ಪುಟ:ಮಾತೃನಂದಿನಿ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

192 ಸತೀಹಿತ್ಯ ಸಿಣೀ ತಿಳಿದು, ಅದರಂತೆ ನಡೆಯಬೇಕು. ಇಷ್ಟೇ ಅಲ್ಲ; ಪತಿರಾಜರಿಗೆಂದರೆ,- ಕೇವಲ ಪರಬ್ರಹ್ಮವೇ ಅವರೆಂದು ನಂಬಿ, ಸರ್ವಪ್ರಕಾರದಿಂದಲೂ ಎಂದರೆ, ಪತಿಗೆ ಸೇವೆಯಲ್ಲಿ ರಾಸಿಯಾಗಿ, ಹಿತಸೂಚನೆಯಲ್ಲಿ ಉಪದೇಶಗಳಾಗಿ, ಕಾರ್ಯನಿರ್ವಾಹದಲ್ಲಿ ಮಂತ್ರಿಯಾಗಿ, ಕೀರ್ತಿ-ಸಂಪಲ್ಲಾಭಗಳಲ್ಲಿ ಜಯ ಶ್ರೀಯಾಗಿ, ಸುಖಾನುಭವದಲ್ಲಿ ಛಾಯೆಯಾಗಿ,-ಹೀಗೆ ನಡೆವುದರಿಂದಪುರುಷನ ಸಮಸ್ತ ಪುರುಷಾರ್ಥ ಸಾಧನೆಗೂ ಆಧಾರಪಾತ್ರಳಾಗಿರುವಂತೆ ನಡೆಯಬೇಕು. ಹೀಗಿದ್ದರೆಯೇ ನಮ್ಮ ಮುಂದಿನ ಮಕ್ಕಳು, ನಮ್ಮ ಮಾರ್ಗವನ್ನು ಅನುಕರಣಕ್ಕೆ ತರುವರಲ್ಲದೆ ಬೇರಿಲ್ಲ.

- ಇದು ನಿಮಗೆ ತಿಳಿಯದುದಲ್ಲವಾದರೂ ನನ್ನ ಮನ್ಸ್ತ್ರಪ್ತಿಗಾಗಿ, ಹಿರಿಯರು ಹೇಳಬೇಕೆಂದು ಮಾಡಿರುವ ಶಾಸನಕ್ಕಾಗಿ, ಹೇಳಿರುವನು. ಎಂದರೆ, ಒಬ್ಬಿಬ್ಬರಿಗೆ ಹೇಳಿದುದಲ್ಲ. ನಮ್ಮ ಈ ನಂದಿನಿಯನ್ನೇ ಮುಂದಿಟ್ಟು, ಇಲ್ಲಿರುವ ನನ್ನ ಎಳದಂಗೆಯರೆಲ್ಲರಿಗೂ ಹೇಳಿರುವೆನು. ಇದನ್ನು ಚೆನ್ನಾಗಿ ಸಮಾಲೋಚಿಸಿ, ಕಾರ್ಯಕಾರಿಯಾಗುವಂತೆ ಮಾಡಬೇಕೆಂದೂ ಕೇಳಿ ಕೊಳ್ಳುವನು. ಇದೇ ನಂದಿನಿಗೆ ನಾನು ಕೊಡತಕ್ಕ ಬಳುವಳಿ. ಇದೇ ಸತಿಸಹಿತೆಯಾಗುವ ನಂದಿನಿಗೆ ನಾನು ಕೊಡುವ ಬಹುಮಾನ; ಮತ್ತು ನಂದಿನೀ ಅಚಲಚಂದ್ರರ ಸ್ಥಿರಬ್ರಹ್ಮಚರ್ಯವ್ರತಸಿದ್ಧಿಯ ಕುರುಹಾಗಿ, ಇಂದು ನಡೆಯುವ ಕಲ್ಯಾಣಮಹೋತ್ಸಕ್ಕಾಗಿ, ನಮ್ಮ ಅಕ್ಕತಂಗಿಯರೆಲ್ಲ ರಿಗೂ ನನ್ನಿಂದ ಕೊಡಲ್ಪಡುವ ಅಭಿನಂದನ !!!” (ಕರತಾಡನದೊಡನೆ-- "ಯಥೇಷ್ಟವು; ಯಥೇಷ್ಟವು. ಇದೇ ನಮಗೆ ಅನಂತಾನಂತವಾದ ವರವು.")