೧೫ ಮೈರಾವಣನ ಕಾಳೆಗ. ಅಗಣಿತದ ಕೊಲ್ಲಣಿಗೆ ಚಕ್ರಾ೦ | ಗಗಳ ಸಾಲಿನ ಸಂದಣಿಗಳಲಿ| ಹುಗುವ ರಾಜದ್ವಾರವನು ತಾ ಕಂಡು ಬೆಸಿಗಾದ [೫೪|| ಸುರಪರಿಗೆ ಹರಪ್ಪರಿಗೆ ಯಳಕಾ | ಪರಿಗೆ ಲಂಕಾಪುರಿಗೆ ವತ್ನಿಯ || ಪುರಿಗೆ ವರುಣನ ವರಿಗೆ ನಿರುತಿಯ ಪುರಿಗೆ ಯಮಪುರಿಗೆ || ಭರದೆ ವಾಯುವ ಪರಿಗೆ ಮೇಣಾ | ಸರಸಿಜೋದ್ಭವಪುರಿಗೆ ನೂರ್ಮಡಿ || ಪರಿಕಿಸಲು ಚೆಲುವಿನಲಿ ತಾನೆನೆ ರಂಜಿಸಿತು ನರಿ {೫೫|| ಇಂದು ಕಾಂತದ ಕೋಟೆ ರತುನಗೆ | ಳಿಂದಲಂದಂಬಡೆದ ಬಾಗಿಲ | ಮುಂದೆಸೆವ ವರಮಕರತೋರಣದಿಂದ ಪುರವೆಸೆಯೆ || ಹೊಂದಿಸಿದ ಬಲು ಲಾಳ ವಿಂಡಿಗೆ | ಸಂಧಿಸಿದ ಸುಗವಾಕ್ಷ ಬೀಗದ | ಬಂಧುರದ ಲಂಕಾಪುರದ ಬಲುಸೊಗವ ನೋಡಿದನು ||೫೬| ಮದಗಜದ ಶಾಲೆಗಳನಗ್ಗದ || ಕುದುರೆಗಳ ನವರತ್ತ ಮಯದ | ಭ್ಯುದಯ ಮಂದುರತತಿಯ ಕೊಲ್ಲಾರಿಗಳ ಲಾಯಗಳ | ಒದವಿದಗಣಿತ ಗೋಮೃಗಂಗಳ | ಸದನಶಾಲೆಯ ಜೇನಸಾಲೆಯ | ವಿದಳಧಾನ್ಯದ ಕಣಜಗಳವೀಕ್ಷಿಸುತ ನಡೆತಂದ ||೨೨|| ಹತ್ತಿಸಿದ ಮಣಿಹೋಮಮಂಟಪ | ದುತ್ತಮದ ರವಿಕಾಂತಿಯನು ಜಲತಿ | ಯುತ್ತಲಿರೆ ಮಜ್ಜನದ ಭೋಜನಶಾಲೆಯುಗ್ಯಾಣ | ಯುಕ್ತಜಿತ ಭಂಡಾರ ಬೊಕ್ಕಸ | ಮತ್ತೆಸೆವ ಕುಡಿನೀರ ಚೌಕಿಗೆ | ಯೊತ್ತಿನಲಿ ಫಲನಿಕರಕಜ್ಜಾಯಗಳ ಮನೆಯೆಸೆಯೆ ||೫೮||
ಪುಟ:ಮಹಿರಾವಣನ ಕಾಳಗ.djvu/೨೮
ಗೋಚರ