114 ಸತೀಹಿತೈಷಿಣಿ ನಿಯತಸ್ಥಾನದಲ್ಲಿ ನಿಲ್ಲುವನು, ಎಷ್ಟು ಹೊತ್ತಿಗೆ ಉಪನ್ಯಾಸವು ಆರಂಭಿಸಲ್ಪಡುವುದು, ಆವಾವ ವಿಚಾರಗಳು ಹೊರಬೀಳುವುವು. ಇವೇ ಮೊದಲಾದ ಆಶಾತರಂಗಗಳಿಂದ ಅಚಲನು ಕುಳಿತಿದ್ದೆಡೆಯನ್ನೇ ನೋಡುತ್ತಿದ್ದರು. ಉಪನ್ಯಾಸಕ್ಕೆ ಆರಂಭವಾಗಬೇಕಾದರೆ, ಇನ್ನೂ ಅರ್ಧಗಂಟೆಯ ವಿರಾಮವಿದೆ. ಅದಕ್ಕೆ ಮೊದಲು ನಡೆಯಬೇಕಾಗಿದ್ದ ಸೂಚನೆ, ಅಧ್ಯಕ್ಷರ ಭಾಷಣಗಳೇ ಮೊದಲಾದ ಕಾರ್ಯಗಳು ಕ್ರಮವಾಗಿ ನಡೆಯಿಸಲ್ಪಟ್ಟಿವೆ. ಇನ್ನು ಉಪನ್ಯಾಸಕ್ಕೆ ಆರಂಭವಾಗುವುದೊಂದೇ ಅಡ್ಡಿ; ಅದರೆ ನಿಶ್ಚಿತ ಮುಹೂರ್ತವು ಬಂದಲ್ಲದೆ ನಿಶ್ಚಲಚಿತ್ತನಾದ ಅಚಲಚಂದ್ರನು ಭಾಷಣಕ್ಕೆ ಆರಂಭಿಸುವಂತಿಲ್ಲ. ಇದೊ, ಮುಹೂರ್ತವೂ ಬಂದಿತು. ಸಭಿಕರೂ ಉತ್ಸುಕರಾಗಿ ಪ್ರಾರ್ಥಿಸಿದರು. ಅಧ್ಯಕ್ಷರು ಸೂಚಿಸಿದರು. ಈವರೆಗೂ, ಸಂಗಡಿಗ ರಾಗ ಸೇವಾನಂದ, ನಾದಾನಂದ, ಭಕ್ತಿನಾರ ಚಕ್ರವರ್ತಿ ಇವರೊಡನೆ ಸರಸ ಪ್ರಸಂಗದಲ್ಲಿದ್ದ ಅಚಲಚಂದ್ರನು ಎದ್ದು ಬಂದು, ನಿಯತಸ್ಥಾನದಲ್ಲಿ ನಿಂತು, ಆನಂದೋದ್ರೇಕದಿಂದ ಸಭಿಕರನ್ನು ವಂದಿಸಿ, ತನ್ನ ಕೋಮಲ ಹಸ್ತದ್ವಯವನ್ನು ನೀಡಿ, ಪ್ರೇಮವ್ಯಂಜಕಸ್ವರದಿಂದ ಹೇಳತೊಡಗಿದನು:- "ನನ್ನ ಪರಮ ಪೂಜ್ಯರಾದ ದೇಶಬಾಂಧವರೇ! ಪ್ರಿಯಬಾಂಧರಾದ ದೇಶಸೇವಕರೇ! ಉದಯಾದ್ರಿ ಶಿಖರವನ್ನೇರುತ್ತಿರುವ ವಿದ್ಯಾರ್ಥಿಗಳೇ! ಅವ್ಯಾಜವಾತ್ಸಲ್ಯದಿಂದ ಇಲ್ಲಿ ಸಾಕ್ಷಾತ್ಕರಿಸಿರುವ ನಿಮಗೆಲ್ಲರಿಗೂ ಇದೇ ನನ್ನ ಕೃತಜ್ಞತಾಪೂರ್ವಕವಾದ ಅನೇಕ ವಂದನೆಗಳು. ದಯೆಯಿಟ್ಟು ಸ್ವೀಕರಿಸಿ, ಕಾಲೋಚಿತ ಸೂಚನೆಗಳಿಂದ ಪ್ರೋತ್ಸಾಹಿಸಿ, ಮನ್ನಿಸಬೇಕೆಂಬುದೇ ನನ್ನ ಪ್ರಥಮ ಸಂಪ್ರಾರ್ಥನೆಯು.” ವಿಶ್ವಸನೀಯರಾದ ಧರ್ಮಬಾಂಧವರೇ | ಈವರೆಗೆ ಸಂಘಗಳೆಷ್ಟೊ ಕೂಡಿರುವವು; ಉಪನ್ಯಾಸಗಳೆಷ್ಟೋ ನಡೆದಿರುವುವು; ಹಾಗೂ ಉಪನ್ಯಾಸವನ್ನು ಕೊಡುವ ಕಾರ್ಯಭಾಗದಲ್ಲಿ ನಿಮ್ಮಲ್ಲಿ ಬಹುಜನರು ದಕ್ಷರಾಗಿಯೂ ಇರಬಹುದೆಂದು ತೋರುವುದು. ಆದರೂ, ಇಂದು, ಇಲ್ಲಿ ಕೂಡಿರುವಷ್ಟು ವಿಸ್ತಾರವಾದ ಸಭೆಯು, ಹಿಂದೆ ಯಾವಾಗಲೂ ಸೇರಿರಲಾರದೆಂದು ತೋರುವುದಿಲ್ಲವೇ? ಈ ಕಲಾಶಾಲೆ
ಪುಟ:ಮಾತೃನಂದಿನಿ.djvu/೧೨೮
ಗೋಚರ