ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸನ್ನು ಸಾರ. ဂ •••••• ವಿದ್ದರೆ ಸ್ವಾತರ್ವೆದೆ, ಸೂರ್ಯಾಸ್ಯಮಯಕ್ಕಿಂತಲೂ ಮೊದಲು ಆರುಗ ಆಗೆಯನ್ನು ಬೇರ ತಿಥಿಯಸ್ಪರ್ತವಿದ್ದರೆ ಸಾಯಂ ವೇಧೆ. ಏಕಾದಶೀ ವ್ರತವಿಷಯವಾದ ವೇಧೆಯ ಮುಂದೆ ಹೇಳಲ್ಪಡುವುದು. ಕೆಲವು ತಿಥಿ ವಿಶೇಷಗಳಲ್ಲಿ ವೇಧಾ ಧಿಕ್ಕವುಂಟು, ಪಂಚಮಿಯ ಹನ್ನೆರಡುಗಳಿಗೆಗಳ ವರೆಗೂ ಇದ್ದರೆ ಪ್ರಶ್ನಿಯನ್ನು ವಿದ್ದವನ್ನಾಗಿ ಮಾಡುತ್ತದೆ. ದಶಮಿಯು ಹದಿನೈದುಗಳಿಗೆಗಳಿಂದ ಏಕಾದಶಿಯನ್ನು ವೇಧೆಯುಳ್ಳದ್ದನ್ನಾಗಿ ಮಾಡು ತದೆ. ಚತುರ್ದಶಿಯು ಹದಿನೆಂಟುಗಳಿಗೆಗಳಿಂದ ಪೌರ್ಣಮಾಸ್ಯೆಯನ್ನು ವೇಧಿಸುತ್ತದೆ. ವಿದ್ಧತಿಥಿಗಳು ಕೆಲವು ಕರಗಳಲ್ಲಿ ಗ್ರಾಹೃಗಳಾಗಿಯೂ, ಮತ್ತೆ ಕೆಲವು ಕರಗಳಲ್ಲಿ ತ್ಯಾಜ್ಯಗಳಾಗಿಯೂ ಆಗುವುವು. ಇದರಲ್ಲಿ ಸಂಪೂರ್ಣವಾಗಿಯೂ ಶುದ್ಧವಾಗಿಯೂ ಇರುವ ತಿಥಿಯು ಸಂದೇಹವಿ ಲ್ಲದಿರುವುದರಿಂದ ಪ್ರಾಯಶಃ ನಿರ್ಣಯವನ್ನು ಅಪೇಕ್ಷಿಸುವುದಿಲ್ಲವು. ನಿ ಷೇಧ ವಿಷಯದಲ್ಲಿ ಸಖಂಡತಿಥಿಯ ನಿರ್ಣಯಾರ್ಹವಾದದ್ದು, 'ನಿಷೇ ಧಸ್ತು ನಿವೃತ್ತಾತ್ಸಾ ಕಾಲ ಮಾತ್ರ ಮಪೇಕ್ಷತೆ?' ಎಂಬ ವಚನದಿಂದ ಅಷ್ಟಮಿ ಮೊದಲಾದವುಗಳಲ್ಲಿ ನಾರಿಕೇಳಾದಿ ಭಕ್ಷಣ ನಿಷೇಧವು ಆಯಾ ಕಾಲದಲ್ಲಿ ಮಾತ್ರ ವ್ಯಾಪಿಸಿರುವ ತಿಥಿಯನ್ನು ಅಪೇಕ್ಷಿಸುತ್ತದೆ. ವಿಹಿ ತವಾದ ವತಾದಿ ವಿಷಯದಲ್ಲಿ ನಿರ್ಣಯವೆಂತೆಂದರೆ-ಅದರಲ್ಲಿ ಯಾವ ಕ ರಕ್ಕೆ ಯಾವುದು ಕಾಲವೊ ಆ ಕಾಲದಲ್ಲಿ ವ್ಯಾಪ್ತಿಯುಳ್ಳ ತಿಥಿಯನ್ನು ಪರಿಗ್ರಹಿಸಬೇಕು. ಹೇಗೆಂದರೆ-ವಿನಾಯಕಾದಿ ವ್ರತದಲ್ಲಿ ಮಧ್ಯಾಹ್ನಾ ದಿ ಸಮಯದೊಳಗೆ ಪೂಜೆ ಮುಂತಾದ್ದನ್ನು ವಿಧಿಸಿರುವುದರಿಂದ ಮಧ್ಯಾ ಹ್ಯಾದಿ ವ್ಯಾಪ್ತಿಯುಳ್ಳ ತಿಥಿಯನ್ನು ಪರಿಗ್ರಹಿಸಬೇಕು. ಉಭಯ ದಿನ ಗಳಲ್ಲಿಯೂ ಕಮ್ಮ ಕಾಲದಲ್ಲಿ ವ್ಯಾಪ್ತಿಯಿದ್ದರೆ ಅಥವಾ ಇಲ್ಲದಿದ್ದರೆ ಅಥ ವಾ ಅದರ ಒಂದುಭಾಗದ ವ್ಯಾಪ್ತಿಯಿದ್ದರೂ ಯುಗ್ಯ ವಾಕ್ಯವನ್ನು ಅನು ಸರಿಸಿ ಪೂರ್ವನಿದ್ಧತಿಥಿಯನ್ನಾಗಲೀ, ಪರವಿದ್ಧ ತಿಥಿಯನ್ನಾಗಲೀ,ಗ್ರಹಿಸ ಬೇಕು. ಯುಗವಾಕ್ಯವೆಂದರೆ-'ಯುನ್ಮಾಗಿ ಯುಗ ಭೂತಾನಾಂ ಷಣ್ಮುನ್ನೋರ್ವಸುರಂಧಯೋಃ | ರುದ್ರೇಣ ದ್ವಾದಶೀಯುಕ್ತಾಚ ತುರ್ದಶ್ಯಾಚಪೂರ್ಣಿಮಾ || ಪತಿಪಮಾವಾಸ್ಟಾ ತಿದ್ದೋರುಗಂ ಮಹಾಫಲಂ | 22 ಯುಗ್ಯವೆಂದರೆ ದ್ವಿತೀಯೆ. ಅಗ್ನಿ--ತೃತೀಯೆ. ತದಿ