ಮಹಾರಾಣಾ ಪ್ರತಾಪಸಿಂಹ. ಪ್ರಥಮ ಪರಿಚ್ಛೇದ. ರಜಪೂತಸ್ತಾನ, ಪ್ರಾಕೃತಿಕ ಕಾರಣಗಳಿ೦ | ಸ್ವೀಕರಿಸವು ತದನುರೂಪಗುಣನಂಜನಗಳ | ಪ್ರಾಕೃತಿಕನುಕೂಲತೆಯಂ | ಸ್ವೀಕೃತರಾದರಸವಗುಣದಿಂ ರಜಪೂತರ್ || ೧ || ಹಿಂದುಸ್ತಾನದ ನಕಾಶದ ಕಡೆಗೆ ದೃಷ್ಟಿಯನ್ನು ಚೆಲ್ಲಿದರೆ, ಮಧ್ಯದಲ್ಲಿ ರಜ ಪೂತಸ್ತಾನವೆಂಬ ವಿಸ್ತಾರವಾದುದೊಂದು ಪ್ರದೇಶವು ಕಾಣಬರುವದು. ಇದರ ಉತ್ತರಕ್ಕೆ ಪಂಜಾಬ, ಪೂರ್ವಕ್ಕೆ ಮಧ್ಯಪ್ರಾಂತ, ದಕ್ಷಿಣಕ್ಕೆ ಮಧ್ಯಪ್ರಾಂತ ಮತ್ತು ಮುಂಬೈ ಇಲಾಖೆ, ಪಶ್ಚಿಮಕ್ಕೆ ಸಿಂಧಪ್ರಾಂತ, ಈ ಪ್ರದೇಶದಲ್ಲಿ ಮುಖ್ಯವಾಗಿ ಕ್ಷತ್ರಿಯ ಜಾತಿಯ ರಜಪೂತರು ವಾಸಿಸುತ್ತಿರುವರು. ಕಾರಣ ಇದಕ್ಕೆ ರಜಪೂತ ಸ್ನಾನ ಅಧವಾ ರಾಜಸ್ತಾನವೆಂದೆನ್ನುವರು. ರಜಪೂತಸ್ತಾನವು ಹಿಂದುಸ್ತಾನದ ಹೃದಯವಾಗಿದೆಯೆಂದು ಹೇಳ ಬಹುದು. ಮನುಷ್ಯಹೃದಯವು ಶರೀರಮಧ್ಯದಲ್ಲಿರುವಂತೆ, ಇದು ಬಹು ರಾಜ್ಯ ಗಳಿಂದ ಸುತ್ತುಗಟ್ಟಲ್ಪಟ್ಟದ್ದಾಗಿ, ಹಿಂದುಸ್ತಾನದ ಮಧ್ಯದಲ್ಲಿರುವದು. ಮನುಜನ ಹೃದಯವು ಅಸ್ಥಿಪಂಜರಗಳ ಒಳಭಾಗದಲ್ಲಿರುವಂತೆ, ಇದು ಪರ್ವತಾವಳಿ ಮತ್ತು ಮರುಭೂಮಿಗಳಲ್ಲಿದೆ. ಮಾನವೀಬಲವು ಹೃದಯದಲ್ಲಿರುವಂತೆ, ಭಾರತಭೂಮಿಯ ಮುಖ್ಯ ಶಕ್ತಿಯು ಒಂದುಕಾಲದಲ್ಲಿ ಇದರಲ್ಲಿತ್ತು. ಹೃದಯಬಲದಿಂದ ನರನು ಶ್ರೇಷ್ಠತ್ವವನ್ನು ಪಡೆಯುವಂತೆ, ಒಂದು ಸಮಯದಲ್ಲಿ ಇದರ ಮಹಾಶಕ್ತಿಯಿಂದ ಭಾರತವು ಬಹಳ ಗೌರವವನ್ನು ಹೊಂದಿತ್ತು.
ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮
ಗೋಚರ