ಪುಟ:ಭಾರತ ದರ್ಶನ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೫೩

ಭಾಸವಾಗುತ್ತದೆ. ಅವುಗಳ ಸಂಖ್ಯೆ ಮತ್ತು ವೈಶಾಲ್ಯ ನೋಡಿದರೆ ಆ ವರ್ತಕರು ತುಂಬ ಐಶ್ವರ್ಯವಂತರಿ ದ್ದರು, ಅಭಿವೃದ್ಧಿ ಹೊಂದಿ ಒಳ್ಳೆಯ ಉಚ್ಛಾಯ ಸ್ಥಿತಿಯಲ್ಲಿದ್ದರು ಎಂದು ಸ್ಪಷ್ಟವಾಗುತ್ತದೆ. "ಚಿನ್ನದ ಒಡವೆಗಳು, ಬೆಳ್ಳಿಯ ಸಾಮಾನುಗಳು, ವಜ್ರ ವೈಡೂರ್ಯಾದಿ ರತ್ನ ಗಳು, ಮಣ್ಣಿನ ಸಾಮಾನುಗಳು, ತಾಮ್ರ ಮತ್ತು ಇತರ ಲೋಹದ ಆಯುಧಗಳು ಮತ್ತು ಇತರ ಸಲಕರಣೆಗಳು ಈ ಭೂಶೋಧನೆಯಲ್ಲಿ ಹೇರಳವಾಗಿ ದೊರೆತಿವೆ. ಉತ್ತಮ ರೀತಿಯಲ್ಲಿ ನಿರ್ಮಿತವಾದ ಬೀದಿಸಾಲುಗಳನ್ನೂ, ಬಿಡದೆ ಕ್ಲು ಪ್ರಕಾಲಕ್ಕೆ ಶುಚಿಗೊಳಿಸಲು ಅನುಕೂಲವಾಗುತ್ತಿದ್ದ ಉತ್ತಮ ಚರಂಡಿ ವ್ಯವಸ್ಥೆಯನ್ನೂ ನೋಡಿದರೆ ಅಲ್ಲಿನ ನಗರಾಡಳಿತದ ದಕ್ಷತೆ ವ್ಯಕ್ತ ಪಡುತ್ತದೆ, ಪ್ರವಾಹದ ಅನಾಹುತದಿಂದ ಪುನರ್ನಿ ರ್ಮಾಣದ ಆವಶ್ಯಕತೆಗಳಿಗನುಗುಣವಾಗಿ ವ್ಯವಸ್ಥಿತ ನಗರ ನಿರ್ಮಾಣ ಕ್ರಮಗಳನ್ನ ನುಸರಿಸಿ ಬೀದಿ ಸಾಲುಗಳನ್ನು , ಓಣಿಗಳನ್ನು ಬಿಟ್ಟು ಮನೆಗಳನ್ನು ಕಟ್ಟಲು ಒತ್ತಾಯಮಾಡುವ ಅಧಿಕಾರ ಆ ನಗರಾಡಳಿತಕ್ಕೆ ಇತ್ತು” ಎಂದು ಪ್ರೊಫೆಸರ್ ಚೈಲ್ಡ್ ಹೇಳಿದ್ದಾರೆ.

ಸಿಂಧು ನಾಗರಿಕತೆಗೂ ಇಂದಿನ ಭಾರತ ಕ್ಕೂ ಮಧ್ಯೆ ಎಷ್ಟೋ ಅಂತರವಿದೆ. ಎಷ್ಟೋ ಕಾಲ ಕಳೆದಿದೆ. ಅದರ ವಿಷಯ ನನಗೆ ಏನೂ ತಿಳಿಯದು. ಒಂದು ಕಾಲಕ್ಕೂ ಇನ್ನೊಂದು ಕಾಲಕ್ಕೂ ಮಧ್ಯೆ ಸೇರಿಸುವ ಕೊಂಡಿ ನಮಗೆ ಕಾಣುವುದಿಲ್ಲ. ಎಷ್ಟೋ ವಿದ್ಯಮಾನಗಳು ನಡೆದು, ಎಷ್ಟೋ ವ್ಯತ್ಯಾಸವಾಗಿದೆ. ಆದರೂ ಇಂದಿನ ಆಧುನಿಕ ಭಾರತಕ್ಕೂ, ಆರೇಳು ಸಾವಿರ ವರ್ಷಗಳ ಹಿಂದೆ ಸಿಂಧೂ ಕಣಿವೆಯ ನಾಗರಿಕತೆಯ ಆರ೦ಭದ ಪ್ರಾಚೀನತೆಗೂ ಮೂಲತಃ ಏನೋ ಒ೦ದು ಶಾಶ್ವತ ಸಂಬಂಧ, ಅವಿಚ್ಛಿನ್ನತೆ ಇದೆ ಎಂಬ ಭಾವನೆ ಉತ್ಪನ್ನವಾಗುತ್ತದೆ. ಈಗಲೂ ಜನರಲ್ಲಿ ಬಳಕೆಯಲ್ಲಿ ರುವ ಸಂಪ್ರದಾಯಗಳು, ಅಭ್ಯಾಸಗಳು, ಜನ ಸಾಮಾನ್ಯದಲ್ಲಿ ಕಾಣುವ ಪದ್ಧತಿಗಳು, ಕುಶಲಮಾರ್ಗ ಗಳು, ಉಡುಪುಗಳು, ಇವುಗಳನ್ನು ಹರಪ್ಪ ಮೊಹೆಂಜೊದಾರೊಗಳಲ್ಲಿ ಕಾಣುವದರೊಂದಿಗೆ ಹೋಲಿಸಿ ನೋಡಿದರೆ ಅವುಗಳಲ್ಲಿ ಕಾಣುವ ಸೌಮ್ಯ ಅತ್ಯಾಶ್ಚರ್ಯವನ್ನುಂಟುಮಾಡುತ್ತದೆ. ಪಶ್ಚಿಮ ಏಷ್ಯದ ಮೇಲೆ ಇದರ ಪರಿಣಾಮ ಅಗಾಧವಾಗಿತ್ತು.

