ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
98
ಮಾರುಮಾಲೆ

ಆಂಗಿಕಾಭಿನಯಕ್ಕನುಕೂಲಿಸುವ ಕೆಲವು ಪದ್ಯ ಭಾಗಗಳು:
-ತಾಳಿಪರ್ವತ ಪೊತ್ತು ಕಲ್ಮರಗಳ । ಸ್ಕೂಲ ದೇಹವು ಸುರುಟಿದುದು
ಕೈಕಾಲುಗಳು ಒಳಸರಿದವು
ಪೊತ್ತುದಣಿಯಲದೇಕೆ । ಗಿರಿಗಳ । ನೆತ್ತಲೇತಕೆ ಕಲ್ಮರಂಗಳ ।
ಮತ್ತೆ ಬಳಲುವುದೇಕೆ
-ಮುಕ್ಕುವೆ ಜಗವನು । ತಿಕ್ಕುವ ಯವನನು....
ತೊಟ್ಟ ಶರದಿ ನೀ । ಕಟ್ಟಿಹ ಸೇತುವ....ಥಟ್ಟನೆ ಪಾದದಿ ಮೆಟ್ಟಿ,
ಶರಸೇತುಗಳನ್ನು ಕಟ್ಟುವ, ಮುರಿಯುವ ಭಾಗದ ಮೂರು ಪದ್ಯ ಗಳಂತೂ ಶಬ್ದ ಚಿತ್ರದ ಉತ್ತಮ ದೃಷ್ಟಾಂತಗಳು
-ಎಂದಾನುಡಿ ಕೇಳದಾ ಪಾರ್ಥನು ಸಂಧಿಸಿ ಶರಗಳ ಬಂಧಿಸೆ....
ಕೂರ್ಗೊಂಡಿಹ ಶರ । ವರ್ಗದಿ ಪುನರಪಿ ಸ್ವರ್ಗಾಧಿಪಸುತ । ನರ್ಗಳ...
ಮತ್ತೆ ಕೆರಳ‍್ದು । ಮಹತ್ತರ ಶರಮಯ । ದುತ್ತಮ ಸೇತುವ....
ಇಲ್ಲಿ ಪದಗಳು ಪ್ರಾಸಗಳು ಒತ್ತೊತ್ತಾಗಿ ಬಂದು ಸೇತುಬಂಧದ ಕ್ರಿಯೆ ಯನ್ನು ತಾವೇ ಅಭಿನಯಿಸುತ್ತವೆ. ಮಾತ್ರವಲ್ಲ ಈ ಮೂರು ಪದ್ಯಗಳಲ್ಲಿ ಬಳ ಸಿದ ಶಬ್ದಗಳೇ ತಮ್ಮ 'ನಾದ'ದಿಂದ, ಅರ್ಜುನನ ಏರುತ್ತಿರುವ ಪೌರುಷದ ರಭಸ, ಉತ್ತರೋತ್ತರವಾಗಿ ಸೇತುವೆ ಒಂದರಿಂದೊಂದು ಗಟ್ಟಿಯಾಗಿರುವ ರೀತಿಗಳನ್ನು ಸಲೀಸಾಗಿ ಚಿತ್ರಿಸುತ್ತವೆ. ಈ ಪದ್ಯಗಳಲ್ಲಿ ಸೇತುವೆಗಳನ್ನು ಕಟ್ಟುವ ಕ್ರಿಯೆಗೆ, ಮುರಿದುದಕ್ಕೆ ಪ್ರತ್ಯೇಕ ಪದ್ಯಗಳಿಲ್ಲ. ಆದರೆ ಅವೆರಡಕ್ಕೂ ಪದ್ಯ ಭಾಗ ಸಮನಾಗಿದೆ. ಇವನ್ನು ಎರಡೆರಡಾಗಿ ವಿಭಜಿಸಿ ಹಾಡಲೂ ಅವಕಾಶವಿದೆ.
ಹನುಮಂತನು ಸೇತುವೆಗಳನ್ನು ಮುರಿದು ಕೆಡಹಿದ ರೀತಿಯನ್ನು ವರ್ಣಿಸುವ ರೀತಿ ತುಂಬ ಸ್ವಾರಸ್ಯವಾಗಿದೆ.
ಮೊದಲನೆಯದು ಬಹಳ ಸುಲಭವಾಗಿ ಕಾಣುತಲೊಂದುಕ್ಷಣದಿ ಮುರಿ/ದಂದಗೆಡಿಸಿದನು'