ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
87
ಮಾರುಮಾಲೆ

ಪಾತ್ರ ಬೆಳೆಯುವುದರಿಂದ, ಈ ಪ್ರಕರಣವೇ ಕೃಷ್ಣನ ಸಂಕಲ್ಪದ ಫಲ ಎಂದು ಹೇಳುವುದು ನಾಟಕೀಯತೆ, ಔಚಿತ್ಯ, ಪುರಾಣಧರ್ಮಗಳಿಗೆ ಸರಿಯಾಗಿದೆ.

ಎರಡು ಯುಗಗಳಿಗೆ ಸೇರಿದ ಇಬ್ಬರಲ್ಲಿ ಏರ್ಪಡುವ ಈ ಪ್ರಕರಣ, ಆ ಕಾರಣದಿಂದಲೇ ಬಹಳ ಗಮನಾರ್ಹವಾದುದು. ಇಲ್ಲಿನ 'ಸ್ಪರ್ಧಾ ಆಶಯಕ್ಕೆ ಎರಡು ಯುಗಗಳ, ಮೌಲ್ಯಗಳ, ಭಕ್ತಿಯ ಎರಡು ಪ್ರಕಾರಗಳ ಆಯಾಮಗಳಿವೆ. ತಲೆಮಾರುಗಳ ಅಂತರದ (Generation gap) ವಿಚಾರ ವನ್ನು ಹೊಂದಿಸಲು ಸಾಧ್ಯ. ಅವತಾರ ತಾರತಮ್ಯ, ರಾಮಾಯಣ, ಭಾರತಗಳ ಕಾಲ ದೇಶ ಸ್ಥಿತಿ ಭಿನ್ನತೆ, ತದನುಸಾರ ಮೌಲ್ಯ ವಿವೇಕ ಮೊದಲಾ ದುವು ಇಲ್ಲಿ ಪ್ರಸ್ತುತವಾಗುತ್ತವೆ. ಮತ್ತು ಇದೆಲ್ಲ ಈ ಪ್ರಸಂಗದ ಕಥೆಯಲ್ಲಿ ಅಂತರ್ಗತವಾಗುವ ಅಂಶಗಳು, ಅರ್ಜುನನನ್ನೂ ಹನುಮಂತನನ್ನೂ ಒಂದು ಗೂಡಿಸುವುದೇ ಈ ಕಥೆಯ ಕೇಂದ್ರ ಆಶಯ. ಈ ದೃಷ್ಟಿಯಿಂದ ಈ ಪ್ರಸಂಗದ ಉತ್ತರಾರ್ಧ (ಕೃಷ್ಣನ ಪ್ರವೇಶದಿಂದ ಮುಂದೆ) ಪ್ರಧಾನತರ ಭಾಗ, ಕತೆಯಲ್ಲಿ ಬರುವ ಸ್ಪರ್ಧಾತ್ಮಕ, ವೈರುದ್ಧ ದ ಅಂಶಗಳನ್ನು ಪೂರ ಕಾಂಶಗಳಾಗಿಸಿ ಸಮನ್ವಯ ಮಾಡುವುದು ಕೃಷ್ಣನ ಪಾತ್ರದ ಮುಖ್ಯ ಕಾರ್ಯ .

ಶರಸೇತು ಬಂಧದ ಕಥೆಯ ಆಕರಗಳು ಎರಡು: ಒಂದು, ಆನಂದರಾಮಾ ಯಣ ಮತ್ತೊಂದು ಕವಿ ಪರಮದೇವನ `ತುರಂಗ ಭಾರತ'. ಇವುಗಳಲ್ಲಿ ತುರಂಗ ಭಾರತವು, ಕಾಲದ ದೃಷ್ಟಿಯಿಂದ ಸುಭದ್ರಾ ಕಲ್ಯಾಣ ಪ್ರಸಂಗದಿಂದ ನಂತರದ್ದೆಂದು, ಈಗಿನ ಸಿದ್ದಾಂತ. ಪರಮದೇವನ ಕಾಲ, ಕ್ರಿ. ಶ. ೧೭೨೧- ೧೭೯೧ ಇದು ಖಚಿತ. (ಶ್ರೀ ತುರಂಗ ಭಾರತ : ಸಂ. ಕೆ. ಜಗನ್ನಾಥ ತಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತು ೧೯೮೬) ಪ್ರಸಂಗಕರ್ತೃ ಹಟ್ಟಿಯಂಗಡಿ ರಾಮ ಭಟ್ಟನ ಕಾಲ ಕ್ರಿ. ಶ. ಸು. ೧೬೦೦ ಎಂದು ಶಿವರಾಮ ಕಾರಂತರ ಅಭಿಮತ (ಯಕ್ಷಗಾನ : ಕಾರಂತ : ಮೈಸೂರು ವಿ. ವಿ. ೧೯೭೪) ರಚನೆಯಲ್ಲಿ ಪ್ರಸಂಗಕ್ಕೂ ತುರಂಗ ಭಾರತಕ್ಕೂ ಕೆಲವು ಸ್ಪಷ್ಟ ಸಾಮ್ಯಗಳೂ, ಶಬ್ದ ಸಾಮ್ಯ ಗಳು ಸಹ ಇವೆ. ಸಧ್ಯ ಈ ಕಾಲದ ಪೂರ್ವಾಪಶ್ಚಗಳಿಗೆ ಕೈಹಾಕದೆ ಆನಂದ ರಾಮಾಯಣ, ತುರಂಗ ಭಾರತ, ಸುಭದ್ರಾ ಕಲ್ಯಾಣ ಯಕ್ಷಗಾನ ಇವುಗಳಲ್ಲಿ