ಪುಟ:ಮಾತೃನಂದಿನಿ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ

  • 156

ಸತೀ ಹಿತೈಷಿಣೀ ತೆಯೇ ಆಗಿರುವೆವು. ನಿನ್ನಿಂದ ಈಗ ಉಪದೇಶಿಸಲ್ಪಟ್ಟ ದಾರಿಯೇ ನಮಗೆ ಶೀಯಸ್ಕರವೆಂಬುದನ್ನು ನಾವು ಬಲವಾಗಿ ನಂಬಿ, ಹಾಗೆಯೇ ಅಭ್ಯಸಿಸು ವೆವು. ಅಷ್ಟೀ ಅಲ್ಲ; ದೈವಿಕ ಪ್ರೇಮಮಯಮೂರ್ತಿಯಾದ ನಿನ್ನ ದರ್ಶನ ಲಾಭವೂ, ನಿನ್ನ ಅಮ್ಮತೊಪಮವವಾದ ಉಪದೇಶವೂ ನಮಗೆ ಅಡಿಗಡಿಗೂ ಲಭಿಸುತ್ತಿರಬೇಕೆಂದು ಪ್ರತ್ಯಾಶಿಸುತ್ತಿರುವೆವು. "ಇದಕ್ಕೆ ಆ ಭಗವಂತನೇ ಸಹಾಯಕನಾಗಿರಲಿ.” ಎಂದು ಕೂಗಿ ಹೇಳಿದರು. ಸಾಲದುದಕ್ಕೆ ಹೊರ ವಳಯದಲ್ಲಿದ್ದ ಪುರುಷವರ್ಗದವರು ಸಂಭ್ರಮದಿಂದ-"ಸಾಧು ! ಭಗವತಿ ! ಸಾಧು-ಸಾಧು !! ಲೋಕೋತ್ತರ ಗುಣಸಂಪನ್ನೆಯಾದ ನಂದಿನಿಯು ನಿನ್ನ ಮಗಳಾಗಿರಲು, ನಿನ್ನ ಪುಣ್ಯವೇ ಸಾಧು. ಅಲ್ಲದೆ, ಇಂತಹ ದೈವಿಕವೂ ರ್ತಿಯ ಸಹವಾಸಲಾಭವನ್ನು ಹೊಂದುವ ಮಹಾತ್ಮನನ್ನು ಸೃಷ್ಟಿಸಿರುವೆ ಯಾದರೆ, ಮತ್ತೂ ಸಾಧುವಾದನಗಳು.” ಎ೦ದೀ ಬಗೆಯಾಗಿ ಹಲವು ತರ ದಿಂದ ಕೂಗಿ ಹೇಳುತ್ತಿದ್ದರು. ಈ ಗದ್ದಲದಲ್ಲಿ ಚಿತ್ರಕಲೆಯು ಮತ್ತೇನನ್ನೂ ಹೇಳಲಾರದೆ ಸಭಿಕ ರನ್ನು: ವಂದಿಸಿ, ಫಲಪುಷ್ಪತಾಂಬೂಲಗಳಿಂದ ಸನ್ಮಾನಿಸಿ ಬೀಳ್ಕೊಟ್ಟಳು. ಪ್ರಜ್ಞಾಶಾಲಿಯಾದ ನಗೆಶರಾಯನ ಕಾರ್ಯದಕ್ಷತೆಯನ್ನು ತಿಳಿದಿರುವವರಿಗೆ ಮುಂದೆ ನಡೆದುದನ್ನು ನಾವಿಲ್ಲಿ ವಿವರಿಸಬೇಕಾದುದೇ ಇಲ್ಲವಷ್ಟೆ ! ಸಂತೋ ಷ. ಅವರವರೇ ಅರಿತರಿಯುತ್ತ ಅರಿಯದುದನ್ನು ಹಿರಿಯರಿಂದ ಕೇಳಿ ತಿಳಿಯುತ್ತ ಜಿಲ್ಲೆಗೆ ಬರಬೇಕೆಂಬುದೇ ನಮ್ಮ ಮುಖ್ಯ ಸಂದೇಶವಾಗಿದೆ. (ಹಾಗಿರಲಿ.)