ಭಾರತೀಯ ಪುರಾಣಸಾಹಿತ್ಯವಿರುವುದು ಮಹಾಕಾವ್ಯಗಳಲ್ಲಿ ಮಾತ್ರವಲ್ಲ; ವೇದಕಾಲದಿಂದ ಇದೆ ; ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ರೂಪಭೇದಗಳಲ್ಲಿ ಬಂದಿದೆ ; ಕವಿಗಳು, ನಾಟಕಕರ್ತರು ಅವುಗಳ ಸುತ್ತಲೂ ತಮ್ಮ ಕತೆಗಳನ್ನು ಕಲ್ಪ ನಾಚಿತ್ರಗಳನ್ನು ಹೆಣೆದು ಪೂರ್ಣ ಕೃತಕೃತ್ಯರಾಗಿ ದಾರೆ. ಸುಂದರಿಯೊಬ್ಬಳ ಪಾದಸ್ಪರ್ಶದಿಂದ ಅಶೋಕವೃಕ ಹೂಬಿಡುವುದಂತೆ ! ಪ್ರೇಮಕ್ಕಧಿಪತಿ ಯಾದ ಕಾಮದೇವ ಮತ್ತು ಆತನ ಮಡದಿಯಾದ ರತಿದೇವಿ ಅವರ ಸ್ನೇಹಿತನಾದ ವಸಂತನೊಡನೆ ಆಡುವ ಆಟಗಳನ್ನು ನೋಡುತ್ತೇವೆ. ಕಾಮದೇವ ಬಹುಸಾಹಸದಿಂದ ತನ್ನ ಹೂಬಾಣವನ್ನು ಶಿವನಿಗೇ ಗುರಿಯಿಟ್ಟು ಹೊಡೆದು ಶಿವನ ಮೂರನೆಯ ಕಣ್ಣಿನ ಅಗ್ನಿ ಯಿಂದ ಸುಟ್ಟು ಬೂದಿಯಾಗು ತಾನೆ. ಆದರೆ ಅಶರೀರನಾಗಿ ಅನಂಗನಾಗಿ ಚಿರಂಜೀವಿಯಾಗಿದ್ದಾನೆ!
ಅನೇಕ ಪುರಾಣಗಳ, ಕತೆಗಳ ಕಥಾವಸ್ತು ಸಾಹಸ, ಸತ್ಯನಿಷ್ಠೆ, ಪ್ರತಿಜ್ಞ ಪಾಲನೆ; ಏನೆ ಬರಲಿ, ಮರಣವೇ ಒದಗಲಿ, ಮತ್ತು ಮರಣದ ಆಚೆಸಹ ಲೋಕ ಕಲ್ಯಾಣಕ್ಕಾಗಿ ದೃಢವಿಶ್ವಾಸ, ಧೈರ್ಯ, ಸತ್ಕಾರ ಮತ್ತು ತ್ಯಾಗ, ಕೆಲವುವೇಳೆ ಕಥೆ ಕೇವಲ ಕಾಲ್ಪನಿಕವಿರಬಹುದು ಅಥವ ಕಲ್ಪನೆ ಮತ್ತು ವಾಸ್ತವಿಕತೆಯ ಜೋಡಣೆಯಿರಬಹುದು. ಸಂಪ್ರದಾಯದ ನೆರಳಿನಲ್ಲಿ ಬೆಳೆದುಬಂದ ಯಾವುದೋ ಘಟನೆಯ ಒಂದು ಉತ್ಪಕೈಯಿರಬಹುದು. ಕಲ್ಪನೆ ಮತ್ತು ವಾಸ್ತವಿಕತೆ ಎರಡೂ ಅಭೇದ್ಯವಾಗಿ ಹೆಣೆದುಕೊಂಡು ಇತಿಹಾಸವೆಂಬ ಭಾವನೆಗೆ ಅವಕಾಶಕೊಟ್ಟಿದೆ. ಆದ್ದರಿಂದ ನಡೆದ ವಿಷಯ ನಡೆ ದಂತೆ ತಿಳಿಯದೆ ಇರಬಹುದು ; ಆದರೆ ಇನ್ನೊಂದು ವಿಧದಲ್ಲಿ ಅತಿ ಮುಖ್ಯವಾದ ಅಂಶವನ್ನು ತಿಳಿಸು ಇದೆ-ಏನು ನಡೆಯಿತೆಂದು ಜನ ಭಾವಿಸಿದ್ದರು, ತಮ್ಮ ಪೂರ್ವಿಕರು ಏನು ಸಾಹಸಕೃತ್ಯಗಳನ್ನು ಸಾಧಿಸಬಲ್ಲರೆಂದು ತಿಳಿದಿದ್ದರು, ಅವರನ್ನು ಪ್ರೇರಿಸಿದ ಆದರ್ಶಗಳೇನು ಎಂಬುದನ್ನು, ಆದ್ದರಿಂದ ವಾಸ್ತವಿಕವೋ, ಕಾಲ್ಪನಿಕವೊ ಅವರ ಜೀವನದಲ್ಲಿ ಒಂದು ಚೇತನ ವಸ್ತುವಾಯಿತು. ನಿತ್ಯ ಜೀವ ನದ ಹೋರಾಟ ಮತ್ತು ಆಸಕ್ಯತೆಯಿಂದ ಹೊರಗೆಳೆದು, ಗುರಿ ಬಹುದೂರವಿದ್ದರೂ ದಾರಿ ಕಡಿ ದಾಗಿದ್ದರೂ ಸದಾ ಸಾಹಸದ ಮಾರ್ಗ ಮತ್ತು ಆದರ್ಶಜೀವನದ ಕಡೆಗೆ ಮೇಲಿಂದ ಮೇಲಕ್ಕೊಯ್ಯುವ ಸಜೀವ ವಸ್ತುವಾಗಿತ್ತು.
