ಪುಟ:ಮಾತೃನಂದಿನಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

74 ಸತಿ ಹಿತೈಷಿಣಿ ಜಗದ್ಗುರು ಪೀಠದವರು, 'ಸಮಾಜದ ಕಲ್ಯಾಣಕ್ಕಾಗಿ ಹೊಸದಾದ ಶಾಸನ ವನ್ನು ನಿರೂಪಿಸುತ್ತಿರುವರಲ್ಲವೆ? ಸಿಜ ! | ದೇವರಿಗೆ ಪೂಜಾವಿಧಿಗಳೆಲ್ಲವೂ ಮುಗಿದಿವೆ. ಸ್ವಾಮಿಗಳವರ ಪಾದ ಪೂಜೆಯೂ ನಡೆದಿರುವುದು. ಇನ್ನು ಉಳಿದಿರುವುದೆಂದರೆ, ಶಿಷ್ಯಮ಼ಂಡಲಿಗೆ ಸಿರಸ; ಆಬಳಿಕ ಅನ್ನ ಶಾಂತಿಕ್ರಿಯೆ:- ಇವರಡೇ. ಇವಕ್ಕಾದರೂ ನಮ್ಮ ಪೂರ್ಣ ಗಮನವಿರಬೇಕಾದುದು ಮುಖ್ಯವಲ್ಲವೇ? ಹಾಗಿದ್ದರೆ ನಡೆಯಿರಿ, ಭಲೆ! ಅಭಿನವ ದತ್ತಾತ್ರಯರೆನ್ನಿ ಸಿದ ನಮ್ಮ ಜೀವಾನಂದ ಪರಮ ಹಂಸರು ಧರ್ಮಾಸನದಲ್ಲಿ ಮಂಡಿಸಿ ಜಪಮಾಲಿಕಾಹಸ್ತರಾಗಿ ಹೇಗೆ ಪ್ರಕಾಶಿಸುತ್ತಿರುವರು? ಇಕ್ಕೆಲರಲ್ಲಿಯೂ ಮುಂದೆಯೂ ಕುಳಿತಿರುವ ಧರ್ಮದರ್ಶಿಗಳ ಮತ್ತ ಪೀಠಾಶ್ರಿತರಾದ ಮುಖ್ಯ ಶಿಷ್ಯರ ಬಗೆಯಾದರೂ ಹೋಗಿರುವುದು? ಕೈ ಕಟ್ಟಿ ಕೊಂಡು ಬಿಡುಗಣ್ಣಿಂದ ನೋಡುತ್ತಿರುವ ಇವರಿಗೆ ಸ್ವಾಮಿಗಳ ವದನದ್ವಾರದಿಂದ ಹೊರಬೀಳುವ ನಾಗವತವನ್ನು ಪಾನ ಮಾಡಲು ಎಷ್ಟು ಆತುರವುಂಟಾಗಿರುವುದು ? ಇವರ ಭಕ್ತಿಯಾದರೂ ಎಷ್ಟರ ಬೇಕು ? ಅದೂ ಹಾಗಿರಲಿ; ಸ್ಮಾನಿಗಳ ಮುಂದೆಯೇ ಧರ್ಮಾಧಿಕಾರಿ ಯಾಗಿ ನೇಮಿಸಲ್ಪಟ್ಟ ಒಂದು ಅಖಂಡವಾದ ಶಾಸನಸತ್ರವನ್ನು ಹಿಡಿದು, ವಾಚಿಸಲುದ್ಯುಕ್ತರಾಗಿ ನಿಂತಿರುವ ನಮ್ಮ ಗಣೇಶಸಂತರನ್ನು ನೋಡಿರಿ; ಎಷ್ಟರ ಉತ್ಸವದಲ್ಲಿರುವರು? ಇವರ ಉತ್ಸಾಹಕ್ಕೆ ಭಂಗವನ್ನುಂಟುಮಾಡು ತಿರುವ ಜನರ ಗದ್ದಲವನ್ನು ಅಣಗಿಸಲು ಸುತ್ತಮುತ್ತಲಿರುವ ಭಂಟರು ಒಂದೇಸಮವಾಗಿ ಕೂಗವಿರಿ; ಸದ್ದೆದಿರಿ.” ಎಂದಿ ಬಗೆಯಾಗಿ ಕೂಗಿ ಕೊಳ್ಳುತ್ತಿರುವರು. ಅದರೇನು? ಗದ್ದಲವು ಬೇರೆ ಅಡಗಲಿಲ್ಲ. ಹೆಂಗಸರ ಅಭರಣಗಳ ಝಣಝಣತ್ತಾರವೇ ಸಾಕೆನಿಸಿರುವಲ್ಲಿ, ಅವರ ಕಾಡು ಹರಟೆ ಗಳೂ ಬಿಸಿಲು-ಹಸಿವು-ಬಾಯಾರಿಕೆಗಳ ತಾನಗಳಿಂದ ಗೋಳಿಡುತ್ತಿರುವ ಮಕ್ಕಳ ಅಳುವೂ ಸೇರಿದರೆ, ಅಲ್ಲಿಯ ಶಾಂತತೆ ಎಷ್ಟರಮಟ್ಟಿಗಿರಬೇಕೋ, ಪ್ರಾಜ್ಞರೇ ಊಹಿಸಲಿ! ಪಾಷ, ಕೂಗಬೇಡಿರೆಂದು ಹೇಳಿ ಹೇಳಿ ಎಲ್ಲರೂ ಬೀಸರು; ಫಲವಾಗಲಿಲ್ಲ. ಕಡೆಗೆ ನಿರ್ವಾಹವಿಲ್ಲದೆ ಬಹು ಪ್ರಯಾಸದಿಂದ ಗದ್ದಲಕ್ಕೆ ಕಾರಣರಾಗಿದ್ದ ಮಹಿಳೆಯರೆಲ್ಲರನ್ನೂ ಹೊರಗೆ ಕಳುಹಿ ತಕ್ಕಮ ಔಗೆ ಶಾಂತಿಯನ್ನುಂಟುಮಾಡಿದರು. ಇಷ್ಟಾಗುವ ವೇಳೆಗೆ ನಿಂತಿದ್ದವರ