ಇಂಡಿಯದ ಇತಿಹಾಸದ ಈ ಮುಂಬೆಳಗಿನಲ್ಲಿ ಇಂಡಿಯ ಅಳುವ ಮಗುವಾಗಿರಲಿಲ್ಲ. ಅನೇಕ ವಿಧದಲ್ಲಿ ಪ್ರಬುದ್ದ ಮಾನಕ್ಕೆ ಬಂದಿತ್ತು. ಕೈಗೆ ಎಟುಕದ ಅಸ್ಪಷ್ಟ ಅತಿ ಲೌಕಿಕ ಪ್ರಪಂಚದ ಕನಸು ಕಾಣುತ್ತ ಜೀವನದ ಹೆದ್ದಾರಿಯನ್ನು ತುಳಿಯುತ್ತಿತ್ತು. ಸುಂದರ ವಸ್ತುಗಳ ನಿರ್ಮಾಣ ಮಾತ್ರವಲ್ಲದೆ ಜನೋಪಯುಕ್ತವೂ ಆಧುನಿಕ ನಾಗರಿಕತೆಯ ಮುಖ್ಯ ಕುರುಹೂ ಆದ ಉತ್ತಮ ಸ್ನಾನ ಮಂದಿರಗಳನ್ನು, ಚರಂಡಿ ವ್ಯವಸ್ಥೆಯನ್ನು ನಿರ್ಮಾಣಮಾಡಿ ಕಲಾಭಿವೃದ್ಧಿಯಲ್ಲಿ, ಜೀವನ ಸೌಕರ್ಯದಲ್ಲಿ ಬಹಳ ಕಾರ್ಯ ಕುಶಲತೆಯನ್ನು ಪಡೆದು ಇತ್ತು.

೨. ಆರ್ಯರ ಪ್ರವೇಶ.

ಈ ಸಿಂಧೂ ನಾಗರಿಕತೆಯ ಜನ ಯಾರು ಮತ್ತು ಎಲ್ಲಿಂದ ಬಂದವರು ? ಇನ್ನೂ ನಮಗೆ ತಿಳಿಯದು. ಪ್ರಾಯಶಃ ಆ ಸಂಸ್ಕೃತಿ ಒಂದು ದೇಶೀಯ ಸಂಸ್ಕೃತಿಯೇ ಇದ್ದರೂ ಇರಬಹುದು ; ಪ್ರಾಯಶಃ ಇರಬೇಕು. ಅದರ ಬೇರುಗಳು, ಶಾಖೆಗಳು ದಕ್ಷಿಣ ಇಂಡಿಯದಲ್ಲಿ ಈಗಲೂ ದೊರೆಯ ಬಹುದು. ಕೆಲವು ವಿದ್ವಾಂಸರುಗಳು ದಕ್ಷಿಣ ಇಂಡಿಯದ ದ್ರಾವಿಡ ಜನರಿಗೂ ಅವರ ಸಂಸ್ಕೃತಿಗೂ ಸಿಂಧೂ ಸಂಸ್ಕೃತಿಗೂ ಬಹಳ ಹೋಲಿಕೆ ಇದೆ ಎನ್ನುತ್ತಾರೆ. ಅಥವ ಹೊರದೇಶದಿಂದ ಇಂಡಿಯಕ್ಕೆ ವಲಸೆ ಬಂದುದಾದರೂ ಪ್ರಾಯಶಃ ಮೊಹೆಂಜೊದಾರೊ ಕಾಲಕ್ಕೇನೆ ಬಂದು ಸಾವಿರಾರು ವರ್ಷಗಳಾಗಿರಬೇಕು, ಯಾವ ದೃಷ್ಟಿಯಿಂದ ನೋಡಿದರೂ ಅವರು ಇಂಡಿಯದಲ್ಲೇ ಹುಟ್ಟಿ ಬೆಳೆದವರು.

ಸಿಂಧೂ ಸಂಸ್ಕೃತಿ ಏನಾಯಿತು ಮತ್ತು ಅದು ಕೊನೆಗಂಡದ್ದು ಹೇಗೆ ? ಕೆಲವರು (ಗಾರ್ಡನ್ ಚೈಲ್ಡ್ ಅವರಲ್ಲಿ ಒಬ್ಬ) ಯಾವುದೋ ಒಂದು ಮಹಾ ಪ್ರಳಯದಿಂದ ನಾಶವಾಗಿರಬೇಕು ಎನ್ನುತ್ತಾರೆ. ಸಿಂಧೂ ನದಿಯ ಮಹಾ ಪ್ರವಾಹದಲ್ಲಿ ಅನೇಕ ವೇಳೆ ನಗರಗಳು ಹಳ್ಳಿಗಳು ಲೆಕ್ಕವಿಲ್ಲದಷ್ಟು ಮುಳುಗಿ