ಪುಟ:ಮಾತೃನಂದಿನಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಮಾತೃ ನಂದಿನಿ ನನ್ನ ಸ್ನೇಕೆ ಕೆಣಕುತ್ತಿರುವೆ? ದೇಶಮಾತೆಯೇ ವಿವರ್ಣಕ್ಕೆ ತಿರುಗಿ ಕ್ಷಮಿಸು ತಿರುವಳು ! ಅಂತವಳ ಸಂತಾನವ, ವಿವರ್ಣಕ್ಕೆ ಗುರಿಯಾಗದಿರುವದೇನು? ವೃಥಾಶೋಕವೆಂದು ಸುಮ್ಮನೆ ಕುಳಿತಿರಬೇಕೇ?” ನಾದಾ:-ಮತ್ತೇನು ಮಾಡಬೇಕೆನ್ನುವೆ ? ಇನ್ನೊಬ್ಬಳೆಂದೇನಾ ದೀತು? ನಂದಿನಿ:-ದರ್ಪಿತಸ್ವರದಿಂದ, ನಾನು, ನನ್ನ ಜನ್ಮದಾತಾರರಿಂದ ಈವರೆಗೂ ರಕ್ಷಿಸಲ್ಪಟ್ಟುದೇಕೆ ? ನನ್ನನ್ನು ದೇಶಮಾತೆಗೆ-ನಂದಿನಿಯಾಗಿ ಒಪ್ಪಿಸಿರುವುದಾದರೂ ಯಾವ ಉದ್ದೇಶದಿಂದ ? ಗೊತ್ತಿಲ್ಲವೇ? ಆ ಉದ್ದೇಶ ವನ್ನು ನಾನು, ಕಾರ್ಯ-ಕರಣ-ಕಲಾಪಗಳೆಲ್ಲವುಗಳಿಂದೆಯೂ ಸಾರ್ಥಕ್ಯ ಪಡಿಸಿಕೊಳ್ಳದಿದ್ದರೆ ಪತಿತೆಯಾಗುವೆನಲ್ಲವೆ? ಇದಲ್ಲವೇ ನಾನು ಮಾಡ ಬೇಕಾದುದು ?” ನಾದಾ:-ಸಂಕುಚಿತಸ್ವರದಿಂದ...ಹೇಗೆ? ಸಾಧ್ಯವೇ?” ನಂದಿನಿ:-ಸಾಧ್ಯಾಸಾಧ್ಯವು ಆ ಭಗವತಿಯ ಕಟಾಕ್ಷಕ್ಕೆ ಸೇರಿದುದು. ನಮ್ಮ ಕರ್ತವ್ಯಕ್ಕೆ ಸೇರಿದುದೆಲ್ಲವನ್ನೂ ನಾವು ಮಾಡಿಯೇ ತೀರಬೇಕ ಲ್ಲದೆ ಹಿಂದೆಗೆಯಬಾರದು ! ಭಗವಿ ಯೊಂದಿದ್ದರೆ ನನ್ನ ಉದ್ದೇಶವೂ ಪ್ರಯತ್ನವೂ ಸಫಲವಾಗುವುದರಲ್ಲಿ ಸಂಶಯವಿಲ್ಲ. ಹೊತ್ತು ಮೀರುತ್ತಿದೆ. ನನಗೂ ಸಂತಾಪವು ಹೆಚ್ಚುತ್ತಿದೆ. ಯಾವ ಕೆಲಸವಿದ್ದರೂ ನಾಯಾಗ ಒಹುದು. ಇಂದು ನನಗೆ ವಿರಾಮವನ್ನು ಕೊಡು ? * ನಾರಾ:--ತಲೆದೂಗಿ ಎದ್ದು ನಿಂತು, ಕುತೂಹಲದಿಂದ ನಂದಿನಿಯನ್ನೆ ನೋಡುತ್ತ,-ನಂದಿನಿ! ನಿನ್ನನ್ನು ಹೆಚ್ಚಾಗಿ ಬಳಸಲಾರೆನು, ಮದ್ಯ ವಾಗಿ ನೀನು ಹೀಗೆ ವಿರಕ್ತವೃತ್ತಿಯೊಂದನ್ನೇ ಹಿಡಿದು ಕೃತಳಾಗಬಾರ ದೆಂಬುದೇ ನನ್ನ ಪ್ರಾರ್ಥನೆ! ಮತ್ತೆ ನಾಳೆ ಬಂದು ನಿನ್ನಲ್ಲಿ ಉಳಿದುವನ್ನು ಹೇಳಿ, ಕೇಳುವೆನು.” ನಂದಿನಿ:-“ನನಗೂ ಅದೇ ಇಷ್ಟ !” ಎಂದು ಹೇಳಿ ಎದ್ದು ನಿದ್ರಾಗನಾ ಸೇವೆಗೆ ಅಭಿಮುಖಳಾದಳು. ನಾದಾನಂದನೂ ತಲೆದೂಗುತ್ತೆ ಹೊರಟುಹೋದನು.