ಪುಟ:ಮಾತೃನಂದಿನಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಸತೀಹಿತಷಿಣೀ

ಯಿತು? ಎಲ್ಲಿಂದ ಹುಡುಕಿ ಕರೆತರಲಿ? ಹೇಳು ನೋಡುವ; ಅನನುರೂಪನಿಗೆ ಕೊಡುವುದರಿಂದೇನೂ ಸುಖವಿಲ್ಲವಷ್ಟೆ‍‌‍‍‍?

ನಂದಿನಿ:- ರೂಪವೊಂದೇ ಅಲ್ಲ. ಗುಣ-ವರ್ಣ-ರೂಪ-ವಯೋ-ವಿದ್ಯೆಗಳೆಂಬ ಶಕ್ತಿಗಳಿಂದ ಕೂಡಿದ ಸಂಪನ್ನ ನನ್ನೇ ನೋಡಬೇಕು. ಇಲ್ಲ ದಿದ್ದರೆ ದಾನಕ್ಕೆ ಸರಿಯಾದ ಪಾತ್ರನೆನಿಸುವುದಿಲ್ಲ. ನಗೇಶ:- ಕಿರುನಗೆಯ೦ದ್ರ- ಅಂತಹನನ್ನು ಕರೆತರಬೇಕೆಂದರೆ, , ನಮ್ಮ ಮನೆಮಾರುಗಳೆಲ್ಲವನ್ನೂ ಮಾರಿಬಿಡಬೇಕಷ್ಟೆ? ನಂದಿನಿ:- ಏಕೆ ? ನಗೇಶ:-ಏಕೆಂದರೆ, ವರದಕ್ಷಿಣೆ, ವರನಿಗೆ ಆವರೆಗೂ ವಿದ್ಯಾವ್ಯಾಸಂಗ ಕ್ಯಾಗಿ ಮಾಡಿದ ಖರ್ಚಿಗಾಗಿ ವರನತಂದೆಗೆ ಪ್ರತಿಫಲ, ವರನನ್ನು ಪೋಷಿಸಿ ಧಾರಾಳತನದಿಂದ ನಮ್ಮ ಕೈಗೊಪ್ಪಿಸುವ ವರನ ತಾಯಿಗೆ ಬಹುಮಾನ. ಉತ್ಸವಕ್ಕಾಗಿ ಬರುವ ವರನಕಡೆಯವರಿಗೆ ಔತಣ, ಇನ್ನಿದರಮೇಲೆ ವಧೂ ವರರ ಆರತಕ್ಷತೆಗಳಿಗೂ, ಪುರಪ್ರದಕ್ಷಣಾದಿ ಆಡಂಬರಗಳಿಗೂ ತಗಲುವ ವೆಚ್ಚ; ಇವೆಲ್ಲಕ್ಕೂ ಎಲ್ಲಿಂದ ತರಬೇಕು?ಸಾಕು; ಒಂದು ಕನ್ಯಾದಾನ ಫಲವೇ ಭೂಪ್ರದಕ್ಷಿಣಕ್ಕೂ ಮಿಗಿಲಾಗಿದೆ. ನಂದಿನಿ:-ಅಪ್ಪ! ಮುಂದಾಲೋಚನೆಯಿಲ್ಲದ ದುಂದುಗಾರರು ಮನ ಬಂದಂತೆ ವೆಚ್ಚಮಾಡಿ ಕೆಡುವರಲ್ಲದೆ, ವಿವೇಕಿಗಳು ಮಾಡುವರೇನು ? ಅರ್ಥ ವನ್ನು ಸಂಪಾದಿಸಲಾರದ ಹೇಡಿಗಳೂ ಕಷ್ಟ ಸುಖಗಳನ್ನು ತಿಳಿಯಲಾರದ, ಜ್ಞಾನಲೇಶವಾದರೂ ಇಲ್ಲದ, ಮೂರ್ಖರೂ, ದೇಹವಿಕ್ರಯವೆಂಬ ಕೆಟ್ಟ ಜಾಡ್ಯಕ್ಕೆ ತುತ್ತಾಗುವರಲ್ಲದೆ, ಉತ್ತಮ ವರ್ಗದವರು ಹಾಗೆಂದೂ ಮಾಡ ಲಾರರು. ನಗೇಶ:-ಅಹುದು; ಅಂತಹ ವರನನ್ನು ಎಲ್ಲಿ ಹುಡುಕಲಿ? ನಂದಿನಿ:-ತಲೆಯೆತ್ತಿ ಹುಡುಕುವುದೇಕೆ? ಕನ್ಯೆಯ ಮನಸ್ಸಿಗೆ ಒಮ್ಮೆ ಬಂದವನೇ ವರನಾಗುವುದರಿಂದ ಸುಖ-ಭೋಗ-ಸಂಪದಗಳು ಅಕ್ಷ ಯಗಳಾಗಿ ನಡೆಯುವುವು.' ನಗೇಶ-ಹಾಗಿದ್ದರೆ, ನಿನ್ನ ಮಾತಿನಿಂದ ಸ್ವರ್ಣೆಯ ಮನಸ್ಸಿಗೂ ಒಬ್ಬನು ಬಂದಿರುವಂತೆ ತೋರುತ್ತಿದೆ. ಅವನಾವನು? | ‍‍‍‍‍