ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಲ್ಲಿ ಇಷ್ಟ ದೈವವನ್ನು ತೊರವೆಯಧಿಪತಿ ' * ತೊರವೆಯರಾಯ ' ಎಂದು ವಿಶ್ಲೇಷಿಸಿ ಹೇಳಿದೆ. ಈ ವ್ಯತ್ಯಾಸಗಳು ಈ ಗ್ರಂಥಕರ್ತರು ಬೇರೆಬೇರೆಯೆಂದು ಊಹಿಸುವುದಕ್ಕೆ ಸ್ವಲ್ಪ ದಾರಿಯನ್ನು ಕೊಡುವಹಾಗಿದ್ದರೂ ಹರಿ, ನರಹರಿ, ಎಂಬುವು ಪಠ್ಯಾಯಪದ ಗಳಾದುದರಿಂದ ಈ ವ್ಯತ್ಯಾಸವೊಂದರಿಂದಲೇ ಅವರು ಭಿನ್ನ ಕತೃಗಳೆಂದು ಉಪಪಾದಿ ಸಲಾಗುವುದಿಲ್ಲ. ಮೈರಾವಣನ ಚರಿತ್ರೆಯಲ್ಲಿ ತನ್ನ ಬಿರುದನ್ನು ಹೇಳಿಕೊಳ್ಳದೆ ಇರುವುದರಿಂದ ಇದು ಆತನು ರಾಮಾಯಣವನ್ನು ರಚಿಸುವುದಕ್ಕೆ ಮೊದಲು ಬರೆದ ಗ್ರಂಥವಾಗಿ ಇರಬಹುದು. ತೊರವೆಯ ರಾಮಾಯಣವನ್ನು ಬರೆದ ಕವಿಯು ೧೬ ನೆಯ ಶತಮಾನದ ಆದಿಭಾಗದಲ್ಲಿದ್ದ ಕುಮಾರವ್ಯಾಸನನ್ನು ಸ್ಮರಿಸಿರುವುದರಿಂದ ೧೬ ನೆಯ ಶತಮಾ ನದ ಸುಮಾರು ಅಂತ್ಯಭಾಗದಲ್ಲಿ ಇದ್ದಿರಬಹುದು. -- -