ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಸತೀಹಿತ್ಯ ಸಿ ಟಿ ಈ ಧನಾಯಾಮ್|| ತೇಷಾಂ ಭೂಮರ್ಧ ನಪತಿಗೃಹಾ ದನ್ನರಾದುಭೇರಾ ಧಾರಾನಿಶ್ಯಾ೦ತ್ಯಧಿಕ ಮಧಿಕಂ ವಾಸಿತಾನಾ೦ವಸೂನಾಮ್ ||೧೭|| ತಪಸ್ವಿನಿ: ಸತಿಸುತ್ತಿರುವಂತೆಯೇ ನಿಂತಿದ್ದವರೆಲ್ಲರೂ ಮಂಗಳಗೀತಾ ವಾದ್ಯಗಳನ್ನು ಬಾರಿಸಲು ಮೊದಲುಮಾಡಿದರು. ನೋಡು ನೋಡು ತಿದ್ದಂತೆಯೇ ದೇವಿಯ ಪಾದತಲದಲ್ಲಿ ಅನತನಾಗಿದ್ದ ಸತ್ಯಾನಂದನು, ನೂತನ ಕುಜಿತನಾಗಿ ಎದ್ದು ಎರಡು ಕೈಗಳಿಂದಲೂ ದೇವಿಗೆ ವ೦ಗಳಾರತಿ ಯನ್ನೆತ್ತಿದನು. ಮಂಗಳಾರತಿಯಾಗುತ್ತಿರುವುದನ್ನು ನೋಡಿ, ತಪಸ್ವಿನಿಯ ನದಿಯೊಡನೆ ಸಡಗರದಿಂದ ನೀರಾಜಿನಗಳನ್ನು ಹತ್ತಿಸಿ-ಬೆಳಗಿಸಿ, ಘಂಟಾ ನಾದವನ್ನು ದಿಕ್ತಟಗಳಲ್ಲೆಲ್ಲಾ ಸುತ್ತುವಂತೆ ಬಾರಿಸಿದಳು. ನಿಂತಿದ್ದ ಆ ಬಾಲ ವೃದ್ಧರಾಗಿಯಾದ ಸ್ತ್ರೀ ಪುರುಷರೂ ದೇವತಾಸಂದರ್ಶನ ಲಾಭವನ್ನು ಹೊ ಬದಿ, ಧನ್ಯ ಧನ್ಯ ಶಬ್ದದಿಂದ ನಲಿನಲಿದಾಡಿದರು. - ಇಲ್ಲಿಗೆ ಪೂಜೆಯ, ಯವಾಕ್ರಮವಾಗಿ ನೆರೆವೇರಿದಂತಾಯಿತು. ಸತ್ಯಾನಂದನು ಮತ್ತೆ ದೇವಿಯನ್ನು ವಂದಿಸಿ, ಆ ಬಳಿಕ,-ನಿಂತಿದ್ದವರೆಲ್ಲರನ್ನೂ ಕುಳ್ಳಿರಹೇಳಿ, ತಾನು ಮಾತ್ರ ನಿಂತು, ಪ್ರೇಮಪೂರಿತನಾಗಿ ಕರುಣಾವ್ಯಂಜಕ ಸ್ವರದಿಂದ ಹೇಳತೊಡಗಿದನು. -- 1/ಓ ನನ್ನ ಪ್ರೀತಿಪಾತ್ರರಾದ ತಮ್ಮಂದಿರೇ ! ನನ್ನ ಪೂಜ್ಯ ಮಾತು ರದ ಅರ್ಯಮಹಿಳೆಯರೇ !! ಮುಂದೆ ಪೂಜ್ಯ ಮಾತೆಯರಾಗಿ ಲೊಕಾದ ರೆಕ್ಕೆ ಪಾತ್ರರಾಗುವ ನನ್ನ ಎಳದಂಗೆಯರೇ!!! ಇದೇ ನೋಡಿರಿ; ನಮ್ಮೆ ಲ್ಲರಿಗೂ ಪರಮಪೂಜ್ಯಳಾದ ಜನ್ಮಭೂಮಾತೆಯೇ ಇಲ್ಲಿ ಪ್ರತಿಷ್ಠಿತಳಾಗಿರು ವಳು. ತಾಯಿಯ ಸಮಕ್ಷದಲ್ಲಿ ನಾವೆಲ್ಲರೂ ಇಂದು ಒಂದಾಗಿ ಕಲೆತಿರು ವೆವು; ಮುಂದೆಯೂ ಹೀಗೆಯೇ ಕಲೆಯಬಹುದೆಂಬ ಭರವಸೆಯನ್ನೂ ಹೊoದಿರುವೆವು. (ಕರತಾಡನ.) ಕೇಳಿರಿ. ಇವಳೇ ನಮ್ಮ ತಾಯಿ; ಇವಳ ದಯೆಯೇ ನಮ್ಮ ಸಮಸ್ತ ಸೌಭಾಗ್ಯಸಂಸತ್ತಿ; ಇವಳ ಅಂತರಂಗದ ಕೃಪಾಕಟಾಕ್ಷದಿಂದಲೇ ನಾವು ಈ ಒಗೆಯ ಮಾನವಜನ್ಮವನ್ನೆತ್ತಿ, ತಕ್ಕಮಟ್ಟಿಗೆ ಉತ್ತಮವರ್ಗದಲ್ಲಿ ಸದಾಚಾರ ಸಂಪನ್ನ ರಾದ ತಾಯ್ತಂದೆಗಳ ಹೊಟ್ಟೆಯಲ್ಲಿ ಹುಟ್ಟಿ, ಇವಳ ಕೃಪಾರೂಪ