ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಗರ್ಭ ೧. ಪೀಠಿಕಾ ಸಂಧಿಯಲ್ಲಿ ಕವಿಯು ಮೊದಲು ತ್ರಿಮೂರ್ತಿಗಳಿಗೆ ಪ್ರಾರ್ಥನೆಯನ್ನು ಮಾಡಿ, ಬಳಿಕ ಗಣಪತಿ, ಶಾರದೆಯರನ್ನು ಸ್ತುತಿಸಿ, ತರುವಾಯ ತನ್ನ ಗುರುವಾದ ವಿದ್ಯಾಶಂಕ ರೋಮಗುರುಗಳಿಗೆ ನಮಸ್ಕರಿಸಿ ಗ್ರಂಥಾರಂಭ ಮಾಡುವನು. ೨. ಎರಡನೆಯ ಸಂಧಿಯಲ್ಲಿ ಕಥಾರಂಭ-ರಾವಣನು ರಾಮನನ್ನು ಗೆಲ್ಲುವುದಕ್ಕೋಸ್ಕರ ಪಾತಾಳ ಲಂಕೆಗೆ ಹೋಗಿ ಮೈರಾವಣನ ಸಹಾಯವನ್ನು ಬೇಡುವನು. ೩. ಮೂರನೆಯ ಸಂಧಿಯಲ್ಲಿ ಮೈರಾವಣನು ರಾಮಲಕ್ಷ್ಮಣರನ್ನು ಅವರು ನಿದ್ರೆ ಮಾಡುತ್ತಿರುವಾಗ ಕದ್ದು ಪಾತಾಳಲಂಕೆಗೆ ಒಯ್ದು, ಕಂಕಣಾದೇವಿಯ ಗುಡಿಯಲ್ಲಿ ಸೆರೆಯಿಡುವನು. ಈ ಸಂಗತಿಯನ್ನು ಹನುಮಂತನು ವಿಭೀಷಣನಿಂದ ತಿಳಿದು ಪಾತಾಳಲಂಕೆಗೆ ಹೋಗುವನು. ೪. ನಾಲ್ಕನೆಯ ಸಂಧಿಯಲ್ಲಿ ಹನುಮಂತನು ರಣದಲ್ಲಿ ಮೈರಾವಣನನ್ನು ಕೊಂದು, ನೀಲಮೇಘನಿಗೆ ಪಟ್ಟಗಟ್ಟಿ, ರಾಮಲಕ್ಷ್ಮಣರನ್ನು ಬೆಳಗಾಗುವುದಕ್ಕೆ ಮುಂಚೆ ತಮ್ಮ ಪಾಳೆಯಕ್ಕೆ ಕರೆತರುವನು. - -