ಪುಟ:ಭಾರತ ದರ್ಶನ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೫೯

ಮನುಷ್ಯನಾಗಿದ್ದು ತನ್ನ ಮಾನಸಿಕ ಆಧ್ಯಾತ್ಮಿಕ ಸಾಧನೆಯಿಂದ ಮಹೋನ್ನತಿಯ ಶಿಖರವನ್ನು ಮುಟ್ಟಿ, ಇತರರನ್ನೂ ಮೇಲಕ್ಕೆತ್ತಲು ಮಾಡಿದ ಪ್ರಯತ್ನ ವೇ ಒಂದು ಮಹತ್ತಾರೆ. ಕೆಲವು ಧರ್ಮ ಸಂಸ್ಥಾಪಕರು ಅಸಾಧಾರಣ ವ್ಯಕ್ತಿಗಳು ಆದರೆ ಮಾನವ ವ್ಯಕ್ತಿಗಳಲ್ಲ ಎಂದೊಡನೆ ನನ್ನ ಗೌರವವೆಲ್ಲ ಮಾಯವಾಗುತ್ತದೆ. ನನ್ನ ಮನಸ್ಸಿನಮೇಲೆ ಪರಿಣಾಮ ಮಾಡಿರುವುದು ಮತ್ತು ನನಗೆ ಆಶಾದಾಯಕ ವಾಗಿ ಕಾಣುವುದು ಮಾನವನ ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ; ಸಂದೇಶ ಸಾರಲು ಬಂದದೂತನ ಕಾರ್ಯವಲ್ಲ.

ಪುರಾಣದ ಪ್ರಭಾವವೂ ನನ್ನ ಮೇಲೆ ಇದೇ ರೀತಿ, ಈ ಕತೆಗಳ ಘಟನೆಗಳನ್ನೆಲ್ಲ ಜನ ನಂಬು ತಿರುವುದು ಮೂಢತನ, ನಾಚಿಕೆಗೇಡು. ಆ ನಂಬಿಕೆ ಮಾಯವಾಯಿತೆಂದರೆ ಒಂದು ಹೊಸ ಬೆಳಕು, ನೂತನ ಸೌಂದರ್ಯ, ಭಾವನಾಸಂಪತ್ತಿನ ಅದ್ಭುತ ವಿಕಸನ, ಮಾನವ ಸಹಜ ನೀತಿ ಪಾಠಗಳು ಗೋಚರವಾಗುತ್ತವೆ. ಗ್ರೀಕ್ ದೇವರು ಮತ್ತು ದೇವತೆಗಳನ್ನು ಈಗ ಯಾರೂ ನಂಬುವುದಿಲ್ಲ. ಆದ್ದರಿಂದ ಯಾವ ಕಷ್ಟವೂ ಇಲ್ಲದೆ ಅವುಗಳನ್ನು ಮೆಚ್ಚಿ ನಮ್ಮ ಮನಶ್ಯಕ್ತಿಯನ್ನು ಬೆಳಸಬಹುದು. ಆದರೆ ಅವುಗಳನ್ನು ದೇವರೆಂದು ನಂಬಿದರೆ ಎಂತಹ ಹೊರೆ. ಆ ನಂಬಿಕೆಯ ಹೊರೆಯಲ್ಲಿಯೇ ಅವುಗಳ ಸೌಂದರ್ಯವೂ ಅಳಿಸಿಹೋಗುತ್ತದೆ. ನಮ್ಮ ಭಾರತೀಯ ಪುರಾಣಗಳು ಸಮೃದ್ಧಿ ಯಲ್ಲಿ, ವೈಶಾಲ್ಯದಲ್ಲಿ, ಸೌಂದಯದಲ್ಲಿ, ಅರ್ಥವಿವರಣೆಯಲ್ಲಿ ಇನ್ನೂ ಹೆಚ್ಚು ಪರಿಪುಷ್ಟ, ಈ ಉಜ್ವಲ ಕನಸು ಗಳಿಗೆ ಸುಂದರ ಭಾವನೆಗಳಿಗೆ ರೂಪುಗೊಟ್ಟ ಸ್ತ್ರೀ ಪುರುಷರು ಎಂತಹ ಮಹದ್ವಕ್ತಿಗಳು; ಈ ಯೋಚನೆಗಳನ್ನು, ಭಾವನೆಗಳನ್ನು ಯಾವ ಸುವರ್ಣಖನಿಯಿಂದ ಅಗೆದು ತೆಗೆದರು ಎಂದು ಆಶ್ಚರ್ಯ ಚಕಿತನಾಗಿದ್ದೇನೆ.

