ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈರಾವಣನ ಕಾಳಗ ಹಸರವಿಕ್ಕುವ ರತ್ನ ಧಾನ್ಯ | ಪ್ರಸರವಳತೆಯ ಬೆಲೆಯ ನಿಶ್ಚಯ | ದೆಸೆವ ವೈಶ್ಯರ ಬೀದಿಯೊಳು ದಶವದನನೈ ತಂದ ||೨೭11 ಅಲಸದನು ದಿನ ಜಾತಿ ಮ೫ರ | ನೆಲೆಯಿದು ಸೇವೆಯನು ಮಾಡು | ತೊಲಿದು ಕೃಷಿ ಕಾರ್ಯಗಳಲ್ಲಿ ಸಂತುಷ್ಟ ಮನರಾಗಿ || ಹಲವರೊಳಗಾಲಸ್ಯ ಮಿಲ್ಲದೆ || ಬೆಳೆದು ಭೂಪರಿಗೀವ ಶೂದ್ರರ | ಹಲವು ಕೇರಿಯ ನೀಕ್ಷಿಸುತೆ ಬರುತಿರ್ದ ದಶಕಂಠ ||೨೮|| ಮಾವುತರ ಮಂಡಳಿಕ ಮನ್ನೆಯ | ರಾವ್ರತರ ರಥಿಕರರು ಧೀರರ || ಕೋವಿದರ ಸಾಮಂತ ಮಂತ್ರಿ ನಿಯೋಗ ಕರಣಿಕರ 11 ಹಾವಡಿಗರಾಕೇರಿ ನಟ್ಟುವ || ಕೇವಣಿಗ ಸರವಂತ ಮಾಯಾ | ಕೋವಿದರ ಬೀದಿಗಳ ನೋಡುತ ಒಂದ ದಶಕಂ ||೨೯| ಹೆಸರಿಸಿದ ಪಾಂಚಾಳ ಚಿಪ್ಪಿಗ || ಕುಶಲಕಾರ್ಯದ ಶಿಲ್ಪಿಕ ಮೃಗ | ವ್ಯಸನಿ ಮಲ್ಲರ ಕೊಲ್ಲಟಿಗರ ಸುಭಟ್ಟ ಮಾಗಧರ || ಅಸಗ ನಾವಿಕ ಬೇಡ ಶೈಲಿಗ || ಕಸದ ತೊಳೆವ ಕುಲಾಲ ಮುಚ್ಚಿಗ || ರೆಸೆವ ವೀಧಿಗಳೊಳಗೆ ಬರುತಿರ್ದನು ದಶಗ್ರೀವ ||೩೦|| ಉಲಿವ ಶಕುನಿಯ ಮಂಚ ಬೇಟವ | ಬಳೆಯುತಿಹ ಖಗವಿತತಿ ಹಕ್ಕಿಯ || ಗಳದುಲುಹು ಕೊಕ್ಕೋಕಶಾಸ್ತ್ರದ ಕಾಮಾಂಧಗಳ || ಕಲಿಸುತಿಹ ದೂತಿಯರ ಏಟಿಸಂ | ಕುಲದ ಸರಸವಿನೋದದಿರವಿನ | ನಿಳಯವೆನಿಸುವ ಸೂಳೆಗೇರಿಯ ನೋಡುತೈತಂದ ||೩೧|| 2