ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

76 ಸತೀಹಿತೈಷಿಣಿ ಗುರಿಪಡಿಸಿರುವರೆಂದೂ, ಇನ್ನೂ ಅನೇಕ ವಿಧವಾದ ಅಕಾರ್ಯಗಳು ನಡೆಯುತ್ತಿರುವುದರಿಂದ ಈಗಲೇ ಇದನ್ನು ವಿಚಾರಿಸಿ, ಪರಿಷ್ಕರಿಸಿ, ಸಮಾಜವು ಸ್ಥಾಯಿಯಾಗಿರುವಂತೆ ಶಾಸನಗಳನ್ನು ನಿರೂಪಿಸಿ ವಿಧರ್ಮಿಗಳ ಪುಂಡಾಟವಡಗುವಂತೆ ಬಹಿಷ್ಕಾರಾದಿ ಪ್ರಾಯಶ್ಚಿತ್ತಗಳನ್ನು ಕಲ್ಪಿಸುವುದರಿಂದ, ಶಿಥಿಲ ಸ್ಥಿತಿಯಲ್ಲಿಳಿಯುತ್ತಿರುವ ಧರ್ಮಪುರುಷನನ್ನು ಉನ್ನತಿಗೆ ತರಬೇಕೆಂದೂ, ಬಹುಬಗೆಯಾದ ಪ್ರಾರ್ಥನಾಪತ್ರಗಳು ಅನೇಕ ಕಡೆಗಳಿಂದ ನಮ್ಮೀ ಜಗದ್ಗುರು ಪೀಠದಲ್ಲಿ ಸಮರ್ಪಿಸಲ್ಪಟ್ಟಿರುವುವು. ಇದಕ್ಕಾಗಿ ಪೀಠಾಶ್ರಿತರಾಗಿ ಇಲ್ಲಿ ನೆರೆದಿರುವ ಸಮಸ್ತ ಶಿಷ್ಯ-ಪ್ರಶಿಷ್ಯರೂ ತಿಳಿದುಕೊಳ್ಳಬೇಕೆಂದು ಶಾಸನವೇನೆಂದರೆ:-

  'ಮತದ್ವೇಷಿಗಳಾಗಿ ಅಧರ್ಮದಲ್ಲಿ ಪ್ರವರ್ತಿಸಿರುವ ನಾಸ್ತಿಕವಾದಿಗಳನ್ನು ದಂಡಿಸಿ, ಧರ್ಮಮಾರ್ಗದಲ್ಲಿ ಬದ್ಧರನ್ನಾಗಿ ಮಾಡುವುದೇ ಸಮಾಜದ ಉದ್ದೇಶವಾಗಿದೆ. ಸಮಾಜದ ಉದ್ದೇಶವು ಕೆಡದಂತೆ ಅದಕ್ಕೆ ಮುಖ್ಯಾಶ್ರಯರಾಗಿದ್ದು, ಧರ್ಮಸೂಕ್ಷ್ಮವನ್ನರಿತು, ಬಹುಮುಖದಿಂದ ಪ್ರಜೆಗಳ ಶೀಲ-ಧರ್ಮಗಳು ಕೆಡದಂತೆ ನೋಡಿಕೊಳ್ಳಬೇಕಾದುದು ಪ್ರತಿಯೊಂದು ಗುರುಪೀಠದವರಿಗೂ ಅವಶ್ಯಕರ್ತವ್ಯವೆನ್ನಿಸಿದೆ. ಆದುದರಿಂದ, ಈಗ ನಮ್ಮ ಶಿಷ್ಯ-ಪ್ರಶಿಷ್ಯಮಂಡಲಿಯಲ್ಲಿ ಅನೀತಿಯಲ್ಲಿರುವವರನ್ನಾರಿಸಿ-ಹೊರಬೀಳಿಸಿ, ಅವರಿಂದ ಅವರ ಸ್ಥಿತಿಗತಿಗಳಿಗೆ ತಕ್ಕಷ್ಟು ದಂಡವನ್ನು ತೆಗೆಯಿಸಿ, ಅದರಿಂದ ನಷ್ಟವಾದ ಕರ್ಮಗಳಿಗೆ ಪ್ರಾಯಶ್ಚಿತ್ತಗಳನ್ನು ವಿಧಿಸಿ, ಅದನ್ನು ನೆರೆವೇರಿಸಿದ ಬಳಿಕ ಅವರನ್ನು ಮತ್ತೆ ಸಮಾಜದಲ್ಲಿ ಸೇರಿಸುವಂತೆ ನಿರ್ಣಯಿಸಿದೆ. ಹೀಗೆ ಮಾಡುವವರೆಗೂ ಅಂತವರೆಲ್ಲರಿಗೂ ಬಹಿಷ್ಕಾರವು ಕೊಡಲ್ಪಡುವುದೆಂದೂ, ಇದನ್ನರಿತು ಅವರು ಮೊದಮೊದಲೇ ಎಚ್ಚತ್ತು ಸುಖಸಮಾಧಾನಗಳಿಗೆ ಭಾಗಿಗಳಾಗಬಹುದೆಂದೂ ಎಚ್ಚರಿಸಿದೆ.'
  ಹೀಗೆಂದು ಓದಿ ಮುಗಿಸಿದ ಬಳಿಕ, ಪಾಪ! ಪಂತರವರು ಬಲು ಬಳಲಿದವರಾಗಿ ನಿಟ್ಟುಸಿರುಬಿಡುತ್ತ ನೆಲದಮೇಲೆ ಕುಳಿತುಬಿಟ್ಟರು. ಇವರಿಂದ ಓದಿ ಹೇಳಲ್ಪಟ್ಟ ಶಾಸನವನ್ನು ಕೇಳಿ ಅಲ್ಲಿ ನೆರೆದಿದ್ದವರೆಲ್ಲರೂ ಭೀತರಾಗಿ ಬಂದು, ಒಬ್ಬೊಬ್ಬರಾಗಿ ತಮ್ಮ ಶಕ್ತಿಗೆ ತಕ್ಕಂತೆ ಕಾಣಿಕೆಗಳನ್ನೊಪ್ಪಿಸಿ, ಗುರುಪಾದಪೀಠದಲ್ಲಿ ಅಡ್ಡ ಬಿದ್ದದ್ದು ಸ್ವಾಮಿಗಳ ಬಾಯಿಂದ ಹೊರಬೀಳು