮುಗ್ಗಟ್ಟಿನಿಂದ. ಸಾಮ್ರಾಜ್ಯದ ಅಟ್ಟಹಾಸ ಮತ್ತು ಠೀವಿಯ ಪ್ರದರ್ಶನಕ್ಕೆ ಯಾವ ಆರ್ಥಿಕ ಮುಗ್ಗ ಟೂ ಅಡ್ಡ ಬಾರದಿದ್ದರೂ ಇಂತಹ ಕೆಲಸಗಳಿಗೆ ಹಣವಿಲ್ಲ. ಎರಡನೆ ಪ್ರಪಂಚಯುದ್ಧ ಆರಂಭವಾದಂದಿನಿಂದ ಎಲ್ಲ ಕೆಲಸವೂ ನಿಂತುಹೋಯಿತು. ಅಗೆದು ಹೊರಕ್ಕೆ ತೆಗೆದಿರುವುದನ್ನು ಕಾಪಾಡುವ ಕಾರ್ಯ ಸಹ ನಿಲ್ಲಿಸಲಾಗಿದೆ. ೧೯೩೧ ರಲ್ಲಿ, ೧೯೩೬ ರಲ್ಲಿ ಈ ರೀತಿ ಎರಡು ಬಾರಿ ಮೊಹೆಂಜೊದಾರೊಗೆ ಹೋಗಿದ್ದೇನೆ. ಎರಡನೆಯ ಬಾರಿ ಹೋದಾಗ, ಮಳೆ ಧೂಳು, ಮರಳಿನ ಬಿಸಿಗಾಳಿ ಇವು ಅಗೆದು ತೆಗೆದ ಅನೇಕ ಕಟ್ಟಡಗಳಿಗೆ ಹಾನಿಮಾಡಿದ್ದವು. ಮರಳು ಮತ್ತು ಮಣ್ಣಿನ ಹೊದಿಕೆಯಲ್ಲಿ ಐದು ಸಾವಿರ ವರ್ಷಗಳಿಂದ ಜೋಪಾನವಾಗಿದ್ದ ಈ ಕಟ್ಟಡಗಳು ಗಾಳಿ ಮಳೆಗಳ ಹೊಡೆತಕ್ಕೆ ಸಿಕ್ಕಿದ್ದರೆ ಬಹುಬೇಗ ನಾಶವಾಗುತ್ತಿದ್ದವು. ಗತಕಾಲದ ಈ ಅಮೂಲ್ಯ ಅವಶೇಷಗಳನ್ನು ಕಾಪಾಡಲು ಯಾವ ಉಚಿತ ಕಾರ್ಯ ಕ್ರಮವನ್ನೂ ಕೈಗೊಂಡಿರಲಿಲ್ಲ. ಆ ಸ್ಥಳದ ಮೇಲ್ವಿಚಾರಣೆಗೆ ನೇಮಕವಾದ ಪ್ರಾಕ್ತನ ವಿಮರ್ಶನ ಶಾಖೆಯ ಅಧಿಕಾರಿ ಆ ಕಟ್ಟಡಗಳನ್ನು ಇದ್ದ