ಪುರಾತನ ರೋಮನರ ಸಾಹಸದ ಕಥೆಗಳು, ಲುಕ್ರೀಷಿಯ ಮತ್ತು ಇತರರ ಕಥೆಗಳು ಕೃತಕ ಮತ್ತು ಸುಳ್ಳು ಕತೆಗಳು ಎಂದವರನ್ನು ಗೈಟಿ ಖಂಡಿಸುತ್ತ ಇದ್ದನಂತೆ. ' ನಿಜವಾಗಿಯೂ ಕೃತಕ ಮತ್ತು ಸುಳ್ಳಾದರೆ ಅದು ಅಸಂಬದ್ಧ ಮತ್ತು ನಿಷ್ಪಲವಾಗಿರಬೇಕೆ ವಿನಾ, ಎಂದಿಗೂ ಸುಂದರವೂ ಪ್ರೇರಕವೂ ಆಗಲಾರದು. ರೋಮನರು ಇಂತಹ ಕಲ್ಪನೆಗಳನ್ನು ಕಾಣುವಷ್ಟು ಮಹತ್ತನ್ನು ಪಡೆದು ಇದ್ದರೆ, ನಾವು ಅವುಗಳನ್ನು ನಂಬುವಷ್ಟಾದರೂ ದೊಡ್ಡ ಸ್ತಿಕೆ ತೋರೋಣ ಎಂದು ಹೇಳಿದನಂತೆ.
ಈ ರೀತಿ ಈ ಕಾಲ್ಪನಿಕ ಇತಿಹಾಸವು, ವಾಸ್ತವಿಕತೆ ಮತ್ತು ಕಲ್ಪನೆಯ ಬೆರಕೆಯು, ಕೆಲವು ವೇಳೆ ಬರೀ ಕಲ್ಪನೆಯ, ಸಾಂಕೇತಿಕ ಸತ್ಯವಾಯಿತು ಮತ್ತು ಅದು ಆ ಕಾಲದ ಜನರ ಮನಸ್ಸು, ಹೃದಯ ಮತ್ತು ಉದ್ದೇಶಗಳು ಏನಿದ್ದು ಎಂದು ತಿಳಿಸುತ್ತದೆ. ಮುಂದಿನ ಇತಿಹಾಸದ ಭಾವನೆ ಮತ್ತು ಕಾಠ್ಯದ ತಳಹದಿಯಾಯಿತೆಂಬ ದೃಷ್ಟಿಯಿಂದಲೂ ಅದರಲ್ಲಿ ಸತ್ಯಾಂಶವಿದೆ. ಪುರಾತನ ಭಾರತೀಯ ಇತಿಹಾಸದ ಕಲ್ಪನೆ ಎಲ್ಲವೂ ದರ್ಶನ ಮತ್ತು ಧರ್ಮದ ವಿಚಾರಸರಣಿಯ ಮತ್ತು ನೈತಿಕ ಭಾವನೆಯ ಪ್ರಭಾವಕ್ಕೊಳಗಾಗಿತ್ತು. ನಡೆದದ್ದು ನಡೆದಂತೆ ಚರಿತ್ರೆಯನ್ನು ಬರೆಯುವ ಅಥವ ಘಟನೆಗಳನ್ನು ತಿಳಿಸುವ ಪ್ರಯತ್ನಕ್ಕೆ ಯಾವ ಪ್ರಾಮುಖ್ಯತೆಯನ್ನು ಕೊಡಲಿಲ್ಲ. ಮಾನವೀಘಟನೆಗಳು ಮತ್ತು ಕಾರಗಳು ಮಾನವ ನಡತೆಯ ಮೇಲೆ ಯಾವ ಪರಿಣಾಮ ಮಾಡುತ್ತವೆ ಎಂಬುದೊಂದೇ ಅವರಿಗೆ ಮುಖ್ಯವಾಯಿತು. ಗ್ರೀಕರಂತೆ ಇವರೂ ವಿಶೇಷ ಭಾವನಾಜೀವಿಗಳು ; ಕಲಾಪ್ರಿಯರು, ಹಿಂದಿನ ಘಟನೆಗಳಿಂದ ಮುಂದಿನ ನಡತೆಗೆ ಒಂದು ನೀತಿ ಪಾಠ ಕಲಿಯುವುದೇ ಅವರಿಗೆ ಮುಖ್ಯವಾಗಿದ್ದು ದ ರಿಂದ ಹಿಂದಿನ ಘಟನೆಗಳನ್ನು ವಿವರಿಸುವಾಗಲೂ ಅದೇ ಕಲಾಪ್ರಿಯತೆ ಮತ್ತು ಕಲ್ಪನಾಲಹರಿಯನ್ನು ಕಾಣುತ್ತೇವೆ.