ಧರ್ಮಗ್ರಂಥಗಳು ಮಾನವ ಮನೋಜನ್ಯ ಎಂದಾಗ ಇವುಗಳನ್ನು ಬರೆದ ಕಾಲ, ಅವು ಬೆಳೆದ ಸನ್ನಿ ವೇಶ ಮತ್ತು ಮಾನಸಿಕ ದಶೆ, ಮತ್ತು ನಮಗೂ ಅವುಗಳಿಗೂ ಮಧ್ಯೆ ಇರುವ ಕಾಲ, ಭಾವನೆ, ಮತ್ತು ಅನುಭವಗಳ ಅ೦ತರಗಳನ್ನು ಜ್ಞಾಪಕದಲ್ಲಿಟ್ಟಿರಬೇಕಾಗುತ್ತೆ. ಮೇಲೆ ಹೆಪ್ಪುಗಟ್ಟಿರುವ ಮತಸಂಪ್ರದಾಯಗಳು, ವಿಧಿನಿರ್ಬಂಧಗಳ ಕಟ್ಟುಗಳನ್ನು ಒಡೆದು ಯಾವ ಸಾಮಾಜಿಕ ಹಿನ್ನೆಲೆಯಲ್ಲಿ ಬೆಳೆಯಿತು. ಎನ್ನುವುದನ್ನು ಜ್ಞಾಪಕದಲ್ಲಿಡ ಬೇಕಾಗುತ್ತದೆ. ಮಾನವ ಜೀವನದ ಅನೇಕ ಸಮಸ್ಯೆ ಗಳಲ್ಲಿ ಒಂದು ಅಚಲವಾದ ನಿತ್ಯತೆ, ಶಾಶ್ವತತೆಯ ಸ್ಪರ್ಶವಿದೆ ; ಆದ್ದರಿಂದ ಈ ಪುರಾತನ ಗ್ರಂಥಗಳಲ್ಲಿ ಒಂದು ಅಚಲವಾದ ಆಸಕ್ತಿ ಇದೆ. ಆದರೆ ಆ ಕಾಲಕ್ಕೆ ಸಂಬಂಧಿಸಿದ ಅನೇಕ ಇತರ ಸಮಸ್ಯೆಗಳೂ ಇವೆ ; ಈಗ ನಮಗೆ ಅವುಗಳಿಂದ ಯಾವ ಉಪಯೋಗವೂ ಇಲ್ಲ.

೪. ವೇದಗಳು

ಹಿಂದೂಗಳಲ್ಲಿ ಅನೇಕರು ವೇದಗಳನ್ನು ಅಪೌರುಷೇಯ ಎಂದು ನಂಬಿದ್ದಾರೆ. ಇದೊಂದು ನಮ್ಮ ದುರದೃಷ್ಟ, ಇದರಿಂದ ಅವುಗಳ ನಿಜವಾದ ಅರ್ಥವೇ ಮಾಯವಾಗುತ್ತದೆ. ಮನಸ್ಸಿನ ಆಲೋಚನೆಗಳ ಮೊದಲಘಟ್ಟದಲ್ಲಿ ಮಾನವನ ಮಾನಸಿಕ ಬೆಳವಣಿಗೆ ಹೇಗೆ ಆಯಿತು ಎಂಬುದೇ ಮರೆಯಾಗುತ್ತದೆ. ಎಂತಹ ಅದ್ಭುತ ಮನಸ್ಸು ಅದು ! ವಿದ್ = ತಿಳಿ ಎಂಬ ಧಾತುವಿನಿಂದ ಹೊರಟ ವೇದಗಳಲ್ಲಿರುವುದು ಆಗ ಮಾನವನಿಗೆ ನಿಲುಕಿದ್ದ ಜ್ಞಾನ ಭಂಡಾರ. ಅದರಲ್ಲಿ ಗೀತಗಳು, ಪ್ರಾರ್ಥನೆಗಳು, ಯಜ್ಞವಿಧಿ ಗಳು, ಯಂತ್ರ ತಂತ್ರಗಳು, ಪ್ರಕೃತಿ ಸೌಂದರ್ಯದ ಉಜ್ವಲ ಕವನಗಳೂ ಇನ್ನೂ ಅನೇಕ ವಿಷಯಗಳು ತುಂಬಿವೆ. ಅವುಗಳಲ್ಲಿ ವಿಗ್ರಹಾರಾಧನೆ ಎಲ್ಲಿಯೂ ಇಲ್ಲ, ದೇವರುಗಳಿಗೆ ಗುಡಿಗಳಿಲ್ಲ. ಅವುಗಳ ಆದ್ಯಂತ ಪಸರಿಸುವ ಜೀವನಶಕ್ತಿ, ಜೀವನಶ್ರದ್ದೆ ನಮ್ಮನ್ನು ಬೆರಗು ಮಾಡುತ್ತವೆ. ವೈದಿಕ ಆರ್ಯರು ಜೀವನೋತ್ಸಾಹಭರಿತರಾಗಿದ್ದುದರಿಂದ ಆತ್ಮದ ಕಡೆ ಅವರು ಹೆಚ್ಚು ಲಕ್ಷ ಕೊಡಲಿಲ್ಲ. ಸಾವಿನ ಉಡಿಯಲ್ಲಿ ಏನೋ ಒಂದು ಜನ್ಮಾಂತರ ಇದೆ ಎಂಬ ಅಸ್ಪಷ್ಟ ಭಾವನೆ ಮಾತ್ರ ಅವರಿಗಿತ್ತು.

ಕ್ರಮೇಣ ದೇವರ ಭಾವನೆ ಬೆಳೆಯುತ್ತದೆ. ಮೊದಲು ಅನುಗ್ರಹ ಶಕ್ತಿಯಿರುವ ಸ್ವರ್ಗಲೋಕದ