ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಕರ್ಣಾಟಕ ಕಾವ್ಯಕಲಾನಿಧಿ ಸೊಗಯಿಸುವ ವಸ್ತ್ರಾಭರಣಗಂ | ಧಗಳನಿತ್ತು ಪಚರಿಸಿ ಹೊಗಿಸಿದ | ಜಗದ ಕಂಟಕ ರಾವಣನ ವೋಲಗವನೀಕ್ಷಿಸಿದ ||೧೦|| ಓಲಗವ ನೋಡಿದರೆ ಮಕುಟದ | ಸಾಲ ಮನ್ನೆ ಯರಿಲ್ಲ ತನಯರ | ಮೇಳವಡಗಿತು ಸುಭಟಮಂತ್ರಿನಿಕಾಯ ಬಯಲಾಯ್ತು || ಆಳ ಕಾಣೆನು ದನುಜ ಕೀಸಿದ | ಕೋಲ ಕಡಿತದೊಳೊಬ್ಬನು ದನೆ | ಕಾಳುಮಾಡಿದನೆಂದು ಮೈರಾವಣನು ಬಿಸುಸುಯ್ದ ||೧೧|| ಎತ್ತ ನೋಡಿದೊಡತ್ತ ದನುಜರ | ಕಿತ್ತ ಕಡುಗದ ಕಿರಣದಲಿ ರವಿ } ತತ್ತಿಹನು ಬಲುಭಟರ ಖಂಡೆಯದೊಂದು ಬಲುಹಿನಲಿ || ಮಿಕ್ಕು ದೆಸೆಗಿಡುತಿಹಳು ರಾವಣ | ನೆತ್ತ ಮೊಗದಿರುಹಿದೊಡೆ ದೇವರ | ಮೊತ್ತ ಜೀಯೆಂದೆನಿಪ ಭಾಗ್ಯವು ಬಂತುದಕಟಿಂದ ||೧೨|| ಸುರರಿಗವಸರವಿಲ್ಲ ನರರಿಗೆ || ದೊರಕದೀತನ ಸಮಯವಿವದಿರು | ನೆರೆದು ಬಾಗಿಲ ಕಾದಿಹರು ದರುಶನವನೇ ಹಾರ್ದು || ಶರಣುಹೊಗದವರಿಲ್ಲ ದಶಕಂ | ಧರನ ವೀರಭುಜಪ್ರತಾಪಕೆ | ಸರಿದೊರೆಗಳಿಲ್ಲೆಂಬುದಡಗಿತೆ ಶಿವಶಿವಾಯೆಂದ {{೧೩|| ಮೃಡನು ಹರಸುವ ಬರಮನಕ್ಷತೆ | ಗುಡುವ ಸುರಗುರು ದಿನವ ಹೇಳುವ | ಕಡೆಯ ಬಾಗಿಲೊಳಿದ್ದು ಸೇವೆಯ ಮಾಡುವರು ಸುರರು 11 ಪೊಡವಿಯಣುಗೆಯ ಪಿಡಿದ ಕತದಿಂ | ಮಡಮುರಿದರಿವರೆಲ್ಲ ದಶಶಿರ | ಕೆಡುವನಕಟಕಟೆಂದು ಮೈರಾವಣನು ಬಿಸುಸುಯ್ದ ||೧೪||