೧೭ | | ಮೈರಾವಣನ ಕಾಳೆಗೆ ಕರದೊಳೀಯುತ ಕ್ಷೇಮಕುಶಲವ || ನೊರೆಯ ಹೇಳಿಲು ರಾವಣನು ನಿಜ | ಹರುಷ ತುಟ್ಟಿಸಿದೆ ನೋಡಿದನಾಗ ಕೆಲಖಲನ ||೬೪|| ಎತ್ತ ನೋಡಿದೊಡ ಮಣಿಗಳು | ತೆತ್ತಿಸಿದ ಕುಂಡಲ ಕಿರೀಟದ | ಮುತ್ತಿನೆಕ್ಕಾವಳಿಯ ಕಂಕಣ ಬಾಹುಷರಗಳ || ರತ್ನಮುದ್ರಿಕೆ ಕಡೆಯ ಹೆಗಲೊಳು | ಹೊತ್ತ ಹಿರಿಯುಬ್ಬಣದ ದನುಜರ | ಮೊತ್ತ ಕೋಟಿಯ ನೋಡಿದನು ಖಳರಾಯ ಬಳಸಿನಲಿ ||೬೫|| ಅಳಿಗುರುಳ ಭೂಲತೆಯ ಕಂಗಳ | ಹೊಳಹುಗಳ ವರವದನ ಕಾಂತಿಯ | ಕಳಸಕುಚಗಳ ಕಂಬುಗಳ ನಳಿತೋಳ ತೆಳುವಸಿ ಸುನಾಭಿ ಜಘನ | ಸ್ಥಳದ ಚೆಲುವಿನ ಚರಣಕಾಂತಿಯ || ಲಲನೆಯರ ಬೆಳಗಿನಲಿ ರಾಜಾಸ್ಥಾನ ರಂಜಿಸಿತು ||೬|| ಖಳಪತಿಯ ಗದ್ದುಗೆಯ ಬಲದಲಿ || ಹೊಳೆವ ನೀಲೋತ್ಪಲದ ಕಾಂತಿಯ | ತೊಳಪ ಕಾಯದ ನಗೆಮೊಗದ ಖಃ ತಿಲಕನಾರೆನುತ 11, ಲಲಿತ ಕಂಬುಸುರೇಖೆಗಳ ನವ | ಚೆಲುವ ಮಂಗಳ ಲಕ್ಷಣದೊಳಿಹ | ಲಲಿತಕಾಯವ ಕಂಡು ಬಡದೀಕ್ಷಿಸಿದ ದಶಕಂಠ |೬೭|| ಈತನಾರ ಕುಮಾರನತಿವಿ | ಖ್ಯಾತನೈ ಲಕ್ಷಣದೊಳಗೆ ಪುರು | ಹೂತಗಿಮ್ಮಡಿಯಹನು ಸಾಮುದ್ರಿಕದ ಗಣನೆಯಲಿ || ಈತನೀಪಟ್ಟಣದ ಪಟ್ಟವ || ನೋತು ಧರಿಸುವ ಲಕ್ಷಣಜ್ಞ ಎ | ನೀತನಾರೆಂದೆನಲು ಮೈರಾವಣ ನಿರೀಕ್ಷಿಸಿದ ||೮||
ಪುಟ:ಮಹಿರಾವಣನ ಕಾಳಗ.djvu/೩೦
ಗೋಚರ