ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ಮಾತೃನ ದನಿ ಸದೇಶಕ್ಕೆ ಕಿವಿಗೊಡುವರೆ? ನಿನ್ನನ್ನು ಚಿತಚಿತ್ತಳಾಗಿರೆಂದು ಹೇಳುವ ನಾನೇ ನೂರೆಂಟು ಸಂದುಗೊಂದುಗಳಲ್ಲಿ ತಿರುಗುವ ವಿಷಯಲಂಪಟನಾಗಿ ದ್ದರೆ, ನಿನ್ನ ನಡೆಯನ್ನು ಭದ್ರವಾಗಿದೆಯೆಂಬುದನ್ನು ತಿಳಿದು ಹೇಳು' ಎಂದು ನೀನೇ ನನ್ನನ್ನು ಭರ್cಸವಿರುವೆ ? ಚೆನ್ನಾಗಿ ವಿಚಾರಮಾಡಿ ಹೇಳು. ನಂದಿನಿ: ಈ ಕಾಲದ ಸಂನ್ಯಾಸವೇಷಧಾರಿಗಳ ಸೊಬಗು ಕೂಡ, ಇಂತಹ ಕಪಟನಾಟಕವೆಂಬುರು ನಿನಗೆ ಗೊತ್ತಿಲ್ಲವೇನು? ಅದರಿಂದಲ್ಲವೇ ಸನಾತನ ಧರ್ಮವು ಬರುಬರುತ್ತೆ ಶಿಥಿಲವಾಗುತ್ತಿರುವುದು ? ಸರ್ವಸಂಗ ಪರಿತ್ಯಾಗ ಮಾದಿರೆವೆಂದು ಹೇಳಿಕೊಳ್ಳುವವರೇ ಹೀಗಾದರು : ಇನ್ನು ಸಂಸಾರ ತಾಪತ್ರ ಯಕ್ಕೆ ಸಿಕ್ಕಿ ನರಳುತ್ತಿರುವ ಬೋಧಕವರ್ಗದವರನ್ನು ಕುರಿತು ಹೇಳಬೇಕೊ " ಅವರಲ್ಲಿ ಎಷ್ಟೋ ವಿ:ತಾರಗಳು ನನಗೆ ಅತೃಪ್ತಿಯ ಲಟುಮಾಡುತ್ತಿವೆ! ನಂದಿನಿ:- ಹೇಗೆ? ನಾರಾ:- ಹೇಗೆಂದರೆ, ಶಾಲೆಗೆ ಬರುವವರಲ್ಲಿ ಕೆಲವರು ಉದರಂಭ ರಣಕ್ಕೆಂದು ಬರುವರು. ಮತ್ತೆ ಕೆಲವರು, ಬರಿಯ ಕಾಲಹರಣಕ್ಕೆಂದೇ ಬರು ವರು. ಇನ್ನುಳಿದ ಕೆಲವರಲ್ಲಿ ಜನಮೆಗೆಗಾಗಿ ಬರುವವರೂ ಉಂಟು. ಹೇಗೂ ಸರಿಯಾದ ಗುರುವೆಂದರೆ,-ಬೋಧಕನೆಂದರೆ, ಅಥವಾ ಉಪಾ ಧ್ಯಾಯನೆಂದರೆ ನೂರುಮಂದಿಗೆ ಒಬ್ಬ ನಾದರೂ ಇರಬಹುದೋ ಇಲ್ಲವೋ ಹೇಳುವಂತಿಲ್ಲ. ನಂದಿನಿ:-ಇರಬಹುದು; ಆದರೂ, ನಾವುಕೂಡ ಅವರ ದಾರಿಯನ್ನೆ ಹಿಡಿದು ನಡೆವುದೆಂದರೆ ತಿಳಿಗೇಡಿತನವೇ ಸರಿ. ನಿಜವಾದ ಗುರುಜನವು ಮಕ್ಕಳನ್ನು ಅವಿವೇಕಾ೦ಧತೆಯಿಂದ ಬಿಡಿಸಿ, ಜ್ಞಾನವಿಶಿಷ್ಟರನ್ನಾಗಿ ಮಾಡ ಬೀಕಾದ ತಮ್ಮ ಕರ್ತವ್ಯದಲ್ಲಿ ಗಮನವಿರಿಸುವುದಾದರೆ, ಮೊದಲು ತಮ್ಮ ನಡೆಯಲ್ಲಿರಬಹುರಾದ ಕೊರತೆಗಳನ್ನು ಕ್ರಮಪಡಿಸಿಕೊಳ್ಳದೆ ಮುಂದಕ್ಕಡಿ ಯಿಡಲಾರರು ! ಅಂತವರು ತಮ್ಮ ನಡೆನುಡಿಯನ್ನು ಮೇಲುಪಂಕ್ತಿಯ ಗಿಟ್ಟು, ತಮ್ಮ ಬಾಲಕರನ್ನೂ ಅದೇ ರಾರಿಯಲ್ಲಿಯೇ ಸರಿಯಾಗಿ ನಡೆಯಿಸ ಬಲ್ಲವರು, ಅವರೇ ಸದ್ದು ರುಶಬ್ದಕ್ಕೆ ಪಾತ್ರರು ! ಅದಿರಲಿ, ನೀನು ಬಂದ ಕೆಲಸವೇನೆಂಬುದನ್ನು ಮೊದಲು ತಿಳಿಯಿತು? ನಾದಾ:-ಕುತೂಹಲದಿಂದ.-14 ನೀನು ಇನ್ನೂ ಎಷ್ಟು ದಿನಗಳನ್ನು